• Home
  • »
  • News
  • »
  • tech
  • »
  • BSNL Recharge Plans: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್​! ಮತ್ತೆ ರೀಚಾರ್ಜ್​ ಬೆಲೆ ಏರಿಕೆ ಮಾಡಿದ ಕಂಪನಿ

BSNL Recharge Plans: ಟೆಲಿಕಾಂ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್​! ಮತ್ತೆ ರೀಚಾರ್ಜ್​ ಬೆಲೆ ಏರಿಕೆ ಮಾಡಿದ ಕಂಪನಿ

ಜನಪ್ರಿಯ ಟೆಲಿಕಾಂ ಕಂಪನಿಗಳು

ಜನಪ್ರಿಯ ಟೆಲಿಕಾಂ ಕಂಪನಿಗಳು

ಜನರೆಲ್ಲರೂ ಇದೀಗ 5ಜಿ ನೆಟ್​ವರ್ಕ್​ಗೆ ಕಾತುರದಿಂದ ಕಾಯುತ್ತಿರುವಾಗ, ಬಿಎಸ್​ಎನ್​ಎಲ್​ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್​ ಅನ್ನು ತಿಳಿಸಿದೆ. ಈ ಮೂಲಕ ಕಂಪನಿ ತನ್ನ ರೀಚಾರ್ಜ್​ ಯೋಜನೆಗಳಲ್ಲಿ 3 ಪ್ಲ್ಯಾನ್​ನ ಬೆಲೆಯನ್ನು ಏರಿಕೆ ಮಾಡಿದೆ. ಹಾಗಿದ್ರೆ ಆ ಪ್ಲ್ಯಾನ್​ಗಳು ಯಾವುದೆಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಭಾರತೀಯ ಟೆಲಿಕಾಂ ಕಂಪನಿಗಳು (Indian Telecom Company) ಇತ್ತೀಚೆಗೆ ಬಹಳಷ್ಟು ಮುನ್ನಡೆಯಿಂದ ಸಾಗುತ್ತಿದೆ. ಅದ್ರಲ್ಲೂ ಈ ಕಂಪನಿಗಳು ಒಂದಕ್ಕೊಂದು ಪೈಪೋಟಿ ನೀಡಲು ತನ್ನ ಗ್ರಾಹಕರಿಗಾಗಿ ಹೊಸ ಹೊಸ ರೀಚಾರ್ಜ್​ ಪ್ಲ್ಯಾನ್​ಗಳನ್ನು (Recharge Plans) ಬಿಡುಗಡೆ ಮಾಡುತ್ತಲೇ ಇದೆ. ಭಾರತೀಯ ಸರ್ಕಾರಿ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಬಿಎಸ್​​ಎನ್​ಎಲ್​ ಕಂಪನಿ (BSNL Company) ತನ್ನ ಗ್ರಾಹಕರಿಗಾಗಿ ಭಾರೀ ಅಗ್ಗದ ರೀಚಾರ್ಜ್​ ಪ್ಲ್ಯಾನ್​ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ಒಂದು ಸ್ಥಾನವನ್ನು ರೂಪಿಸಿತ್ತು. ಬಹಳ ಹಿಂದಿನಿಂದ ಬಂದಂತಹ ಈ ಕಂಪನಿ ಇದೀಗ ತನ್ನ ರೀಚಾರ್ಜ್​ ಪ್ಲ್ಯಾನ್​ನ ಬೆಲೆ ಏರಿಕೆ ಮಾಡುವುದಾಗಿ ಸೂಚನೆ ನೀಡಿದೆ. ಹಲವಾರು ಖಾಸಗಿ ಟೆಲಿಕಾಂ ಕಂಪನಿಗಳಿವೆ ಆದರೆ ಇವೆಲ್ಲದಕ್ಕೂ ಒಂದು ರೀತಿಯಲ್ಲಿ ಪೈಪೋಟಿ ನೀಡುತ್ತಿದ್ದ ಕಂಪನಿಯೆಂದರೆ ಅದು ಬಿಎಸ್​ಎನ್​ಎಲ್​. ಆದರೆ ಇದೀಗ ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್​ ಅನ್ನು ನೀಡಿದೆ.


    ಜನರೆಲ್ಲರೂ ಇದೀಗ 5ಜಿ ನೆಟ್​ವರ್ಕ್​ಗೆ ಕಾತುರದಿಂದ ಕಾಯುತ್ತಿರುವಾಗ, ಬಿಎಸ್​ಎನ್​ಎಲ್​ ಗ್ರಾಹಕರಿಗೆ ಶಾಕಿಂಗ್​ ನ್ಯೂಸ್​ ಅನ್ನು ತಿಳಿಸಿದೆ. ಈ ಮೂಲಕ ಕಂಪನಿ ತನ್ನ ರೀಚಾರ್ಜ್​ ಯೋಜನೆಗಳಲ್ಲಿ 3 ಪ್ಲ್ಯಾನ್​ನ ಬೆಲೆಯನ್ನು ಏರಿಕೆ ಮಾಡಿದೆ. ಹಾಗಿದ್ರೆ ಆ ಪ್ಲ್ಯಾನ್​ಗಳು ಯಾವುದೆಂಬುದನ್ನು ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


    ಬೆಲೆ ಹೆಚ್ಚಿಸಲಾಗಿಲ್ಲ


    ವಿಷಯ ಏನಪ್ಪಾ ಅಂದ್ರೆ ಇದೀಗ ಬಿಎಸ್​ಎನ್​ಎಲ್​ ತನ್ನ 3 ರೀಚಾರ್ಜ್​ ಪ್ಲ್ಯಾನ್​ಗಳ ಬೆಲೆಯನ್ನು ಹೆಚ್ಚಿಸಿರುವುದಾಗಿ ಸುದ್ದಿಯಾಗಿದೆ. ಆದರೆ ಕಂಪನಿ ಬೆಲೆ ಹೆಚ್ಚಿಸಿಲ್ಲ, ಬದಲಾಗಿ ರೀಚಾರ್ಜ್​ ಪ್ಲ್ಯಾನ್​ನಲ್ಲಿ ಕೆಲವೊಂದು ಪ್ರಯೋಜನಗಳನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಇದನ್ನು ಲೆಕ್ಕ ಹಾಕುವಾಗ ಬೆಲೆ ಹೆಚ್ಚಾದಂತೆಯೇ ಆಗುತ್ತದೆ. ಇದೀಗ ಬದಲಾವಣೆಯಾದ ಯೋಜನೆಗಳೆಂದರೆ 269 ರೂಪಾಯಿ, 499 ರೂಪಾಯಿ, 799 ರೂಪಾಯಿಗಳಾಗಿದೆ.


    ಬಿಎಸ್​ಎನ್​​ಎಲ್​ನ 269 ರೂಪಾಯಿ ಪ್ಲ್ಯಾನ್​


    ಬಿಎಸ್​ಎನ್​​ಎಲ್​ನ 269 ರೂ.ನ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಉಚಿತವಾಗಿ ಅನ್ಲಿಮಿಟೆಡ್​ ಕಾಲ್​ ಮಾಡಬಹುದಾಗಿದೆ. ಜೊತೆಗೆ 2 ಜಿಬಿ ದೈನಂದಿನ ಡೇಟಾ ಹಾಗೂ ಪ್ರತಿನಿತ್ಯ 100 ಎಸ್‌ಎಮ್‌ಎಸ್‌ ಉಚಿತವಾಗಿ ಮಾಡಬಹುದಾಗಿದೆ. ಇದರಲ್ಲಿ ಬಿಎಸ್‌ಎನ್‌ಎಲ್‌ ಟ್ಯೂನ್ಸ್ ಮತ್ತು ಇರೋಸ್ ನೌ ಸೇವೆಗಳು ಮತ್ತು ಹಾರ್ಡಿ ಮೊಬೈಲ್ ಗೇಮ್ಸ್ ಸೇವೆ ಕೂಡ ಲಭ್ಯವಿದೆ.


    ಇದನ್ನೂ ಓದಿ: ಸೆಲ್ಫಿ ಫೋಟೋ ಸೂಪರ್ ಆಗಿ ಬರ್ಬೇಕಾ? ಈ ಆ್ಯಪ್ಸ್ ಬೆಸ್ಟ್​


    ಜೊತೆಗೆ ಚಾಲೆಂಜಸ್ ಅರೆನಾ ಮೊಬೈಲ್ ಗೇಮಿಂಗ್ ಸೇವೆ, ಲೋಕಧುನ್, ಝಿಂಗ್ ಮತ್ತು ಹೆಚ್ಚಿನ ಗೇಮಿಂಗ್ ಪ್ರಯೋಜನಗಳು ಇದರಲ್ಲಿ ಸಿಗಲಿದೆ. ಇನ್ನು ಈ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಆದರೆ ಹಿಂದಿನ ಪ್ಲ್ಯಾನ್​ ಮೂಲಕ ಈ ಎಲ್ಲಾ ಪ್ರಯೋಜನಗಳ ಜೊತೆಗೆ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿತ್ತು. ಈ ಮೂಲಕ ದಿನಕ್ಕೆ 8.96 ರೂ.ನಿಂದ 9.60 ರೂ.ಗಳಿಗೆ ಏರಿಕೆಯಾದಂತೆ ಆಗಿದೆ.


    ಬಿಎಸ್​ಎನ್​ಎಲ್​


    ಬಿಎಸ್​ಎನ್​ಎಲ್​ನ 499 ರೂಪಾಯಿ ಯೋಜನೆ


    ಬಿಎಸ್​ಎನ್​ಎಲ್​ನ 499 ರೂಪಾಯಿಗಳ ಪ್ಲ್ಯಾನ್‌ನಲ್ಲಿ 2ಜಿಬಿಯಷ್ಟು ಪ್ರತೀದಿನ ಡೇಟಾವನ್ನು ಬಳಸಬಹುದಾಗಿದೆ. ಜೊತೆಗೆ ಅನ್ಲಿಮಿಟೆಡ್​ ಕಾಲ್​ ಮಾಡುವ ಸೌಲಭ್ಯ ಹಾಗೂ ದಿನಕ್ಕೆ 100 ಎಸ್‌ಎಮ್‌ಎಸ್‌ ಕೂಡ ಮಾಡಬಹುದಾಗಿದೆ. ಇನ್ನು ಈ ಯೋಜನೆ ಮೂಲಕ ಬಿಎಸ್‌ಎನ್‌ಎಲ್‌ ಟ್ಯೂನ್ಸ್, ಜಿಂಗ್ ಮತ್ತು ಗೇಮಿಂಗ್ ಪ್ರಯೋಜನಗಳು ಕೂಡ ಲಭ್ಯವಾಗುತ್ತದೆ.


    ಈ ಎಲ್ಲಾ ಸೌಲಭ್ಯದ ಜೊತೆಗೆ ಇದು 75 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ. 499 ರೂ. ಗಳ ಹಳೆಯ ಪ್ಲ್ಯಾನ್‌ ಬಗ್ಗೆ ಹೇಳುವುದಾದರೆ ಇದೇ ಸೌಲಭ್ಯಗಳ ಜೊತೆಗೆ ಇದರಲ್ಲಿ 90 ದಿನಗಳ ವ್ಯಾಲಿಡಿಯನ್ನು ನೀಡಲಾಗಿತ್ತು. ಆದರೆ, ಹೊಸ ಪ್ಲ್ಯಾನ್‌ನಲ್ಲಿ 75 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಒಂದು ದಿನದ ಚಾರ್ಜ್‌ 6.65 ರೂ. ಗೆ ಏರಿಕೆ ಆಗಿದೆ ಎಂದು ತಿಳಿಯಬಹುದು.


    ಬಿಎಸ್​ಎನ್​ಎಲ್​ನ 769 ರೂಪಾಯಿ ಯೋಜನೆ


    ಕಂಪನಿಯ ಈ 769 ರೂ. ಗಳ ಯೋಜನೆಯಲ್ಲಿ ದಿನವೂ 2ಜಿಬಿ ಡೇಟಾವನ್ನು ಬಳಕೆ ಮಾಡಬಹುದಾಗಿದೆ ಹಾಗೂ ಅನ್ಲಿಮಿಟೆಡ್​ ವಾಯ್ಸ್‌ ಕಾಲ್‌ ಸಹ ಮಾಡಬಹುದು. ಇನ್ನು ಈ ಪ್ಲ್ಯಾನ್​ನಲ್ಲಿ ದಿನಕ್ಕೆ 100 ಎಸ್‌ಎಮ್‌ಎಸ್‌ ಅನ್ನು ಉಚಿತವಾಗಿ ಮಾಡಬಹುದು. ಇದರೊಂದಿಗೆ ಎರೋಸ್‌ ನೌ ಸೇರಿದಂತೆ ಇನ್ನಿತರೆ ಮನರಂಜನೆ ಮಾಧ್ಯಮಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.


    ಇನ್ನು ಇದರ ವ್ಯಾಲಿಡಿಟಿ ಬಗ್ಗೆ ಹೇಳುವುದಾದರೆ ಇದು ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಆದರೆ, ಹಳೆಯ ಇದೇ ಬೆಲೆಯ ರೀಚಾರ್ಜ್‌ ಪ್ಲ್ಯಾನ್‌ 90 ದಿನಗಳ ವ್ಯಾಲಿಡಿಟಿಯನ್ನು ನೀಡಿತ್ತು. ಆದರೆ ಈಗ ಬದಲಾಗಿದೆ. ಆದ್ದರಿಂದ 9.15 ರೂಪಾಯಿಗಳು ಹೆಚ್ಚಾಗಿದೆ ಎಂದು ಹೇಳಬಹುದು.

    Published by:Prajwal B
    First published: