Beware! ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿದಂತೆ ಏನಾದ್ರೂ ಮೆಸೇಜ್ ಬಂದಿದ್ಯಾ? ಅದು ಸ್ಕ್ಯಾಮ್ ಆಗಿರಬಹುದು ಎಚ್ಚರ !

ಪ್ರತಿ ತಿಂಗಳು ಪಾವತಿಸಬೇಕಾದ ಕೆಲವು ಬಿಲ್ ಗಳನ್ನು ಈಗ ಬಹುತೇಕ ಶ್ರೀಸಾಮಾನ್ಯರು ಆನ್ಲೈನ್ ಮೂಲಕವೇ ಪಾವತಿಸುತ್ತಿದ್ದು ಇದರಿಂದ ಅನವಶ್ಯಕ ಓಡಾಟ ಹಾಗೂ ಸಮಯ ಉಳಿಸುತ್ತಿರುವುದನ್ನು ನೋಡಬಹುದು. ನಿಜಕ್ಕೂ ಇದರಿಂದ ಸಾಕಷ್ಟು ಪ್ರಯೋಜನವಾಗಿದೆಯಾದರೂ ಈ ನಿಟ್ಟಿನಲ್ಲಿ ಸದಾ ಎಚ್ಚರಿಕೆಯಿಂದ ಇರುವುದೇ ಒಳಿತು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗ ಎಲ್ಲವೂ ಆನ್ಲೈನ್ (Online) ಮಯ ಆಗಿರುವುದರಿಂದ ಬಹುತೇಕ ಜನರು ಇದರ ಪ್ರಯೋಜನ ಪಡೆಯುತ್ತಾರೆ. ಪ್ರತಿ ತಿಂಗಳು ಪಾವತಿಸಬೇಕಾದ ಕೆಲವು ಬಿಲ್ (Bill) ಗಳನ್ನು ಈಗ ಬಹುತೇಕ ಶ್ರೀಸಾಮಾನ್ಯರು ಆನ್ಲೈನ್ ಮೂಲಕವೇ ಪಾವತಿಸುತ್ತಿದ್ದು ಇದರಿಂದ ಅನವಶ್ಯಕ ಓಡಾಟ ಹಾಗೂ ಸಮಯ ಉಳಿಸುತ್ತಿರುವುದನ್ನು ನೋಡಬಹುದು. ನಿಜಕ್ಕೂ ಇದರಿಂದ ಸಾಕಷ್ಟು ಪ್ರಯೋಜನವಾಗಿದೆಯಾದರೂ ಈ ನಿಟ್ಟಿನಲ್ಲಿ ಸದಾ ಎಚ್ಚರಿಕೆಯಿಂದ (Beware) ಇರುವುದೇ ಒಳಿತು. ಏಕೆಂದರೆ, ಸೈಬರ್ ಪರಿಣಿತರ ಅಭಿಪ್ರಾಯದಂತೆ ಈಗ ಸೈಬರ್ ಅಪರಾಧಿಗಳು (Cyber Criminals) ತಮ್ಮ ಕಾರ್ಯವಿಧಾನವನ್ನು ಬದಲಾಯಿಸಿಕೊಂಡಿದ್ದು ಹಲವು ವಿಭಿನ್ನ ಮಾರ್ಗಗಳ ಮೂಲಕ ಜನರಿಗೆ ಸಂದೇಹ ಬರದಂತೆ ಸೈಬರ್ ಸ್ಕ್ಯಾಮ್ (Cyber Scam) ಗಳಲ್ಲಿ ತೊಡಗಿಸಿಕೊಂಡಿದ್ದಾರೆನ್ನಲಾಗಿದೆ.

ವಿದ್ಯುತ್ ಬಿಲ್ ಪಾವತಿಸುವಂತೆ ಕರೆ
ಇತ್ತೀಚಿಗಷ್ಟೇ ರಾಹುಲ್ ಎಂಬ ವ್ಯಕ್ತಿಗೆ ಮೊಬೈಲ್ ನಲ್ಲಿ, "ನೀವು ಬಾಕಿ ಇರುವ ನಿಮ್ಮ ವಿದ್ಯುತ್ ಬಿಲ್ ಅನ್ನು ಈ ಕೂಡಲೇ ಪಾವತಿಸುವಂತೆ ಇಲ್ಲದಿದ್ದಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗುವುದು" ಎಂಬ ಸಂದೇಶ ಬಂದಿತ್ತು. ರಾಹುಲ್ ನಿಗೆ ತಾನು ವಿದ್ಯುತ್ ಬಿಲ್ ಅನ್ನು ಪಾವತಿಸಿರುವೆನೋ ಇಲ್ಲವೋ ಎಂಬ ಗೊಂದಲ ಉಂಟಾದಾಗ ಆ ಸಂದೇಶದಲ್ಲಿ ವಿದ್ಯುತ್ ಅಧಿಕಾರಿಯನ್ನು ಸಂಪರ್ಕಿಸುವಂತೆ ಒಂದು ಖಾಸಗಿ ನಂಬರ್ ಅನ್ನು ಸಹ ಕೊಟ್ಟಿರುವುದು ಕಂಡು ಅದಕ್ಕೆ ಕರೆ ಮಾಡಿದ ರಾಹುಲ್.

ಆ ಅಪರಿಚಿತ ಅಧಿಕಾರಿ ರಾಹುಲ್ ಕರೆಯನ್ನು ಸ್ವೀಕರಿಸಿ ಮಾತನಾಡಲು ಪ್ರಾರಂಭಿಸಿದ. ಈ ಮಧ್ಯೆ ರಾಹುಲ್ ನಿಗೆ ಗೊತ್ತಾದ ವಿಷಯವೆಂದರೆ ಅದೆಲ್ಲವೂ ಒಂದು ಸ್ಕ್ಯಾಮ್ ಆಗಿದ್ದು ತನ್ನ ಹಣ ಲಪಟಾಯಿಸಲು ಈ ರೀತಿ ವ್ಯೂಹ ಮಾಡಿದ್ದಾರೆಂಬ ವಿಷಯ ಗೊತ್ತಾಗಿ ತಕ್ಷಣ ಕರೆ ಸ್ಥಗಿತಗೊಳಿಸಿ ಉಳಿದುಕೊಂಡ. ಆದರೆ, ರಾಹುಲ್ ನಂತೆ ಇತರರೂ ಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಬಹಳಷ್ಟು ಜನರು ಇಂತಹ ಸ್ಕ್ಯಾಮ್ ಗಳಿಗೆ ಬಲಿಪಶುಗಳಾಗಬಹುದು.

ಈ ಬಗ್ಗೆ ಮಹಾರಾಷ್ಟ್ರದ ಜರ್ನಲಿಸ್ಟ್ ಒಬ್ಬರು ಹೇಳಿದ್ದು ಹೀಗೆ
ಮಹಾರಾಷ್ಟ್ರದ ನಾಗಪುರದಲ್ಲಿ ನೆಲೆಸಿರುವ ಜರ್ನಲಿಸ್ಟ್ ಒಬ್ಬರು ಹೇಳುತ್ತಾರೆ, "ವಂಚಕರು ಈಗ ಮಹಾರಾಷ್ಟ್ರ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಗಳೆಂದು ತಮ್ಮನ್ನು ಪರಿಚಯಿಸಿಕೊಂಡು, ಗ್ರಾಹಕರ ವಾಟ್ಸಪ್ ಸಂಖ್ಯೆಗೆ ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಪಾವತಿಸುವಂತೆ ಸಂದೇಶ ಕಳುಹಿಸುತ್ತಾರೆ. ಗ್ರಾಹಕರು ಅದಕ್ಕೆ ಸಮ್ಮತಿಸಿದಾಗ ಅವರು ಜಿಪೇ ಮೂಲಕ ಪಾವತಿಸುವಂತೆ ಪೇಮೆಂಟ್ ಗೇಟ್ ವೇ ಕಳುಹಿಸಿ ಅದರ ಮೂಲಕ ಹಣ ಪಡೆಯುತ್ತಾರೆ".

ಇದನ್ನೂ ಓದಿ:  Spam Call: ಸ್ಪ್ಯಾಮ್ ಕರೆಗಳಿಂದ ಕಿರಿಕಿರಿ ಆಗಿದ್ಯಾ? ಹಾಗಿದ್ರೆ ಇದನ್ನು ಬ್ಲಾಕ್ ಮಾಡಲು ಹೀಗೆ ಮಾಡಿ

ಈ ಸಂದರ್ಭದಲ್ಲಿ ಅವರು (ಜರ್ನಲಿಸ್ಟ್) ತಾವು ಅನುಭವಿಸಿದ ಪ್ರಸಂಗವೊಂದನ್ನು ಸ್ಮರಿಸಿಕೊಳ್ಳುತ್ತ ಹೇಳುತ್ತಾರೆ, "ತನಗೂ ಸಹ ಈ ರೀತಿ ಒಂದು ಸಂದೇಶ ಬಂದಿತ್ತು, ಅನಂತರ ಇನ್ನೊಬ್ಬ ವ್ಯಕ್ತಿ ಕರೆ ಮಾಡಿ, ನನಗೇನಾದರೂ ಆನ್ಲೈನ್ ಮೂಲಕ ಹಣ ಪಾವತಿಸಲು ಕಠಿಣವಾಗುತ್ತಿದ್ದರೆ ನನ್ನ ಕಾರ್ಡ್ ವಿವರಗಳನ್ನು ಕೊಟ್ಟರೆ ಸಾಕೆಂದು ಹೇಳಿದ" ಎಂದ ಅವರು ಆ ಕೂಡಲೆ ತಮ್ಮ ಟ್ವಿಟರ್ ಹ್ಯಾಂಡಲ್ ಬಳಸಿ ಈ ಬಗ್ಗೆ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಟ್ಯಾಗ್ ಮಾಡಿ ಸಾಮಾನ್ಯ ಜನರು ಇಂತಹ ವಂಚನೆಗಳಿಂದ ಎಚ್ಚರವಿರಬೇಕು ಎಂದು ಬರೆದುಕೊಂಡಿದ್ದಾರೆ.

ಟ್ವೀಟ್ ನೋಡಿ ತಮ್ಮ ಅನುಭವಗಳನ್ನು ಹಂಚಿಕೊಂಡ ಜನ
ಅವರ ಈ ಟ್ವಿಟ್ ಅನ್ನು ನೋಡಿದ ಇನ್ನೊಬ್ಬ ವ್ಯಕ್ತಿ ತಾವು ಸಹ ಇಂತಹ ಪ್ರಸಂಗ ಅನುಭವಿಸಿರುವುದಾಗಿ ತಮ್ಮ ಅನುಭವ ಬರೆದುಕೊಂಡಿದ್ದಾರೆ. ಅಸಲಿಗೆ ಅವರಿಗೂ ಸಹ ಇದೇ ರೀತಿ ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಈ ಕೂಡಲೆ ಪಾವತಿಸುವಂತೆ ಸಂದೇಶ ಬಂದಿದ್ದು ಅದರಲ್ಲಿ ಆ ವಂಚಕರು ವ್ಯಕ್ತಿಗೆ ಟೀಮ್ ವೀವರ್ ಇನ್ಸ್ಟಾಲ್ ಮಾಡಿಕೊಳ್ಳಲು ಕೇಳಿದ್ದಾರೆ. ಆಸಕ್ತಿಕರ ವಿಷಯ ಇಲ್ಲಿ ಏನೆಂದರೆ ಈ ರೀತಿ ಸಂದೇಶ ಪಡೆದಿದ್ದ ಆ ವ್ಯಕ್ತಿ ತನ್ನ ಹೆಸರಿನಲ್ಲಿ ಯವುದೇ ವಿದ್ಯುತ್ ಸಂಪರ್ಕವನ್ನು ಹೊಂದೇ ಇದ್ದಿದ್ದಿಲ್ಲ. ಹಾಗಾಗಿ ಇದೊಂದು ಸ್ಕ್ಯಾಮ್ ಎಂದು ಸ್ಪಷ್ಟವಾಗಿ ಹೇಳಬಹುದಾಗಿದೆ.

ಮತ್ತೊಬ್ಬರು ಈ ಟ್ವಿಟ್ ಗೆ ಪ್ರತಿಯಾಗಿ ರಿಪ್ಲೈ ಮಾಡಿದ್ದು ಹೀಗೆ ಹೇಳುತ್ತಾರೆ, "ಕರೆಗಳನ್ನು ಮುಂಬೈ ಜನರಿಗೆ ಮಾಡಲಾಗುತ್ತಿದ್ದು ಆ ಕರೆಗಳು ಮಾತ್ರ ಬಂಗಾಳದಿಂದ ಬರುತ್ತಿರುವುದು ವಿಪರ್ಯಾಸ" ಎಂದಿದ್ದಾರೆ. ಹೀಗೆ ಈಗ ಮುಂಬೈನಲ್ಲಿ ಬಹಳಷ್ಟು ಜನರಿಗೆ ವಂಚಕರಿಂದ ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿದಂತೆ ವಂಚನೆ ಮಾಡುವ ಕಾರ್ಯವಿಧಾನ ಬಳಸಲಾಗುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ಈ ಬಗ್ಗೆ ಉಲ್ಲೇಖಿಸಿದಾಗ ಆಯಾ ಇಲಾಖೆಗಳು ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು ಜನರಿಗೆ ಈ ರೀತಿಯ ಕಾರ್ಯವಿಧಾನ ಬಳಸುತ್ತಿರುವ ವಂಚಕರಿಂದ ಎಚ್ಚರವಿರುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಜಿಯೋ ಕೇರ್ ಹಾಗೂ ಟಾಟಾ ಪವರ್ ಹೆಸರುಗಳನ್ನು ಬಳಸಿ ಜನರಿಗೆ ವಂಚನೆ
ಇಷ್ಟೇ ಅಲ್ಲದೆ, ವಂಚಕರು ಜಿಯೋ ಕೇರ್ ಹಾಗೂ ಟಾಟಾ ಪವರ್ ಹೆಸರುಗಳನ್ನು ಬಳಸಿಯೂ ಗ್ರಾಹಕರ ಸಂಖ್ಯೆಗೆ ಸಂದೇಶ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಕೆಲ ಗ್ರಾಹಕರು ಈ ಸಂದೇಶಗಳ ಮೇಲೆ ಸಂದೇಹ ವ್ಯಕ್ತಪಡಿಸಿ ಆಯಾ ಸಂಸ್ಥೆಗಳನ್ನು ಈ ಬಗ್ಗೆ ಪರಿಶೀಲಿಸಲು ವಿನಂತಿಸಿದಾಗ ಜಿಯೋ ಕೇರ್ ಹಾಗೂ ಟಾಟಾ ಪವರ್ ತಮ್ಮ ಗ್ರಾಹಕರನ್ನು ಕುರಿತು ಆ ಸಂದೇಶಗಳು ವಂಚನೆಯ ಸಂದೇಶಗಳೆಂದು ತೋರುತ್ತಿದ್ದು ಅವುಗಳನ್ನು ನಿರ್ಲಕ್ಷಿಸುವಂತೆ ಎಚ್ಚರಿಸಿದರೆ ಪೊಲೀಸ ಇಲಾಖೆಯು ಜನರನ್ನು ಕುರಿತು ಇಂತಹ ಸಂದೇಶಗಳು ಬಂದರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗಳಿಗೆ ಹೋಗಿ ತಿಳಿಸಿ ಎಂದು ಕೇಳಿದೆ.

ಇದನ್ನೂ ಓದಿ:  Xiaomi ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ! ಕಡಿಮೆ ಬೆಲೆಗೆ ಖರೀದಿಸಿ ನಿಮ್ಮಿಷ್ಟದ ಸ್ಮಾರ್ಟ್​ಫೋನ್​

ಒಟ್ಟಿನಲ್ಲಿ ಹೇಳಬೇಕೆಂದರೆ, ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನ ಮುಂದುವರೆದಂತೆ ಮೋಸಗೊಳಿಸುವ ವಿಧಾನಗಳು ಬದಲಾಗುತ್ತಿವೆ. ಹಾಗಾಗಿ ನೀವು ಯಾವುದೇ ರೀತಿಯ ಆನ್ಲೈನ್ ಬಿಲ್ ಪಾವತಿಸುತ್ತಿದ್ದಲ್ಲಿ ಪ್ರತಿ ಬಾರಿಯೂ ಎಚ್ಚರಿಕೆಯಿಂದ ಇರಬೇಕಾದುದು ಅವಶ್ಯಕವಾಗಿದೆ. ಅಧಿಕೃತ ವೆಬ್ಸೈಟುಗಳಲ್ಲೇ ಬಿಲ್ ಪಾವತಿಸಿ. ನಿಮಗೆ ಸಂದೇಹ ಬರುವ ಯಾವುದೇ ಸಂದೇಶಗಳಿಗೆ ಪ್ರತಿಕ್ರಯಿಸಬೇಡಿ.
Published by:Ashwini Prabhu
First published: