ಭಾರತದ ಟಾಟಾ ಗ್ರೂಪ್ (TaTa Group) ಕನಿಷ್ಠ 20 ಬ್ಯೂಟಿ ಟೆಕ್ ಸ್ಟೋರ್ಗಳನ್ನು ತೆರೆಯುವ ಯೋಜನೆಯನ್ನು ಹೊಂದಿದ್ದು, ಪ್ರೀಮಿಯಂ ಕಾಸ್ಮೆಟಿಕ್ ಉತ್ಪನ್ನಗಳನ್ನು ಖರೀದಿಸಲು ಯುವ ಹಾಗೂ ಶ್ರೀಮಂತ ಖರೀದಿದಾರರಿಗೆ ಅನುಕೂಲಕರವಾಗುವಂತೆ ವರ್ಚುವಲ್ ಮೇಕಪ್ ಸ್ಟಾಲ್ಗಳು ಮತ್ತು ಡಿಜಿಟಲ್ ಸ್ಕಿನ್ ಟೆಸ್ಟ್ಗಳಂತಹ ಯೋಜನೆಗಳನ್ನು ತನ್ನ ಸ್ಟೋರ್ಗಳಲ್ಲಿ (Store) ಬಳಸಲಿದೆ ಎಂದು ಕಂಪನಿಯ (Company) ವಕ್ತಾರರು ತಿಳಿಸಿದ್ದಾರೆ. ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ $16 ಬಿಲಿಯನ್ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಮಾರುಕಟ್ಟೆಯ ಷೇರಿಗಾಗಿ LVMH ನ ಸೆಫೊರಾ ಮತ್ತು ದೇಶೀಯ ಪ್ರತಿಸ್ಪರ್ಧಿ ನೈಕಾಗೆ ಎದುರಾಗಿ ಕಾರುಗಳಿಂದ ಹಿಡಿದು ಆಭರಣಗಳವರೆಗೆ ಆಸಕ್ತಿ ಹೊಂದಿರುವ ಟಾಟಾದ ಈ ಯೋಜನೆಯು ಪ್ರಬಲ ಸ್ಪರ್ಧೆಯನ್ನೊಡ್ಡಲಿದೆ.
ದಾಖಲೆಯ ಪ್ರಕಾರ, ದಿ ಹೋನೆಸ್ಟ್ ಕಂಪನಿ, ಎಲ್ಲಿಸ್ ಬ್ರೂಕ್ಲಿನ್ ಮತ್ತು ಗ್ಯಾಲಿನೀ ಎಂದು ಪಟ್ಟಿ ಮಾಡಿರುವ ಎಸ್ಟೀ ಲಾಡರ್ನ M.A.C ಮತ್ತು ಬಾಬ್ಬಿ ಬ್ರೌನ್ನಂತಹ ವಿದೇಶಿ ಬ್ರ್ಯಾಂಡ್ಗಳನ್ನು ಖರೀದಿಸಲು ಇಷ್ಟಪಡುವ 18 ಮತ್ತು 45 ವರ್ಷ ವಯಸ್ಸಿನ ಸೌಂದರ್ಯ ಉತ್ಸಾಹಿ ಗ್ರಾಹಕರತ್ತ ಟಾಟಾ ಸಂಸ್ಥೆ ಚಿತ್ತ ನೆಟ್ಟಿದೆ. ಹೊಸ ಮಳಿಗೆಗಳಿಗೆ ವಿಶೇಷ ಉತ್ಪನ್ನಗಳನ್ನು ಪೂರೈಸಲು ಟಾಟಾ ಎರಡು ಡಜನ್ಗಿಂತಲೂ ಹೆಚ್ಚು ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಉನ್ನತ ಬ್ರ್ಯಾಂಡ್ಗಳೊಂದಿಗೆ ಒಪ್ಪಂದ
ಟಾಟಾ ತನ್ನ ಯೋಜಿತ ಸೌಂದರ್ಯ ಮಳಿಗೆಗಳು ಮತ್ತು ರಾಯಿಟರ್ಸ್ ವೀಕ್ಷಣೆ ನಡೆಸಿದ ದಾಖಲೆಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ದಿ ಹಾನೆಸ್ಟ್ ಕಂಪನಿಯ ಪ್ರತಿನಿಧಿಗಳು, ಎಲ್ಲಿಸ್ ಬ್ರೂಕ್ಲಿನ್ ಮತ್ತು ಗ್ಯಾಲಿನೀ ಸಂಸ್ಥೆಗಳೂ ಕೂಡ ರಾಯಿಟರ್ಸ್ ವಿನಂತಿಗಳಿಗೆ ಪ್ರತಿಕ್ರಿಯಿಸಲಿಲ್ಲ ಎಂಬುದು ತಿಳಿದು ಬಂದಿದೆ.
ಸ್ಟೋರ್ ತೆರೆಯುವ ಯೋಜನೆಗಳು ಇನ್ನೂ ಮಾತುಕತೆಯ ಹಂತದಲ್ಲಿದೆ ಎಂದು ಟಾಟಾದ ಬ್ಯೂಟಿ ಶಾಪಿಂಗ್ ಅಪ್ಲಿಕೇಶನ್ ಟಾಟಾ ಕ್ಲಿಕ್ ಪ್ಯಾಲೆಟ್ ಮಾಹಿತಿ ಬಿಡುಗಡೆ ಮಾಡಿದೆ. ಕಂಪನಿಯು ಈಗಾಗಲೇ ಭಾರತದಲ್ಲಿ ವೈಯಕ್ತಿಕವಾಗಿ ರಿಟೇಲ್ ಬ್ಯುಸಿನೆಸ್ನಲ್ಲಿ ನಿರತವಾಗಿದ್ದು, ಜಾಗತಿಕ ಬ್ರ್ಯಾಂಡ್ಗಳಾದ ಜಾರಾ ಮತ್ತು ಸ್ಟಾರ್ಬಕ್ಸ್ನೊಂದಿಗೆ ಜಂಟಿ ಸಹಭಾಗಿತ್ವವನ್ನು ಹೊಂದಿದೆ.
ಇದನ್ನೂ ಓದಿ: ಮೋದಿ ಭೇಟಿಯ ಕೆಲವೇ ಗಂಟೆಗಳ ನಂತರ ಅತಿದೊಡ್ಡ ವೀಸಾ ಯೋಜನೆ ತೆರವುಗೊಳಿಸಿದ ಯುಕೆ!
ಟಾಟಾ ತಿಳಿಸಿರುವಂತೆ 70% ದಷ್ಟು ಉತ್ಪನ್ನಗಳು ತ್ವಚೆಯ ಆರೈಕೆ ಹಾಗೂ ಮೇಕಪ್ ಉತ್ಪನ್ನಗಳನ್ನು ಒಳಗೊಂಡಿದ್ದು, ಟಾಟಾ ಕ್ಲಿಕ್ ಪ್ಯಾಲೆಟ್ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರತವಾಗುವ ಉದ್ದೇಶವನ್ನು ಹೊಂದಿದೆ.
ಇನ್ನಷ್ಟು ಮೂಲಗಳ ಪ್ರಕಾರ, ಗ್ರಾಹಕರಿಗೆ ಯಾವ ಉತ್ಪನ್ನಗಳು ಹೊಂದಿಕೆಯಾಗುತ್ತವೆ ಎಂಬುದನ್ನು ಪತ್ತೆಹಚ್ಚಲು ನೆರವಾಗುವಂತೆ ಡಜನ್ಗಟ್ಟಲೆ ಲಿಪ್ಸ್ಟಿಕ್ ಶೇಡ್ಗಳನ್ನು ಬಳಸಲು ಹಾಗೂ ಡಿಜಿಟಲ್ ಸ್ಕ್ರೀನ್ ಟೆಸ್ಟ್ಗೆ ಒಳಗಾಗಲು ಅನುಕೂಲಕರವಾಗಿರುವಂತಹ ತಂತ್ರಜ್ಞಾನವನ್ನು ಸ್ಥಾಪಿಸಲು ಟಾಟಾ ಯೋಜಿಸುತ್ತಿದೆ.
ಹೊಸ ಪರಿಕಲ್ಪನೆ
ಟಾಟಾ ಪ್ರಸ್ತುತಪಡಿಸಲು ನಿರ್ಧರಿಸಿರುವ ತಂತ್ರಜ್ಞಾನವು ಹೊಸದಲ್ಲ ಬದಲಿಗೆ ಪ್ರಪಂಚದ ಇತರ ಸೌಂದರ್ಯ ರಿಟೇಲ್ ವ್ಯಾಪಾರಿಗಳು ಬಳಸುತ್ತಿರುವ ತಂತ್ರಜ್ಞಾನವಾಗಿದೆ. ಆದರೆ ಉದ್ಯಮ ತಜ್ಞರು ತಿಳಿಸಿರುವಂತೆ ಅನುಭವಿ ರಿಟೇಲ್ ಎಂದು ಉಲ್ಲೇಖಿಸಿರುವ ಈ ತಂತ್ರಜ್ಞಾನವು ಭಾರತದ ಮಾಲ್ಗಳು ಹಾಗೂ ಉನ್ನತ ಬೀದಿ ಬದಿಯ ಶ್ರೀಮಂತ ಅಂಗಡಿಗಳಲ್ಲಿ ಇನ್ನೂ ಹೊಸ ಪರಿಕಲ್ಪನೆಯಾಗಿದೆ ಎಂದಾಗಿದೆ.
ಭಾರತದ ಆರ್ಥಿಕತೆಯು ಬೆಳೆದಂತೆ ಮತ್ತು ಕರೋನವೈರಸ್ ಲಾಕ್ಡೌನ್ಗಳ ನಂತರ ಜನರು ಶಾಪಿಂಗ್ ಶಾಪ್ಗಳಿಗೆ ಮರಳುತ್ತಿರುವಾಗ, ಟಾಟಾ ಆರಾಮದಾಯಕ ಪರಿಸರದಲ್ಲಿ ಶಾಪಿಂಗ್ ಮಾಡಲು ಇಷ್ಟಪಡುವ ಮತ್ತು ಪ್ರೀಮಿಯಂ ಅಂತರಾಷ್ಟ್ರೀಯ ಬ್ರ್ಯಾಂಡ್ಗಳಿಗೆ ಮೂಲ ಬೆಲೆಯನ್ನು ಪಾವತಿಸಲು ಸಿದ್ಧರಿರುವ ಯುವ ಮತ್ತು ಶ್ರೀಮಂತ ಗ್ರಾಹಕರನ್ನು ಉದ್ದೇಶಿಸಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಇನ್ನು ಈ ಕ್ಷೇತ್ರದಲ್ಲಿ ಟಾಟಾ ಸೆಫೊರಾ, ರಿಲಯನ್ಸ್ ಮೊದಲಾದ ಸಂಸ್ಥೆಗಳಿಂದ ಪ್ರಬಲ ಸ್ಪರ್ಧೆಯನ್ನು ಎದುರಿಸುತ್ತಿದೆ.
ಭವಿಷ್ಯದಲ್ಲಿ ಎದುರಾಗುವ ತೊಂದರೆಗಳು
ಟಾಟಾದ ಮೊದಲ "ಬ್ಯೂಟಿ ಟೆಕ್" ಸ್ಟೋರ್ ಮಾರ್ಚ್ನೊಳಗೆ ತೆರೆಯುವ ಸಾಧ್ಯತೆಯಿದೆ, ಮುಂದಿನ ಆರ್ಥಿಕ ವರ್ಷದಲ್ಲಿ ಸಂಸ್ಥೆ 40 ಸ್ಟೋರ್ಗಳನ್ನು ತೆರೆಯುವ ಸಾಧ್ಯತೆ ಇದ್ದು ದೊಡ್ಡ ನಗರಗಳನ್ನು ಉದ್ದೇಶಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅದಾಗ್ಯೂ ದುಬಾರಿ ಮಾಲ್ಗಳ ಮಾಲೀಕರ ಮನವೊಲಿಸಲು ಟಾಟಾ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ ಎಂಬುದು ತಿಳಿದು ಬಂದಿದೆ. ಜಿಯೋಫೆನ್ಸಿಂಗ್ ತಂತ್ರಜ್ಞಾನವನ್ನು ಟಾಟಾ ಬಳಸುವ ನಿರ್ಧಾರದಲ್ಲಿದ್ದು, ಈ ತಂತ್ರಜ್ಞಾನವು, ಸಂಸ್ಥೆಯ ಅಪ್ಲಿಕೇಶನ್ ಅನ್ನು ಗ್ರಾಹಕರು ಬಳಸಿದಾಗ ಇದು ಅವರಿಗೆ ಶಾಪಿಂಗ್ ಉತ್ಪನ್ನಗಳನ್ನು ಪತ್ತೆಹಚ್ಚಲು ಅಂತೆಯೇ ಶಾಪಿಂಗ್ ಇತಿಹಾಸ ಹಾಗೂ ವಿಶ್ ಲಿಸ್ಟ್ಗಳನ್ನು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ವರದಿ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ