• Home
  • »
  • News
  • »
  • tech
  • »
  • Apple: ಶೀಘ್ರದಲ್ಲೇ 27-ಇಂಚಿನ ಡಿಸ್ಪ್ಲೇ ಬಿಡುಗಡೆ ಮಾಡಲಿದೆ ಟೆಕ್‌ ದೈತ್ಯ ಆ್ಯಪಲ್

Apple: ಶೀಘ್ರದಲ್ಲೇ 27-ಇಂಚಿನ ಡಿಸ್ಪ್ಲೇ ಬಿಡುಗಡೆ ಮಾಡಲಿದೆ ಟೆಕ್‌ ದೈತ್ಯ ಆ್ಯಪಲ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಡಿಸ್ಪ್ಲೇ ಸಪ್ಲೈ ಚೈನ್ ಕನ್ಸಲ್ಟೆಂಟ್ಸ್ ವಿಶ್ಲೇಷಕ ರಾಸ್ ಯಂಗ್ ಪ್ರಕಾರ, ಆ್ಯಪಲ್ ಸಂಸ್ಥೆಯು 2023ರ ಆರಂಭದಲ್ಲಿ 27-ಇಂಚಿನ ಮಿನಿ ಎಲ್ಇಡಿ ಡಿಸ್ಪ್ಲೇಯನ್ನು ಬಿಡುಗಡೆ ಮಾಡಲಿದೆ. ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಆ್ಯಪಲ್ನ ಸೂಪರ್ ಫಾಲೋವರ್ಸ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ ಟ್ವೀಟರ್‌ನಲ್ಲಿ ಪಾವತಿಸುವ ಸದಸ್ಯರಿಗೆ ಮಾತ್ರ ಈ ಮಾಹಿತಿ ಕಾಣಿಸುತ್ತದೆ.

ಮುಂದೆ ಓದಿ ...
  • Share this:

ಟೆಕ್ ದೈತ್ಯ ಆ್ಯಪಲ್ (Apple) ಸಂಸ್ಥೆಯು 2023 ರ ಮೊದಲ ತ್ರೈಮಾಸಿಕದಲ್ಲಿ ಮಿನಿ ಎಲ್ಇಡಿ (Mini LED) ಬ್ಯಾಕ್‌ಲೈಟಿಂಗ್‌ನೊಂದಿಗೆ ಹೊಸ 27-ಇಂಚಿನ ಡಿಸ್ಪ್ಲೇಯನ್ನು ಬಿಡುಗಡೆ ಮಾಡಲಿದೆ ಎಂದು ಹೊಸ ವರದಿಯೊಂದು ಹೇಳಿದೆ. ಆ್ಯಪಲ್ ಸಂಸ್ಥೆಯು "ಕೈಗೆಟುಕುವ" ಮತ್ತು ಕಡಿಮೆ ಬೆಲೆಯಲ್ಲಿ ಸ್ಟುಡಿಯೋ ಡಿಸ್ಪ್ಲೇಯನ್ನು (Studio Display) ಬಿಡುಗಡೆ ಮಾಡಲಿದ್ದೇವೆ ಎಂದು ಬಹಿರಂಗಪಡಿಸಿದಾಗಿನಿಂದ ಪ್ರೋ-ಲೆವೆಲ್ ಡಿಸ್ಪ್ಲೇಯ ವದಂತಿಗಳು ಎಲ್ಲೆಡೆ ಹರಡಿವೆ. ಇದು HDR, ProMotion ಅನ್ನು ಹೊಂದಿಲ್ಲ. ಆದರೆ ಆ್ಯಪಲ್ನ MacBook Pros ಮತ್ತು 12.9-inch iPad Pro ಗಳು ಮಿನಿ LED ಬ್ಯಾಕ್ಲೈಟಿಂಗ್ ಅನ್ನು ಹೊಂದಿವೆ ಮತ್ತು 24 Hz ನಿಂದ 120 Hz ವರೆಗಿನ ಡೈನಾಮಿಕ್ ಸ್ಕ್ರೀನ್ ರಿಫ್ರೆಶ್ ದರವನ್ನು ಹೊಂದಿರುತ್ತದೆ ಎಂದು AppleInsider ವರದಿ ಮಾಡಿದೆ.


27-ಇಂಚಿನ ಮಿನಿ ಎಲ್ಇಡಿ ಡಿಸ್ಪ್ಲೇ
ಡಿಸ್ಪ್ಲೇ ಸಪ್ಲೈ ಚೈನ್ ಕನ್ಸಲ್ಟೆಂಟ್ಸ್ ವಿಶ್ಲೇಷಕ ರಾಸ್ ಯಂಗ್ ಪ್ರಕಾರ, ಆ್ಯಪಲ್ ಸಂಸ್ಥೆಯು 2023ರ ಆರಂಭದಲ್ಲಿ 27-ಇಂಚಿನ ಮಿನಿ ಎಲ್ಇಡಿ ಡಿಸ್ಪ್ಲೇಯನ್ನು ಬಿಡುಗಡೆ ಮಾಡಲಿದೆ. ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಆ್ಯಪಲ್ನ ಸೂಪರ್ ಫಾಲೋವರ್ಸ್‌ಗಳೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ ಟ್ವೀಟರ್‌ನಲ್ಲಿ ಪಾವತಿಸುವ ಸದಸ್ಯರಿಗೆ ಮಾತ್ರ ಈ ಮಾಹಿತಿ ಕಾಣಿಸುತ್ತದೆ.


ಆ್ಯಪಲ್ ಈಗಾಗಲೇ 6K ಡಿಸ್ಪ್ಲೇಯೊಂದಿಗೆ ಉನ್ನತ-ಮಟ್ಟದ ಪ್ರೊ ಡಿಸ್ಪ್ಲೇ XDR ಅನ್ನು ಮಾರಾಟ ಮಾಡುತ್ತಿದೆ. ಆದರೆ ಇದು ಇತರ ಆ್ಯಪಲ್ ಉತ್ಪನ್ನಗಳಲ್ಲಿ ಕಂಡುಬರುವ ಇತ್ತೀಚಿನ ಪ್ರೊ-ಗ್ರೇಡ್ ವೈಶಿಷ್ಟ್ಯಗಳನ್ನು ಹೊಂದಿಲ್ಲ. ಈ ಡಿಸ್ಪ್ಲೇಯಲ್ಲಿ ಬಣ್ಣದ ನಿಖರತೆಯು ಅತ್ಯಂತ ಸ್ಪಷ್ಟವಾಗಿದೆ ಇದರಿಂದ ದುಬಾರಿ ಮಾನಿಟರ್‌ಗಳ ಅಗತ್ಯವಿರುವ ವೃತ್ತಿಪರರಿಗೆ ಈ ಡಿಸ್ಪ್ಲೇಯು ಅತ್ಯಂತ ಉಪಯುಕ್ತವಾದ ಸಾಧನವೆಂದು ಟೆಕ್‌ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.


ಇದನ್ನೂ ಓದಿ: Flipkart: ಕೇವಲ 800 ರೂಪಾಯಿಗೆ ಖರೀದಿಸಿ ರೆಡ್​ಮಿ ಕಂಪನಿಯ ಈ ಸ್ಮಾರ್ಟ್​ಫೋನ್​!


27-ಇಂಚಿನ ಮಿನಿ ಎಲ್ಇಡಿ-ಬ್ಯಾಕ್ಲಿಟ್ ಡಿಸ್ಪ್ಲೇ ಸಾಧನವು ಆ್ಯಪಲ್ನ ಇತರ ಪ್ರಸ್ತುತ ಮಾನಿಟರ್‌ಗಳ ನಡುವಿನ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸೆಲ್ಯುಲಾರ್ ಸೇವೆಯನ್ನು ಹೊಂದಿರುವ ಆ್ಯಪಲ್ ಐಪ್ಯಾಡ್‌ಗಳ ಬಳಕೆದಾರರು ಈಗ ತಮ್ಮ ಟ್ಯಾಬ್ಲೆಟ್‌ಗಾಗಿ ಡೇಟಾ ಯೋಜನೆಯನ್ನು ಸಕ್ರಿಯಗೊಳಿಸಲು eSIM ಅಥವಾ ಹೊಸ ಭೌತಿಕ ಸಿಮ್ ಕಾರ್ಡ್ ಅನ್ನು ಬಳಸಬೇಕು. ಆದ್ದರಿಂದ ಬಳಕೆದಾರರು ಇನ್ನು ಮುಂದೆ ತಮ್ಮ ಸಾಧನದೊಂದಿಗೆ ಬರುವ ಆ್ಯಪಲ್ ಸಿಮ್ ಅನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.


ಟೆಕ್‌ ದೈತ್ಯ ಆ್ಯಪಲ್ ಸಂಸ್ಥೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಆ್ಯಪಲ್, ಅಮೇರಿಕಾದ ಒಂದು ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ. ಇದು ಗ್ರಾಹಕರಿಗೆ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಫ್ಟ್ವೇರ್, ಮತ್ತು ಆನ್ಲೈನ್ ಸೇವೆಗಳನ್ನು ಒದಗಿಸುತ್ತದೆ. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಅಮೇರಿಕಾದ ಕ್ಯುಪರ್ಟಿನೋದಲ್ಲಿದೆ.


ಹಿನ್ನೆಲೆ
ಆ್ಯಪಲ್ ಸಂಸ್ಥೆಯನ್ನು ಏಪ್ರಿಲ್ 1976 ರಲ್ಲಿ ಸ್ಟೀವ್ ಜಾಬ್ಸ್, ಸ್ಟೀವ್ ವೋಜ್ನಿಯಾಕ್, ಮತ್ತು ರೋನಾಲ್ಡ್ ವೇಯ್ನ್ ರವರು ಸ್ಥಾಪಿಸಿದರು. ಇದರ ಉದ್ದೇಶ ಕಂಪ್ಯೂಟರ್‌ಗಳ ಅಭಿವೃದ್ಧಿ ಮತ್ತು ಮಾರಾಟ ಮಾಡುವುದಾಗಿತ್ತು. ಜನವರಿ 1977 ರಲ್ಲಿ ಆ್ಯಪಲ್​ ಕಂಪ್ಯೂಟರ್, ಇಂಕ್ ಜೊತೆ ಕೈ ಜೋಡಿಸಿತು. ಜನವರಿ 2007 ರಲ್ಲಿ ಆ್ಯಪಲ್ ಇಂಕ್ ಎಂದು ಮರುನಾಮಕರಣ ಮಾಡಲಾಯಿತು.


ಇದರ ಉತ್ಪನ್ನಗಳು


  • ಐಫೋನ್ ಸ್ಮಾರ್ಟ್ ಫೋನ್,

  • ಐಪ್ಯಾಡ್ ಟ್ಯಾಬ್ಲೆಟ್ ಕಂಪ್ಯೂಟರ್,

  • ಮ್ಯಾಕ್ ವೈಯಕ್ತಿಕ ಕಂಪ್ಯೂಟರ್,

  • ಐಪಾಡ್ ಪೋರ್ಟಬಲ್ ಮೀಡಿಯಾ ಪ್ಲೇಯರ್,

  • ಆ್ಯಪಲ್ ವಾಚ್ . .

  • ಆ್ಯಪಲ್ ಡಿಜಿಟಲ್ ಟಿವಿ ಮೀಡಿಯಾ ಪ್ಲೇಯರ್


ಆ್ಯಪಲ್ ಸಾಫ್ಟ್ವೇರ್, ಮ್ಯಾಕ್ ಓಸ್ ಮತ್ತು ಐಒಎಸ್ ಹೀಗಿವೆ

  • ಐಟ್ಯೂನ್ಸ್ ಮೀಡಿಯಾ ಪ್ಲೇಯರ್,

  • ಸಫಾರಿ ವೆಬ್ ಬ್ರೌಸರ್, ಮತ್ತು

  • ಐಲೈಫ್ ಮತ್ತು ಐವರ್ಕ್


ಇದನ್ನೂ ಓದಿ:  Google Update: ಗೂಗಲ್ ಪರಿಚಯಿಸಿದ 9 ಹೊಸ ಫೀಚರ್ಸ್ ಇಲ್ಲಿದೆ ನೋಡಿ


ಆನ್ಲೈನ್ ಸೇವೆಗಳು


  • ಐಟ್ಯೂನ್ಸ್,

  • ಐಒಎಸ್ ಆಪ್ ಸ್ಟೋರ್

  • ಮ್ಯಾಕ್ ಆಪ್ ಸ್ಟೋರ್,

  • ಆಪಲ್ ಸಂಗೀತ,

  • ಐಕ್ಲೌಡ್

Published by:Ashwini Prabhu
First published: