ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ (Smartphone Market) ಭಾರೀ ಬೇಡಿಕೆಯಲ್ಲಿರುವ ಕಂಪೆನಿಯೆಂದರೆ ಅದು ಸ್ಯಾಮ್‌ಸಂಗ್. ಈ ಕಂಪೆನಿ ಮಾರುಕಟ್ಟೆಗೆ ಹಲವಾರು ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದ್ದು, ಸದ್ಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23 (Samsung Galaxy S23) ಸೀರೀಸ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಸಂಸ್ಥೆಯು ಈ ಸೀರೀಸ್‌ನಡಿಯಲ್ಲಿ ಮೂರು ಡಿವೈಸ್‌ಗಳನ್ನು ಪರಿಚಯಿಸಿದ್ದು ಗ್ಯಾಲಕ್ಸಿ ಎಸ್ 23, ಗ್ಯಾಲಕ್ಸಿ ಎಸ್23 ಪ್ಲಸ್ ಮತ್ತು ಗ್ಯಾಲಕ್ಸಿ ಎಸ್ 23 ಅಲ್ಟ್ರಾಗಳಾಗಿವೆ. ಈಗ ನಾವು ಸ್ವಲ್ಪ ಅಗ್ಗದ ಡಿವೈಸ್‌ಗಳಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಮತ್ತು ಎಸ್ 23 ಪ್ಲಸ್ (Galaxy S23 Ultra) ಬಗ್ಗೆ ಅರಿತುಕೊಳ್ಳೋಣ.
ಬಣ್ಣ ಹಾಗೂ ವೈವಿಧ್ಯತೆ
ಎಸ್ 23 ಹಾಗೂ ಎಸ್ 23 ಪ್ಲಸ್ ಡಿವೈಸ್‌ಗಳಲ್ಲಿನ ಭಿನ್ನತೆಯನ್ನು ಗಮನಿಸಿದಾಗ ಸ್ಯಾಮ್‌ಸಂಗ್ ಕೆಲವೊಂದು ಮಾರ್ಪಾಡುಗಳನ್ನು ಫೋನ್‌ಗಳಲ್ಲಿ ಮಾಡಿರುವುದು ಕಂಡುಬಂದಿದೆ. ಡಿವೈಸ್‌ಗಳ ವಿನ್ಯಾಸಗಳಿಂದ ಆರಂಭಿಸಿ ವಿಶೇಷತೆಗಳಲ್ಲೂ ಬದಲಾವಣೆಗಳನ್ನು ಮಾಡಿದೆ.
ಫೋನ್‌ಗಳು ಹಿಂದಿನ ಅದೇ ಮಾದರಿಯಂತೆ ಕಂಡುಬಂದಿದ್ದು, ನಾಲ್ಕು ಬಣ್ಣದ ಆಯ್ಕೆಗಳಾದ ಫ್ಯಾಂಟಮ್ ಕಪ್ಪು, ಹಸಿರು, ಕ್ರೀಮ್ ಹಾಗೂ ಲ್ಯಾವೆಂಡರ್‌ಗಳಲ್ಲಿ ಮಾರುಕಟ್ಟೆಗೆ ಬಂದಿವೆ. ಕೆನೆ ಬಣ್ಣದಲ್ಲಿ ಕೂಡ ಡಿವೈಸ್‌ಗಳು ಲಭ್ಯವಿರುವುದು ವಿಶೇಷ ಎಂದೆನಿಸಿದೆ.
ಗ್ಯಾಲಕ್ಸಿ ಎಸ್23, ಎಸ್23 ಪ್ಲಸ್‌ನ ಕಾಂಪ್ಯಾಕ್ಟ್ ಆವೃತ್ತಿಯಂತೆ ಕಾಣುತ್ತದೆ. ಈ ಎರಡೂ ಫೋನ್‌ಗಳು ಹಿಂದಿನ ಪ್ಯಾನೆಲ್‌ನಲ್ಲಿ ಮೂರು ಕ್ಯಾಮೆರಾಗಳು ಮತ್ತು ಹೋಲ್ ಪಂಚ್ ಡಿಸ್‌ಪ್ಲೇಯಲ್ಲಿರುವ ಮುಂಭಾಗದ ಕ್ಯಾಮೆರಾವನ್ನು ಹೋಲುತ್ತದೆ. ಒಟ್ಟಿನಲ್ಲಿ ಸುಧಾರಿತ ವೀಕ್ಷಣೆಯನ್ನು ಡಿವೈಸ್ ಒಳಗೊಂಡಿದೆ.
ಡಿಸ್‌ಪ್ಲೇ, ಪ್ರೊಸೆಸರ್
ಗ್ಯಾಲಕ್ಸಿ ಎಸ್ 23 ಪ್ಲಸ್‌ಗೆ ಹೋಲಿಸಿದರೆ ಗ್ಯಾಲಕ್ಸಿ S23 ಹೆಚ್ಚು ಕಾಂಪ್ಯಾಕ್ಟ್ ಫೋನ್ ಆಗಿದೆ. ವಿಶೇಷಣಗಳಿಗೆ ಸಂಬಂಧಿಸಿದಂತೆ, ಗ್ಯಾಲಕ್ಸಿ ಎಸ್ 23 6.1-ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದೆ ಮತ್ತು S23 ಪ್ಲಸ್ 6.6-ಇಂಚಿನ FHD + ಡಿಸ್‌ಪ್ಲೇಯನ್ನು 2340x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ.
ಸ್ಯಾಮ್‌ಸಂಗ್ ಸಂಪೂರ್ಣ ಎಸ್ 23 ಶ್ರೇಣಿಯ ಕಾರ್ಯಕ್ಷಮತೆಯನ್ನು ಹೊಂದಿದೆ. ಎಸ್ 23 ಅಲ್ಟ್ರಾದಂತೆಯೇ, ಗ್ಯಾಲಕ್ಸಿ ಎಸ್ 23 ಮತ್ತು ಎಸ್ 23 ಪ್ಲಸ್‌ಗಳು ಕ್ವಾಲ್‌ಕಾಮ್‌ನ ಇತ್ತೀಚಿನ ಪ್ರಮುಖ ಪ್ರೊಸೆಸರ್ – ಸ್ನ್ಯಾಪ್‌ಡ್ರ್ಯಾಗನ್ 8 ಜೆನ್ 2 ಪ್ರೊಸೆಸರ್ ಅನ್ನು ಹೊಂದಿದೆ.
ಭಿನ್ನ ಚಿಪ್‌ಸೆಟ್, ಸ್ಟೋರೇಜ್ ವಿವರ
ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಚಿಪ್‌ಸೆಟ್ ವಿಭಿನ್ನವಾಗಿದೆ ವೇಗವಾದ ಜಿಪಿಯು ಮತ್ತು ಎನ್‌ಪಿಯು ಕಾರ್ಯಕ್ಷಮತೆಯನ್ನು ಒದಗಿಸುವಂತೆ ವಿಶೇಷವಾಗಿ ಹೊಂದಿಸಲಾಗಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್23 ಹಾಗೂ ಎಸ್23 ಪ್ಲಸ್ ಎರಡೂ ಬಹು ರೂಪಾಂತರಗಳಲ್ಲಿ ಬಂದಿವೆ. 8 ಜಿಬಿ ರ‍್ಯಾಮ್‌ನೊಂದಿಗೆ 128 ಜಿಬಿ ಸ್ಟೋರೇಜ್, 8 ಜಿಬಿ ರ‍್ಯಾಮ್‌ನೊಂದಿಗೆ 256 ಜಿಬಿ ಸ್ಟೋರೇಜ್, 8 ಜಿಬಿ ರ‍್ಯಾಮ್‌ನೊಂದಿಗೆ 512 ಜಿಬಿ ಸ್ಟೋರೇಜ್ ಅನ್ನು ಡಿವೈಸ್ ಹೊಂದಿದೆ.
ಎಸ್23 ಪ್ಲಸ್ ಸ್ಟೋರೇಜ್ ವಿವರ
ಎಸ್23 ಪ್ಲಸ್ ಎರಡು ಆವೃತ್ತಿಗಳಲ್ಲಿ ಬಂದಿದ್ದು 8 ಜಿಬಿ ರ‍್ಯಾಮ್‌ನೊಂದಿಗೆ 256 ಜಿಬಿ ಸ್ಟೋರೇಜ್ ಹಾಗೂ 8 ಜಿಬಿ ರ‍್ಯಾಮ್‌ನೊಂದಿಗೆ 512 ಜಿಬಿ ಸ್ಟೋರೇಜ್‌ನೊಂದಿಗೆ ಬಂದಿದೆ. ಫೋನ್ ಆ್ಯಂಡ್ರಾಯ್ಡ್ 13 ನೊಂದಿಗೆ ಕಸ್ಟಮ್ One UI 5.1 ಸ್ಕಿಪ್‌ನೊಂದಿಗೆ ಚಾಲನೆಯಾಗುತ್ತದೆ.
ಕ್ಯಾಮೆರಾ ಅಂಶಗಳೇನು?
ಸ್ಯಾಮ್‌ಸಂಗ್ ಈ ಎರಡೂ ಡಿವೈಸ್‌ಗಳಲ್ಲಿ ಕ್ಯಾಮೆರಾಗೆ ಅತ್ಯಂತ ಮಹತ್ವದ ಅಂಶ ನೀಡಿದೆ. ಈ ಎರಡೂ ಗ್ಯಾಲಕ್ಸಿ ಎಸ್23 ಫೋನ್‌ಗಳು ತ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಪಡೆದಿದ್ದು, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಹಾಗೂ 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿದೆ.
ಇದನ್ನೂ ಓದಿ: ಅಪಾಯಕಾರಿ ಆ್ಯಪ್‌ಗಳ ಮೇಲೆ ಗೂಗಲ್ ಹದ್ದಿನಕಣ್ಣು, 12 ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಡಿಲೀಟ್!
ಬ್ಯಾಟರಿ ಸಾಮರ್ಥ್ಯ
ಸ್ಯಾಮ್‌ಸಂಗ್ ತನ್ನ ಡಿವೈಸ್‌ಗಳಲ್ಲಿ ಬ್ಯಾಟರಿ ಸಾಮರ್ಥ್ಯವನ್ನು ಸುಧಾರಿಸಿದ್ದು ಒಂದು ಬಾರಿ ಚಾರ್ಜ್ ಮಾಡಿದರೆ ಒಂದು ದಿನ ಪೂರ್ತಿ ಬ್ಯಾಟರಿ ಬಾಳ್ವಿಕೆಯನ್ನೊದಗಿಸಲಿದೆ ಎಂದು ತಿಳಿಸಿದೆ. ಎಸ್23 3900mAh ಬ್ಯಾಟರಿಯನ್ನು ಪಡೆದಿದ್ದು ಎಸ್23 ಪ್ಲಸ್ 4700mAh ಬ್ಯಾಟರಿಯನ್ನೊಳಗೊಂಡಿದೆ. ವೈರ್‌ಲೆಸ್ ಚಾರ್ಜಿಂಗ್ ಅನ್ನು ಡಿವೈಸ್ ಪಡೆದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ