• Home
 • »
 • News
 • »
 • tech
 • »
 • Techno Phantom X2 Pro: ಭಾರತದ ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಟೆಕ್ನೋ ಫ್ಯಾಂಟಮ್​ ಎಕ್ಸ್​2 ಪ್ರೋ ಸ್ಮಾರ್ಟ್​ಫೋನ್​! ಫೀಚರ್ಸ್​

Techno Phantom X2 Pro: ಭಾರತದ ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಟೆಕ್ನೋ ಫ್ಯಾಂಟಮ್​ ಎಕ್ಸ್​2 ಪ್ರೋ ಸ್ಮಾರ್ಟ್​ಫೋನ್​! ಫೀಚರ್ಸ್​

ಟೆಕ್ನೋ ಫ್ಯಾಂಟಮ್​ಎಕ್ಸ್​2 ಪ್ರೋ ಸ್ಮಾರ್ಟ್​ಫೋನ್

ಟೆಕ್ನೋ ಫ್ಯಾಂಟಮ್​ಎಕ್ಸ್​2 ಪ್ರೋ ಸ್ಮಾರ್ಟ್​ಫೋನ್

ಸದ್ಯ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಟೆಕ್ನೋ ಫ್ಯಾಂಟಮ್​ ಎಕ್ಸ್​2 ಪ್ರೋ ಎಂಬ ಸ್ಮಾರ್ಟ್​​ಫೋನ್​ ಟೆಕ್ನೋ ಕಂಪೆನಿಯ ಈ ವರ್ಷದ ಮೊದಲ ಮೊಬೈಲ್ ಆಗಿದ್ದು, ಬಹಳಷ್ಟು ಫೀಚರ್ಸ್ ಅನ್ನು ಇದು ಒಳಗೊಂಡಿದೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್​ನ ಬೆಲೆ ಮತ್ತು ಲಭ್ಯತೆಯ ಬಗ್ಗೆ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
 • Share this:

  ಟೆಕ್​ ಮಾರುಕಟ್ಟೆಯಲ್ಲಿ ಇದುವರೆಗೆ ಸಾಕಷ್ಡು ಸ್ಮಾರ್ಟ್​ಫೋನ್​ಗಳು (Smartphones) ಬಿಡುಗಡೆಯಾಗಿದೆ. 2022ರಲ್ಲಂತೂ ಒಂದೆರಡು ಸ್ಮಾರ್ಟ್​​ಫೋನ್​ ಕಂಪೆನಿಗಳು ಸಹ ಅನಾವರಣಗೊಂಡಿದೆ. ಜನಪ್ರಿಯ ಸ್ಮಾರ್ಟ್​ಫೋನ್​ ಕಂಪೆನಿಗಳಲ್ಲಿ ಒಂದಾದ ಟೆಕ್ನೋ ಕಂಪೆನಿ (Techno Company) ಮಾರುಕಟ್ಟೆಗೆ ತನ್ನ ಬ್ರಾಂಡ್​ನ ಅಡಿಯಲ್ಲಿ ಹೊಸ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಲೇ ಇದೆ. ಕಳೆದ ಬಾರಿ ಡಿಸೆಂಬರ್​ನಲ್ಲಿ ಟೆಕ್ನೋ ಎಕ್ಸ್​ 2 ಸೀರಿಸ್​ನಿಂದ ವೆನಿಲ್ಲಾ ಫ್ಯಾಂಟಮ್​ ಎಕ್ಸ್​2 ಡ್ರಾಪ್​ನೊಂದಿಗೆ ಸ್ಮಾರ್ಟ್​​ಫೋನ್ ಅನ್ನು ಪರಿಚಯಿಸಿತ್ತು. ಈ ವರ್ಷದಲ್ಲಿ ಮತ್ತೊಂದು ಸ್ಮಾರ್ಟ್​ಫೋನ್​ ಅನ್ನು ಭಾರತದದ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಟೆಕ್ನೋ ಕಂಪೆನಿ ಟೆಕ್ನೋ ಫ್ಯಾಂಟಮ್​ ಎಕ್ಸ್​​2 ಪ್ರೋ (Techno Phantom X2 Pro) ಎಂಬ ಸ್ಮಾರ್ಟ್​​ಫೋನ್​ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್​ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 9000 ಎಸ್​​ಓಸಿ ಪ್ರೊಸೆಸರ್​​ನೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಕಂಪೆನಿ ತಿಳಿಸಿದೆ.


  ಸದ್ಯ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಟೆಕ್ನೋ ಫ್ಯಾಂಟಮ್​ ಎಕ್ಸ್​2 ಪ್ರೋ ಎಂಬ ಸ್ಮಾರ್ಟ್​​ಫೋನ್​ ಟೆಕ್ನೋ ಕಂಪೆನಿಯ ಈ ವರ್ಷದ ಮೊದಲ ಮೊಬೈಲ್ ಆಗಿದ್ದು, ಬಹಳಷ್ಟು ಫೀಚರ್ಸ್ ಅನ್ನು ಇದು ಒಳಗೊಂಡಿದೆ. ಹಾಗಿದ್ರೆ ಈ ಸ್ಮಾರ್ಟ್​​ಫೋನ್​ನ ಬೆಲೆ ಮತ್ತು ಲಭ್ಯತೆಯ ಬಗ್ಗೆ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.


  ಟೆಕ್ನೋ ಫ್ಯಾಂಟಮ್​ ಎಕ್ಸ್​2 ಪ್ರೋ ಸ್ಮಾರ್ಟ್​​ಫೋನ್ ಫೀಚರ್ಸ್​


  ಮುಖ್ಯವಾಗಿ ಟೆಕ್ನೋ ಕಂಪೆನಿಯ ಈ ಸ್ಮಾರ್ಟ್​​ಫೋನ್‌ ಮೀಡಿಯಾ ಟೆಕ್‌ ಡೈಮೆನ್ಸಿಟಿ 9000 ಎಸ್​ಓಸಿ ಪ್ರೊಸೆಸರ್‌ ಅನ್ನು ಹೊಂದಿದ್ದು, ಈ ಫೋನ್ ಆಂಡ್ರಾಯ್ಡ್ 12 ಆಧಾರಿತ HiOS 12.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಮೊಬೈಲ್​ 2ಜಿಬಿ ರ್‍ಯಾಮ್ ಮತ್ತು 256ಜಿಬಿ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.
  ಡಿಸ್​​ಪ್ಲೇ ವಿನ್ಯಾಸ


  ಟೆಕ್ನೋ ಫ್ಯಾಂಟಮ್ ಎಕ್ಸ್​2 ಪ್ರೋ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್​ ಹೆಚ್​​​ಡಿ+ ಅಮೋಲ್ಡ್​​ ಕರ್ವ್ಡ್​​​ ಡಿಸ್‌ಪ್ಲೇ ಹೊಂದಿದೆ. ಈ ಡಿಸ್​ಪ್ಲೇಯು 120Hz ರಿಫ್ರೆಶ್ ರೇಟ್‌ ಹಾಗೂ 360Hz ಟಚ್‌ ಸ್ಯಾಂಫ್ಲಿಂಗ್ ರೇಟ್‌ ಆಯ್ಕೆಯನ್ನು ಪಡೆದುಕೊಂಡಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್ ಮೂಲಕ ಹೆಚ್ಚಿನ ರಕ್ಷಣೆಯನ್ನು ಸಹ ಈ ಡಿಸ್​ಪ್ಲೇಯಲ್ಲಿ ಅಳವಡಿಸಲಾಗಿದೆ.


  ಕ್ಯಾಮೆರಾ ಫೀಚರ್ಸ್​


  ಈ ಟೆಕ್ನೋ ಫ್ಯಾಂಟಮ್ ಎಕ್ಸ್​2 ಸ್ಮಾರ್ಟ್​​ಫೋನ್​ ಟ್ರಿಪಲ್​ ರಿಯರ್​ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ 1/1.3 ಸ್ಯಾಮ್‌ಸಂಗ್‌ ISOCELL GNV 3.0 ಸೆನ್ಸಾರ್​ ಅನ್ನು ಹೊಂದಿದೆ. ಜೊತೆಗೆ 13 ಮೆಗಾಪಿಕ್ಸೆಲ್‌ ಮ್ಯಾಕ್ರೋ ಶೂಟರ್ ಸೆನ್ಸಾರ್​ ಫೋಟೋಗಳಿಗೆ ವಿಶೇಷ ನೋಟ ನೀಡಲಿದೆ ಮತ್ತು 50 ಮೆಗಾಪಿಕ್ಸೆಲ್‌ನ ಟೆಲಿಫೋಟೋ ಕ್ಯಾಮೆರಾ ಸಹ ಇದರಲ್ಲಿದ್ದು ಸೆಲ್ಫಿಗಾಗಿ ಮತ್ತು ವಿಡಿಯೋ ಕಾಲ್​ಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.


  ಟೆಕ್ನೋ ಫ್ಯಾಂಟಮ್​ಎಕ್ಸ್​2 ಪ್ರೋ ಸ್ಮಾರ್ಟ್​ಫೋನ್


  ಬ್ಯಾಟರಿ ಫೀಚರ್ಸ್​


  ಟೆಕ್ನೋ ಫ್ಯಾಂಟಮ್ ಎಕ್ಸ್​2 ಪ್ರೋ ಸ್ಮಾರ್ಟ್‌ಫೋನ್‌ 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,160 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ.


  ಇದನ್ನೂ ಓದಿ: ಫಾಸ್ಟ್ರಾಕ್​ ಕಂಪೆನಿಯಿಂದ ಹೊಸ ಸ್ಮಾರ್ಟ್​​​ವಾಚ್​ ಲಾಂಚ್​! ಬೆಲೆ ಎಷ್ಟು?


  ಬೆಲೆ ಮತ್ತು ಲಭ್ಯತೆ


  ಭಾರತದಲ್ಲಿ ಟೆಕ್ನೋ ಫ್ಯಾಂಟಮ್ ಎಕ್ಸ್​2 ಪ್ರೋ ಸ್ಮಾರ್ಟ್​​ಫೋನ್​​​​​ನ 12 ಜಿಬಿ ರ್‍ಯಾಮ್ ಮತ್ತು 256ಜಿಬಿ ವೇರಿಯಂಟ್‌ಗೆ 49,999 ರೂಪಾಯಿಗಳಷ್ಟು ಬೆಲೆ ನಿಗದಿ ಮಾಡಲಾಗಿದೆ. ಇನ್ನು ಈ ಲಾಂಚ್​ ಆಫರ್ ಮೂಲಕ ಪ್ರೀ ಬುಕಿಂಗ್​ ಅವಕಾಶವನ್ನು ಸಹ ನೀಡಿದ್ದಾರೆ. ಈ ಪ್ರೀ ಬುಕಿಂಗ್ ಆರ್ಡರ್ ಅನ್ನು ಅಮೆಜಾನ್ ಮೂಲಕ ಮಾಡಬಹುದಾಗಿದೆ. ಆದರೆ ಜನವರಿ 24 ಇಕಾಮರ್ಸ್​​ ವೆಬ್​ಸೈಟ್​ ಹಾಗೂ ಪ್ರಮುಖ ರೀಟೇಲರ್​ ಶಾಪ್​ಗಳಲ್ಲಿ ಮಾರಾಟವನ್ನು ಆರಂಭಿಸುತ್ತದೆ.

  Published by:Prajwal B
  First published: