ಈಗ ಕಾಲ ಬದಲಾಗಿದೆ ಗುರು ಅಂತ ಆಗಾಗ ಎಲ್ಲರೂ ಮಾತನಾಡುತ್ತಲೇ ಇರುತ್ತಾರೆ. ಕಾಲ ಯಾಕೆ ಬದಲಾಗಿದೆ ಅಂತ ಪ್ರಶ್ನೆಯೊಂದನ್ನು ನಮಗೆ ನಾವೇ ಕೇಳಿಕೊಂಡಾಗ, ನಮ್ಮ ದಿನನಿತ್ಯದ ಜೀವನದಲ್ಲಿ ಇಂಟರ್ನೆಟ್ (Internet) ಎಂಬುದು ಹಾಸು ಹೊಕ್ಕಾಗಿದೆ. ಎಲ್ಲದಕ್ಕೂ ಇಂಟರ್ನೆಟ್ ಬೇಕೇ ಬೇಕು ಎಂಬ ಹಂತಕ್ಕೆ ನಾವು ನೀವೆಲ್ಲ ಇಂದು ಹೋಗಿರುವುದು ವಿಪರ್ಯಾಸವೇ ಸರಿ. ಆದರೂ ಕೆಲವರು ಈ ಇಂಟರ್ನೆಟ್ ಅನ್ನು ತಮ್ಮ ಸಾಧನೆಯ ದಾರಿಗೆ ಸದುಪಯೋಗಪಡಿಸಿಕೊಂಡು ಜೀವನದಲ್ಲಿ (Life) ಯಶಸ್ಸು (Success) ಗಳಿಸಿಕೊಂಡಿರುವುದು ಸಹ ನಮ್ಮ ಕಣ್ಣ ಮುಂದೆ ಆಗಾಗ ಬರುತ್ತಲೇ ಇರುತ್ತೆ.
ಇದಕ್ಕೆ ಉತ್ತರವೆಂಬಂತೆ ಸಾಫ್ಟ್‌ವೇರ್ ಇಂಜಿನಿಯರೊಬ್ಬರು ಒಂದು ಇಂಟರ್ನೆಟ್ ಗೇಮ್ ಅನ್ನು ಇನ್ನು ಸುಲಭವಾಗಿ ಆಡಲು ಅನುವು ಮಾಡಿಕೊಡಲು ಹ್ಯಾಕ್ ಒಂದನ್ನು ಪರಿಚಯಿಸಿರುವ ಕಥೆಯ ಬಗ್ಗೆ ನಾವಿಂದು ಈ ಲೇಖನದಲ್ಲಿ ನೋಡೋಣ. ಹಾಗಿದ್ರೆ ತಡ ಯಾಕೆ ಮುಂದೆ ಓದಿ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅಕ್ಷಯ್ ಇತ್ತೀಚೆಗೆ ಕ್ಲಾಸಿಕ್ "ಡಿನೋ ಗೇಮ್" ಗಾಗಿ ಸರಳವಾದ ಹ್ಯಾಕ್ ಅನ್ನು ಗೂಗಲ್ ಹೇಗೆ ಒಂದೆರಡು ವರ್ಷಗಳಲ್ಲಿ ಬಳಕೆಗೆ ತರುತ್ತದೆ ಎಂಬುದನ್ನು ತಮ್ಮ ಗೂಗಲ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮಗುವಿಗೆ ಪ್ರೋಟೀನ್ ಹೆಚ್ಚಾಗಲಿ ಅಂತ ಹುಳಗಳನ್ನು ತಿನ್ನಿಸಿದ ತಾಯಿ!
ಇದರ ಕುರಿತು ಟ್ವಿಟರ್‌ನ ಬಳಕೆದಾರ ಆಗಿರುವ ಅಕ್ಷಯ್ ನರಿಸೆಟ್ಟಿ ಅವರು “ಅವರ ಲಿಂಕ್‌ಡಿನ್ ಅಕೌಂಟ್‌ನ ಬಯೋ ಪ್ರಕಾರ, ಅವರು ಕ್ವೆಸ್ಟ್‌ಬುಕ್‌ನಲ್ಲಿ ಎಂಜಿನಿಯರ್ ಆಗಿದ್ದು, ಲಿಂಕ್ಡ್‌ಇನ್‌ನಲ್ಲಿ ಅವರ ಗೇಮ್‌ನ ವೀಡಿಯೊ ವೈರಲ್ ಆದ ನಂತರ ಟೆಕ್ ದೈತ್ಯ ಖ್ಯಾತಿಯ ಗೂಗಲ್ ಕಂಪನಿಯ ಉದ್ಯೋಗಿಯೊಬ್ಬರು ನನ್ನನ್ನು ತಮ್ಮ ಸಂದರ್ಶನಕ್ಕಾಗಿ ಹೇಗೆ ಸಂಪರ್ಕಿಸಿದರು “ ಎಂಬುದರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸುವ ಮೂಲಕ ಗೇಮ್ ಹ್ಯಾಕ್ ಬಗ್ಗೆ ತಿಳಿಸಿದ್ದಾರೆ.
This Project got me an interview at Google. pic.twitter.com/o4I1OVfHny
— Akshay Narisetti (@AkshayNarisetti) April 27, 2023
ಅಕ್ಷಯ್ ಅವರ ಮಾತಿನಲ್ಲಿ ಹೇಳುವುದಾದ್ರೆ “ಕ್ರೋಮ್ ಡಿನೋ ಗೇಮ್ ಹ್ಯಾಕ್ ಅನ್ನು ಹೊಂದಿರುವ ವಿಡಿಯೋ ಕ್ಲಿಪ್‌ಯೊಂದನ್ನು ಶೇರ್ ಮಾಡುವಾಗ -ಈ ಪ್ರಾಜೆಕ್ಟ್ ನನ್ನನ್ನು ಗೂಗಲ್ ಕಂಪನಿಯವರು ಸಂದರ್ಶನ ಮಾಡುವ ಹಾಗೆ ಮಾಡಿತು. ಇದರಿಂದ ನನ್ನ ಜೀವನವೇ ಬದಲಾಗಿದೆ” ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ಮುಂದಿನ ಟ್ವೀಟ್‌ನಲ್ಲಿ, “ಕೀಬೋರ್ಡ್‌ನಲ್ಲಿನ ಸ್ಪೇಸ್‌ಬಾರ್ ಅನ್ನು ಪ್ರೆಸ್ ಮಾಡಲು ಸಾಧನವೊಂದನ್ನು ಪ್ರೋಗ್ರಾಮ್ ಮಾಡಲು ಮೈಕ್ರೊಕಂಟ್ರೋಲರ್ ಆರ್ಡುನೊವನ್ನು ಬಳಸಿದ್ದೇನೆ” ಎಂದು ಹಂಚಿಕೊಂಡರು.
ಡಿನೋ ಗೇಮ್ ಎಂಬುದು ಆನ್‌ಲೈನ್ ಡೈನೋಸಾರ್ ಗೇಮ್ ಆಗಿದೆ. ಈ ಗೇಮ್‌ನ ಪ್ರತಿಯೊಂದು ಅಡೆತಡೆಗಳನ್ನು ದಾಟಲು ಈ ಗೇಮ್ ಹ್ಯಾಕ್ ಸಾಕಷ್ಟು ಸಹಾಯವನ್ನು ಮಾಡುತ್ತದೆ. ಇವರು ಸಹ ಈ ಗೇಮ್ ಅನ್ನು ಹೆಚ್ಚು ಆಡುತ್ತಾರೆ.
ಇವರು ಈ ಗೇಮ್ ಹ್ಯಾಕ್ ಬಳಸಿ ಒಟ್ಟು 300 ಸ್ಕೋರ್ ಮಾಡಿದ್ದರು. ಈ ಗೇಮ್‌ನಲ್ಲಿ ಅಷ್ಟು ಸುಲಭಕ್ಕೆ ಇಷ್ಟು ಸ್ಕೋರ್ ಆಗಲು ಸಾಧ್ಯವಿಲ್ಲ. ಆದರೆ ಇವರು ತಮ್ಮ ವಿಶಿಷ್ಟ ಗೇಮ್ ಹ್ಯಾಕ್ ಬಳಸಿ, ಅತಿ ಹೆಚ್ಚು ಸ್ಕೋರ್ ಮಾಡಿದ್ದಾರೆ.
ಅಕ್ಷಯ್ ನರಿಸೆಟ್ಟಿ ಅವರು ಕೆಲವು ದಿನಗಳ ಹಿಂದೆ ಈ ಗೇಮ್ ಹ್ಯಾಕ್‌ನ ಕ್ಲಿಪ್ ಅನ್ನು ಹಂಚಿಕೊಂಡಿದ್ದರು ಮತ್ತು ಅಂದಿನಿಂದ ಈ ವಿಡಿಯೋ ಕ್ಲಿಪ್ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡ್ತಿದೆ. ಈ ವಿಡಿಯೋ 6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಇದರ ಜೊತೆಗೆ 251,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿರುವುದು ಈ ವಿಡಿಯೋ ವೈರಲ್ ಆಗಲು ಕಾರಣವಾಗಿದೆ.
ಸೋಷಿಯಲ್ ಮೀಡಿಯಾ ಬಳಕೆದಾರರು ಏನಂತಿದ್ದಾರೆ?
"ವಾವ್, ನಿಜವಾಗಿಯೂ ಪ್ರಭಾವಶಾಲಿಯಾಗಿದೆ. ಈ ಇಡೀ ವಾರ ನನ್ನ ಟ್ವಿಟರ್ ಫೀಡ್‌ನಲ್ಲಿ ನಾನು ನೋಡಿದ ಮೋಸ್ಟ್ ಕೂಲ್ ವಿಷಯವಿದು” ಎಂದು ಮನದುಂಬಿ ಹೊಗಳಿ ಟ್ವೀಟ್ ಮಾಡಿದ್ದಾರೆ.
“ಅಭಿನಂದನೆಗಳು!" ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
"ಎಲ್ಲಾ ಇಂಜಿನಿಯರ್‌ಗಳು ತಮ್ಮ ಕ್ರಿಯೇಟಿವಿಟಿಯನ್ನು ಕಾರ್ಯಗತಗೊಳಿಸುವಲ್ಲಿ ಈ ರೀತಿ ಶ್ರಮಿಸಬೇಕು” ಎಂದಿದ್ದಾರೆ.
"ಇದು ಅದ್ಭುತವಾಗಿದೆ! ಸಾಧ್ಯವಾದರೆ, ಇದರ ಬಗ್ಗೆ ಕಲಿಯಲು ಏನೆಲ್ಲ ಶ್ರಮಪಟ್ಟಿದ್ದೀರಿ ಎಂಬುದರ ಕುರಿತು ತಿಳಿಸಲು ಸಾಧ್ಯವೇ?” ಎಂದು ಬಳಕೆದಾರರೊಬ್ಬ ತಾವು ಇದನ್ನು ಕಲಿಯಬೇಕೆಂಬ ಬಯಕೆಯನ್ನು ತೋರ್ಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಕ್ಷಯ್ ಅವರು "ಆಲೋಚನೆ ಮೂಲವಲ್ಲದಿರಬಹುದು, ಆದರೆ ಅದರ ಅನುಷ್ಠಾನಕ್ಕೆ ನಾನು ಎಲೆಕ್ಟ್ರಾನಿಕ್ಸ್ ಕೋಡಿಂಗ್ ಅನ್ನು ಕಲಿತಿದ್ದೇನೆ.
ನಾನು ಕಂಪ್ಯೂಟರ್‌ನಲ್ಲಿ ಕೋಡಿಂಗ್ ಮಾಡುವ ಮೊದಲು ಆರ್ಡುನೊದಲ್ಲಿ ಕೋಡ್ ಮಾಡಿದ್ದೇನೆ. ನಾನು ಕಂಪ್ಯೂಟರ್ ಸಾಮರ್ಥ್ಯಗಳ ಮಾರ್ಗಗಳನ್ನು ಸಾಕಷ್ಟು ಅಳವಡಿಸಿಕೊಂಡಿದ್ದೇನೆ” ಎಂದಿದ್ದಾರೆ. ಅಕ್ಷಯ್ ನರಿಸೆಟ್ಟಿ ಅವರು ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಆಗಿದ್ದು, ಎಲ್ಲ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲೂ ಇವರ ಡಿನೋ ಗೇಮ್ ಹ್ಯಾಕ್ ವೈರಲ್ ಆಗಿದ್ದು, ಇವರಿಗೆ ಸಾಕಷ್ಟು ಹೆಸರನ್ನು ಗಳಿಸಿಕೊಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ