ಲ್ಯಾಪ್ಟಾಪ್ (Laptop) ಎಂಬುದು ಜಾಗತಿಕ ಮಾರುಕಟ್ಟೆಯಲ್ಲಿ ಬಹುಮುಖ್ಯ ಸಾಧನ ಅಂತಾನೇ ಹೇಳ್ಬಹುದು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಗ್ಯಾಜೆಟ್ಗಳು (Gadgets) ಬಿಡುಗಡೆಯಾಗಿವೆ. ಅದ್ರಲ್ಲೂ ಗುಣಮಟ್ಟದ ಫೀಚರ್ಸ್ಗಳನ್ನು ಒಳಗೊಂಡ, ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲ್ಯಾಪ್ಟಾಪ್ಗಳು ಬಿಡುಗಡೆಯಾಗಿದೆ. ಟೆಕ್ನಾಲಜಿ ಕಂಪನಿಗಳಲ್ಲಿ ಜನಪ್ರಿಯ ಕಂಪನಿಯಾಗಿರುವ ಲೆನೋವೋ ಲ್ಯಾಪ್ಟಾಪ್ (Lenovo Laptop) ಉತ್ಪಾದನೆಯಲ್ಲಿ ಬಹಳಷ್ಟು ಹೆಸರನ್ನು ಪಡೆದಿದೆ. ಇದೀಗ ಲೆನೋವೋ ಕಂಪನಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲು ರೆಡಿಯಾಗಿದೆ. ಅದೇನೆಂದರೆ ಕಂಪನಿ ಇದೀಗ ಹೊಸ ಡ್ಯುಯಲ್ ಡಿಸ್ಪ್ಲೇ ಹೊಂದಿದ ಲ್ಯಾಪ್ಟಾಪ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಫೋಲ್ಡಬಲ್ ಡಿಸ್ಪ್ಲೇ (Foldable Display) ಹೊಂದಿದ ಸ್ಮಾರ್ಟ್ಫೋನ್ಗಳು ಬಹಳಷ್ಟು ಪ್ರಸಿದ್ದಿಯಲ್ಲಿತ್ತು. ಇದೀಗ ಈ ಸಾಲಿಗೆ ಲೆನೋವೋ ಟೆಕ್ನಾಲಜಿಯನ್ನು ಪರಿಚಯಿಸಿದೆ.
ಲೆನೋವೋ ಕಂಪನಿ ಇದುವರೆಗೆ ಸಿಂಗಲ್ ಡಿಸ್ಪ್ಲೇ ಲ್ಯಾಪ್ಟಾಪ್ ಅನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಕಂಪನಿ ಹೊಸ ತಂತ್ರಜ್ಞಾನದ ಮೂಲಕ ಡ್ಯುಯಲ್ ಡಿಸ್ಪ್ಲೇ ಹೊಂದಿದ ಲ್ಯಾಪ್ಟಾಪ್ ಅನ್ನು ಪರಿಚಯಿಸುತ್ತಿದೆ. ಲೆನೋವೋ ಯೋಗಾಬುಕ್ 9ಐ 13 ಎಂಬ ಲ್ಯಾಪ್ಟಾಪ್ ಆಗಿದ್ದು ಇದರ ಫೀಚರ್ಸ್ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಲೆನೋವೋ ಕಂಪನಿಯ ಹೊಸ ಲ್ಯಾಪ್ಟಾಪ್
ಇನ್ನು ಲೆನೋವೋ ಕಂಪನಿ ನವೀನ ಮಾದರಿಯ ಲ್ಯಾಪ್ಟಾಪ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗಿದೆ. ಲೆನೋವೋ ಯೋಗಾಬುಕ್ 9ಐ 13 ಎಂಬ ಹೆಸರನ್ನು ಹೊಂದಿದ್ದು, ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಆದರೆ ಈ ಲ್ಯಾಪ್ಟಾಪ್ ಬಿಡುಗಡೆಯಾಗುವ ಮೊದಲೇ ಇದರ ಕೆಲವೊಂದಿಷ್ಟು ಫೀಚರ್ಸ್ಗಳು ಸೋರಿಕೆಯಾಗಿದೆ.
ಇದನ್ನೂ ಓದಿ: ನೀವು ಹೊಸ ಸ್ಮಾರ್ಟ್ ಫೋನ್ ಪರ್ಚೇಸ್ ಮಾಡ್ತಿದಿರಾ? ಹಾಗಾದ್ರೆ ಈ ಫೋನ್ ಚೆನ್ನಾಗಿದೆ ನೋಡಿ
ಫೀಚರ್ಸ್ ಹೇಗಿದೆ?
ಇನ್ನು ಲೀಕ್ ಆದ ಮಾಹಿತಿ ಪ್ರಕಾರ ಈ ಲ್ಯಾಪ್ಟಾಪ್ ಲೈಟ್ಪೊಪ್ ಡಿವೈಸ್ ಥಿಂಕ್ಪ್ಯಾಡ್ ಎಕ್ಸ್1 ಫೋಲ್ಡ್ ಲ್ಯಾಪ್ಟಾಪ್ನಂತೆಯೇ ಕಾಣಿಸಿಕೊಳ್ಳಲಿದ್ದು, ಲೆನೋವೋ ಡ್ಯುಯಲ್ ಡಿಸ್ಪ್ಲೇ ಲ್ಯಾಪ್ಟಾಪ್ 13 ಇಂಚಿನ ಡಿಸ್ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಎರಡೂ ಕಡೆ ಡಿಸ್ಪ್ಲೇ ಇದೆ ಅಂದ ಮೇಲೆ ಕೀಬೋರ್ಡ್ ಎಲ್ಲಿರಲಿದೆ ಎನ್ನುವುದು ಪ್ರಶ್ನೆ ಮೂಡುವುದು ಸಾಮಾನ್ಯ. ಇನ್ನು ಇದರಲ್ಲಿ ಫ್ರೀ ಫ್ಲೋಟಿಂಗ್ ಕೀಬೋರ್ಡ್ ನೀಡಲಾಗಿದ್ದು, ಲ್ಯಾಪ್ಟಾಪ್ನಂತೆ ಅಥವಾ ಟ್ಯಾಬ್ಲೆಟ್ ಶೈಲಿಯಲ್ಲಿ ಫೋಲ್ಡ್ ಮಾಡಿದರೆ ಅದರಲ್ಲಿ ಮಧ್ಯ ಸ್ವಲ್ಪ ಸ್ಥಳ ಉಳಿದುಕೊಳ್ಳುತ್ತದೆ. ಅದರಲ್ಲಿ ಈ ಕೀಬೋರ್ಡ್ ಅನ್ನು ಇಟ್ಟುಕೊಂಡು ಬಳಕೆ ಮಾಡಬಹುದಾಗಿದೆ.
ಸ್ಟೈಲಸ್ ಪೆನ್ ಕೂಡಾ ಲಭ್ಯ
ಲೆನೋವೋ ಬಿಡುಗಡೆ ಮಾಡುತ್ತಿರುವ ಲ್ಯಾಪ್ಟಾಪ್ ಒಂಥರಾ ಜನರನ್ನು ಆಕರ್ಷಿಸುತ್ತಿದೆ. ಈ ಮಧ್ಯೆ ಇದರಲ್ಲಿ ಸ್ಟೈಲಸ್ ಪೆನ್ ಆಯ್ಕೆಯನ್ನು ನೀಡಿರುವುದು ಇನ್ನೂ ವಿಶೇಷ ಅಂತಾನೇ ಹೇಳ್ಬಹುದು. ಈ ಲ್ಯಾಪ್ಟಾಪ್ ಅನ್ನು ಫೋಲ್ಡ್ ಮಾಡಿದಾಗ ಟ್ಯಾಬ್ ರೀತಿಯಲ್ಲೂ ಇದನ್ನು ಬಳಕೆ ಮಾಡಬಹುದಾಗಿದೆ. ಈ ಸಂದರ್ಬದಲ್ಲಿ ಬಳಕೆದಾರರಿಗೆ ಸಹಕಾರಿಯಾಗಲು ಸ್ಟೈಲಸ್ ಪೆನ್ ಆಯ್ಕೆಯನ್ನು ನೀಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸ್ಮಾರ್ಟ್ಫೋನ್ನಂತೆಯೇ ಇದರ ಫೀಚರ್ಸ್
ಪ್ರಮುಖ ವಿಷಯ ಎಂದರೆ ಈ ಲ್ಯಾಪ್ಟಾಪ್ನ ಡ್ಯುಯಲ್ ಡಿಸ್ಪ್ಲೇ ವಿಷಯ ಹಾಗೂ ಕ್ಯಾಮೆರಾ ಮತ್ತು ಫೇಸ್ ಅನ್ಲಾಕ್ ಫೀಚರ್ಸ್ ಹೊರತುಪಡಿಸಿ ಉಳಿದ ಯಾವುದೇ ಮಾಹಿತಿ ಲೀಕ್ ಆಗಿಲ್ಲ. ಅದಾಗ್ಯೂ ಡಿವೈಸ್ನಲ್ಲಿ ಯುಎಸ್ಬಿ ಟೈಪ್ ಸಿ ಪೋರ್ಟ್ ಮತ್ತು 3.5mm ಆಡಿಯೋ ಜ್ಯಾಕ್ ಇರುವಂತೆ ಕಂಡುಬರುತ್ತಿದೆ. ಜೊತೆಗೆ ಇದು ಬೇಗನೆ ಆಕರ್ಷಿಸುವಂತಹ ಡಾರ್ಕ್ ಟರ್ಕೋಯಿಸ್ ಬಣ್ಣವನ್ನು ಹೊಂದಿರಲಿದ್ದು, ಇದೊಂದೇ ಬಣ್ಣದಲ್ಲಿ ಅಲ್ಲದೆ ಇತರೆ ಬಣ್ಣದ ಆಯ್ಕೆಯಲ್ಲಿಯೂ ಈ ಲ್ಯಾಪ್ಟಾಪ್ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಡುಗಡೆ ಯಾವಾಗ?
ಲೆನೋವೋ ಕಂಪನಿ ಪರಿಚಯಿಸಿರುವ ಈ ಹೊಸ ಲ್ಯಾಪ್ಟಾಪ್ ಇದೇ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರ ಬಗ್ಗೆ ಇದೇ ಜನವರಿಯಲ್ಲಿ ಕಂಪನಿಯು ಗ್ರಾಹಕರಿಗೆ ಮಾಹಿತಿ ನೀಡಲಿದೆ. ಹಾಗೇ ಜನವರಿ 5 ರಿಂದ ಲಾಸ್ ವೇಗಾಸ್ನಲ್ಲಿ ಈವೆಂಟ್ ಜರುಗಲಿದ್ದು ಅಲ್ಲಿ ಈ ಲ್ಯಾಪ್ಟಾಪ್ ಅನ್ನು ಪ್ರದರ್ಶನ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ