ಕಡಿಮೆ ಬೆಲೆಗೆ ಪವರ್​ಫುಲ್ ಬ್ಯಾಟರಿ ಹೊಂದಿರುವ ಟೆಕ್ನೋ ಸ್ಪಾರ್ಕ್​ ಪವರ್​ ಸ್ಮಾರ್ಟ್​ಫೋನ್​ ಬಿಡುಗಡೆ

Tecno Spark Power: ಟೆಕ್ನೋ ಸ್ಪಾರ್ಕ್ ಪವರ್ ಮೊಬೈಲ್​ನಲ್ಲಿ 6000 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದು ದೀರ್ಘಕಾಲಿಕ ಬ್ಯಾಟರಿ ಪ್ಯಾಕ್​ಅಪ್ ಹೊಂದಿರಲಿದೆ.

news18-kannada
Updated:December 1, 2019, 7:42 AM IST
ಕಡಿಮೆ ಬೆಲೆಗೆ ಪವರ್​ಫುಲ್ ಬ್ಯಾಟರಿ ಹೊಂದಿರುವ ಟೆಕ್ನೋ ಸ್ಪಾರ್ಕ್​ ಪವರ್​ ಸ್ಮಾರ್ಟ್​ಫೋನ್​ ಬಿಡುಗಡೆ
>>Tecno: ಟೆಕ್ನೊ Camon i4, Tecno Camon iSKY 3 ಮತ್ತು Tecno Camon iTwin ಸ್ಮಾರ್ಟ್​​ಫೋನ್​ನಲ್ಲೂ ಈ ಆಯ್ಕೆ ಇರಲಿದೆ.
  • Share this:
ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಟೆಕ್ನೋ ಮೊಬೈಲ್ ತನ್ನ ನೂತನ ಸ್ಮಾರ್ಟ್​ಫೋನ್​ ಟೆಕ್ನೋ ಸ್ಪಾರ್ಕ್ ಪವರ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್‌ನ ವಿಶೇಷತೆ ಎಂದರೆ ಅದರ ಬ್ಯಾಟರಿ ಸಾಮರ್ಥ್ಯ.

ಟೆಕ್ನೋ ಸ್ಪಾರ್ಕ್ ಪವರ್ ಮೊಬೈಲ್​ನಲ್ಲಿ 6000 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದು ದೀರ್ಘಕಾಲಿಕ ಬ್ಯಾಟರಿ ಪ್ಯಾಕ್​ಅಪ್ ಹೊಂದಿರಲಿದೆ. ಈ ಫೋನ್​ ಅನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, 29 ಗಂಟೆಗಳ ವಿಡಿಯೋ ಪ್ಲೇಬ್ಯಾಕ್, 35 ಗಂಟೆಗಳ ಕರೆ, 17 ಗಂಟೆಗಳ ಗೇಮಿಂಗ್ ಮತ್ತು 200 ಗಂಟೆಗಳ ಹಾಡುಗಳನ್ನು ಕೇಳಬಹುದು ಎಂದು ಟೆಕ್ನೋ ಮೊಬೈಲ್ ಕಂಪೆನಿ ಹೇಳಿಕೊಂಡಿದೆ. ಈ ಮೊಬೈಲ್​ನ ಇತರೆ ಫೀಚರ್ಸ್​ಗಳು ಈ ಕೆಳಗಿನಂತಿವೆ.

ಟೆಕ್ನೋ ಸ್ಪಾರ್ಕ್ ಪವರ್


ಡಿಸ್​ಪ್ಲೇ: 6.35 ಇಂಚಿನ ಡಾಟ್ ನಾಚ್ ಅಮೋಲೆಡ್ ಡಿಸ್​ಪ್ಲೇ
ಪ್ರೊಸೆಸರ್: ಮೀಡಿಯಾ ಟೆಕ್ ಹೆಲಿಯೊ ಪಿ 22
ಫ್ರಂಟ್ ಕ್ಯಾಮೆರಾ: 13-ಮೆಗಾಪಿಕ್ಸೆಲ್
ರಿಯರ್ ಕ್ಯಾಮೆರಾ: 13 ಮೆಗಾಪಿಕ್ಸೆಲ್ + 8 ಮೆಗಾಪಿಕ್ಸೆಲ್ + 2ಮೆಗಾಪಿಕ್ಸೆಲ್RAM: 4GB
ಸ್ಟೊರೇಜ್ ಸಾಮರ್ಥ್ಯ: 64GB
ಬ್ಯಾಟರಿ ಸಾಮರ್ಥ್ಯ: 6000mAh
ಅಪರೇಟಿಂಗ್ ಸಿಸ್ಟಂ: ಅ್ಯಂಡ್ರಾಯ್ಡ್​ 9 ಪೈ
ರೆಸಲ್ಯೂಶನ್: 720x1548 ಪಿಕ್ಸೆಲ್ಸ್​

ಟೆಕ್ನೋ ಸ್ಪಾರ್ಕ್ ಪವರ್


ಭಾರತದಲ್ಲಿ ಈ ಮೊಬೈಲ್​ನ ಮಾರಾಟವು ಇಂದಿನಿಂದ ಆರಂಭವಾಗಲಿದ್ದು, ಗ್ರಾಹಕರು ಫ್ಲಿಪ್​ಕಾರ್ಟ್​ ಮೂಲಕ ಕೇವಲ 8,499 ರೂ. ಗೆ ಖರೀದಿಸಬಹುದು.

ಇದನ್ನೂ ಓದಿ: ಹಿಡ್ಕ ಹಿಡ್ಕ ಎಂದು ಹಾಡಿದರೂ ಒಂದು ಬಾರಿ ಕೂಡ ಅಪ್ಪಿಕೊಂಡಿಲ್ವಂತೆ..!

First published: December 1, 2019, 7:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading