news18-kannada Updated:November 3, 2020, 3:22 PM IST
TECNO
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ ಬ್ರಾಂಡ್ ಟೆಕ್ನೋ ‘ದಿ ಗ್ರೇಟ್ ಟೆಕ್ನೋ ಫೆಸ್ಟಿವಲ್’ ಆಯೋಜಿಸಿದೆ. ನವೆಂಬರ್ 1 ರಿಂದ ಪ್ರಾರಂಭವಾದ ಈ ಸೇಲ್ 30ರವರೆಗೆ ನಡೆಸಲಿದೆ. ಟೆಕ್ನೋ ಸಂಸ್ಥೆ ಭಾರತಕ್ಕೆ ಕಾಲಿಟ್ಟು ಮೂರು ವರ್ಷಗಳು ಸಂದಿದೆ. 6 ದಶಲಕ್ಷ ಗಡಿ ದಾಟಿದೆ. ಈ ಸವಿನೆನಪಿಗಾಗಿ ಸೇಲ್ ಆಯೋಜಿಸಿದೆ.
ದಿ ಗ್ರೇಟ್ ಟೆಕ್ನೋ ಫೆಸ್ಟಿವಲ್ನಲ್ಲಿ ಮಾರುತಿ ಸುಜುಕಿ ಕಂಪನಿಯ ಎಸ್ ಪ್ರೆಸ್ಸೊ ಕಾರು, ಹೀರೋ ಫ್ಯಾಶನ್ ಪ್ರೊ ಬೈಕ್ ಹಾಗೂ ಕ್ಯಾಮನ್ 15 ಪ್ರೊ, ಹಿಪೋಡ್ಸ್ ಹೆಚ್ 2 ಇಯರ್ಬಡ್ಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಅಂದರೆ ಟೆಕ್ನೋ ಉತ್ಪನ್ನಗಳನ್ನು ಖರೀದಿಸಿದರೆ ಅವರಿಗೆ ಅದೃಷ್ಟದ ಡ್ರಾ ಮೂಲಕ ಆಕರ್ಷಕ ಬಹುಮಾನಗಳು ಸಿಗಲಿದೆ.
ಟೆಕ್ನೋ ಸ್ಮಾರ್ಟ್ಫೋನ್ ಖರೀದಿಸಿದರೆ ಕಾರು, ಬೈಕ್, ಇನ್ನಿತರ ಆಕರ್ಷಕ ಉಡುಗೊರೆಯನ್ನು ಪಡೆಯುವ ಅವಕಾಶ ಮಾಡಿಕೊಟ್ಟಿದೆ. ಜೊತೆಗೆ ಲಕ್ಕಿ ಡ್ರಾ ನಡೆಸುತ್ತಿದೆ. ಗ್ರಾಹಕರು ತಮ್ಮ ವಿಳಾಸ ಮತ್ತು ಫೋನ್ ಮುಂತಾದ ಮಾಹಿತಿಯನ್ನು ನಮೂದಿಸಬೇಕಿದೆ. ಡಿಸೆಂಬರ್ ತಿಂಗಳ 15ನೇ ತಾರೀಖಿನಂದು ಡ್ರಾ ನಡೆಯಲಿದ್ದು, ವಿಜೇತರಿಗೆ ಬಹುಮಾನ ಸಿಗಲಿದೆ.
ಟೆಕ್ನೋ ಈಗಾಗಲೇ ಅನೇಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಾ ಬಂದಿದೆ. ಹೊಸ ಫೀಚರ್, ಆಕರ್ಷಕ ಲುಕ್ ಮತ್ತು ಕಡಿಮೆ ಬೆಲೆಯ ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳನ್ನು ಗ್ರಾಹಕರ ಮುಂದಿರಿಸಿದೆ.
Published by:
Harshith AS
First published:
November 3, 2020, 3:22 PM IST