Twitter: ಎಲಾನ್ ಮಸ್ಕ್ ಟ್ವಿಟರ್​ನ ತಾತ್ಕಾಲಿಕ ಸಿಇಒ ಆಗಬಹುದಂತೆ!

Elon Musk: ಪರಾಗ್ ಅವರನ್ನು ಸಿಇಒ ಕುರ್ಚಿಯಿಂದ ಕೆಳಗಿಳಿಸಲು ಮಸ್ಕ್ ಅವರು ಆಲೋಚಿಸುತ್ತಿದ್ದು, ಪ್ರಸ್ತುತ ಟೆಸ್ಲಾ ಸಿಇಒ ಆಗಿರುವ ಎಲಾನ್ ಮಸ್ಕ್ ಅವರು ತಾತ್ಕಾಲಿಕವಾಗಿಯಾದರೂ ಟ್ವಿಟರ್ ನ ಸಿಇಒ ಆಗಬಹುದು ಎಂದು ಸುದ್ದಿಗಳು ಕೇಳಲು ಸಿಗುತ್ತಿವೆ.

ಎಲಾನ್ ಮಸ್ಕ್

ಎಲಾನ್ ಮಸ್ಕ್

  • Share this:
    ಐದು ತಿಂಗಳ ಹಿಂದೆಯಷ್ಟೇ ಟ್ವಿಟ್ಟರ್ ನ (Twitter) ಸಿಇಒ (CEO) ಹುದ್ದೆಯನ್ನು ವಹಿಸಿಕೊಂಡ ಪರಾಗ್ ಅಗರ್ವಾಲ್ (Parag Agrawal) ಅವರ ಸ್ಥಾನಕ್ಕೆ ಬೇರೆ ಹೊಸ ಸಿಇಒ ಅವರನ್ನು ಎಲಾನ್ ಮಸ್ಕ್(Elon Musk) ಅವರು ನಿಯೋಜಿಸಬಹುದು ಎಂಬ ಸುದ್ದಿಗಳು ಇತ್ತೀಚೆಗೆ ಜೋರಾಗಿಯೇ ಹರಿದಾಡುತ್ತಿದ್ದವು.

    ಪರಾಗ್ ಅವರನ್ನು ಸಿಇಒ ಕುರ್ಚಿಯಿಂದ ಕೆಳಗಿಳಿಸಲು ಮಸ್ಕ್ ಅವರು ಆಲೋಚಿಸುತ್ತಿದ್ದು, ಪ್ರಸ್ತುತ ಟೆಸ್ಲಾ ಸಿಇಒ ಆಗಿರುವ ಎಲಾನ್ ಮಸ್ಕ್ ಅವರು ತಾತ್ಕಾಲಿಕವಾಗಿಯಾದರೂ ಟ್ವಿಟರ್ ನ ಸಿಇಒ ಆಗಬಹುದು ಎಂದು ಸುದ್ದಿಗಳು ಕೇಳಲು ಸಿಗುತ್ತಿವೆ. 44 ಬಿಲಿಯನ್ ಡಾಲರ್ ಒಪ್ಪಂದವು ಮುಗಿದ ನಂತರವಷ್ಟೇ ಮಸ್ಕ್ ಮುಂದಿನ ಸಿಇಒ ಆಗಲಿದ್ದಾರೆ ಎಂದು ಸಿಎನ್‌ಬಿಸಿಯ ಡೇವಿಡ್ ಫೇಬರ್ ಈ ಮಾಹಿತಿಯನ್ನು ಹಂಚಿ ಕೊಂಡಿದ್ದಾರೆ.

    ಜಾಕ್ ಡೋರ್ಸಿ ಕಂಪನಿಯಿಂದ ನಿರ್ಗಮಿಸಿದ ನಂತರ, ಅಗರ್ವಾಲ್ ಕಳೆದ ವರ್ಷ ನವೆಂಬರ್ ನಲ್ಲಿ ಟ್ವಿಟರ್ ನ ಹೊಸ ಸಿಇಒ ಆದರು. ಮಸ್ಕ್ ಅವರ ನಾಯಕತ್ವದಲ್ಲಿ ಕಂಪನಿಯ ಭವಿಷ್ಯವು ಅನಿಶ್ಚಿತವಾಗಿದೆ ಎಂದು ಟೌನ್‌ಹಾಲ್ ನಲ್ಲಿ ಇತ್ತೀಚೆಗೆ ನಡೆದಂತಹ ಆಂತರಿಕ ಸಭೆಯಲ್ಲಿ ಅಗರ್ವಾಲ್ ಹೇಳಿದ್ದರು.

    ಈ ಹಿಂದೆ ರಾಯಿಟರ್ಸ್ ವರದಿಯ ಪ್ರಕಾರ, ಮಸ್ಕ್ ಅವರು ಹೊಸ ಸಿಇಒ ಅವರನ್ನು ಸಾಲಾಗಿ ನಿಲ್ಲಿಸಿದ್ದಾರೆ, ಆದರೆ 44 ಬಿಲಿಯನ್ ಡಾಲರ್ ಒಪ್ಪಂದ ಮುಗಿದ ನಂತರವೇ ಅವರು ಆಡಳಿತ ಮಂಡಳಿಯನ್ನು ಅಲುಗಾಡಿಸುತ್ತಾರೆ ಎಂದು ಹೇಳಿತ್ತು. ವರದಿಗಳ ಪ್ರಕಾರ, ಟ್ವಿಟರ್ ನ ಮಾಜಿ ಸಿಇಒ ಜ್ಯಾಕ್ ಡೋರ್ಸಿ ಅವರನ್ನು ಸಹ ಈ ಪಾತ್ರಕ್ಕೆ ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: Airtel: ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಪರಿಚಯಿಸಿದ ಏರ್‌ಟೆಲ್! ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಉಚಿತ

    ಕಂಪನಿಯ ಆದಾಯವನ್ನು ಹೆಚ್ಚಿಸಲು ಉದ್ಯೋಗಗಳನ್ನು ಕಡಿತಗೊಳಿಸಲು ಮಸ್ಕ್ ಯೋಜಿಸುತ್ತಿದ್ದಾರೆ ಎಂದು ಅವರು ಟ್ವಿಟ್ಟರ್ ನಲ್ಲಿ ಹೂಡಿಕೆ ಮಾಡಿದ ಬ್ಯಾಂಕುಗಳಿಗೆ ತಿಳಿಸಿದ್ದರು.

    ಮಸ್ಕ್ ಅವರು ಅಧಿಕಾರ ವಹಿಸಿಕೊಂಡಿರುವುದರಿಂದ ಈಗ ಟ್ವಿಟರ್ ನಲ್ಲಿ ಉದ್ಯೋಗಿಗಳು ತಮ್ಮ ಭವಿಷ್ಯದ ಬಗ್ಗೆ ಭಯ ಭೀತರಾಗಿದ್ದಾರೆ, ಆದರೆ ಅವರು ಜನರ ಕಾಳಜಿಯಿಂದ ವಿಚಲಿತರಾಗುವುದಿಲ್ಲ. ಮೆಟ್ ಗಾಲಾ ಕಾರ್ಯಕ್ರಮದಲ್ಲಿ, ಉದ್ಯೋಗಿಗಳ ಸಂಭಾವ್ಯ ನಿರ್ಗಮನದ ಬಗ್ಗೆ ಮಸ್ಕ್ ಅವರನ್ನು ಕೇಳಲಾಯಿತು, ಅದಕ್ಕೆ ಅವರು ಯಾರಿಗೆ ಇಲ್ಲಿ ಆರಾಮದಾಯಕವೆಂದು ಅನ್ನಿಸುವುದಿಲ್ಲವೋ, ಅಂತಹ ಜನರು ಕಂಪನಿಯನ್ನು ತೊರೆಯಲು ಬಯಸಿದರೆ, ತೊರೆಯಬಹುದು ಎಂದು ಹೇಳಿದರು.

    "ಖಂಡಿತವಾಗಿಯೂ ಯಾರಿಗಾದರೂ ಈ ಕಂಪನಿಯಲ್ಲಿ ಕೆಲಸ ಮಾಡುವುದು ಆರಾಮದಾಯಕವೆನಿಸದಿದ್ದರೆ, ಅವರು ತಮ್ಮಷ್ಟಕ್ಕೆ ತಾವೇ ಬೇರೆಲ್ಲಾದರೂ ಹೋಗುತ್ತಾರೆ. ಅದು ಒಳ್ಳೆಯದೇ" ಎಂದು ಅವರು ಹೇಳಿದರು.

    ಶೀಘ್ರದಲ್ಲಿಯೇ ತನ್ನ ಕೆಲಸವನ್ನು ಕಳೆದು ಕೊಳ್ಳಲಿರುವ ಅಗರ್ವಾಲ್ ಅವರು ಈ ಹಿಂದೆ ತನ್ನ ಕೆಲಸದ ಬಗ್ಗೆ ಚಿಂತಿಸುವುದಿಲ್ಲ, ಆದರೆ ಕಂಪನಿಯ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತೇನೆ ಎಂದು ಹೇಳಿದ್ದರು. "ಧನ್ಯವಾದಗಳು ಆದರೆ ನನ್ನ ಬಗ್ಗೆ ಏನು ಚಿಂತಿಸಬೇಡಿ. ಸೇವೆಯನ್ನು ಸುಧಾರಿಸುವುದು ಹೆಚ್ಚು ಮುಖ್ಯ" ಎಂದು ಅಗರ್ವಾಲ್ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ, ತನ್ನನ್ನು ಕೆಲಸದಿಂದ ತೆಗೆದು ಹಾಕಲಿರುವ ಬಗ್ಗೆ ಇನ್ನೊಬ್ಬ ಬಳಕೆದಾರನಿಗೆ ಪ್ರತಿಕ್ರಿಯಿಸಿದ ಅಗರ್ವಾಲ್, "ಇಲ್ಲ! ನಾವಿನ್ನೂ ಇಲ್ಲೇ ಇದ್ದೇವೆ" ಎಂದು ಹೇಳಿದರು.

    ಇದನ್ನೂ ಓದಿ: Bajaj Pulsar 250: ಸದ್ದಿಲ್ಲದೆ ಕೆರಿಬಿಯನ್​ ಬ್ಲೂ ಬಣ್ಣದಲ್ಲಿ ಪಲ್ಸರ್ 250 ಬೈಕ್ ಪರಿಚಯಿಸಿದ ಬಜಾಜ್​!

    ಆದಾಗ್ಯೂ, ಮಸ್ಕ್ ಟ್ವಿಟರ್ ನ ಅಧಿಕಾರವನ್ನು ವಹಿಸಿಕೊಂಡ 12 ತಿಂಗಳೊಳಗೆ ಅಗರ್ವಾಲ್ ಅವರನ್ನು ಕೆಲಸದಿಂದ ತೆಗೆದು ಹಾಕಿದರೆ, ಅವರು ಅವರಿಗೆ 43 ಮಿಲಿಯನ್ ಡಾಲರ್ ಪಾವತಿಸ ಬೇಕಾಗುತ್ತದೆ. ಶೀಘ್ರದಲ್ಲಿಯೇ ತನ್ನ ಕೆಲಸವನ್ನು ಕಳೆದು ಕೊಳ್ಳುವ ಇನ್ನೊಬ್ಬ ಪ್ರಮುಖ ಟ್ವಿಟರ್ ಕಾರ್ಯನಿರ್ವಾಹಕರು ಕಂಪನಿಯ ಕಾನೂನು ಮುಖ್ಯಸ್ಥ ವಿಜಯಾ ಗಡ್ಡೆ. ಗಡ್ಡೆ ಅವರನ್ನು ಮಸ್ಕ್ ಟ್ವಿಟ್ಟರ್ ನಲ್ಲಿ ಟಾರ್ಗೆಟ್ ಮಾಡಿದ್ದರು. ಮಸ್ಕ್ ಅವರ ವಿರುದ್ಧ ಮಾಡಿದ ಟ್ವೀಟ್ ವೈರಲ್ ಆದ ನಂತರ ಅವರು ನಿರಂತರವಾಗಿ ಟ್ರೋಲ್ ಗೆ ಒಳಗಾಗಿದ್ದರು, ಟ್ವಿಟರ್ ನಲ್ಲಿ ನಿಂದಿಸಲ್ಪಟ್ಟರು.

    ಅಗರ್ವಾಲ್ ಅವರಂತೆಯೇ ಗಡ್ಡೆ ಅವರನ್ನು ಸಹ ಅವರ ಹುದ್ದೆಯಿಂದ ತೆಗೆದು ಹಾಕಿದರೆ ಟ್ವಿಟರ್ ಷೇರುಗಳು ಸೇರಿದಂತೆ 12.5 ಮಿಲಿಯನ್ ಡಾಲರ್ ಮೌಲ್ಯದ ಬೇರ್ಪಡಿಕೆ ಪ್ಯಾಕೇಜ್ ಅವರು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
    Published by:Harshith AS
    First published: