ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ (messaging Application) ಒಂದಾಗಿರುವ ವಾಟ್ಸಾಪ್ (WhatsApp) ಇತ್ತೀಚೆಗೆ ಹಲವಾರು ಫೀಚರ್ಸ್ಗಳನ್ನು ತನ್ನ ಬಳಕೆದಾರರಿಗಾಗಿ ಪರಿಚಯಿಸುವ ಮೂಲಕ ಭಾರೀ ಮಾತುಕತೆಯಲ್ಲಿದೆ. ಆದರೆ ವಾಟ್ಸಾಪ್ ಪರಿಚಯಿಸಿರುವ ಫೀಚರ್ಸ್ಗಳೆಲ್ಲವೂ ಬಳಕೆದಾರರಿಗೆ ಅನುಕೂಲವಾಗುವಂತಿದ್ದು, ಇನ್ನೂ ಹಲವಾರು ಅಪ್ಡೇಟ್ಗಳು ಬರಲಿವೆ ಎಂದು ವಾಟ್ಸಾಪ್ ತಿಳಿಸಿದೆ. ಇನ್ನು ಕಳೆದ ಬಾರಿ ವಾಟ್ಸಾಪ್ ತನ್ನ ಅಪ್ಲಿಕೇಶನ್ಗಳಲ್ಲಿ ಹಲವಾರು ಅಪ್ಡೇಟ್ಗಳನ್ನು ತರಲಿದೆ ಎಂದು ಹೇಳಿತ್ತು. ಅದೇ ರೀತಿ ಈ ವರ್ಷದ ಆರಂಭದಲ್ಲಿ ವಿಡಿಯೋ ಕಾಲ್, ಸ್ಟೇಟಸ್ ರಿಪೋರ್ಟ್ (Status ReportW, ಮೆಸೇಜ್ಗೆ ಸಂಬಂಧ ಪಟ್ಟ ಹೊಸ ಅಪ್ಡೇಟ್ಗಳನ್ನು ತಂದಿದೆ. ಇದೀಗ ಮತ್ತೆ ಸ್ಟೇಟಸ್ ವಿಭಾಗದಲ್ಲಿ ಹೊಸ ಅಪ್ಡೇಟ್ ಅನ್ನು ತಂದಿದೆ. ಈ ಫೀಚರ್ನಿಂದ ಬಳಕೆದಾರರಿಗೆ ಇನ್ನಷ್ಟು ಅನುಕೂಲವಾಗಲಿದೆ.
ವಾಟ್ಸಾಪ್ ಬಳಕೆದಾರರ ಬಹುದಿನದ ಬೇಡಿಕೆ ಇದೀಗ ಸಂಪೂರ್ಣವಾಗಿದೆ. ವಾಟ್ಸಾಪ್ ಕಳೆದ ಬಾರಿ ಸ್ಟೇಟಸ್ನಲ್ಲಿ ಇನ್ಮುಂದೆ ವಾಯ್ಸ್ ಮೆಸೇಜ್ ಅನ್ನು ಶೇರ್ ಮಾಡಬಹುದೆಂಬ ಸುದ್ದಿಯನ್ನು ನೀಡಿತ್ತು. ಅದೇ ರೀತಿ ಇದೀಗ ಹೊಸ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ವಾಟ್ಸಾಪ್ ಬಳಕೆದಾರರು ಇನ್ಮುಂದೆ ಯಾವುದೇ ವಾಯ್ಸ್ ಮೆಸೇಜ್ ಅನ್ನು ಸ್ಟೇಟಸ್ನಲ್ಲಿ ಶೇರ್ ಮಾಡಿಕೊಳ್ಳಬಹುದಾಗಿದೆ.
ಕಳೆದ ಬಾರಿ ವಾಟ್ಸಾಪ್ ತನ್ನ ಈ ಹೊಸ ಫೀಚರ್ ಅನನ್ಉ ಆಂಡ್ರಾಯ್ಡ್ ಬಳಕೆದಾರರಿಗೆ ಕೆಲವೇ ದಿನಗಳಲ್ಲಿ ಪರಿಚಯಿಸಲಿದ್ದೇವೆ ಎಂದು ಹೇಳಿತ್ತು. ಆದರೆ ಆ ಸಂದರ್ಭದಲ್ಲಿ ಐಫೋನ್ ಬಳಕೆದಾರರಿಗೆ ಯಾವುದೇ ಇದರ ಬಗ್ಗೆ ಸೂಚನೆ ನೀಡಿರಲಿಲ್ಲ. ಅದೇ ರೀತಿ ವಾಟ್ಸಾಪ್ನಲ್ಲಿ ಯಾವುದೇ ಅಪ್ಡೇಟ್ಗಳು ಬಂದ್ರೂ ಮೊದಲು ಬರುತ್ತಿದ್ದದ್ದು ಐಫೋನ್ಗಳಲ್ಲಿ. ನಂತರದ ದಿನಗಳಲ್ಲಿ ಈ ಅಪ್ಡೇಟ್ಗಳು ಆಂಡ್ರಾಯ್ಡ್ ಅಪ್ಲಿಕೇಶನ್ಗಳಲ್ಲಿ ಲಭ್ಯವಾಗುತ್ತಿತ್ತು.
ಇದನ್ನೂ ಓದಿ: ಕಂಪೆನಿಗಳು ಹಳೆಯ ಸ್ಮಾರ್ಟ್ಫೋನ್ಗಳನ್ನು ಸಂಗ್ರಹಿಸಿ ಏನು ಮಾಡುತ್ತವೆ? ಗೊತ್ತಾದ್ರೆ ಶಾಕ್ ಆಗ್ತೀರಾ!
ಐಫೋನ್ ಬಳಕೆದಾರರಿಗೆ ಲಭ್ಯ
ವಾಟ್ಸಾಪ್ ಸ್ಟೇಟಸ್ನಲ್ಲಿ ವಾಯ್ಸ್ ಮೆಸೇಜ್ ಶೇರ್ ಮಾಡುವಂತಹ ಫೀಚರ್ ಐಫೋನ್ ಬಳಕೆದಾರರಿಗೂ ಇನ್ಮುಂದೆ ಲಭ್ಯವಾಗಲಿದೆ. ಆದರೆ ಐಫೋನ್ ಬಳಕೆದಾರರು ವಾಟ್ಸಾಪ್ ಅನ್ನು 23.5.77 ಆವೃತ್ತಿಯೊಂದಿಗೆ ಅಪ್ಡೇಟ್ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಮಾತ್ರ ಈ ಫೀಚರ್ ಕಾಣಿಸಿಕೊಳ್ಳುತ್ತದೆ.
ಈ ಫೀಚರ್ ಬಳಸೋದು ಹೇಗೆ?
ಮೊದಲಿಗೆ ನಿಮ್ಮ ಐಫೋನ್ನಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಅಲ್ಲಿ ಸ್ಟೇಟಸ್ ವಿಭಾಗವನ್ನು ಓಪನ್ ಮಾಡ್ಬೇಕು. ನಂತರದಲ್ಲಿ ಅಲ್ಲಿ ಈ ಹಿಂದೆ ಬರಹದ ಮೂಲಕ ಸ್ಟೇಟಸ್ ಶೇರ್ ಮಾಡಲು, ಅಲ್ಲಿ ಪೆನ್ಸಿಲ್ ಆಯ್ಕೆಯನ್ನು ನೀಡಲಾಗಿತ್ತು. ಅದೇ ರೀತಿ ಇಲ್ಲಿ ಪೆನ್ಸಿಲ್ ಐಕಾನ್ ಮೇಲೆ ಕ್ಲಿಕ್ ಮಾಡಿದ್ರೆ ಮೈಕ್ರೋಫೋನ್ ಐಕಾನ್ ಕಾಣಿಸಿಕೊಳ್ಳುತ್ತದೆ.
ಇನ್ನು ನೀವು ಮೈಕ್ರೋಫೋನ್ ಐಕಾನ್ ಮೇಲೆ ಟ್ಯಾಪ್ ಮಾಡಿದ್ರೆ ನಿಮ್ಮ ವಾಯ್ಸ್ ರೆಕಾರ್ಡ್ ಆಗಲು ಆರಂಭವಾಗುತ್ತದೆ. ಆದರೆ ನೀವು ರೆಕಾರ್ಡ್ ಮಾಡುವ ಸಂದರ್ಭದಲ್ಲಿ ಮೈಕ್ರೋಫೋನ್ ಐಕಾನ್ ಅನ್ನು ಹೋಲ್ಡ್ ಮಾಡಿಟ್ಟುಕೊಳ್ಳಬೇಕು. ಈ ಮೂಲಕ ನಿಮ್ಮ ವಾಯ್ಸ್ ಅನ್ನು ರೆಕಾರ್ಡ್ ಮಾಡಿಕೊಳ್ಳಬಹುದು.
ರೆಕಾರ್ಡ್ ಆದ ನಂತರ ಮೈಕ್ರೋಫೋನ್ ಐಕಾನ್ನಿಂದ ನಿಮ್ಮ ಕೈಯನ್ನು ತೆಗೆಯಿರಿ. ನಂತರ ನಿಮ್ಮ ವಾಯ್ಸ್, ನೀವು ಮಾಡಿದ ರೆಕಾರ್ಡ್ ಸರಿಯಾಗಿದೆಯಾ ಎಂಬುದನ್ನು ಚೆಕ್ ಮಾಡಿಕೊಳ್ಳಿ. ನಂತರ ಅಲ್ಲೇ ಇರುವಂತಹ ಸೆಂಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಸೈಲೆಂಟ್ ಅನೌನ್ ನಂಬರ್ ಕಾಲ್
ವಾಟ್ಸಾಪ್ ಇದೀಗ ಮತ್ತೆ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಅದರ ಹೆಸರು ಸೈಲೆಂಟ್ ಅನೌನ್ ನಂಬರ್ ಕಾಲ್. ಈ ಫೀಚರ್ ಮೂಲಕ ಯಾವುದೇ ಅಪರಿಚಿತ ನಂಬರ್ನಿಂದ ಕಾಲ್ ಬಂದಾಗ ಅದನ್ನು ಕಾಲ್ ಲೀಸ್ಟ್ನಿಂದ, ನಾಟಿಫಿಕೇಶನ್ನಿಂದ ಮ್ಯೂಟ್ ಮಾಡಬಹುದು.
ಇನ್ನು ಈ ಹೊಸ ಫೀಚರ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗಾಗಿ ವಾಟ್ಸಾಪ್ ಬೀಟಾದಲ್ಲಿ ಅಭಿವೃದ್ಧಿ ಹಂತದಲ್ಲಿದೆ. ಇದರ ಹೊರತಾಗಿ, ವಾಟ್ಸಾಪ್ ಐಒಎಸ್ ಬೀಟಾದಲ್ಲಿ ಹೊಸ 'ಪುಶ್ ನೇಮ್ ಇನ್ ದಿ ಚಾಟ್ ಲೀಸ್ಟ್' ವೈಶಿಷ್ಟ್ಯವನ್ನು ಹೊರತರುತ್ತಿದೆ. WABetaInfo ವರದಿಯ ಪ್ರಕಾರ, ಬಳಕೆದಾರರು ವಾಟ್ಸಾಪ್ ಗ್ರೂಪ್ನ ಅಪರಿಚಿತ ಸದಸ್ಯರಿಂದ ಸಂದೇಶವನ್ನು ಪಡೆದಾಗ, ಬೀಟಾ ಪರೀಕ್ಷಕರು ಪ್ರತಿ ಬಾರಿ ಫೋನ್ ಸಂಖ್ಯೆಯ ಬದಲಿಗೆ ಚಾಟ್ ಪಟ್ಟಿಯಲ್ಲಿ ನೇಮ್ ಅನ್ನು ನೋಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ