HOME » NEWS » Tech » TECNO LAUNCHES GREAT TECNO MEGA FESTIVE BONANZA OFFERS FOR CONSUMERS HG

Techno: ಹಬ್ಬದ ಸಲುವಾಗಿ ಸೇಲ್ ಆಯೋಜಿಸಿದ ಟೆಕ್ನೋ; ಗ್ರಾಹಕರಿಗೆ ಕಾರು ಗೆಲ್ಲುವ ಅವಕಾಶ!

The Great TECNO Festival: ನವೆಂಬರ್​ 1 ರಿಂದ ಪ್ರಾರಂಭವಾದ ಈ ಸೇಲ್​ 30ರವರೆಗೆ ನಡೆಸಲಿದೆ. ಟೆಕ್ನೋ ಸಂಸ್ಥೆ ಭಾರತಕ್ಕೆ ಕಾಲಿಟ್ಟು ಮೂರು ವರ್ಷಗಳು ಸಂದಿದೆ. 6 ದಶಲಕ್ಷ ಗಡಿ ದಾಟಿದೆ. ಈ ಸವಿನೆನಪಿಗಾಗಿ ಸೇಲ್​ ಆಯೋಜಿಸಿದೆ.

news18-kannada
Updated:November 8, 2020, 9:50 PM IST
Techno: ಹಬ್ಬದ ಸಲುವಾಗಿ ಸೇಲ್ ಆಯೋಜಿಸಿದ ಟೆಕ್ನೋ; ಗ್ರಾಹಕರಿಗೆ ಕಾರು ಗೆಲ್ಲುವ ಅವಕಾಶ!
TECNO
  • Share this:
ಆ್ಯಂಡ್ರಾಯ್ಡ್​  ಸ್ಮಾರ್ಟ್​ಫೋನ್​ ಬ್ರಾಂಡ್​ ಟೆಕ್ನೋ ‘ದಿ ಗ್ರೇಟ್​​ ಟೆಕ್ನೋ ಫೆಸ್ಟಿವಲ್’​ ಆಯೋಜಿಸಿದೆ. ನವೆಂಬರ್​ 1 ರಿಂದ ಪ್ರಾರಂಭವಾದ ಈ ಸೇಲ್​ 30ರವರೆಗೆ ನಡೆಸಲಿದೆ. ಟೆಕ್ನೋ ಸಂಸ್ಥೆ ಭಾರತಕ್ಕೆ ಕಾಲಿಟ್ಟು ಮೂರು ವರ್ಷಗಳು ಸಂದಿದೆ. 6 ದಶಲಕ್ಷ ಗಡಿ ದಾಟಿದೆ. ಈ ಸವಿನೆನಪಿಗಾಗಿ ಸೇಲ್​ ಆಯೋಜಿಸಿದೆ.

ದಿ ಗ್ರೇಟ್​ ಟೆಕ್ನೋ ಫೆಸ್ಟಿವಲ್​ನಲ್ಲಿ ಮಾರುತಿ ಸುಜುಕಿ ಕಂಪನಿಯ ಎಸ್​ ಪ್ರೆಸ್ಸೊ ಕಾರು, ಹೀರೋ ಫ್ಯಾಶನ್​ ಪ್ರೊ ಬೈಕ್​  ಹಾಗೂ ಕ್ಯಾಮನ್ 15 ಪ್ರೊ, ಹಿಪೋಡ್ಸ್​​ ಹೆಚ್​ 2 ಇಯರ್​​ಬಡ್​ಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಅಂದರೆ ಟೆಕ್ನೋ ಉತ್ಪನ್ನಗಳನ್ನು ಖರೀದಿಸಿದರೆ ಅವರಿಗೆ ಅದೃಷ್ಟದ ಡ್ರಾ ಮೂಲಕ ಆಕರ್ಷಕ ಬಹುಮಾನಗಳು ಸಿಗಲಿದೆ.

ಟೆಕ್ನೋ ಸ್ಮಾರ್ಟ್​ಫೋನ್​ ಖರೀದಿಸಿದರೆ ಕಾರು, ಬೈಕ್​, ಇನ್ನಿತರ ಆಕರ್ಷಕ ಉಡುಗೊರೆಯನ್ನು ಪಡೆಯುವ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಲಕ್ಕಿ ಡ್ರಾ ನಡೆಸುತ್ತಿದೆ. ಗ್ರಾಹಕರು ತಮ್ಮ ವಿಳಾಸ ಮತ್ತು ಫೋನ್​ ಮುಂತಾದ ಮಾಹಿತಿಯನ್ನು ನಮೂದಿಸಬೇಕಿದೆ. ಡಿಸೆಂಬರ್​ ತಿಂಗಳ 15ನೇ ತಾರೀಖಿನಂದು ಡ್ರಾ ನಡೆಯಲಿದ್ದು, ವಿಜೇತರಿಗೆ ಬಹುಮಾನ ಸಿಗಲಿದೆ.

ಟೆಕ್ನೋ ಈಗಾಗಲೇ ಅನೇಕ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಹೊಸ ಫೀಚರ್​, ಆಕರ್ಷಕ ಲುಕ್​ ಮತ್ತು ಕಡಿಮೆ ಬೆಲೆಯ ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳನ್ನು ಗ್ರಾಹಕರ ಮುಂದಿರಿಸಿದೆ.
Published by: Harshith AS
First published: November 8, 2020, 9:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories