• Home
  • »
  • News
  • »
  • tech
  • »
  • Meta News: ಮೆಟಾದಿಂದ ವಜಾಗೊಂಡವರಲ್ಲಿ 'ಇಂಡಿಯನ್ ಮ್ಯಾಚ್‌ಮೇಕಿಂಗ್' ನಲ್ಲಿ ಕಾಣಿಸಿಕೊಂಡ ಇಂಜಿನಿಯರ್ ಸಹ ಒಬ್ರಂತೆ!

Meta News: ಮೆಟಾದಿಂದ ವಜಾಗೊಂಡವರಲ್ಲಿ 'ಇಂಡಿಯನ್ ಮ್ಯಾಚ್‌ಮೇಕಿಂಗ್' ನಲ್ಲಿ ಕಾಣಿಸಿಕೊಂಡ ಇಂಜಿನಿಯರ್ ಸಹ ಒಬ್ರಂತೆ!

ಮಿಸ್​ ಭಾರತ್​ ಕ್ಯಾಲಿಫೋರ್ನಿಯಾ ವಿನ್ನರ್​ ಸುರಭಿ ಗುಪ್ತ

ಮಿಸ್​ ಭಾರತ್​ ಕ್ಯಾಲಿಫೋರ್ನಿಯಾ ವಿನ್ನರ್​ ಸುರಭಿ ಗುಪ್ತ

ಮೆಟಾ ಸಂಸ್ಥೆಯಿಂದ ವಜಾಗೊಂಡವರಲ್ಲಿ ಸುರಭಿ ಗುಪ್ತಾ ಕೂಡ ಒಬ್ಬರು. ಯಾರಪ್ಪಾ ಈ ಸುರಭಿ ಗುಪ್ತಾ ಅಂತ ನೀವು ಕೇಳಬಹುದು. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವರು ಜನಪ್ರಿಯ ನೆಟ್‌ಫ್ಲಿಕ್ಸ್ ನಲ್ಲಿ ಮೂಡಿ ಬಂದ ಶೋ ‘ಇಂಡಿಯನ್ ಮ್ಯಾಚ್‌ಮೇಕಿಂಗ್’ ನಲ್ಲಿ ಕಾಣಿಸಿಕೊಂಡಿದ್ದರು. 2018 ರಲ್ಲಿ, ಅವರು "ಮಿಸ್ ಭಾರತ್-ಕ್ಯಾಲಿಫೋರ್ನಿಯಾ" ಎಂಬ ಶೀರ್ಷಿಕೆಯ ಸ್ಪರ್ಧೆಯನ್ನು ಸಹ ಗೆದ್ದಿದ್ದರು.

ಮುಂದೆ ಓದಿ ...
  • Share this:

    ಫೇಸ್‌ಬುಕ್ (Facebook) ಮಾತೃಸಂಸ್ಥೆಯಾದ ಮೆಟಾ (Meta) ಕಳೆದ ತಿಂಗಳು 11,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಎಚ್-1 ಬಿ ವೀಸಾಗಳನ್ನು (Visa) ಹೊಂದಿರುವ ಅನೇಕ ಕೆಲಸಗಾರರನ್ನು ಕೆಲಸದಿಂದ ತೆಗೆದು ಹಾಕುವಿಕೆಯು ಅನೇಕರಿಗೆ ಒಂದು ಕಷ್ಟದ ಪರಿಸ್ಥಿತಿಯನ್ನು ಸೃಷ್ಟಿಸಿತು ಅಂತಾನೆ ಹೇಳಬಹುದು. ಇದು ಯುಎಸ್ (US) ನಲ್ಲಿಯೇ ವಾಸಿಸುವುದನ್ನು ಮುಂದುವರಿಸುವ ಜನರಿಗೆ ಹೊಸ ಉದ್ಯೋಗಗಳನ್ನು ಹುಡುಕಲು ಕಷ್ಟಪಡುವಂತೆ ಮಾಡಿತು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಮೆಟಾ ಸಂಸ್ಥೆಯಿಂದ ಹಲವಾರು ಗಣ್ಯ ವ್ಯಕ್ತಿಗಳು ಕೂಡ ಸೇರಿದ್ದಾರೆ.


    ಮೆಟಾ ಸಂಸ್ಥೆಯಿಂದ ವಜಾಗೊಂಡವರಲ್ಲಿ ಸುರಭಿ ಗುಪ್ತಾ ಕೂಡ ಒಬ್ಬರು. ಯಾರಪ್ಪಾ ಈ ಸುರಭಿ ಗುಪ್ತಾ ಅಂತ ನೀವು ಕೇಳಬಹುದು. ಅವರು 2009 ರಿಂದ ಯುಎಸ್ ನಲ್ಲಿರುವವರು ಎಂದು ಬಿಬಿಸಿ ವರದಿ ಮಾಡಿದೆ.


    ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವರು ಜನಪ್ರಿಯ ನೆಟ್‌ಫ್ಲಿಕ್ಸ್ ನಲ್ಲಿ ಮೂಡಿ ಬಂದ ಶೋ ‘ಇಂಡಿಯನ್ ಮ್ಯಾಚ್‌ಮೇಕಿಂಗ್’ ನಲ್ಲಿ ಕಾಣಿಸಿಕೊಂಡಿದ್ದರು. 2018 ರಲ್ಲಿ, ಅವರು "ಮಿಸ್ ಭಾರತ್-ಕ್ಯಾಲಿಫೋರ್ನಿಯಾ" ಎಂಬ ಶೀರ್ಷಿಕೆಯ ಸ್ಪರ್ಧೆಯನ್ನು ಸಹ ಗೆದ್ದಿದ್ದರು.


    ಸುರಭಿ ಮುಂಜಾನೆಯೇ ಲೇ-ಆಫ್ ಮೇಲ್ ಅನ್ನು ಪಡೆದಿದ್ದರಂತೆ!


    ಕೆಲಸದಿಂದ ವಜಾಗೊಂಡಿದ್ದರ ಬಗ್ಗೆ ಮುಂಜಾನೆ ಇ-ಮೇಲ್ ಅನ್ನು ಸ್ವೀಕರಿಸಿರುವುದಾಗಿ ಗುಪ್ತಾ ಬಿಬಿಸಿಗೆ ತಿಳಿಸಿದರು. "ನನಗೆ ನನ್ನ ಕಂಪ್ಯೂಟರ್ ಅಥವಾ ಕಂಪನಿಯ ಜಿಮೇಲ್​ ಅನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು. "ಇದು ಒಂದು ಬ್ರೇಕಪ್ ನಂತೆ ನನಗೆ ಅನ್ನಿಸಿತು" ಎಂದು ಅವರು ಹೇಳಿದ್ದಾರೆ.


    ಇದನ್ನೂ ಓದಿ: ಬಿಎಸ್ಎನ್ಎಲ್ ಗ್ರಾಹಕರಿಗೆ ಗುಡ್​​ನ್ಯೂಸ್​: ಜಸ್ಟ್ 49 ರೂ.ಗೆ ಭರ್ಜರಿ ಆಫರ್


    ಅವರು ಕೆಲಸದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರನ್ನು ಕೆಲಸದಿಂದ ಹೀಗೆ ವಜಾಗೊಳಿಸಿರುವುದು ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಸುರಭಿ ಗುಪ್ತಾ ಹೇಳುತ್ತಾರೆ. ಅವರು ಯುಎಸ್ ನಲ್ಲಿ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಅಲ್ಲಿ ಕೆಲಸ ಮಾಡಿದ್ದಾರೆ.


    ಹೊಸ ಕೆಲಸವನ್ನು ಹುಡುಕುವುದು ಈಗ ಸದ್ಯದ ಪರಿಸ್ಥಿತಿಯಲ್ಲಿ ಅಷ್ಟೊಂದು ಸುಲಭವಾಗಿರುವುದಿಲ್ಲ, ಏಕೆಂದರೆ ಈಗ ಅನೇಕ ಕಂಪನಿಗಳ ವ್ಯವಹಾರಗಳು ಕಡಿಮೆಯಾದ್ದರಿಂದ ತಮ್ಮ ಕಂಪನಿಯಲ್ಲಿನ ನೇಮಕಾತಿ ಪ್ರಕ್ರಿಯೆಯನ್ನು ನಿಧಾನಗೊಳಿಸಿದ್ದಾರೆ.


    ಎಚ್-1 ಬಿ ವೀಸಾ ಮೇಲೆ ಯುಎಸ್ ನಲ್ಲಿ ಕೆಲಸ ಮಾಡುವವರೆ ಹೆಚ್ಚು


    ಹೆಚ್ಚಿನ ಜನರು ಎಚ್-1 ಬಿ ಮತ್ತು ಎಲ್ ಐ ವೀಸಾಗಳ ಮೇಲೆ ಯುಎಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. "ಅವರನ್ನು ಕೆಲಸದಿಂದ ತೆಗೆದು ಹಾಕಿದರೆ, ಹೊಸ ಉದ್ಯೋಗವನ್ನು ಹುಡುಕಿಕೊಳ್ಳಲು, ತಮ್ಮ ವೀಸಾವನ್ನು ಹೊಸ ಕಂಪನಿಗೆ ವರ್ಗಾಯಿಸಲು, ಅವರ ಸ್ಥಾನಮಾನವನ್ನು ಬದಲಾಯಿಸಲು ಅಥವಾ ಯುನೈಟೆಡ್ ಸ್ಟೇಟ್ಸ್ ಅನ್ನು ಬಿಟ್ಟುಹೋಗಲು ಅವರು ಕೇವಲ 60 ದಿನಗಳ ಕಾಲಾವಕಾಶವನ್ನು ಹೊಂದಿರುತ್ತಾರೆ" ಎಂದು ಕ್ಯಾಲಿಫೋರ್ನಿಯಾ ಮೂಲದ ಅಲ್ಕಾರ್ನ್ ವಲಸೆ ಕಾನೂನಿನ ಸಿಇಒ ಸೋಫಿ ಅಲ್ಕಾರ್ನ್ ತಿಳಿಸಿದ್ದಾರೆ.


    ಎಲಾನ್ ಮಸ್ಕ್ ಅವರಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟ ಕೂಡಲೇ, ಟ್ವಿಟರ್ ತನ್ನ 7,500 ಉದ್ಯೋಗಿಗಳ ಪೈಕಿ ಸುಮಾರು ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತು. ನಂತರ ಮೆಟಾದಲ್ಲಿ 11,000 ಉದ್ಯೋಗ ಕಡಿತ ಸಹ ಸಂಭವಿಸಿತು.


    "ಈ ನಿರ್ಧಾರಕ್ಕೆ ನಾವು ಹೇಗೆ ಬಂದಿದ್ದೇವೆ ಎಂಬುದಕ್ಕೆ ನಾನು ಉತ್ತರದಾಯಿತ್ವವನ್ನು ತೆಗೆದುಕೊಳ್ಳಲು ಬಯಸುತ್ತೇನೆ" ಎಂದು ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಕೆಲಸದಿಂದ ತೆಗೆದು ಹಾಕಿದ ನಂತರ ತಮ್ಮ ಸಿಬ್ಬಂದಿಗೆ ತಿಳಿಸಿದರು.


    "ಇದು ಎಲ್ಲರಿಗೂ ಕಠಿಣವಾಗಿದೆ ಎಂದು ನನಗೆ ತಿಳಿದಿದೆ ಮತ್ತು ಈ ನಿರ್ಧಾರದಿಂದ ಪರಿಣಾಮ ಬೀರಿದವರ ಬಳಿ ನಾನು ವಿಶೇಷವಾಗಿ ವಿಷಾದಿಸುತ್ತೇನೆ" ಎಂದು ಹೇಳಿದರು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು