ಇತ್ತೀಚೆಗೆ ಸ್ಮಾರ್ಟ್ಟಿವಿಗಳಂತೆಯೇ (Smart Tv) ಸ್ಮಾರ್ಟ್ ಪ್ರೊಜೆಕ್ಟರ್ಗಳು (Smart Projector) ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಈಗಿನ ಟೆಕ್ನಾಲಜಿ ಕಂಪನಿಗಳು ಬಹಳಷ್ಟು ಮುಂದುವರಿಯುತ್ತಿದೆ. ಜನರಂತು ಈಗಿನ ಸಿನೆಮಾಗಳನ್ನು ನೋಡಬೇಕಾದರೆ ಈ ಓಟಿಟಿ ಪ್ಲಾಟ್ಫಾರ್ಮ್ಗಳನ್ನೇ (OTT Platforms) ಹೆಚ್ಚು ಅನುಸರಿಸುತ್ತಾರೆ. ಇತ್ತೀಚೆಗೆ ಥಿಯೇಟರ್ಗಿಂತ ಹೆಚ್ಚಿನ ಸಿನೆಮಾಗಳನ್ನು (Cinema) ಓಟಿಟಿ ಮೂಲಕವೆ ನೋಡುವವರು ಹೆಚ್ಚು. ಹಾಗಿರುವಾಗ ಇದನ್ನು ಒಂದಾ ಸ್ಮಾರ್ಟ್ಟಿವಿಗೆ ಕನೆಕ್ಟ್ ಮಾಡಿಕೊಂಡು ನೋಡುತ್ತಾರೆ. ಇದೀಗ ಥಿಯೇಟರ್ ರೀತಿಯಲ್ಲೇ ಅನುಭವವನ್ನು ನೀಡುವಂತಹ ಝೆಬ್ ಪಿಕ್ಸಾಪ್ಲೇ ಕಂಪನಿಯಿಂದ (Zeb Pixaplay Company) ಹೊಸ ಸ್ಮಾರ್ಟ್ ಪ್ರೊಜೆಕ್ಟರ್ ಬಿಡುಗಡೆಯಾಗಿದೆ. ಇದು 224 ಡಿಸ್ಪ್ಲೇ ಸ್ಕ್ರೀನ್ನೊಂದಿಗೆ ಚಿತ್ರಗಳನ್ನು ತೋರಿಸುತ್ತದೆ. ಇದು ಹಲವಾರು ಫೀಚರ್ಸ್ಗಳನ್ನು ಹೊಂದಿದ್ದು ಭಾರೀ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವಂತಹ ಸ್ಮಾರ್ಟ್ ಪ್ರೊಜೆಕ್ಟರ್ ಝೆಬ್ ಪಿಕ್ಸಾಪ್ಲೇ 17 ಎಂಬುದಾಗಿದ್ದು ಇದು ಥಿಯೇಟರ್ ರೀತಿಯಲ್ಲೇ ಉತ್ತಮ ಅನುಭವವನ್ನು ವೀಕ್ಷಕರಿಗೆ ನೀಡುತ್ತದೆ. ಇನ್ನು ಈ ಪ್ರೊಜೆಕ್ಟರ್ ಅನ್ನು ಎಲ್ಲಿಬೇಕಾದರು ಕೊಂಡುಹೋಗಬಹುದು.
ಈ ಸ್ಮಾರ್ಟ್ ಪ್ರೊಜೆಕ್ಟರ್ನ ಫೀಚರ್ಸ್
ಈ ಸ್ಮಾರ್ಟ್ ಪ್ರೊಜೆಕ್ಟರ್ ಹಲವಾರು ಫೀಚರ್ಸ್ಗಳನ್ನು ಹೊಂದಿದೆ. ಇದು ಆಟೋಫೋಕಸ್, ಕೀಸ್ಟೋನ್ ಅಳವಡಿಕೆ ಮತ್ತು ಡಾಲ್ಬಿ ಆಡಿಯೋ ಬೆಂಬಲದಂತಹ ಫೀಚರ್ಸ್ಗಳನ್ನು ಒಳಗೊಂಡಿದೆ. ಅಲ್ಲದೆ, ಈ ಸ್ಮಾರ್ಟ್ ಪ್ರೊಜೆಕ್ಟರ್ ಗುಣಮಟ್ಟದ ಪವರ್ಫುಲ್ ಸ್ಪೀಕರ್ಗಳನ್ನು ಹೊಂದಿದೆ.
ಇದನ್ನೂ ಓದಿ: ಗೂಗಲ್ನಲ್ಲಿ ಇನ್ಮುಂದೆ 100 ಭಾಷೆಗಳಲ್ಲಿ ವಿಷಯಗಳನ್ನು ಸರ್ಚ್ ಮಾಡ್ಬಹುದು! ಸುಂದರ್ ಪಿಚೈ ಅವರ ಹೊಸ ಪ್ಲಾನ್
ಇದು ಡ್ಯುಯಲ್ ಹೆಚ್ಡಿಎಮ್ಐ ಪೋರ್ಟ್ಗಳು, ಎರಡು ಯುಎಸ್ಬಿ ಪೋರ್ಟ್ಗಳು ಮತ್ತು AUX ಔಟ್ಪುಟ್ ಪೋರ್ಟ್ ಅನ್ನು ಸಹ ಹೊಂದಿದೆ. ಪ್ರೊಜೆಕ್ಟರ್ ಲೈಟ್ 30 ಸಾವಿರ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ನಿಮ್ಮ ಸ್ಮಾರ್ಟ್ ಫೋನ್ನಿಂದ ಕಾಸ್ಟಿಂಗ್ ಕನೆಕ್ಟ್ ಮಾಡುವ ಫೀಚರ್ನೊಂದಿಗೆ ಈ ಪ್ರೊಜೆಕ್ಟರ್ನಲ್ಲಿ ನಿಮ್ಮ ನೆಚ್ಚಿನ ಸಿನೆಮಾಗಳನ್ನು ನೀವು ವೀಕ್ಷಿಸಬಹುದು.
ಪ್ರೊಸೆಸರ್ ಸಾಮರ್ಥ್ಯ
ಈ ಝೆಬ್ ಪಿಕ್ಸಾಪ್ಲೇ ಸ್ಮಾರ್ಟ್ ಪ್ರೊಜೆಕ್ಟರ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದು 32ಜಿಬಿ ರ್ಯಾಮ್ ಅನ್ನು ಹೊಂದಿದೆ. ಅಪ್ಲಿಕೇಶನ್ ಡೌನ್ಲೋಡ್ ಮಅಡುವಂತಹ ಫೀಚರ್ಸ್ ಅನ್ನು ಕೂಡ ಇದು ಹೊಂದಿದೆ. ಈ ಸ್ಮಾರ್ಟ್ಪ್ರಾಜೆಕ್ಟರ್ರಿಮೋಟ್ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ. ಇದಕ್ಕೆ ಹೆಚ್ಚುವರಿ ಸ್ಪೀಕರ್ಗಳನ್ನು ಸಹ ಸೇರಿಸಬಹುದು. ಬ್ಲೂಟೂತ್ 5.1 ವೈಶಿಷ್ಟ್ಯವೂ ಲಭ್ಯವಿದೆ. ಅಂದರೆ ಸ್ಪೀಕರ್ಗಳಿಗರ ಸುಲಭವಾಗಿ ಕನೆಕ್ಟ್ ಮಾಡ್ಬಹುದು. ಅಲ್ಲದೆ, ಈ ಪ್ರೊಜೆಕ್ಟರ್ ಖರೀದಿಸುವವರಿಗೆ ಸೂಕ್ತ ಬ್ಯಾಕ್ಪ್ಯಾಕ್ ಕೂಡ ಸಿಗುತ್ತದೆ. ಈ ಮೂಲಕ ಎಲ್ಲಿ ಬೇಕಾದರು ಇದನ್ನು ಕೊಂಡುಹೋಗಬಹುದು.
ಡಿಸ್ಪ್ಲೇ ಫೀಚರ್ಸ್
ಈ ಸ್ಮಾರ್ಟ್ ಪ್ರೊಜೆಕ್ಟರ್ ಮೂಲಕ 224 ಇಂಚುಗಳ ಡಿಸ್ಪ್ಲೇ ಸ್ಕ್ರೀನ್ನಲ್ಲಿ ಸಿನೆಮಾಗಳನ್ನು ವೀಕ್ಷಿಸಬಹುದು. ಈ ಪ್ರೊಜೆಕ್ಟರ್ 6000 ಲ್ಯುಮೆನ್ಸ್ ಬ್ರೈಟ್ನೆಸ್ ಹೊಂದಿರಲಿದೆ ಎಂದು ಕಂಪನಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಈ ಬ್ರೈಟ್ನೆಸ್ ಅನ್ನು ವೀಕ್ಷಕರಿಗೆ ಬೇಕಾದ ಹಾಗೆ ಶ್ರೀಇಟ್ಟುಕೊಂಡು ಸಿನೆಮಾಗಳನ್ನು ನೋಡಬಹುದಾಗಿದೆ.
ಬೆಲೆ
ಈ ಸ್ಮಾರ್ಟ್ ಪ್ರೊಜೆಕ್ಟರ್ ಅನ್ನು ಟೆಕ್ನಾಲಜಿ ಮಾರುಕಟ್ಟೆಯಲ್ಲಿ 24,999 ರೂಪಾಯಿಗೆ ಖರೀದಿ ಮಾಡಬಹುದು. ಆದರೆ ಒಂದು ವೇಳೆ ನೀವು ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಖರೀದಿ ಮಾಡುವುದಾದರೆ ಈ ಸ್ಮಾರ್ಟ್ ಪ್ರೊಜೆಕ್ಟರ್ 24 ಸಾವಿರ ರೂಪಾಯಿಯಲ್ಲಿ ಪಡೆಯಬಹುದಾಗಿದೆ.
ಇನ್ನು ಈ ಸ್ಮಾರ್ಟ್ ಪ್ರೊಜೆಕ್ಟರ್ ಸಣ್ಣ ಮನೆಗಳಿಗೆ ಸೂಕ್ತವಲ್ಲ ಏಕೆಂದರೆ ಇದು ದೊಡ್ಡ ಡಿಸ್ಪ್ಲೇ ಗಾತ್ರವನ್ನು ಹೊಂದಿರುವುದರಿಂದ ಖರೀದಿ ಮಾಡುವಾಗ ಸರಿಯಾಗಿ ಚೆಕ್ ಮಾಡಿಕೊಂಡು ಖರೀದಿಸಿದರೆ ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ