• Home
 • »
 • News
 • »
 • tech
 • »
 • I Phone: ಐಫೋನ್ 13 ಬುಕ್ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಐಫೋನ್ 14! ಇದು ಹೌದಾ?

I Phone: ಐಫೋನ್ 13 ಬುಕ್ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಐಫೋನ್ 14! ಇದು ಹೌದಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಫೋನ್ 13 ಮೊಬೈಲ್ ಬುಕ್ ಮಾಡಿದ ವ್ಯಕ್ತಿಗೆ ಜಾಕ್‌ಪಾಟ್ ಹೊಡೆದಿದೆ. ಈ ಕಥೆ ಕೇಳಿದ್ರೆ ಈ ಮನುಷ್ಯ ಎಂತ ಲಕ್ಕಿಮ್ಯಾನ್ ಅಂತ ಅಂದುಕೊಳ್ಳುತ್ತಿರ.

 • Share this:

  ಫ್ಲಿಪ್‌ಕಾರ್ಟ್ (Flipkart) ಬಿಗ್ ದಸರಾ ಸೇಲ್‌ನಲ್ಲಿ(Big Dasara Sale) Apple iPhone 13 ಮೊಬೈಲ್ 50,000 ರೂ. ಕ್ಕಿಂತ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿತ್ತು. ಆದರೆ, ಇತ್ತೀಚಿಗಷ್ಟೇ ಮೊಬೈಲ್ (Mobile) ಮಾರುಕಟ್ಟೆಗೆ (Market) ಬಿಡುಗಡೆಯಾಗಿರುವ (release) ಐಫೋನ್ 14 ಸಾಧನದ ಮೂಲ ಬೆಲೆ 79,900 ರೂ.ಗಳಾಗಿವೆ. ಇದರಿಂದ ಐಫೋನ್ 13 ಮೊಬೈಲ್ ಬುಕ್ (Booking) ಮಾಡಿದ ವ್ಯಕ್ತಿಗೆ ಜಾಕ್‌ಪಾಟ್ ಹೊಡೆದಿದೆ. ಅದೇನಂದ್ರೆ ಬುಕ್ ಮಾಡಿರುವ ಐಫೋನ್ 13 (I Phone 13)ಬರುವ ಬದಲು ಐಫೋನ್ 14 ಬಂದು ತಲುಪಿದೆ.  ನೆಟ್ಟಿಗರು ಈ ವಿಷಯದ ಬಗ್ಗೆ ಬಾರಿ ಚರ್ಚಿಸುತ್ತಿದ್ದಾರೆ (Discussing). ಅದಲ್ಲದೆ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿದೆ. ಇಂತಹ ಲಕ್ಕಿಮ್ಯಾನ್ ಯಾರು ಎನ್ನುವುದನ್ನು ಕಾಣಲು ಜನ ಬಯಸುತ್ತಿದ್ದಾರೆ.


  ಆನ್‌ಲೈನಿನಲ್ಲಿ ಸ್ಮಾರ್ಟ್‌ಫೋನ್ ಬುಕ್ ಮಾಡಿದ ಗ್ರಾಹಕ ಸೋಪ್ ಬಾಕ್ಸ್ ಅಥವಾ ಇಟ್ಟಿಗೆಯಂತಹ ವಸ್ತುಗಳನ್ನು ಪಡೆದ ಟ್ರಾಜಿಡಿ ಕಥೆಗಳನ್ನು ನೀವು ಕೇಳಿರುತ್ತೀರಾ. ಆದರೆ, ಇಲ್ಲೋರ್ವ ವ್ಯಕ್ತಿ ಐಫೋನ್ 13 ಬುಕ್ ಮಾಡಿ ಹೊಚ್ಚ ಹೊಸ ಐಫೋನ್ 14 ಮೊಬೈಲ್ ಪಡೆದಿದ್ದಾರೆ. ಹೌದು, ಇತ್ತೀಚಿಗಷ್ಟೆ ಫ್ಲಿಪ್‌ಕಾರ್ಟ್ ಆಯೋಜಿಸಿದ್ದ 'ಬಿಗ್ ದಸರಾ ಸೇಲ್'ನಲ್ಲಿ 49 ಸಾವಿರ ರೂ.ಪಾವತಿಸಿ ಐಫೋನ್ 13 ಪೋನನ್ನು ಬುಕ್ ಮಾಡಿರುವ ಗ್ರಾಹಕನಿಗೆ ಐಫೋನ್ 14 ಬಂದು ತಲುಪಿದೆ.


  the-customer-who-booked-iphone-13-but-he-got-iphone-14
  ಸಾಂದರ್ಭಿಕ ಚಿತ್ರ


  ಈ ಕುರಿತು ಜನಪ್ರಿಯ ಟ್ವಿಟರ್ ಬಳಕೆದಾರ ಅಶ್ವಿನ್ ಹೆಗ್ಡೆ ಎಂಬುವವರು ಟ್ವೀಟ್ ಮಾಡಿದ್ದು, ತಮ್ಮ ಸಾಮಾಜಿಕ ಮಾಧ್ಯಮವನ್ನು ಫಾಲೋ ಮಾಡುತ್ತಿರುವ ವ್ಯಕ್ತಿಯೋರ್ವರು ಐಫೋನ್ 13 ಸಾಧನವನ್ನು ಬುಕ್ ಮಾಡಿ ಐಫೋನ್ 14 ಸಾಧನವನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅಶ್ವಿನ್ ಹೆಗ್ಡೆ, ಐಫೋನ್ 13 ಸಾಧನವನ್ನು ಬುಕ್ ಮಾಡಿದ್ದ ವ್ಯಕ್ತಿಗೆ ಐಫೋನ್ 14 ಬಂದು ತಲುಪಿರುವ ಬಗ್ಗೆ ಸ್ಕ್ರೀನ್‌ಶಾಟ್ ಸಹ ಅಪ್‌ಲೋಡ್ ಮಾಡಿದ್ದಾರೆ.


  the-customer-who-booked-iphone-13-but-he-got-iphone-14
  ಸಾಂದರ್ಭಿಕ ಚಿತ್ರ


  ಇದನ್ನೂ ಓದಿ: Book Air 13 Laptop: ಇದು ಶಿಯೋಮಿ ಪರಿಚಯಿಸುತ್ತಿರುವ ಹೊಸ ಲ್ಯಾಪ್‌ಟಾಪ್, ಬೆಲೆ ಎಷ್ಟು ಗೊತ್ತಾ?


  ಫ್ಲಿಪ್‌ಕಾರ್ಟ್ ಬಿಗ್ ದಸರಾ ಸೇಲ್‌ನಲ್ಲಿ Apple iPhone 13 ಮೊಬೈಲ್  50,000 ರೂ. ಕ್ಕಿಂತ ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿತ್ತು. ಆದರೆ, ಇತ್ತೀಚಿಗಷ್ಟೇ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಐಫೋನ್ 14 ಸಾಧನದ ಮೂಲ ಬೆಲೆ 79,900 ರೂ.ಗಳಾಗಿವೆ. ಇದರಿಂದ ಐಫೋನ್ 13 ಸಾಧನವನ್ನು ಬುಕ್ ಮಾಡಿದ ವ್ಯಕ್ತಿಗೆ ಜಾಕ್‌ಪಾಟ್ ಹೊಡೆದಿದೆ ಎಂದು ಹಲವು ಟ್ವಿಟರ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಇದು ನಿಜಕ್ಕೂ ಸಂತಸದ ವಿಷಯ ಎಂದು ಹಲವು ಹೇಳಿದ್ದಾರೆ.


  ಇದನ್ನೂ ಓದಿ:  Motorola X40: ಮೊಟೊರೊಲಾದಿಂದ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ! ಇದರಲ್ಲಿ ಏನಿದೆ ಸ್ಪೆಷಲ್‌ ಫೀಚರ್ಸ್?


  ಈ ಘಟನೆಯ ಬಗ್ಗೆ ಫ್ಲಿಪ್‌ಕಾರ್ಟ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇದು ಮೊಬೈಲ್ ಪೂರೈಕೆದಾರರ ಕಣ್ತಪ್ಪಿನಿಂದಾಗಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ಫ್ಲಿಪ್‌ಕಾರ್ಟ್ ನಲ್ಲಿ ಲ್ಯಾಪ್‌ಟಾಪ್ ಒಂದನ್ನು ಬುಕ್ ಮಾಡಿದ್ದ ವ್ಯಕ್ತಿಯು ಸೋಪ್ ಡಿಟರ್ಜೆಂಟ್ ಬಾಕ್ಸ್‌ ಇರುವ ಪ್ಯಾಕೇಜ್ ಒಂದನ್ನು ಪಡೆದಿದ್ದರು ಎಂಬ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಹೊರಬಿದ್ದ ಎರಡು ದಿನಗಳಲ್ಲೇ ಫ್ಲಿಪ್‌ಕಾರ್ಟ್ ಸಂಸ್ಥೆಯು ಆ ವ್ಯಕ್ತಿಗೆ ಸೂಕ್ತ ನ್ಯಾಯ ಒದಗಿಸಿರುವುದಾಗಿ ತಿಳಿಸಿತ್ತು.


  ಇದನ್ನೂ ಓದಿ: Smartphone: ಭಾರತದಲ್ಲಿ ಚೀನಾದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಹೇಗಿದೆ?


  ಅದೇನೊ ಗೊತ್ತಿಲ್ಲಇಂತಹ ಜಾಟ್ ಪಾಟ್ ಎಲ್ಲರಿಗೂ ಹೊಡೆಯಲ್ಲ. ಅದರೆ ಈ ಲಕ್ಕಿ ಮ್ಯಾನ್​ಗೆ ಹೊಡೆದಿರುವುದು ಸಖತ್ ವಿಷಯ ಬಿಡಿ.

  Published by:Harshith AS
  First published: