ಇನ್ನೇನು ಕೆಲವೇ ದಿನಗಳಲ್ಲಿ 2022 ಅಂತ್ಯಗೊಂಡು ಹೊಸವರ್ಷ (New Year) ಬಂದಾಗುತ್ತೆ. ಆದರೆ ಈ ವರ್ಷದಲ್ಲಿ ತಂತ್ರಜ್ಞಾನದ (Technology) ಪ್ರಗತಿ ಸಾಕಷ್ಟಾಗಿದೆ. ಇದರಿಂದ ಜನರಿಗೂ ಸಹ ಬಹಳಷ್ಟು ಉಪಯೋಗವಾಗಿದೆ. ಇದೀಗ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಸದ್ದು ಮಾಡಿದ ಮುಖ್ಯವಿಷಯವೆಂದರೆ 5ಜಿ ನೆಟ್ವರ್ಕ್ ಸೇವೆ. ಇದೇ ರೀತಿ ಟೆಕ್ನಾಲಜಿ ಯುಗವನ್ನು ಬದಲಾವಣೆ ಮಾಡುವತ್ತ ಹಲವಾರು ಕಂಪನಿಗಳು ಹಗಲಿರುಳು ಎನ್ನದೆ ದುಡಿಯುತ್ತಿದೆ. ಕೊರೊನಾ ಲಾಕ್ಡೌನ್ ಬಂದ ನಂತರ ತಂತ್ರಜ್ಞಾನದ ಮೂಲಕವೇ ಹೆಚ್ಚು ಕೆಲಸ ಮಾಡುವವರಾಗಿದ್ದಾರೆ ಇದನ್ನೆಲ್ಲಾ ಗಮನಿಸಿದ ಟೆಕ್ ಕಂಪನಿಗಳು ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರಗಳನ್ನೆಲ್ಲಾ ಕೈಗೊಂಡಿದೆ ಎಂದು ಹೇಳ್ಬಹುದು.
ತಂತ್ರಜ್ಞಾನದ ಪ್ರಗತಿ ಇಡೀ ದೇಶದ ಪ್ರಗತಿ ಅಂತಾನೇ ಹೇಳ್ಬಹುದು. ಅದೇ ರೀತಿ ಈ ಬಾರಿ ಹಲವಾರು ಟೆಕ್ನಾಲಜಿಗಳನ್ನು ಅಭಿವೃದ್ಧಿ ಮಾಡುವಲ್ಲಿ ಕಂಪನಿಳು ಯಶಸ್ವಿಯಾಗಿದೆ. ಹಾಗಿದ್ರೆ ಈ ಬಾರಿ ಟೆಕ್ನಾಲಜಿ ಯುಗದಲ್ಲಾದ ಅಭಿವೃದ್ಧಿಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.
ಭಾರತದೆಲ್ಲೆಡೆ 5ಜಿ ಸೇವೆ ಆರಂಭ
5ಜಿ ನೆಟ್ವರ್ಕ್ ಸೇವೆ ಎಂಬುದು ಈ ಬಾರಿ ತಂತ್ರಜ್ಞಾನದ ಪ್ರಗತಿಯಲ್ಲಿ ಬಹಳಷ್ಟು ದೊಡ್ಡ ಮಟ್ಟಿನಲ್ಲಿ ಪಾತ್ರವಹಿಸಿದೆ ಎಂದು ಹೇಳ್ಬಹುದು. ಈ ವರ್ಷದ ಅಕ್ಟೋಬರ್ನಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ರ ಆರಂಭಿಕ ದಿನದಂದು 5ಜಿ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ. ಇದಾದ ನಂತರ ಜಿಯೋ ಹಾಗೂ ಏರ್ಟೆಲ್ ವಿವಿಧ ಮೆಟ್ರೋ ನಗರಗಳಲ್ಲಿ ಈ 5ಜಿ ಸೇವೆಯನ್ನು ನೀಡುತ್ತಾ ಯಶಸ್ವಿಯಾಗಿದೆ. ಹಾಗೆಯೇ ಮಾರ್ಚ್ 2024 ರ ವೇಳೆಗೆ ಏರ್ಟೆಲ್ ಎಲ್ಲಾ ಕಡೆ 5ಜಿ ನೆಟ್ವರ್ಕ್ ಸೇವೆಯನ್ನು ವಿಸ್ತರಣೆ ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: ನಿಮ್ಮನ್ನು ಕೊರೊನಾ ವೈರಸ್ನಿಂದ ಬಚಾವ್ ಮಾಡುತ್ತೆ ಈ ಡಿವೈಸ್! ಏನಿದು? ಇದರ ವಿಶೇಷತೆ ಏನು ಗೊತ್ತಾ?
ಡಿಜಿಟಲ್ ಕರೆನ್ಸಿಯತ್ತ ಯೋಜನೆ:
ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದ ಅಕ್ಟೋಬರ್ನಲ್ಲಿ ಭಾರತೀಯ ರೂಪಾಯಿಯ ಡಿಜಿಟಲ್ ಪ್ರತಿರೂಪವಾಗಿ ಇ-ರೂಪಾಯಿ ಅಥವಾ ಡಿಜಿಟಲ್ ರೂಪಾಯಿಯನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಇ-ರೂಪಾಯಿಯು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯಾಗಿದ್ದು, ಇದನ್ನು ಆರ್ಬಿಐ ನಿರ್ವಹಿಸುತ್ತದೆ. ಇದು ಫಿಯೆಟ್ ಕರೆನ್ಸಿಯಂತೆಯೇ ವ್ಯಾಪಾರ ಮೌಲ್ಯವನ್ನು ಹೊಂದಿರುತ್ತದೆ. ಆದರೆ, ಇದು ರೂಪಾಯಿಯಿಂದ ಬೆಂಬಲಿತವಾಗಿರುವುದರಿಂದ, ಬಿಟ್ಕಾಯಿನ್ ಅಥವಾ ಡಾಗ್ಕಾಯಿನ್ ಅಥವಾ ಎಥೆರಿಯಮ್ನಂತಹ ಕ್ರಿಪ್ಟೋಕರೆನ್ಸಿಗಳಂತೆ ಅಸ್ಥಿರವಾಗಿಲ್ಲ.
ಭಾರತದಲ್ಲಿ ಐಫೋನ್ ಉತ್ಪಾದನೆ
ಭಾರತ ಸರ್ಕಾರವು 2020 ರಲ್ಲಿ PLI, SPECS ಮತ್ತು EMC 2.0 ಅನ್ನು ಒಳಗೊಂಡಿರುವ ವಿವಿಧ ಸಬ್ಸಿಡಿ ಯೋಜನೆಗಳನ್ನು ಪರಿಚಯಿಸಿದ್ದು, ಇದಾದ ನಂತರ ಭಾರತವು ತನ್ನ ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ. ಅಂದಿನಿಂದ, ಹಲವಾರು ಟೆಕ್ ಕಂಪನಿಗಳು ಭಾರತದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿವೆ. ಈ ಮೂಲಕ ಅಗತ್ಯ ಉತ್ಪಾದನಾ ಸಾಮರ್ಥ್ಯಗಳನ್ನು ವಿಸ್ತರಿಸಿವೆ. ಅದರಲ್ಲೂ ವೇದಾಂತ ಗ್ರೂಪ್ನಂತಹ ಸ್ಥಳೀಯ ತಯಾರಕರು ತಮ್ಮ ಸಾಮರ್ಥ್ಯಗಳನ್ನು ಮತ್ತಷ್ಟು ಅಪ್ಗ್ರೇಡ್ ಮಾಡಲು ಮತ್ತು ವಿಸ್ತರಿಸಲು ಪ್ರೇರೇಪಿಸಿದೆ.
ಇದರ ಜೊತೆಗೆ ಆ್ಯಪಲ್ ಚೀನಾದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಪ್ರಪಂಚದಾದ್ಯಂತದ ಮಾರುಕಟ್ಟೆಗಳಲ್ಲಿ ಅದರ ಉತ್ಪಾದನಾ ಸಾಮರ್ಥ್ಯಗಳನ್ನು ವೈವಿಧ್ಯಗೊಳಿಸಲು ಮುಂದಾಗಿದ್ದು, ಈ ಮೂಲಕ ಭಾರತದಲ್ಲೂ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಿದೆ. ಅಂತೆಯೇ ಫಾಕ್ಸ್ಕಾನ್ ಭಾರತದಲ್ಲಿ ಹೆಚ್ಚುವರಿ $500 ಮಿಲಿಯನ್ ಹೂಡಿಕೆ ಮಾಡಿದೆ.
ಒಂದೇವಿಧದಲ್ಲಿ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ
ಈ ಹಿಂದೆ ಮೊಬೈಲ್ ಚಾರ್ಜರ್ಗಳು ವಿಧವಿಧವಾಗಿ ಬರುತ್ತಿತ್ತು. ಆದರೆ ಮೂಂದಿನ ದಿನಗಳಲ್ಲಿ ಒಂದೇ ರೂಪದಲ್ಲಿ ಬರುವಂತೆ ತಂತ್ರಜ್ಞಾನ ಕಂಪನಿಗಳು ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಅಂತರ ಸಚಿವಾಲಯದ ಕಾರ್ಯಪಡೆ ಒಮ್ಮತಕ್ಕೂ ಬಂದಿದೆ. ಈ ನಿಯಮವನ್ನು ವರ್ಷದ ಆರಂಭದಲ್ಲಿ ಯುರೋಪಿಯನ್ ಯೂನಿಯನ್ ಪರಿಚಯಿಸಿತ್ತು. ಇನ್ನು ಈ ಹೊಸ ನಿಯಮದ ಪ್ರಕಾರ ಆ್ಯಪಲ್ನಂತಹ ಕಂಪನಿಗಳಿಗೆ ಸಾರ್ವತ್ರಿಕ ಚಾರ್ಜಿಂಗ್ಗೆ ಬದಲಾಗುವಂತೆ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ