• Home
 • »
 • News
 • »
 • tech
 • »
 • Techno Spark Go 2023: ಟೆಕ್ನೋ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಲಗ್ಗೆ! ಬೆಲೆ ಎಷ್ಟು?

Techno Spark Go 2023: ಟೆಕ್ನೋ ಕಂಪೆನಿಯ ಹೊಸ ಸ್ಮಾರ್ಟ್​ಫೋನ್​ ಮಾರುಕಟ್ಟೆಗೆ ಲಗ್ಗೆ! ಬೆಲೆ ಎಷ್ಟು?

ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್‌

ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್‌

ಟೆಕ್ನೋ ಕಂಪೆನಿಯಿಂದ ಬಜೆಟ್​ ಬೆಲೆಯಲ್ಲಿ ಟೆಕ್ನೋ ಸ್ಪಾರ್ಕ್​ ಗೋ 2023 ಎಂಬ ಸ್ಮಾರ್ಟ್​​ಫೋನ್​ ಬಿಡುಗಡೆಯಾಗಿದೆ. ಈ ಸ್ಮಾರ್ಟ್​​​ಫೋನ್​ ಹಲವಾರು ಫೀಚರ್ಸ್​ಗಳನ್ನು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲು ರೆಡಿಯಾಗಿದೆ.

 • Share this:

  ಮಾರುಕಟ್ಟೆಗೆ ಈ ಬಾರಿ ಹಲವಾರು ಸ್ಮಾರ್ಟ್​​ಫೋನ್​ಗಳು (Smartphones) ಬಿಡುಗಡೆಯಾಗಿದೆ. ಈ ಸ್ಮಾರ್ಟ್​​ಫೋನ್​ಗಳು ಇದರದೇ ಆದ ಫೀಚರ್ಸ್​​ ಮೂಲಕ ಗ್ರಾಹಕರಿಂದ ಮೆಚ್ಚುಗೆಯನ್ನು ಪಡೆದಿದೆ. ಈ ಮಧ್ಯೆ ಟೆಕ್ನೋ ಕಂಪೆನಿಯ (Techno Company) ಹೊಸ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಲಾಂಚ್​​ ಆಗಿದೆ. ಟೆಕ್ನೋ ಬ್ರಾಂಡ್​ನ ಅಡಿಯಲ್ಲಿ ಇದುವರೆಗೆ ಬಹಳಷ್ಟು ಟೆಕ್​ ಡಿವೈಸ್​ಗಳು ಬಿಡುಗಡೆಯಾಗಿದೆ. ಇದರ ನಡುವೆ ಟೆಕ್ನೋ ಸ್ಪಾರ್ಕ್​ ಗೋ 2023 (Techno Spark Go 2023) ಎಂಬ ಸ್ಮಾರ್ಟ್​​ಫೋನ್​ ಅನ್ನು ಮಾರುಕಟ್ಟೆಗೆ ಅನಾವರಣ ಮಾಡಿದೆ. ಟೆಕ್ನೋ ಕಂಪೆನಿಯ ಸ್ಮಾರ್ಟ್​​ಫೋನ್​ಗಳು ಭಾರೀ ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.


  ಟೆಕ್ನೋ ಕಂಪೆನಿಯಿಂದ ಬಜೆಟ್​ ಬೆಲೆಯಲ್ಲಿ ಟೆಕ್ನೋ ಸ್ಪಾರ್ಕ್​ ಗೋ 2023 ಎಂಬ ಸ್ಮಾರ್ಟ್​​ಫೋನ್​ ಬಿಡುಗಡೆಯಾಗಿದೆ. ಈ ಸ್ಮಾರ್ಟ್​​​ಫೋನ್​ ಹಲವಾರು ಫೀಚರ್ಸ್​ಗಳನ್ನು ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಲು ರೆಡಿಯಾಗಿದೆ.


  ಟೆಕ್ನೋ ಸ್ಪಾರ್ಕ್​ ಗೋ 2023 ಫೀಚರ್ಸ್​


  ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.56 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಡಾಟ್ ನಾಚ್ ಡಿಸ್‌ಪ್ಲೇ ಆಗಿದ್ದು, 60Hz ರಿಫ್ರಶ್ ರೇಟ್ ಆಯ್ಕೆ ಅನ್ನು ಒಳಗೊಂಡಿದೆ. ಇದರೊಂದಿಗೆ 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದಿದೆ.
  ಕ್ಯಾಮೆರಾ ಫೀಚರ್ಸ್


  ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ f/1.85 ಅಪರ್ಚರ್ ಹೊಂದಿದೆ. ಇನ್ನು ದ್ವಿತೀಯ ಕ್ಯಾಮೆರಾ QVGA ಬೆಂಬಲಿತ ಆಗಿದ್ದು, ಎಲ್‌ಇಡಿ ಫ್ಲ್ಯಾಶ್ ಆಯ್ಕೆ ಪಡೆದಿದೆ. ಇದಲ್ಲದೆ 5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಬೇಸಿಕ್ ಫೋಟೊ ಎಡಿಟಿಂಗ್ ಆಯ್ಕೆಗಳು ಇರಲಿವೆ.


  ಬ್ಯಾಟರಿ ಫೀಚರ್ಸ್​


  ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಒಂದು ಪೂರ್ಣ ಚಾರ್ಜ್‌ ಸುಮಾರು 25 ಗಂಟೆಗಳ ಪ್ಲೇ ಬ್ಯಾಕ್‌ ಒದಗಿಸಲಿದೆ.


  ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್‌


  ಪ್ರೊಸೆಸರ್​ ಸಾಮರ್ಥ್ಯ


  ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್‌ ಕ್ವಾಡ್ ಕೋರ್ ಮೀಡಿಯಾ ಟೆಕ್ ಹಿಲಿಯೊ A20 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ ಇತ್ತೀಚಿನ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 3ಜಿಬಿ ರ್‍ಯಾಮ್ ಮತ್ತು 32 ಜಿಬಿ ಮತ್ತು 4ಜಿಬಿ ರ್‍ಯಾಮ್ ಮತ್ತು 64 ಜಿಬಿ ಇಂಟರ್ನಲ್​ ಸ್ಟೋರೇಜ್‌ ಆಯ್ಕೆಯಲ್ಲಿಯೂ ಸಹ ಲಭ್ಯವಾಗಲಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ಇಂಟರ್ನಲ್ ಸ್ಟೋರೇಜ್ ಅನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.


  ಇತರೆ ಫೀಚರ್ಸ್​


  ಇನ್ನು ಟೆಕ್ನೋ ಸ್ಪಾರ್ಕ್​​ ಗೋ 2023 ಸ್ಮಾರ್ಟ್​​​​ಫೋನ್​ನ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಹೇಳುವುದಾದರೆ ಇದು ಎಲ್ ಟಿಇ, ವೈ-ಫೈ, ಬ್ಲೂಟೂತ್ ಅನ್ನು ಒಳಗೊಂಡಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್​ ಅನ್ನು ಸಹ ಇದರಲ್ಲಿ ಅಳವಡಿಸಲಾಗಿದೆ.


  ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಒಂದೇ ಕಂಪೆನಿಯ ಎರಡು ಸ್ಮಾರ್ಟ್​​​ವಾಚ್​ಗಳು! ಫೀಚರ್ಸ್​ ಹೇಗಿದೆ ಗೊತ್ತಾ


  ಬೆಲೆ ಮತ್ತು ಲಭ್ಯತೆ


  ಟೆಕ್ನೋ ಸ್ಪಾರ್ಕ್ ಗೋ 2023 ಸ್ಮಾರ್ಟ್‌ಫೋನ್‌ 3ಜಿಬಿ ರ್‍ಯಾಮ್ ಮತ್ತು 32 ಜಿಬಿ ಸ್ಟೋರೇಜ್‌ ಸಾಮರ್ಥ್ಯದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್​​ಫೋನ್​ 6,999 ರೂ. ಬೆಲೆ ಹೊಂದಿದೆ. ಇನ್ನು ಈ ಫೋನ್ ಎಂಡ್‌ಲೆಸ್‌ ಬ್ಲ್ಯಾಕ್‌, ಬ್ಲೂ ಮತ್ತು ನೆಬುಲ್ಲಾ ಪರ್ಪಲ್‌ ಬಣ್ಣಗಳ ಆಯ್ಕೆಯನ್ನು ಪಡೆದಿದೆ.

  Published by:Prajwal B
  First published: