MeowTalk: ಮುದ್ದಿನ ಬೆಕ್ಕು ಏನು ಹೇಳುತ್ತೆ ಗೊತ್ತಾಗಬೇಕಾ? ಹಾಗಿದ್ರೆ ಈ ಆ್ಯಪ್​ ಬಳಸಿ ಅದರ ಮನಸ್ಥಿತಿ ಅರ್ಥ ಮಾಡಿಕೊಳ್ಳಿ

Cat: ಕ್ರಿಸ್ಟಿನಾ ಮಾಡೆಲ್ ತನ್ನ ಬೆಕ್ಕು ಬಫಿಯೊಂದಿಗೆ ಅಪ್ಲಿಕೇಶನ್ ಅನ್ನು ಪರಿಶೀಲಿಸಿದರು. ಈ ತಂತ್ರಜ್ಞಾನವು ಬೆಕ್ಕಿನ ಧ್ವನಿಯನ್ನು ಕೂಡಲೇ ಭಾಷಾಂತರಿಸುತ್ತದೆ ಹಾಗೂ ಮಾನವ ಧ್ವನಿಯು ಕಾಲರ್ ಮೂಲಕ ಸಂಭಾಷಿಸುತ್ತದೆ.

MeowTalk

MeowTalk

  • Share this:
    MeowTalk Apps: ನಿಮ್ಮ ಬೆಕ್ಕು ಏನು ಹೇಳುತ್ತದೆ ಎಂಬುದನ್ನು ಅನುವಾದಿಸುವ ಅಪ್ಲಿಕೇಶನ್ ಅನ್ನು ಕಂಡುಹಿಡಿಯಲಾಗಿದ್ದು ಇದು ಬೆಕ್ಕಿನ ಧ್ವನಿಯನ್ನು ಅನುಕರಣೆ ಮಾಡಿ ಅದನ್ನು ಗುರುತಿಸುತ್ತದೆ. ಬೆಕ್ಕಿನ ಮಿಯಾವ್ ಧ್ವನಿಯನ್ನು ಅನುವಾದಿಸುವ ಅಪ್ಲಿಕೇಶನ್ MeowTalk ಬೆಕ್ಕಿನ ಧ್ವನಿಯನ್ನು ರೆಕಾರ್ಡ್ ಮಾಡುತ್ತದೆ ಹಾಗೂ ಬೆಕ್ಕು ಏನು ಹೇಳುತ್ತದೆ ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತದೆ. ಬೆಕ್ಕು ಮಾಲಿಕರು ಕೃತಕ ಬುದ್ಧಿಮತ್ತೆ (Artificial Intelligence) ಸಾಫ್ಟ್‌ವೇರ್ ಬಳಸಿ ಡೇಟಾಬೇಸ್ ರಚಿಸಿ ಅನುವಾದವನ್ನು ಟ್ಯಾಗ್ ಮಾಡಲು ಸಹಕರಿಸುತ್ತಾರೆ. ಇಲ್ಲಿಯವರೆಗೆ ಅಪ್ಲಿಕೇಶನ್ 13 ನುಡಿಗಟ್ಟುಗಳನ್ನು ಹೊಂದಿದೆ. ಮುಖ್ಯ ಅನುವಾದಗಳೆಂದರೆ ನನಗೆ ಆಹಾರ ನೀಡಿ, ನನಗೆ ಹಸಿವಾಗಿದೆ, ನನ್ನನ್ನು ಒಬ್ಬಂಟಿಯಾಗಿ ಬಿಡಿ ಇತ್ಯಾದಿ.

    ಈ ಕುರಿತು ಸಂಶೋಧನೆಯನ್ನು ಕೂಡ ನಡೆಸಲಾಗಿದ್ದು ಮಾನವ ಸೇವಕರಂತೆ ಬೆಕ್ಕುಗಳು ಸಾಮಾನ್ಯ ಭಾಷೆಯನ್ನು ಹಂಚಿಕೊಳ್ಳುವುದಿಲ್ಲ ಎಂಬುವುದಾಗಿದೆ. ಅಧ್ಯಯನವು ತಿಳಿಸಿರುವ ಅಂಶವೆಂದರೆ ಪ್ರತಿಯೊಂದು ಮಿಯಾವ್ ಕೂಡ ವಿಭಿನ್ನವಾಗಿದ್ದು ಮಾಲೀಕರಿಗೆ ಹೊಂದಿಕೊಳ್ಳುತ್ತದೆ. ಅದಕ್ಕಾಗಿ ಅಪ್ಲಿಕೇಶನ್ ಅನುವಾದವು ಪ್ರತಿಯೊಂದು ಬೆಕ್ಕಿಗೂ ಭಿನ್ನವಾಗಿರುತ್ತದೆ.

    ಶಬ್ದಗಳನ್ನು ರೆಕಾರ್ಡಿಂಗ್ ಮತ್ತು ಟ್ಯಾಗ್ ಮಾಡುವ ಮೂಲಕ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಸಾಫ್ಟ್‌ವೇರ್ ಪ್ರತಿ ಬೆಕ್ಕಿನ ಧ್ವನಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಇದನ್ನು ಹೆಚ್ಚು ಹೆಚ್ಚು ಬಳಸಿದಷ್ಟೂ ಇದು ನಿಖರವಾಗಿರುತ್ತದೆ. ಸ್ಮಾರ್ಟ್ ಕಾಲರ್ ಅನ್ನು ಅಭಿವೃದ್ಧಿಪಡಿಸುವುದು ಅಂತಿಮ ಗುರಿಯಾಗಿದ್ದು ಅದಕ್ಕಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ನಿರ್ವಾಹಕ ಜೇವಿಯರ್ ಸ್ಯಾಂಚೆ ತಿಳಿಸಿದ್ದಾರೆ.

    MeowTalk / Akvelon (ಮಿಯಾವ್‌ಟಾಕ್ / ಅಕ್ವೆಲಾನ್)

    ಕ್ರಿಸ್ಟಿನಾ ಮಾಡೆಲ್ ತನ್ನ ಬೆಕ್ಕು ಬಫಿಯೊಂದಿಗೆ ಅಪ್ಲಿಕೇಶನ್ ಅನ್ನು ಪರಿಶೀಲಿಸಿದರು. ಈ ತಂತ್ರಜ್ಞಾನವು ಬೆಕ್ಕಿನ ಧ್ವನಿಯನ್ನು ಕೂಡಲೇ ಭಾಷಾಂತರಿಸುತ್ತದೆ ಹಾಗೂ ಮಾನವ ಧ್ವನಿಯು ಕಾಲರ್ ಮೂಲಕ ಸಂಭಾಷಿಸುತ್ತದೆ. ಈ ಅಪ್ಲಿಕೇಶನ್ ಬೆಕ್ಕಿನೊಂದಿಗೆ ಸಂವಹನ ನಡೆಸಲು ಸಹಕಾರಿಯಾಗಿದೆ. ಬೆಕ್ಕಿನ ಉದ್ದೇಶವನ್ನು ಅರ್ಥಮಾಡಿಕೊಂಡು ಮುಖ್ಯ ಸಂಪರ್ಕ ನಿರ್ಮಿಸುತ್ತದೆ ಎಂದು ಸ್ಯಾಂಚೆ ತಿಳಿಸಿದ್ದಾರೆ.

    ಬಳಕೆದಾರರು ಏನು ಹೇಳುತ್ತಾರೆ?

    ಅಪ್ಲಿಕೇಶನ್ ಇನ್ನೂ ಪ್ರಗತಿಯ ಹಂತದಲ್ಲಿದ್ದು ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಹಲವಾರು ಬಳಕೆದಾರರು ಅಪ್ಲಿಕೇಶನ್ ದೋಷದ ಬಗ್ಗೆ ಕೂಡ ತಿಳಿಸಿದ್ದಾರೆ. ಹೆಚ್ಚಿನ ಬಳಕೆದಾರರು ಬೇರೆ ಬೇರೆ ಪ್ರತಿಕ್ರಿಯೆಗಳನ್ನು ನೀಡಿದ್ದು ಕೆಲವರಿಗೆ ಇದು ಕಿರಿಕಿರಿಯನ್ನುಂಟು ಮಾಡಿದೆ ಇನ್ನು ಕೆಲವರು ಅದನ್ನು ಡೌನ್‌ಲೋಡ್ ಮಾಡಿದ್ದರೂ ಕನೆಕ್ಶನ್ ಹಾಗೂ ವೈಫೈ ದೋಷವಿದೆ ಎಂದು ತಿಳಿಸಿದ್ದಾರೆ.

    ಇದನ್ನು ಓದಿ ⇒ Online game ban: ಬೆಂಗಳೂರಿನ ಅನೇಕ ಗೇಮಿಂಗ್ ಕಂಪೆನಿಗಳಿಗೆ ಕಂಟಕ? ಗಾಬರಿಯಾಗಿದ್ದಾರೆ ಟೆಕ್ಕಿಗಳು

    ಗೌಪ್ಯತೆ ಸಮಸ್ಯೆಗಳೇನು?

    ಬಳಕೆದಾರರು ರೆಕಾರ್ಡಿಂಗ್‌ನಿಂದ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತದೆ ಮತ್ತು ಬಳಸಲಾಗುತ್ತದೆ ಎಂಬ ಮಾಹಿತಿ ಕುರಿತಂತೆ ಆ್ಯಪ್‌ನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆ್ಯಪ್‌ನ ಗೌಪ್ಯತೆ ನೀತಿಯಲ್ಲಿ ಅಪ್ಲಿಕೇಶನ್ ಅಭಿವೃದ್ಧಿಯ ಹಂತದಲ್ಲಿದೆ ಎಂಬ ಒಕ್ಕಣೆ ನೀಡಲಾಗಿದೆ. ಇದರಿಂದ ಬಳಕೆದಾರರು ಈ ನಿಟ್ಟಿನಲ್ಲಿ ಆ್ಯಪ್ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು MeowTalk ನಂತಹ ಅಪ್ಲಿಕೇಶನ್‌ಗಳ ಗೌಪ್ಯತೆಯ ಬಗ್ಗೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಅನುವಾದಗಳನ್ನು ಟ್ಯಾಗ್ ಮಾಡಲು ಅಪ್ಲಿಕೇಶನ್ ಮಾಲೀಕರ ಮೇಲೆ ಅವಲಂಬಿತವಾಗಿರುವುದರಿಂದ, ತಿಳುವಳಿಕೆಯ ಕೊರತೆಗೆ ಅವಕಾಶವಿರುತ್ತದೆ ಎಂಬುದನ್ನೂ ಸೇರಿಸಲಾಗಿದೆ. ಅಪ್ಲಿಕೇಶನ್ ಹೆಚ್ಚು ಮೋಜಿನದ್ದಾಗಿದ್ದು ನಿಮ್ಮ ಬೆಕ್ಕಿನೊಂದಿಗೆ ಮೋಜಿನ ಸಮಯ ಕಳೆಯಲು ಈ ಅಪ್ಲಿಕೇಶನ್ ಸಹಕಾರಿಯಾಗಿದೆ ಎಂಬುದು ಹೆಚ್ಚಿನ ಬಳಕೆದಾರರ ಅಭಿಪ್ರಾಯವಾಗಿದೆ.
    First published: