ದೇಶದಲ್ಲಿ ಟೆಲಿಗ್ರಾಂ ಅಪ್ಲಿಕೇಶನ್​ ಬ್ಯಾನ್​?


Updated:August 8, 2018, 5:05 PM IST
ದೇಶದಲ್ಲಿ ಟೆಲಿಗ್ರಾಂ ಅಪ್ಲಿಕೇಶನ್​ ಬ್ಯಾನ್​?

Updated: August 8, 2018, 5:05 PM IST
ನಕಲಿ ಸುದ್ದಿಯಿಂದ ಉಂಟಾಗುತ್ತಿರುವ ಅವಘಡಗಳ ಕುರಿತು ಕೇಂದ್ರ ಸರಕಾರ, ಎಲ್ಲಾ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರಲು ಮುಂದಾಗಿದ್ದು, ಇದೀಗ ಟೆಲಿಗ್ರಾಂ ಆ್ಯಪ್​ನ್ನು ಸಂಪೂರ್ಣವಾಗಿ ನಿಷೇಧಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಭದ್ರತೆಯ ವಿಚಾರವಾಗಿ ಟೆಲಿಗ್ರಾಂ ಆ್ಯಪ್​ನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಂಪೂರ್ಣವಾಗಿ ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ. ಈಗಾಗಲೇ ಫೇಸ್​ಬುಕ್​ ಮೂಲದ ವಾಟ್ಸಪ್​ ಸಂಸ್ಥೆಗೆ ಸಾಕಷ್ಟು ಎಚ್ಚರಿಕೆಯನ್ನು ಸರಕಾರ ನೀಡಿತ್ತು. ಇದೀಗ ಟೆಲಿಗ್ರಾಂಗೆ ಈ ಎಚ್ಚರಿಕೆ ರವಾನೆಯಾಗಿದೆ.

ಟೆಲಿಗ್ರಾಂ ಆ್ಯಪ್​ನಲ್ಲಿ ಎಂಡ್​ ಟು ಎಂಡ್​ ಎನ್​ಕ್ರಿಪ್ಷನ್​ ಅಥವಾ ಗೂಢಲಿಪೀಕರಣ ಭದ್ರತೆಯ ಸೇವೆಯ ಮೂಲಕವೇ ಭಾರೀ ಮಟ್ಟದಲ್ಲಿ ಜನಪ್ರಿಯತೆ ಹೊಂದಿತ್ತು. ಇದೀಗ ಈ ಸೇವೆಯೇ ಸಂಸ್ಥೆಗೆ ಮಾರಕವಾಗಿ ಪರಿಣಮಿಸಿದೆ. ಇದರಲ್ಲಿ ರವಾನೆಯಾಗುವ ಯಾವುದೇ ಮಾಹಿತಿಗಳು ಗೂಢಲಿಪೀಕರಣದಿಂದ ಕೂಡಿದ್ದು ಇದು ಸಂಸ್ಥೆ ಸೇರಿದಂತೆ ಯಾರಿಗೂ ತಿಳಿಯುವುದಿಲ್ಲ.

ಈ ಎನ್​ಕ್ರಿಪ್ಷನ್​ ಕೋಡಿಂಗ್​ನ್ನು ಬಳಸಿ ಯಾರಿಗೂ ತಿಳಿಯದಂತೆ ಕಾನೂನು ಬಾಹಿರ ಚಟುವಟಿಕೆಗಳು ನಡೆಸಲು ಸುಲಭವಾಗುತ್ತದೆ ಎಂದು ವರದಿಯಾಗಿತ್ತು, ಹೀಗಾಗಿ ಟೆಲಿಗ್ರಾಂನ ಗೂಢಲಿಪೀಕರಣ ಸೇವೆಯಿಂದಲೇ ಸಂಸ್ಥೆಯನ್ನು ಭಾರತದಿಂದ ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಷ್ಯಾ, ಇರಾನ್​ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಟೆಲಿಗ್ರಾಂ ಆ್ಯಪ್​ಗಳನ್ನು ನಿಷೇಧಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಕಲಿ ಸುದ್ದಿಗಳು ಸಾಮಾಜಿಕ ಜಾಲತಣಾದಲ್ಲಿ ಶೇರ್​ ಮಾಡಲಾಗುತ್ತಿದ್ದು, ಈ ಮೂಲಕ ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಕೇವಲ ಮಕ್ಕಳ ಕಳ್ಳರು ಎಂಬ ವದಂತಿಯಿಂದಲೇ 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...