ಗೋರಿ ಮೇಲೆ QR code, ಒಳಗಿರೋದ್ಯಾರು ಸ್ಕ್ಯಾನ್ ಮಾಡಿ ತಿಳ್ಕೊಳಿ.. ಹೈಟೆಕ್ ಅಂದ್ರೆ ಇದು!

QR Code: ಡ್ರೆಕ್ಸೆಲ್​ ಪದವೀಧರ ವಿದ್ಯಾರ್ಥಿಯಾದ ನಾರ್ಮನ್​ ಜೋಸೆಫ್​ ವುಡ್​ಲ್ಯಾಂಡ್​ ಮತ್ತು ಬರ್ನಾಡ್​ ಸಿಲ್ವರ್​ 1952ರಲ್ಲಿ QR code ತಯಾರಿಸುವ ಕುರಿತು ಚಿಂತನೆ ನಡೆಸಿದ್ದರು.  1960ರಲ್ಲಿ ಆವಿಷ್ಕಾರ ನಡೆಸಿದರಾದರು ಸಂಪೂರ್ಣ ಅರಿತುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ.

QR code

QR code

 • Share this:
  ಪ್ರಸ್ತುತ QR code​ ಕೋಡ್​ ಬಳಕೆ ಹೆಚ್ಚಾಗುತ್ತಿದೆ. ಫೋನ್​ ಪೇ, ಗೂಗಲ್​ ಪೇ ಬಳಸುವವರಿಗೆ QR code ಪರಿಚಯವಿರುತ್ತದೆ. ಭಾರತದಲ್ಲೂ QR code ಬಳಕೆ ವೇಗವಾಗಿ ಸಾಗುತ್ತಿದೆ ಎಂಬುದನ್ನು ಗಮನಿಸಬೇಕು. ಇನ್ನು ವಿದೇಶಗಳಿಗೆ ಹೋಲಿಸಿದರೆ ಭಾರತದವು QR code ಬಳಕೆಯಲ್ಲಿ ಕೊಂಚ ನಿಧಾನವೇ. ಆದರೆ ವಿದೇಶದಲ್ಲಿ ಇದರ ಬಳಕೆ ಹೆಚ್ಚು. ಪ್ರತಿಯೊಂದು ವಸ್ತುಗಳ ಮೇಲೆ QR code ನೀಡಲಾಗಿದೆ ಅದನ್ನು ಸ್ಕ್ಯಾನ್​ ಮಾಡುವ ಮೂಲಕ ವಸ್ತುಗಳನ್ನು ಖರೀದಿಸಲಾಗುತ್ತದೆ, ವಿಚಾರಗಳನ್ನು ತಿಳಿಯಲಾಗುತ್ತದೆ. ಅಷ್​ಟರ ಮಟ್ಟಿಗೆ ವಿದೇಶಗಳು ಕ್ಯೂ ಆರ್​ ಕೋಡಿನ ಪ್ರಯೋಜನ ಪಡೆದಿದೆ.

  1994ರಲ್ಲಿ ಕ್ಯೂ ಆರ್​ ಕೋಡ್​ ಹೊರತರುವ ಬಗ್ಗೆ ಚಿಂತಿಸಿದರಾದರು 1952ರಲ್ಲೇ ಇದರ ಬಗ್ಗೆ ಸರಿಯಾದ ಆವಿಷ್ಕಾರ ನಡೆಯುತ್ತಾ ಬಂದಿದೆ ಎಂಬುದನ್ನು ಗಮನಹರಿಸಬೇಕಾಗಿದೆ. ಹಾಗಾಗಿ ಇಂದು QR code ಕೋಡ್ ಬಳಕೆ ವಿಶ್ವವ್ಯಾಪಿಯಾಗಿದೆ. ಅಷ್ಟೇ ಏಕೆ ವಿದೇಶಗಳಲ್ಲಿ ಗೋರಿಗಳ ಮೇಲೂ QR code ಕೋಡ್​ ಅಳವಡಿಸಲಾಗಿದೆ. ಅಷ್ಟರ ಮಟ್ಟಿಗೆ ಬಳಕೆಯಾಗುತ್ತಿದೆ.

  ಡ್ರೆಕ್ಸೆಲ್​ ಪದವೀಧರ ವಿದ್ಯಾರ್ಥಿಯಾದ ನಾರ್ಮನ್​ ಜೋಸೆಫ್​ ವುಡ್​ಲ್ಯಾಂಡ್​ ಮತ್ತು ಬರ್ನಾಡ್​ ಸಿಲ್ವರ್​ 1952ರಲ್ಲಿ QR code ತಯಾರಿಸುವ ಕುರಿತು ಚಿಂತನೆ ನಡೆಸಿದ್ದರು.  1960ರಲ್ಲಿ ಆವಿಷ್ಕಾರ ನಡೆಸಿದರಾದರು ಸಂಪೂರ್ಣ ಅರಿತುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಸಾಕಷ್ಟು ಪ್ರಯೋಗಗಳನ್ನು ನಡೆಸಿದರು. ಆದರೆ 24 ಅಲ್ಫಾನ್ಯೂಮರಿಕ್​ ಅಕ್ಷರಗಳನ್ನು ಹೊಂದಿಸುವ ಮೂಲಕ ಟೊಯೋಟಾದ ಅಂಗಸಂಸ್ಥೆಯಾದ ಜಪಾನಿನ ಡೆನ್ಸಿವೇವ್​ 1994ರಲ್ಲಿ QR code ಕೋಡ್ ಅನ್ನು ಪರಿಚಯಿಸಿಯೇ ಬಿಟ್ಟರು.

  QR code ಇಮೇಜ್​ ಸೆನ್ಸರ್​ಗಳನ್ನು ಬಳಸಿಕೊಂಡು ಮಾಹಿತಿಯನ್ನು ಡಿಕೋಡ್​ ಮಾಡುತ್ತದೆ. ಪ್ರಸ್ತುತ ಹಲವಾರು ವಿಧಗಳಳ್ಲಿ QR code ಬಳಸಲಾಗುತ್ತಿದೆ. ಅಚ್ಚರಿ ವಿಚಾರವೆಂದರೆ  ಜಪಾನ್​ ಆಟೋ ಉದ್ಯಮದ ಬಳಕೆಗಾಗಿ ಅಂದು ಕ್ಯೂ ಆರ್​ ಕೋಡ್​ ರಚಿಸಲಾಯಿತು. ಅಂದರೆ ವಾಹನ  ಟ್ರಾಕ್​ ಮಾಡಲು ಇದನ್ನು ಬಳಕೆ ತರಲು ರಚಿಸಲಾಯಿತು. ಆದರೆ ಇಂದು ಮದುವೆ ಆಮಂತ್ರಣದಲ್ಲೂ ಕ್ಯೂ ಆರ್​ ಕೋಡ್​ ಬಳಕೆಯಲ್ಲಿದೆ.

  Read Also⇒ Marriage: ನವೆಂಬರ್ ತಿಂಗಳಲ್ಲಿ ಜನ ಯಾಕೆ ಮದ್ವೆ ಆಗಲ್ಲ? ಇದೇ ಕಾರಣ!

  2010ರಿಂದ ಸ್ಮಾರ್ಟ್​ಫೋನ್​ಗಳು QR code ಬಳಸಲು ಮುಂದಾದವು. ಜಾಹೀರಾತಿನ ಮೂಲಕ ಜನಪ್ರಿಯತೆ ಪಡೆದ ಕ್ಯೂ ಆರ್​ ಕೋಡನ್ನು ಇಂದು ವೆಬ್​ಸೈಟ್​ಗಳು ತಮ್ಮ ಬ್ರೌಸಿಂಗ್​ಗಾಗಿ ಬಳಸುತ್ತಿವೆ. ಮತ್ತೊಂದು ವಿಚಾರವೆಂದರೆ QR code ಗೌಪ್ಯತೆ ಮತ್ತು ಭದ್ರತಾ ಕಾಳಜಿ ವಿಚಾರದಲ್ಲೂ ಸೈ ಎನಿಸಿಕೊಂಡಿದೆ.  ಜಪಾನಿನಲ್ಲಿ ಗೋರಿಗಳ ಮೆಲೂ ಕ್ಯೂ ಆರ್​ ಕೋಡ್​ ಅಳವಡಿಸಲಾಗಿದೆ. ಅದನ್ನು ಸ್ಕ್ಯಾನ್​ ಮಾಡಿದರೆ ಸಾಕು ನಿಮಿಷಾರ್ಧದಲ್ಲೆ ಮಾಹಿತಿ ಲಭಿಸುತ್ತದೆ. ಅಷ್ಟರ ಜಪಾನಿನಲ್ಲಿ ಮಟ್ಟಿಗೆ ಕ್ಯೂ ಆರ್​ ಕೋಡ್​ ಬಳಕೆಯಲ್ಲಿದೆ ಎಂಬುದನ್ನು ಗಮನಹರಿಸಬೇಕಾಗಿದೆ.

  ಚೀನಾ QR code ಅನ್ನು ಭಿನ್ನವಾಗಿ ಉಪಯೋಗಿಸಿಕೊಂಡಿದೆ. ಚೀನಾದ ಪಿನ್​ಟ್ರೆಸ್ಟ್​, ಸ್ನಾಪ್​​​ಚಾಟ್​, ವಿಚಾಟ್​, ಹಾಗೆಯೇ ಸ್ಮಾರ್ಟ್​ಫೋನ್​ಗಳಾದ ಶಿಯೋಮಿ, ಮೊಟೊರೊಲಾ, ಸ್ಯಾಮ್​ಸಂಗ್​, ಹುವಾಯ್​ ಸೇರಿದಂತೆ ಇನ್ನು ಕೆಲವು ಸ್ಮಾರ್ಟ್​ಫೋನ್​, ಸ್ಮಾರ್ಟ್​ವಾಚ್​ ಕ್ಯೂ ಆರ್​​ ಕೋಡನ್ನು ಬಳಸುತ್ತವೆ.
  Published by:Harshith AS
  First published: