ವಾಟ್ಸ್ಆ್ಯಪ್ ಪ್ರೈವೆಸಿ ಪಾಲಿಸಿಯಿಂದಾಗಿ ಬೇಸತ್ತು ಜನರು ಬೇರೆ ಆ್ಯಪ್ಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಮಾಹಿತಿಗಳನ್ನು ಫೇಸ್ಬುಕ್ನೊಂದಿಗೆ ಹಂಚಿಕೊಳ್ಳುವುದಾಗಿ ವಾಟ್ಸ್ಆ್ಯಪ್ ತಿಳಿಸಿತ್ತು. ಆದರೆ ಅದರ ಬಗ್ಗೆ ಸ್ಪಷ್ಟಣೆ ನೀಡಿರುವ ವಾಟ್ಸ್ಆ್ಯಪ್, ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದೆ. ಹೀಗಿರುವಾಗ ಬಳಕೆದಾರರು ವಾಟ್ಸ್ಆ್ಯಪ್ ಅನ್ನು ಕೈಬಿಟ್ಟು ಬೇರೆ ಆ್ಯಪ್ನತ್ತ ವಲಸೆ ಹೋಗುತ್ತಿದ್ದಾರೆ.
ಅದರಲ್ಲೂ ಟೆಲಿಗ್ರಾಂ ಹಾಗೂ ಸಿಗ್ನಲ್ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮೂಲಕ ಹೆಚ್ಚು ಬಳಕೆ ಮಾಡಲು ಮುಂದಾಗಿದ್ದಾರೆ. ಅಂದಹಾಗಯೇ ಟೆಲಿಗ್ರಾಂ ಇದೀಗ ಕಡಿಮೆ ಅವಧಿಯಲ್ಲಿ ಹೆಚ್ಚು ಬಳಕೆದಾರರು ಟೆಲಿಗ್ರಾಂ ಅನ್ನು ಸೇರಿಕೊಂಡಿದ್ದಾರೆ.
72 ಗಂಟೆಗಳಲ್ಲಿ ಸುಮಾರು 25 ಮಿಲಿಯನ್ ಜನರು ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡುವ ಮೂಲಕ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಕಂಪನಿ ತಿಳಿಸಿದೆ. ಮತ್ತೊಂದೆಡೆ ಸಿಗ್ನಲ್ ಆ್ಯಪ್ ಕೂಡ ಬಳಕೆದಾರರನ್ನು ದ್ವಿಗುಣಗೊಳಿಸಿದೆ. ಇತ್ತ ವಾಟ್ಸ್ಆ್ಯಪ್ ತನ್ನ ಬಳಕೆದಾರರನ್ನು ಕಳೆದುಕೊಳ್ಳುತ್ತಾ ಬರುತ್ತಿದೆ.
ಜನವರಿ ಮೊದಲ ವಾರದಲ್ಲಿ ಟೆಲಿಗ್ರಾಂ ಅನ್ನು ಗಮನಿಸಿದಾಗ ಮಾಸಿಕ 500 ಮಿಲಿಯನ್ ಸಕ್ರೀಯ ಬಳಕೆದಾರರನ್ನು ಮೀರಿಸಿತ್ತು. ಅದಾದ ಬಳಿಕ 72 ಗಂಟೆಗಳಲ್ಲಿ ಸುಮಾರು 25 ಮಿಲಿಯನ್ ಬಳಕೆದಾರರು ಟೆಲಿಗ್ರಾಂಗೆ ಸೇರ್ಪಡೆಗೊಂಡಿದ್ದಾರೆ. ಏಷ್ಯಾದಿಂದ ಶೇ38 ರಷ್ಟು ಬಳಕೆದಾರರು, ಯುರೋಪ್ ಶೇ.27, ಲ್ಯಾಟಿನ್ ಅಮೆರಿಕದಿಂದ ಶೇ.21 ಮತ್ತು ಮೆನಾದಿಂದ ಶೇ8ರಷ್ಟು ಜನರು ಟೆಲಿಗ್ರಾಂ ಇನ್ಸ್ಟಾಲ್ ಮಾಡಿದ್ದಾರೆ.
ಟೆಲಿಗ್ರಾಂ ಜಾಗತಿಕವಾಗಿ 500 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದು ಕಂಪನಿಯ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. 2020ರ ಏಪ್ರಿಲ್ನಲ್ಲಿ 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿತ್ತು.
ಇನ್ನು ಟೆಲಿಗ್ರಾಂ ಮೂಲಕ ಫೋಟೋ, ವಿಡಿಯೋ, ಸ್ಟಿಕ್ಕರ್, ಧ್ವನಿ ಸಂದೇಶ, ಕಳುಹಿಸಬಹುದಾಗಿದೆ. ಅಷ್ಟು ಮಾತ್ರವಲ್ಲದೆ, ವಿಡಿಯೋ ಕರೆ ಮತ್ತು ಧ್ವನಿ ಕರೆ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ