Tech Mahindra: ನಿರುದ್ಯೋಗಿಗಳಿಗೆ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ ತರಬೇತಿ ಆಯೋಜಿಸಿದ ಟೆಕ್ ಮಹೀಂದ್ರಾ

Cloud computing technology training: ಫೆಬ್ರವರಿ 9, 2022ರಂದು ಕ್ಲೌಡ್ ಕಂಪ್ಯೂಟಿಂಗ್ ತರಬೇತಿಯು ಪ್ರಾರಂಭವಾಗಿದ್ದು, ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜ್ಞಾನದ ಲಾಭ ಪಡೆಯುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ಟೆಕ್ ಮಹೀಂದ್ರಾ

ಟೆಕ್ ಮಹೀಂದ್ರಾ

  • Share this:
    ಪ್ರಮುಖ ಐಟಿ ಸಂಸ್ಥೆ ಟೆಕ್ ಮಹೀಂದ್ರಾದ CCR ಆರ್ಮ್ ಈಗ ದೇಶದಾದ್ಯಂತ ಉಚಿತ ಕ್ಲೌಡ್ ಕಂಪ್ಯೂಟಿಂಗ್ ತರಬೇತಿಯನ್ನು (Cloud computing technology training) ನೀಡಲು ಮುಂದಾಗಿದೆ. ಈ ತಂತ್ರಜ್ಞಾನದ ಕಲಿಕೆಯಿಂದ ಉದ್ಯೋಗವಿಲ್ಲದ (Underemployed ) ಅಥವಾ ನಿರುದ್ಯೋಗಿಗಳಿಗೆ (Unemployed) ವೃತ್ತಿಜೀವನವನ್ನು ಪ್ರಾರಂಭಿಸಲು ಅನುಕೂಲವಾಗುತ್ತದೆ. ಟೆಕ್ ಮಹೀಂದ್ರ ಫೌಂಡೇಶನ್ AWS ಕಾರ್ಯಕ್ರಮಕ್ಕಾಗಿ (Tech Mahindra Foundation AWS Program) ಅಮೆಜಾನ್ ಇಂಟರ್‌ನೆಟ್ ಸರ್ವೀಸ್‌ ಪ್ರೈ.ಲಿ (AISPL) ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ. ಈಗಾಗಲೇ ಫೆಬ್ರವರಿ 9, 2022ರಂದು ಕ್ಲೌಡ್ ಕಂಪ್ಯೂಟಿಂಗ್ ತರಬೇತಿಯು ಪ್ರಾರಂಭವಾಗಿದ್ದು, ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಜ್ಞಾನದ ಲಾಭ ಪಡೆಯುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

    ಟೆಕ್ ಮಹೀಂದ್ರಾ ಫೌಂಡೇಶನ್‌ನ ಸಿಇಒ ರಾಕೇಶ್ ಸೋನಿ ಮಾತನಾಡಿ, "ಕ್ಲೌಡ್ ಕಂಪ್ಯೂಟಿಂಗ್ 21ನೇ ಶತಮಾನದ ಡಿಜಿಟಲ್ ರೂಪಾಂತರವನ್ನು ಸಕ್ರಿಯಗೊಳಿಸುವ ತಾಂತ್ರಿಕ ಆವಿಷ್ಕಾರವಾಗಿದೆ. ಸಾಂಕ್ರಾಮಿಕ ರೋಗಗಳು ಅನೇಕ ವ್ಯವಹಾರಗಳ ಮೇಲೆ ಪರಿಣಾಮ ಬೀರಿದೆ. ಈ ಕ್ಲೌಡ್ ಅವುಗಳನ್ನು ಮರುಸ್ಥಾಪಿಸಲು, ಸಂಸ್ಧೆಗಳ ಚುರುಕುತನವನ್ನು ಸುಧಾರಿಸಲು ಮತ್ತು ಅನಿಶ್ಚಿತತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ'' ಎಂದಿದ್ದಾರೆ.

    ಈ ಕಾರ್ಯಕ್ರಮವು ಕಲಿಯುವವರಿಗೆ ಸಹಾಯ ಮಾಡುತ್ತದೆ. ಉದ್ಯಮ-ಮಾನ್ಯತೆ ಪಡೆದ AWS ಪ್ರಮಾಣೀಕರಣದೊಂದಿಗೆ ಮೌಲ್ಯಯುತವಾದ ಮತ್ತು ಬೇಡಿಕೆಯಲ್ಲಿರುವ ಕ್ಲೌಡ್ ಕಂಪ್ಯೂಟಿಂಗ್ ಕೌಶಲ್ಯಗಳನ್ನು ಕಲಿಯಲು ಸಹಕಾರಿಯಾಗಿದೆ ಎಂದು ರಾಕೇಶ್ ಹೇಳಿದ್ದಾರೆ.

    AWS ಮರು ಪ್ರಾರಂಭ/ಪ್ರಾರಂಭವು 39 ದೇಶಗಳಲ್ಲಿ ವಿತರಿಸಲಾದ ಜಾಗತಿಕ ಕಾರ್ಯಕ್ರಮವಾಗಿದೆ. ಮತ್ತು ಉದ್ಯೋಗ ಸಂದರ್ಶನದ ಅವಕಾಶಗಳೊಂದಿಗೆ ಶೇಕಡಾ 90ಕ್ಕಿಂತ ಹೆಚ್ಚು ಪದವೀಧರರನ್ನು ಇದು ಸಂಪರ್ಕಿಸುತ್ತದೆ.

    ಕ್ಲೌಡ್ ಕಂಪ್ಯೂಟಿಂಗ್ 12-ವಾರದ ತರಬೇತಿಯಾಗಿದ್ದು, ಕೌಶಲ್ಯ-ಆಧಾರಿತ ತರಬೇತಿ ನೀಡುತ್ತದೆ. ಇದು ಮೂಲಭೂತ AWS ಕ್ಲೌಡ್ ಕೌಶಲ್ಯಗಳನ್ನು ಮತ್ತು ಪ್ರಾಯೋಗಿಕ ವೃತ್ತಿ ಕೌಶಲ್ಯಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಸಂದರ್ಶನವನ್ನು ಹೇಗೆ ಎದುರಿಸುವುದು, ರೆಸ್ಯೂಮ್ ಅನ್ನು ಹೇಗೆ ತಯಾರಿಸುವುದು, ಎಂಟ್ರಿ ಲೆವೆಲ್‌ಗೆ ವ್ಯಕ್ತಿಗಳನ್ನು ಹೇಗೆ ತಯಾರಿ ಮಾಡುವುದು ಎಂಬ ಇತ್ಯಾದಿ ಕೌಶಲ್ಯ ತರಬೇತಿಯನ್ನು ಕ್ಲೌಡ್ ನೀಡುತ್ತದೆ.

    ಇದನ್ನೂ ಓದಿ: Snapchat ಬಳಕೆದಾರರಿಗೆ ಗುಡ್ ನ್ಯೂಸ್; ಯೂಸರ್ ನೇಮ್ ಬದಲಿಸಿಕೊಳ್ಳಲು ಅವಕಾಶ, ಆದ್ರೆ ಕಂಡೀಷನ್ ಅಪ್ಲೈ!

    ಟೆಕ್ ಮಹೀಂದ್ರ ಡಿಜಿಟಲ್ ಟೆಕ್ನಾಲಜೀಸ್‌ನ ಸ್ಮಾರ್ಟ್ ಅಕಾಡೆಮಿಗಳ ಮೂಲಕ ಪ್ರೋಗ್ರಾಂ ಲಭ್ಯವಿದ್ದು, ಹೈದರಾಬಾದ್, ಮೊಹಾಲಿ, ವಿಶಾಖಪಟ್ಟಣಂ, ಬೆಂಗಳೂರು, ದೆಹಲಿ, ಮುಂಬೈ ಮತ್ತು ಪುಣೆಯಲ್ಲಿ ಆನ್‌ಲೈನ್ ಮೂಲಕ ತರಬೇತಿ ಕ್ಲಾಸ್ ನಡೆಯುತ್ತವೆ. ಪ್ರಾಕ್ಟಿಕಲ್ ಉದಾಹರಣೆಗಳು, ಲ್ಯಾಬ್‌ಗಳು ಮತ್ತು ಕೋರ್ಸ್‌ವರ್ಕ್‌ಗಳ ಮೂಲಕ ವಿದ್ಯಾರ್ಥಿಗಳು ಪ್ರೋಗ್ರಾಮಿಂಗ್ ಭಾಷೆ (ಲಿನಕ್ಸ್ ಮತ್ತು ಪೈಥಾನ್), ನೆಟ್‌ವರ್ಕಿಂಗ್, ಭದ್ರತೆ ಮತ್ತು ಸಂಬಂಧಿತ ಡೇಟಾಬೇಸ್ ಕೌಶಲ್ಯ ಇತ್ಯಾದಿಗಳನ್ನು ಮಾಡಲು ಕೋರ್ಸ್‌ನಲ್ಲಿ ಕಲಿಯುತ್ತಾರೆ,

    "AWS ಮರು/ಪ್ರಾರಂಭವು ಅಗತ್ಯವಿರುವ ವ್ಯಕ್ತಿಗಳಿಗಾಗಿ ಮೀಸಲಿದೆ. ಈ ಪ್ರೋಗ್ರಾಂ ನಿರುದ್ಯೋಗಿ ವ್ಯಕ್ತಿಗಳಿಗೆ ಅವಕಾಶಗಳನ್ನು ಹುಡುಕಲು ಕ್ಲೌಡ್ ಕಂಪ್ಯೂಟಿಂಗ್ ತರಬೇತಿಯ ಪ್ರಮಾಣ ಪತ್ರ ಸಹಾಯ ಮಾಡುತ್ತದೆ. ಮತ್ತು ಉದ್ಯೋಗದಾತರು ಇದಕ್ಕೆ ಸೇರಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

    ಇದನ್ನೂ ಓದಿ: Instagramನಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಬೇಕಾ? ಹಾಗಿದ್ರೆ ಈ ಫೀಚರ್​​ ಬಳಸಿ ನೋಡಿ

    “ಹೆಚ್ಚು ಬೇಡಿಕೆಯಲ್ಲಿರುವ ಕ್ಲೌಡ್ ಕೌಶಲ್ಯಗಳನ್ನು ಜನರಿಗೆ ಕಲಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಟೆಕ್ ಮಹೀಂದ್ರಾ ಫೌಂಡೇಶನ್‌ನೊಂದಿಗೆ ಕೆಲಸ ಮಾಡಲು ನಾವು ಹೆಮ್ಮೆಪಡುತ್ತೇವೆ" ಎಂದು AISPLನ AWS ಟ್ರೈನಿಂಗ್ ಮತ್ತು ಸರ್ಟಿಫಿಕೆಷನ್ ಮುಖ್ಯಸ್ಥ ಅಮಿತ್ ಮೆಹ್ತಾ ಹೇಳಿದರು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ AWS ಪ್ರಮಾಣೀಕೃತ ಕ್ಲೌಡ್ ಪ್ರಾಕ್ಟೀಷನರ್ ಪ್ರಮಾಣೀಕರಣ ಪರೀಕ್ಷೆಯನ್ನು ತೆಗೆದುಕೊಳ್ಳಲು ವೆಚ್ಚವನ್ನು ನೀಡುತ್ತದೆ. ಉದ್ಯಮ-ಮಾನ್ಯತೆ ಪಡೆದ ಕಂಪನಿಗಳ ಜೊತೆಗೆ ಕ್ಲೌಡ್ ಕೌಶಲ್ಯಗಳನ್ನು ಮೌಲ್ಯೀಕರಿಸುತ್ತದೆ. ಈ ಯೋಜನೆಯ ಅಡಿ ಮೊದಲ ಎರಡು ತರಬೇತಿಯು ಫೆಬ್ರವರಿ 9, 2022ರಂದು ಈಗಾಗ್ಲೇ ಪ್ರಾರಂಭವಾಗಿವೆ. ಟೆಕ್ ಮಹೀಂದ್ರಾ ಫೌಂಡೇಶನ್ ತನ್ನ ತರಬೇತಿ ಮತ್ತು ಉದ್ಯೋಗ ಪಾಲುದಾರರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪದವೀಧರರಿಗೆ ನಿಯೋಜನೆಯನ್ನು ಮಾಡುವತ್ತ ಭಾರತದಲ್ಲಿ ಕೆಲಸ ಮಾಡುತ್ತಿದೆ.
    Published by:Harshith AS
    First published: