ಭಾರತದಲ್ಲಿ ಟೆಲಿಕಾಂ ಕಂಪೆನಿಗಳು (Telecom Company) ಇತ್ತೀಚೆಗೆ ಭಾರೀ ಮುಂಚೂಣಿಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಕಂಪೆನಿಗಳು ನೀಡುತ್ತಿರುವ ರೀಚಾರ್ಜ್ ಯೋಜನೆಗಳು ಅಂತಾನೇ ಹೇಳ್ಬಹುದು. ಈ ಟೆಲಿಕಾಂ ಕಂಪೆನಿಗಳು ವರ್ಷದಿಂದ ವರಷಕ್ಕೆ ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು (Recharge Plans) ಪರಿಚಯಿಸುತ್ತಿರುತ್ತದೆ. ಇನ್ನು ದೇಶದಲ್ಲಿರುವಂತಹ ಟೆಲಿಕಾಂ ಕಂಪೆನಿಗಳು ಅಭಿವೃದ್ಧಿಯ ಸ್ಥಾನಗಳ ಬಗ್ಗೆ ಹೇಳುವುದಾದರೆ ಜಿಯೋ (Jio) ಮೊದಲ ಸ್ಥಾನದಲ್ಲಿದೆ. ಅದೇ ರೀತಿಯಲ್ಲಿ ಏರ್ಟೆಲ್ ಟೆಲಿಕಾಂ ಕಂಪೆನಿಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗೂ ವೊಡಫೋನ್ ಐಡಿಯಾ ಕಂಪೆನಿ ಮೂರನೇ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಇದೀಗ ಇ ಕಂಪೆನಿಗಳು ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.
ಟೆಲಿಕಾಂ ಕಂಪೆನಿಗಳು ಗ್ರಾಹಕರು ಪಡೆಯುತ್ತಿರುವ ಪ್ರಯೋಜನಗಳನ್ನು ಲೆಕ್ಕ ಹಾಕಿದರೆ ಕಂಪೆನಿಗಳು ಪಡೆಯುತ್ತಿರುವ ಸರಾಸರಿ ಆದಾಯ ಬಹಳಷ್ಟು ಅಗ್ಗದಲ್ಲಿದೆ ಎಂದು ಹೇಳಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ರೀಚಾರ್ಜ್ನ ಬೆಲೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಕಂಪೆನಿಗಳು ಹೇಳಿವೆ.
ಟೆಲಿಕಾಂ ಕಂಪೆನಿಗಳು ಪಡೆಯುತ್ತಿರುವ ಸರಾಸರಿ ಆದಾಯ
ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿಕೊಂಡು ಜಿಯೋ ಮಂಚೂಣಿಯಲ್ಲಿದ್ದರೂ, ಏರ್ಟೆಲ್ ಆದಾಯ ಗಳಿಕೆಯಲ್ಲಿ ಮಾತ್ರ ಮುಂಚೂಣಿಯಲ್ಲಿದೆ. ದೇಶದ ಟೆಲಿಕಾಂ ಗ್ರಾಹಕರಿಂದ ಹೆಚ್ಚು ಲಾಭವನ್ನು ಗಳಿಸುವ ಮೂಲಕ ಏರ್ಟೆಲ್ ಈ ಸ್ಥಾನವನ್ನು ಗಳಿಸಿಕೊಂಡಿದೆ.
ಇನ್ನು ಈ ಕಂಪೆನಿಗಳ ಮಾಸಿಕ ಆದಾಯ ಗಳಿಕೆಯ ಬಗ್ಗೆ ಹೇಳುವುದಾದರೆ, ಕಳೆದ ತ್ರೈಮಾಸಿಕದ ಸಮೀಕ್ಷೆಯ ಪ್ರಕಾರ, ಏರ್ಟೆಲ್ ಪ್ರತೀ ತಿಂಗಳು ಬಳಕೆದಾರರಿಂದ ಪಡೆಯುತ್ತಿರುವ ಆದಾಯ 190 ರೂಪಾಯಿ ಆಗಿದೆ. ಅದೇ ರೀತಿ ರಿಲಯನ್ಸ್ ಜಿಯೋ 177.2 ರೂಪಾಯಿ ಹಾಗೂ ಟೆಲಿಕಾಂ ಕಂಪೆನಿಗಳಲ್ಲಿ ಮೂರನೇ ಸ್ಥಾನವನ್ನು ಪಡೆದಿರುವ ವೊಡಫೋನ್ ಐಡಿಯಾ ತಿಂಗಳಿಗೆ 131 ರೂಪಾಯಿಯಷ್ಟು ಆದಾಯವನ್ನು ಗಳಿಸುತ್ತದೆ.
ಏರ್ಟೆಲ್ನ ರೀಚಾರ್ಜ್ ಬೆಲೆಯಲ್ಲಿ ಏರಿಕೆ
ಇದುವರೆಗೆ ಏರ್ಟೆಲ್ನಲ್ಲಿ 200 ರೂಪಾಯಿಗೆ ಹತ್ತಿರವಿದ್ದಂತಹ ರೀಚಾರ್ಜ್ ಬೆಲೆಯನ್ನು 300 ರೂಪಾಯಿಗಳವರೆಗೆ ಏರಿಕೆ ಮಾಡುವುದಾಗಿ ಗುರಿಯನ್ನು ಇಟ್ಟುಕೊಂಡಿದೆ. ಇದರ ಜೊತೆಗೆ ಇನ್ನು ಬೇರೆ ಕಂಪೆನಿಗಳು ಸಹ ತನ್ನ ರೀಚಾರ್ಜ್ ಬೆಲೆಗಳನ್ನು ಏರಿಕೆ ಮಾಡುವುದು ಖಚಿತವಾಗಿದೆ.
ಈ ಬಗ್ಗೆ ಏರ್ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರ ಮಾತು
ಭಾರತದ ಟೆಲಿಕಾಂ ವಲಯದಲ್ಲಿ ಎರಡನೇ ಸ್ಥಾನದಲ್ಲಿರುವ ಕಂಪೆನಿಯೆಂದರೆ ಅದು ಏರ್ಟೆಲ್. ಇದರ ಅಧ್ಯಕ್ಷರಾಗಿರುವಂತಹ ಸುನಿಲ್ ಭಾರ್ತಿ ಮಿತ್ತಲ್ ಅವರು ತನ್ನ ಕಂಪೆನಿಯ ರೀಚಾರ್ಜ್ ಪ್ಲ್ಯಾನ್ಗಳ ಬೆಲೆಗಳನ್ನು ಏರಿಕೆ ಮಾಡುವುದೆಂದು ಹೇಳಿ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.
ಇತ್ತೀಚೆಗೆ ದಾವೋಸ್ನಲ್ಲಿ ಮನಿ ಕಂಟ್ರೋಲ್ ತಂಡದೊಂದಿಗೆಮಾತನಾಡಿರುವ ಸುನಿಲ್ ಮಿತ್ತಲ್ ಅವರು ‘ ದೇಶದಲ್ಲಿ ಪ್ರಸ್ತುತ ಟೆಲಿಕಾಂ ನಿರ್ಧರಿಸಿ ಬೆಲೆಗಳು ಸರಿಯಾಗಿ ಲಾಭದಾಯಕವಾಗಿಲ್ಲ, ಪ್ರತೀ ಬಳಕೆದಾರರಿಂದ ತಿಂಗಳಿಗೆ ಕಡಿಮೆ ಎಂದರೂ 300 ರೂಪಾಯಿಗಳಷ್ಟು ಆದಾಯವನ್ನು ಗಳಿಸಬೇಕು. ಆದ್ದರಿಂದ ಭಾರತದ ಟೆಲಿಕಾಂ ಕಂಪೆನಿಗಳು ತನ್ನ ಬೆಲೆ ನಿರ್ಧಾರದಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 15 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿರುವ ವಿಶೇಷ ಸ್ಮಾರ್ಟ್ವಾಚ್ ಬಿಡುಗಡೆ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ