ಕೈಗೆಟುಕುವ ಬೆಲೆಯ ಫೋನ್ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಪ್ರಸಿದ್ಧವಾಗಿರುವ ಚೀನಾದ ಕಂಪೆನಿಯೆಂದರೆ (China Company) ಅದು ಟೆಕ್ನೋ ಕಂಪೆನಿ ()Techno Company). ಇದೀಗ ಈ ಕಂಪೆನಿ ಶೀಘ್ರದಲ್ಲೇ ಮತ್ತೊಂದು ಅಗ್ಗದ ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಟೆಕ್ನೋ ಸ್ಮಾರ್ಟ್ಫೋನ್ (Techno Smartphone)ನ ಹೆಸರು ಟೆಕ್ನೋ ಸ್ಪಾರ್ಟ್ ಗೋ 2023 (Techno Spark Go 2023) ಎಂದು ಹೇಳಲಾಗಿದೆ. ಇದು ಕಳೆದ ವರ್ಷ ಬಿಡುಗಡೆಯಾದ ಟೆಕ್ನೋ ಸ್ಪಾರ್ಕ್ ಗೋ 2022 ರ ಸ್ಮಾರ್ಟ್ಫೋನ್ನ ಅಪ್ಗ್ರೇಡ್ ಆವೃತ್ತಿಯಾಗಿ ಬರಲಿದೆ ಎಂದು ಕಂಪೆನಿ ತಿಳಿಸಿದೆ. ಈ ಬಜೆಟ್ ಸ್ಮಾರ್ಟ್ಫೋನ್ ಇಂಡೋನೇಷ್ಯಾದ ಜನಪ್ರಿಯ ವೆಬ್ಸೈಟ್ನಲ್ಲಿ ಗುರುತಿಸಲ್ಪಟ್ಟಿದೆ. ಟೆಕ್ನೋದ ಸ್ಪಾರ್ಕ್ ಸೀರಿಸ್ನ ಸ್ಮಾರ್ಟ್ಫೋನ್ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ಫೋನ್ ಹುಡುಕುತ್ತಿರುವವರಿಗೆ ಉತ್ತಮ ಆಯ್ಕೆಯಾಗಿದೆ.
ಟೆಕ್ನೋ ಸ್ಮಾರ್ಟ್ಫೋನ್ ಕಂಪೆನಿ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಇದೀಗ ಈ ಕಂಪೆನಿ 2023ರಲ್ಲಿ ಹೊಸ ಟೆಕ್ನೋ ಸ್ಪಾರ್ಕ್ ಗೋ ಎಂಬ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಟಿಪ್ಸ್ಟರ್ ಅವರ ವರದಿ
ಭಾರತೀಯ ಟಿಪ್ಸ್ಟರ್ ಮುಕುಲ್ ಶರ್ಮಾ ಅವರು ಟೆಕ್ನೋದ ಈ ಮುಂಬರುವ ಫೋನ್ನ ಪಟ್ಟಿಯನ್ನು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನೊಂದಿಗೆ ಹಂಚಿಕೊಂಡಿದ್ದಾರೆ. ಈ ಪಟ್ಟಿಯು ಜನಪ್ರಿ ವೆಬ್ಸೈಟ್ನಿಂದ ಬಂದಿದೆ. ಆದಾಗ್ಯೂ, ಇದರಲ್ಲಿ ಫೋನ್ನ ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ವರದಿಗಳ ಪ್ರಕಾರ, ಇದು ಕಳೆದ ವರ್ಷ ಬಿಡುಗಡೆಯಾದ ರೂಪಾಂತರದ ಅಪ್ಗ್ರೇಡ್ ಆವೃತ್ತಿಯಾಗಿರುವುದರಿಂದ, ಇದರಲ್ಲಿ ಅನೇಕ ಹೊಸ ಅಪ್ಡೇಟ್ಸ್ಗಳು ಬರಲಿದೆ ಎಂಬ ನಿರೀಕ್ಷೆಯಿದೆ.
ಟೆಕ್ನೋ ಇತ್ತೀಚೆಗೆ ಭಾರತದಲ್ಲಿ ತನ್ನ ಟೆಕ್ನೋ ಫ್ಯಾಂಟಮ್ ಎಕ್ಸ್ 2 ಎಂಬ 5ಜಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಕಂಪನಿಯು ಇದೀಗ ತನ್ನ ಪ್ರೋ ಮಾದರಿಯನ್ನು ಭಾರತಕ್ಕೆ ತರಲು ತಯಾರಿ ನಡೆಸುತ್ತಿದೆ. ಅಂದರೆ ಇದೀಗ ಕೆಲವೇ ದಿನಗಳಲ್ಲಿ ಟೆಕ್ನೋ ಎಕ್ಸ್2 ಪ್ರೋ 5ಜಿ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಟೆಕ್ನೋ ಫ್ಯಾಂಟಮ್ ಎಕ್ಸ್2 ಪ್ರೋ ಫೀಚರ್ಸ್
ಟೆಕ್ನೋ ಫ್ಯಾಂಟಮ್ ಎಕ್ಸ್2 ಪ್ರೋ ಸ್ಮಾರ್ಟ್ಫೋನ್ 6.8-ಇಂಚಿನ ಫುಲ್ ಹೆಚ್ಡಿ + ಬಾಗಿದ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ, ಇದು 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಟೆಕ್ನೋದ ಈ ಪ್ರೀಮಿಯಂ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000 ಚಿಪ್ಸೆಟ್ನೊಂದಿಗೆ ಬರಲಿದೆ. ಜೊತೆಗೆ ಈ ಫೋನ್ 8ಜಿಬಿ ರ್ಯಾಮ್ ಮತ್ತು 256ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಕ್ಯಾಮೆರಾ ಫೀಚರ್ಸ್
ಟೆಕ್ನೋ ಫ್ಯಾಂಟಮ್ ಎಕ್ಸ್2 ಪ್ರೋ ವಿಶ್ವದ ಮೊದಲ 50ಎಮ್ಪಿ ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ, 13ಎಮ್ಪಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 50ಎಮ್ಪಿ ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ. ಅದೇ ಸಮಯದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಫೋನ್ನ ಮುಂಭಾಗದಲ್ಲಿ 32ಎಮ್ಪಿ ಕ್ಯಾಮೆರಾ ಲಭ್ಯವಿರುತ್ತದೆ.
ಇದನ್ನೂ ಓದಿ: 75 ಸಾವಿರದ ಸ್ಮಾರ್ಟ್ಫೋನ್ ಅನ್ನು ಕೇವಲ 15 ಸಾವಿರ ರೂಪಾಯಿಗೆ ಪಡೆಯಿರಿ! ಯಾವುದು ಆ ಸ್ಮಾರ್ಟ್ಫೋನ್?
ಬ್ಯಾಟರಿ ಫೀಚರ್ಸ್
ಇನ್ನು ಈ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 12 ಓಎಸ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್ಫೋನ್ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,160mAh ನ ಬ್ಯಾಟರಿಯನ್ನು ಹೊಂದಿದೆ. ಇ-ಕಾಮರ್ಸ್ ವೆಬ್ಸೈಟ್ ಅಮೆಜಾನ್ನಲ್ಲಿ ಈ ಸ್ಮಾರ್ಟ್ಫೋನ್ ಅನ್ನು ಜನವರಿ 17 ರಿಂದ ಪ್ರೀ ಬುಕಿಂಗ್ ಮಾಡುವ ಮೂಲಕ ಖರೀದಿ ಮಾಡಬಹುದಾಗಿದೆ.
ಇನ್ನು ಈ ಸ್ಮಾರ್ಟ್ಫೋನ್ ಬೆಲೆ ಲಭ್ಯತೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ