ತಂತ್ರಜ್ಞಾನ ಕಂಪನಿಗಳು (Technology Company) ಈಗ ಬಹಳಷ್ಟು ಕುಸಿತವನ್ನು ಕಂಡಿರುವುದರಿಂದ ಹಲವಾರು ಟೆಕ್ ಕಂಪನಿಗಳು ತನ್ನ ಕಂಪನಿಯ ಉದ್ಯೋಗಿಗಳನ್ನು ವಜಾ ಗೊಳಿಸುತ್ತಿತ್ತು. ಇದಲ್ಲದೆ ಕೆಲವೊಂದು ಕಂಪನಿಗಳು ತನ್ನ ಕೆಲಸಕ್ಕೆ ಇನ್ನು ಮುಂದೆ ಉದ್ಯೋಗಿಗಳ ನೇಮಕಾತಿಯನ್ನು ಮಾಡುವುದಿಲ್ಲ ಎಮದು ಘೋಷಿಸಿದೆ. ಹಲವು ಟೆಕ್ ಕಂಪನಿಗಳ ನಂತರ ಇದೀಗ ಮತ್ತೊಂದು ಭಾರತೀಯ ಕಂಪನಿ (Indian Company) ತನ್ನ ಉದ್ಯೋಗಿಗಳನ್ನು ವಜಾ ಮಾಡಲು ಹೊರಟಿದೆ. ಟೆಕ್ ಕಂಪನಿ ಶೇರ್ಚಾಟ್ (Sharechat) ತನ್ನ ಗೇಮಿಂಗ್ ಪ್ಲಾಟ್ಫಾರ್ಮ್ (Gaming Platform) ಜೀಟ್ 11 (Jeet 11) ಅನ್ನು ಮುಚ್ಚುವುದಾಗಿ ಘೋಷಿಸಿದೆ. ಈ ಗೇಮಿಂಗ್ ಅಪ್ಲಿಕೇಶನ್ನ ಮುಚ್ಚುವಿಕೆಯಿಂದ ಅವರ ಶೇಕಡಾ 5 ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕಂಪನಿ ಹೇಳುತ್ತದೆ. ಸಂಖ್ಯೆಗಳ ಬಗ್ಗೆ ಮಾತನಾಡುವುದಾದರೆ ಕಂಪನಿಯ ಪ್ರಕಾರ, 100 ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬಹುದು.
ದೊಡ್ಡ ಮಟ್ಟದ ಟೆಕ್ ಕಂಪನಿಯಾಗಿರುವ ಶೇರ್ಚಾಟ್ ತನ್ನ ಗೇಮಿಂಗ್ ಅಪ್ಲಿಕೇಶನ್ ಆಗಿರುವ ಜೀಟ್ 11 ಆ್ಯಪ್ ಅನ್ನು ಮುಚ್ಚುವುದಾಗಿ ಹೇಳಿದೆ. ಈ ನಿರ್ಧಾರದಿಂದ ಕಂಪನಿಯಲ್ಲಿ 100ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ಶೇರ್ಚಾಟ್ನಿಂದ ಮಾಧ್ಯಮಗಳಿಗೆ ಮಾಹಿತಿ:
ಮಾಧ್ಯಮಗಳಿಗೆ ಮಾಹಿತಿ ನೀಡುವಾಗ, ಶೇರ್ಚಾಟ್ ವಕ್ತಾರರು ವ್ಯಾಪಾರದ ಬೆಳವಣಿಗೆಯ ದೃಷ್ಟಿಯಿಂದ, ನಾವು ನಮ್ಮ ಗೇಮಿಂಗ್ ಪ್ಲಾಟ್ಫಾರ್ಮ್ ಜೀಟ್ 11 ನ ವ್ಯವಹಾರವನ್ನು ಮುಚ್ಚಲಿದ್ದೇವೆ ಎಂದು ಹೇಳಿದರು. ಇದಲ್ಲದೆ, ಕಂಪನಿಯು ತನ್ನ ಇತರ ವ್ಯವಹಾರಗಳನ್ನು ಮರುಸ್ಥಾಪಿಸಲು ಯೋಜಿಸುತ್ತಿದೆ. ಕಂಪನಿಯ ಈ ಕ್ರಮದಿಂದ 100 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಕೇವಲ 1299 ರೂಪಾಯಿಗೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್ವಾಚ್! ಇದರ ಫೀಚರ್ಸ್ಗೆ ನೀವು ಫಿದಾ ಆಗ್ತೀರಾ
Jeet11 2020 ರಲ್ಲಿ ಪ್ರಾರಂಭವಾಯಿತು
ದೇಶದಲ್ಲಿ ಅನೇಕ
ಗೇಮಿಂಗ್ ಅಪ್ಲಿಕೇಶನ್ಗಳು ಇದೀಗ ಚಾಲನೆಯಲ್ಲಿವೆ. ಇವುಗಳ ನಡುವೆ ಜೀತ್ 11 ಸಹ ಗೇಮಿಂಗ್ ಅಪ್ಲಿಕೇಶನ್ ಪ್ಲಾಟ್ಫಾರ್ಮ್ ಆಗಿದೆ. ಶೇರ್ಚಾಟ್ 2020 ರಿಂದ ಪ್ರಾರಂಭವಾಯಿತು. ಈ ಆ್ಯಪ್ ಮುಚ್ಚುವುದರಿಂದ 100 ಜನರನ್ನು ತೆಗೆದುಹಾಕಬಹುದು. ಮೂಲಗಳ ಪ್ರಕಾರ, ವಜಾಗೊಳಿಸಲಾದ ಹೆಚ್ಚಿನ ಉದ್ಯೋಗಿಗಳು ತಾಂತ್ರಿಕೇತರ ವಲಯದವರಾಗಿದ್ದಾರೆ. ಕಂಪನಿಯು ಕೆಲವು ಮಂದಿ ಟೆಕ್ ಉದ್ಯೋಗಿಗಳನ್ನು ತನ್ನ ಕಂಪನಿಯ ಇತರ ವ್ಯಾಪಾರ ವೇದಿಕೆಗಳಾದ ಶೇರ್ಚಾಟ್ ಮತ್ತು ಮೋಜ್ಗೆ ವರ್ಗಾಯಿಸುತ್ತದೆ.
![]()
ಜೀತ್ 11 ಮತ್ತು ಶೇರ್ಚಾಟ್
ಮೊಹಲ್ಲಾ ಟೆಕ್ ಮೂಲ ಕಂಪನಿಯಾಗಿದೆ
ಮೊಹಲ್ಲಾ ಟೆಕ್ ಶೇರ್ಚಾಟ್ ಮತ್ತು ಮೋಜ್ನಂತಹ ಟೆಕ್ ಕಂಪನಿಗಳ ಮೂಲ ಕಂಪನಿಯಾಗಿದೆ. ಪ್ರಸ್ತುತ 2200 ಉದ್ಯೋಗಿಗಳು ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇರ್ಚಾಟ್ ಒಂದು ಅಗ್ರಿಗೇಟರ್ ಕಂಪನಿಯಾಗಿದ್ದು, ಮೋಜ್ ವಿಡಿಯೋ ಪ್ಲಾಟ್ಫಾರ್ಮ್ ಆಗಿರುವಾಗ ಅದರ ವೇದಿಕೆಯಲ್ಲಿ ವಿವಿಧ ಸುದ್ದಿ ಸಂಸ್ಥೆಗಳಿಗೆ ಸ್ಥಳಾವಕಾಶ ನೀಡುತ್ತದೆ. ಇದು ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಂತಹ ರೀಲ್ಸ್ಗಳನ್ನು ವಿಡಿಯೋ ಬಳಕೆದಾರರಿಗೆ ತಲುಪಿಸುತ್ತದೆ.
ಈ ಹಿಂದೆ ಗೂಗಲ್ನಿಂದಲೂ ಉದ್ಯೋಗಿಗಳ ವಜಾ:
ಇತ್ತೀಚೆಗೆ ಗೂಗಲ್ ತನ್ನ ಕಂಪನಿಯ 10 ಸಾವಿರ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಗೂಗಲ್ನ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ. ಯುಎಸ್ನಲ್ಲಿ ನಡೆದ ಕೋಡ್ ಕಾನ್ಫರೆನ್ಸ್ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಚೈ, 'ಕಂಪನಿಯ ಆರ್ಥಿಕ ಪರಿಸ್ಥಿತಿಯು ನಿರೀಕ್ಷಿತ ಮಟ್ಟದಲ್ಲಿಲ್ಲ.
ಆದ್ದರಿಂದ, ನಾವು ವೆಚ್ಚವನ್ನು ಕಡಿಮೆ ಮಾಡುವ ಮೇಲೆ ಗಮನ ಹರಿಸುತ್ತೇವೆ. ಇದರ ಪ್ರಕಾರ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ’ ಎಂದರು. ಮತ್ತೊಂದೆಡೆ, ಈ ಹಿನ್ನೆಲೆಯಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಗೂಗಲ್ ತಾತ್ಕಾಲಿಕವಾಗಿ ನಿಲ್ಲಿಸಿದೆ. ಉದ್ಯೋಗಿಗಳು ಉತ್ತಮವಾಗಿ ಕಾರ್ಯನಿರ್ವಹಿಸದಿದ್ದರೆ "ಶೇಪ್ ಅಪ್ ಅಥವಾ ಶಿಪ್ ಔಟ್" ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ ಎಂದಿದ್ದಾರೆ.
ಟ್ವಿಟರ್, ವಾಟ್ಸಪ್ನಿಂದಲೂ ವಜಾ
ಇದೇ ರೀತಿ ತನ್ನ ಕಂಪನಿಗಳಿಂದ ಟ್ವಿಟರ್, ವಾಟ್ಸಪ್ ಕೂಡ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ನಿರ್ಧರಿಸಿದೆ. ಕೆಲವೊಂದು ಟೆಕ್ ಕಂಪನಿಗಳ ಆರ್ಥಿಕ ಕುಸಿತದಿಂದ ಈ ನಿರ್ಧಾರವನ್ನು ಕಂಪನಿಯ ವಕ್ತಾರರು ಕೈಗೊಂಡಿದ್ದಾರೆ ಎಂದು ಕೆಲವೊಂದು ಮಾಧ್ಯಮ ವರದಿಗಳು ತಿಳಿಸಿವೆ.