Tata Tigor EV: ಎಲೆಕ್ಟ್ರಿಕ್ ವಾಹನಗಳ ಶ್ರೇಣಿಗೆ ಮತ್ತೊಂದು ಟಾಟಾ ಕಾರ್ ಸೇರ್ಪಡೆ, 5.7 ಸೆಕೆಂಡ್​ಗಳಲ್ಲೇ 60 ಕಿಮೀ ಸ್ಪೀಡ್​ ಪಿಕಪ್, ಹೊಸಾ ಕಾರ್​ ಬಗ್ಗೆ ಫುಲ್ ಡೀಟೆಲ್ಸ್ ಇಲ್ಲಿದೆ

Tata Tigor EV: ಇದು ಸಮರ್ಥ ಜಿಪ್ಟ್ರಾನ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತದೆ. ತಾಂತ್ರಿಕವಾಗಿ ಮುಂದುವರಿದ, ಆರಾಮದಾಯಕ ಮತ್ತು ಸುರಕ್ಷತಾ ಮಾನದಂಡಗಳ ಉನ್ನತ ವಾಹನವನ್ನು ಹೊಂದಲು ಬಯಸುವ ಎಲ್ಲಾ ಸೆಡಾನ್ ಖರೀದಿದಾರರಿಗೆ Tigor EV ಒಂದು ಪರಿಪೂರ್ಣ ಆಯ್ಕೆ. ಪರಿಸರ ಸ್ನೇಹಿ ಪ್ರಯಾಣವೂ ಆಗಿದ್ದು, ಖರೀದಿದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಟಾಟಾ ಟಿಗೋರ್ ಇವಿ

ಟಾಟಾ ಟಿಗೋರ್ ಇವಿ

  • Share this:
ಬೆಂಗಳೂರು: ಟಾಟಾ ಮೋಟಾರ್ಸ್ Tigor EV ಬಿಡುಗಡೆಯೊಂದಿಗೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಟಾಟಾ ಸಂಸ್ಥೆ ದೊಡ್ಡ ಹೆಜ್ಜೆ ಇಟ್ಟಿದೆ. Tigor EV ವಿತರಣೆಗಳು ಈಗ ವೈಯಕ್ತಿಕ ವಿಭಾಗದಲ್ಲಿ ಆರಂಭವಾಗುತ್ತಿವೆ. ಅದರ ICE (ಆಂತರಿಕ ದಹನಕಾರಿ ಎಂಜಿನ್) ಸೋದರರ ಹೆಜ್ಜೆಯನ್ನು ಅನುಸರಿಸಿ, Tigor Electric Vehicle ಕೂಡ ಪ್ರೌಢ (17.00 ರಲ್ಲಿ 12.00 ಅಂಕಗಳು) ಮತ್ತು  (49.00 ರಲ್ಲಿ 37.24 ಅಂಕಗಳು) 4 ಸ್ಟಾರ್ ರೇಟಿಂಗ್‌ನೊಂದಿಗೆ GNCAP ನಿಂದ ಪ್ರಶಂಸಿಸಲ್ಪಟ್ಟಿದೆ. ವಿದ್ಯುತ್ ಚಲನಶೀಲತೆಯ ಕ್ರಿಯಾತ್ಮಕ ಜಗತ್ತಿನಲ್ಲಿ ಹೊಸ ಔನ್ನತ್ಯವನ್ನು ಅಳೆಯಲು ಸಜ್ಜಾಗಿರುವ Tigor EV ಟಾಟಾ ಮೋಟಾರಿನ ಸ್ವಾಮ್ಯದ ಅಧಿಕ ವೋಲ್ಟೇಜ್ EV ಸಂರಚನೆ, ಜಿಪ್ಟ್ರಾನ್ ಅನ್ನು ಒಳಗೊಂಡಿದೆ ಮತ್ತು ಇದನ್ನು ತಂತ್ರಜ್ಞಾನ, ಸೌಕರ್ಯ ಮತ್ತು ಸುರಕ್ಷತೆಯ ಮೂರು ಬಲವಾದ ಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. 

Price chart (Ex-showroom – One nation, one price):Tigor EV XE 11.99 LakhsTigor EV XM 12.49 LakhsTigor EV XZ+ 12.99 Lakhs; (Dual Tone option - 13.14 Lakhs)

ಟಾಟಾ ಮೋಟಾರ್ಸ್ ಪ್ರಕಾರ "ಗ್ರಾಹಕರ ಸೌಕರ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ EVಗಳು ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿವೆ.  ಮತ್ತು ಪರಿಸರ ಸ್ನೇಹಿ ಪರಿಹಾರಗಳಿಗೆ ಆದ್ಯತೆ ಹೆಚ್ಚುತ್ತಿದೆ. ಇದನ್ನು ನಮ್ಮದೇ Nexon EV ಈಗಾಗಲೇ ನೀಡಿದೆ. ಇದು ಇಂದು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ EV ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುತ್ತಿರುವ ಬೆಂಬಲ, ಸಬ್ಸಿಡಿಗಳನ್ನು ಒದಗಿಸುವುದು ಮತ್ತು EVಗಳು ಬೆಳೆಯಲು ಅನುಕೂಲಕರ ವಾತಾವರಣವನ್ನು ಒದಗಿಸುವುದು, ನಮ್ಮ ಇವಿ ಕೊಡುಗೆಗಳನ್ನು ನಮ್ಮ ಗ್ರಾಹಕರಿಗೆ ವಿಸ್ತರಿಸಲು ನಮಗೆ ಸ್ಫೂರ್ತಿ ನೀಡುತ್ತದೆ.

ಇದು ಸಮರ್ಥ ಜಿಪ್ಟ್ರಾನ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುತ್ತದೆ. ತಾಂತ್ರಿಕವಾಗಿ ಮುಂದುವರಿದ, ಆರಾಮದಾಯಕ ಮತ್ತು ಸುರಕ್ಷತಾ ಮಾನದಂಡಗಳ ಉನ್ನತ ವಾಹನವನ್ನು ಹೊಂದಲು ಬಯಸುವ ಎಲ್ಲಾ ಸೆಡಾನ್ ಖರೀದಿದಾರರಿಗೆ Tigor EV ಒಂದು ಪರಿಪೂರ್ಣ ಆಯ್ಕೆ. ಪರಿಸರ ಸ್ನೇಹಿ ಪ್ರಯಾಣವೂ ಆಗಿದ್ದು, ಖರೀದಿದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: Maruti Suzuki Price Hike: ಸೆಪ್ಟೆಂಬರ್ ತಿಂಗಳಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ, ಯಾವ ಕಾರ್ ರೇಟ್ ಎಷ್ಟು ಜಾಸ್ತಿ? ಫುಲ್ ಡೀಟೆಲ್ಸ್

70% ಮಾರುಕಟ್ಟೆ ಪಾಲುದಾರಿಕೆಯೊಂದಿಗೆ ಪ್ರಸ್ತುತ ಎಲೆಕ್ಟ್ರಿಕ್ ವಾಹನ ವೈಯಕ್ತಿಕ ವಿಭಾಗದ ಮಾರುಕಟ್ಟೆಯನ್ನು ಮುನ್ನಡೆಸುತ್ತಿರುವ ಟಾಟಾ ಮೋಟಾರು, ಎಲ್ಲಾ ಹೊಸ Tigor EV  ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಕೊಡುಗೆಗಳನ್ನು ಎಲ್ಲರಿಗೂ ಲಭ್ಯವಾಗಿಸುವುದನ್ನು ಪ್ರತಿಪಾದಿಸುತ್ತದೆ. ಸೂಕ್ತ ಶ್ರೇಣಿಯನ್ನು ಒದಗಿಸುತ್ತಾ, ಹೊಸ Tigor EV ಯು 306 ಕಿಮೀಗಳ ವಿಸ್ತೃತ ARAI ಪ್ರಮಾಣಿತ ಶ್ರೇಣಿಯನ್ನು ಹೊಂದಿದೆ (ಪ್ರಮಾಣಿತ ಪರೀಕ್ಷಾ ಪರಿಸ್ಥಿತಿಗಳಲ್ಲಿ), ಇದು ವೈಯಕ್ತಿಕ ಪ್ರಯಾಣಕ್ಕೆ ಹೆಚ್ಚು ಅಪೇಕ್ಷಣೀಯವಾಗಿದೆ.

ಅತ್ಯದ್ಭುತ ವಿನ್ಯಾಸ, ಸೌಕರ್ಯ ಮತ್ತು ರೋಮಾಂಚಕ ಕಾರ್ಯಕ್ಷಮತೆಯೊಂದಿಗೆ ವರ್ಗದ ಪ್ರಮುಖ ಸುರಕ್ಷತೆಯೊಂದಿಗೆ ಸಜ್ಜಿತವಾದ Tigor EV ಯು 55 ಕಿಲೋವ್ಯಾಟ್ ಗರಿಷ್ಠ ಪವರ್ ಔಟ್ಪುಟ್ ಮತ್ತು 170 Nm ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ ಮತ್ತು 26-ಕಿಲೋವ್ಯಾಟ್ ಲಿಕ್ವಿಡ್ ಕೂಲ್ಡ್, ಹೈ ಎನರ್ಜಿ ಸಾಂದ್ರತೆಯ ಬ್ಯಾಟರಿ ಪ್ಯಾಕ್ ನಿಂದ ನಿಯಂತ್ರಿಸಲ್ಪಡುತ್ತದೆ. ಮತ್ತು IP 67 ರೇಟ್ ಮಾಡಲಾದ ಬ್ಯಾಟರಿ ಪ್ಯಾಕ್ ಮತ್ತು ಮೋಟಾರು ಹವಾಮಾನ ಮತ್ತು ವರಿ-ನಿರೋಧಕವಾಗಿಸುತ್ತದೆ.

ಇದನ್ನೂ ಓದಿ: Automatic Cars: 10 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಸ್ವಯಂಚಾಲಿತ ಕಾರುಗಳ ವಿವರ ಇಲ್ಲಿದೆ

ಟಾಟಾ ಮೋಟಾರು ಹೊಸ Tigor EV ಅನ್ನು ಮೂರು ರೂಪಾಂತರಗಳಲ್ಲಿ ನೀಡುತ್ತಿದೆ: XE, XM, XZ+ (XZ+ ಡ್ಯುಯಲ್ ಟೋನ್ ಆಯ್ಕೆ ಲಭ್ಯವಿದೆ), ಇದು EV ಮಾಲೀಕರಿಗೆ 8 ವರ್ಷ ಮತ್ತು 160,000 KM ಬ್ಯಾಟರಿ ಮತ್ತು ಮೋಟಾರ್ ವಾರೆಂಟಿ ಒದಗಿಸಲಿದೆ. ಇದಲ್ಲದೆ, ಇದು ಉತ್ತಮವಾದ ಚಾಲನಾ ಡೈನಾಮಿಕ್ಸ್ ಮತ್ತು ತೀಕ್ಷ್ಣವಾದ ನಿರ್ವಹಣೆ ನೀಡುತ್ತದೆ. ಇದರ ಇತರ ವೈಶಿಷ್ಟ್ಯಗಳಲ್ಲಿ ವಿದ್ಯುತ್ ಹೊಂದಾಣಿಕೆ ಮತ್ತು ಮಡಿಸಬಹುದಾದ ORVM ಗಳು, ಪುಶ್ ಬಟನ್ ಪ್ರಾರಂಭದೊಂದಿಗೆ ಸ್ಮಾರ್ಟ್ ಕೀ, ಪೋರ್ಟಬಲ್ ಚಾರ್ಜಿಂಗ್ ಕೇಬಲ್, ಇತ್ಯಾದಿಗಳು ಒಳಗೊಂಡಿದೆ.

Tigor EVಯ ಇಂಪ್ಯಾಕ್ಟ್ -ರೆಸಿಸ್ಟೆಂಟ್ ಬ್ಯಾಟರಿ ಪ್ಯಾಕ್ ಕೇಸಿಂಗ್ AIS - 048 ಸ್ಟ್ಯಾಂಡರ್ಡ್ ಪೆನಟ್ರೇಶನ್ ಗೆ ಅನುಗುಣವಾಗಿರುತ್ತದೆ. ರೇರ್ ಕ್ರ್ಯಾಶ್ ಸೂಟ್ ಸಂರಚನೆಯನ್ನು ಹೊಂದಿರುವ  ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಕಾರು ಜಾಗತಿಕವಾಗಿ ಸ್ವೀಕಾರಾರ್ಹವಾದ CCS2 ಚಾರ್ಜಿಂಗ್ ಪ್ರೋಟೋಕಾಲ್‌ಗೆ ಹೊಂದಿಕೊಳ್ಳುತ್ತದೆ. ಯಾವುದೇ 15 A ಪ್ಲಗ್ ಪಾಯಿಂಟ್‌ನಿಂದ ವೇಗವಾಗಿ ಚಾರ್ಜ್ ಮಾಡಬಹುದು ಮತ್ತು ನಿಧಾನವಾಗಿ ಚಾರ್ಜ್ ಮಾಡಬಹುದು. ಶಾಂತವಾದ ಕ್ಯಾಬಿನ್ ಜೊತೆಗೆ, ವಿಶಾಲವಾದ ಒಳಾಂಗಣಗಳು ಸಾಕಷ್ಟು ಹೆಡ್ ರೂಂ ಮತ್ತು ಲೆಗ್ ರೂಂ ಆರಾಮದಾಯಕ ಆಸನಗಳನ್ನು ಒಳಗೊಂಡು, Tigor EVಯು ಹಲವು ತಂತ್ರಜ್ಞಾನದಿಂದ ಕೂಡಿದೆ.

ಅದರ ಪವರ್‌ಟ್ರೇನ್, ಇನ್ಫೋಟೈನ್‌ಮೆಂಟ್, ಸಂಪರ್ಕ ಮತ್ತು ಚಾರ್ಜಿಂಗ್, ಎಲ್ಲಾ ಆರಾಮದಾಯಕ ಮತ್ತು ಸುಗಮ ಚಾಲನೆಯ ಭರವಸೆ ನೀಡುತ್ತದೆ. ರಿಮೋಟ್ ಕಮಾಂಡ್‌ಗಳು ಮತ್ತು ರಿಮೋಟ್ ಡಯಾಗ್ನೋಸ್ಟಿಕ್ಸ್ ಸೇರಿದಂತೆ 30+ ಸಂಪರ್ಕಿತ ಕಾರ್ ವೈಶಿಷ್ಟ್ಯಗಳೊಂದಿಗೆ,  ಟಾಟಾ Tigor EVಯು ವೇಗದ ಕೊಡುಗೆಯಾಗಿದೆ ಮತ್ತು ಇದರ ಇನ್ನೊಂದು ಲಾಭವೆಂದರೆ ಕೈಗೆಟುಕುವ ಬೆಲೆಯಾಗಿದೆ.
Published by:Soumya KN
First published: