Tata Tiago NRG: ಹೊಸಾ ರೂಪದೊಂದಿಗೆ ಬಂದಿದೆ ಟಿಯಾಗೊ, ಹೊಸಾ ಫೀಚರ್ಸ್ ಏನಿದೆ, ಬೆಲೆ ಎಷ್ಟು? ಫುಲ್ ಡೀಟೆಲ್ಸ್

Tata Tiago NRG: ರಫ್ ಅಂಡ್ ಟಫ್ ಆಗಿ ಬಳಸಬಲ್ಲ ಫ್ಯಾಮಿಲಿ ಕಾರ್​ನ ನೂತನ ಶ್ರೇಣಿ ಬಿಡುಗಡೆ ಮಾಡಿದೆ ಟಾಟಾ ಮೋಟಾರ್ಸ್. ಅತೀ ಹೆಚ್ಚು ಸುರಕ್ಷತೆ ಜೊತೆಗೆ ಸ್ಟೈಲಿಶ್ ಫೀಚರ್ಸ್ ಇರೋ ಟಾಟಾ ಟಿಯಾಗೊ ಎನ್​ಆರ್​ಜಿ ಬೆಲೆ, ಹೊಸಾ ವಿಶೇಷತೆ ಎಲ್ಲಾ ವಿವರ ಇಲ್ಲಿದೆ.

Tata Tiago NRG

Tata Tiago NRG

  • Share this:
ಬೆಂಗಳೂರು: ತನ್ನ 'ನ್ಯೂ ಫಾರೆವರ್' ಬ್ರಾಂಡ್ ಭರವಸೆಯನ್ನು ಉಳಿಸಿಕೊಂಡು, ಟಾಟಾ ಮೋಟಾರ್ಸ್ ಇಂದು ತನ್ನ ಹೊಸ ಟಿಯಾಗೊ Tata Tiago NRG ಅನ್ನು ಬಿಡುಗಡೆ ಮಾಡಿದೆ. ತನ್ನ ವಿಶಾಲ ಶ್ರೇಣಿಯ ಪೋರ್ಟ್ಫೋಲಿಯೊಗೆ ಮತ್ತೊಂದು ಅತ್ಯಾಕರ್ಷಕ ಉತ್ಪನ್ನವಾದ ಈ ವಾಹನವು ವಿಭಿನ್ನವಾಗಿ ಜೀವಿಸುವವರಿಗಾಗಿ ಎಚ್ಚರಿಕೆಯಿಂದ ರಚಿಸಲಾಗಿದೆ. 'ಅರ್ಬನ್ ಟಫ್‌ರೋಡರ್' ಆಗಿ ಸ್ಥಾನ ಪಡೆದಿರುವ ಟಿಯಾಗೊ NRG ಕೇವಲ SUV ಸ್ಫೂರ್ತಿಯ ವಿನ್ಯಾಸದೊಂದಿಗೆ ಕಲಾತ್ಮಕವಾಗಿ ವರ್ಧಿತವಾಗಿ, ಮಸಲರ್ ನೋಟವನ್ನು ನೀಡುವುದಲ್ಲದೇ ಕಠಿಣವಾದ ರಸ್ತೆಯಲ್ಲಿ ಒರಟಾಗಿ ಚಾಲನೆ ಮಾಡುವವರಿಗೆ ಕಾರ್ಯಕ್ಷಮತೆಯನ್ನು ನೀಡಲು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಮತ್ತಷ್ಟು ಟ್ಯೂನ್ ಮಾಡಲಾಗಿದೆ. GNCAP ನಿಂದ 4 ಸ್ಟಾರ್ ಸುರಕ್ಷತೆ ರೇಟಿಂಗ್ ಹೊಂದಿರುವ ಈ ವಾಹನವು 4 ಆಕರ್ಷಕ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ - ಫಾರೆಸ್ಟಾ ಗ್ರೀನ್, ಫೈರ್ ರೆಡ್, ಸ್ನೋ ವೈಟ್, ಕ್ಲೌಡಿ ಗ್ರೇ, ಮತ್ತು ಇಂದಿನಿಂದ ಶೋರೂಂಗಳಲ್ಲಿ INR. 6.57 lakhs, ಎಕ್ಸ್ ಶೋ ರೂಂ ದೆಹಲಿಯ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತದೆ.

NRGಯ ವಿಶಿಷ್ಟ ವಿನ್ಯಾಸ ಮತ್ತು ಸಾಮರ್ಥ್ಯಗಳ ಕುರಿತು ಶ್ರೀ ರಾಜನ್ ಅಂಬಾ, ಉಪಾಧ್ಯಕ್ಷರು, ಸೇಲ್ಸ್, ಮಾರ್ಕೆಟಿಂಗ್ ಮತ್ತು ಕಸ್ಟಮರ್ ಕೇರ್, ಪಿವಿಬಿಯು, ಟಾಟಾ ಮೋಟಾರ್ಸ್, ಪ್ರತಿಕ್ರಿಯಿಸುತ್ತಾ, "ನಮ್ಮ ಅತ್ಯಂತ ಪ್ರಿಯವಾದ ಹ್ಯಾಚ್‌ಬ್ಯಾಕ್, ಟಾಟಾ ಟಿಯಾಗೊದ ಈ ಅದ್ಭುತ ಆವೃತ್ತಿಯನ್ನು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ. ಅದರ ಹೆಸರಿನಂತೆಯೇ ನಿಜವಾಗಿಯೂ ಶಕ್ತಿಯುತವಾಗಿದೆ, SUV ಯಂತಹ ವಾಹನಗಳು ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿರುವ ಈ ಹೊತ್ತಿನಲ್ಲಿ NRG ಯು ಈ ಟ್ರೆಂಡ್ ಗೆ ಸರಿಯಾಗಿ ಹೊಂದುತ್ತಿದೆ.

ಇದನ್ನೂ ಓದಿ: Whatsapp: ಬೇರೆಯವರ ವಾಟ್ಸಪ್ ಸ್ಟೇಟಸ್​ನಲ್ಲಿ ಇರುವ ವಿಡಿಯೋ ಡೌನ್​ಲೋಡ್ ಮಾಡಬಹುದು, ಹೀಗೆ ಮಾಡಿ...

ಇದು ಹೊರಭಾಗದಲ್ಲಿ ಮಾತ್ರ ಪ್ರಬಲವಾಗಿಲ್ಲದೇ ಒಳಾಂಗಣದಲ್ಲಿಯೂ ವೈಶಿಷ್ಟ್ಯಪೂರ್ಣ ಮತ್ತು ಸ್ಟೈಲಿಶ್ ಆಗಿದೆ, ಮತ್ತು ಒರಟಾದ ಭೂಪ್ರದೇಶಗಳನ್ನು ಕ್ರಮಿಸಲು ವರ್ಧಿತ ಸಾಮರ್ಥ್ಯಗಳೊಂದಿಗೆ ಚಾಲನೆ ಮಾಡಲು ಸಂಪೂರ್ಣ ಮುದನೀಡಲಿದೆ. ಟಿಯಾಗೊ ಶ್ರೇಣಿಯನ್ನು ಕಿರೀಟವಾಗಿ, NRG ನಮ್ಮ ಸಂಸ್ಥೆಯ ಪ್ರಸಿದ್ಧಿಯನು ಹೆಚ್ಚಿಸಲು ಸಹಾಯ ಮಾಡುವುದನ್ನು ಮುಂದುವರಿಸುತ್ತದೆ. ನಮ್ಮ ಗ್ರಾಹಕರು ಹೊಸ ಟಿಯಾಗೊ NRGಯನ್ನು ಹಿಂದಿನಂತೆಯೇ ಮೆಚ್ಚುತ್ತಾರೆ ಎಂಬ ವಿಶ್ವಾಸ ನಮಗಿದೆ.” ಎಂದು ಹೇಳಿದರು.

ಟಿಯಾಗೊ ಕಾರುಗಳು ಈಗಾಗಲೇ ಫ್ಯಾಮಿಲಿ ಕಾರ್​ಗಳಾಗಿವೆ. ಸಣ್ಣ ಕುಟುಂಬಗಳಿಗೆ ಸುರಕ್ಷತೆ ಜೊತೆಗೆ ಮೈಲೇಜ್ ಕೊಡುವ ಉತ್ತಮ ಆಯ್ಕೆಯಾಗಿ ಪ್ರಸಿದ್ಧವಾಗಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಕಾರುಗಳಲ್ಲಿ ಟಾಟಾ ಸಂಸ್ಥೆಯ ಟಿಯಾಗೊ ಮತ್ತು ನೆಕ್ಸಾನ್ ಕಾರುಗಳು ಅತೀ ಹೆಚ್ಚು ಸುರಕ್ಷಿತವಾಗಿವೆ ಎಂದು ದೃಢೀಕರಿಸಲ್ಪಟ್ಟಿವೆ. ಹಾಗಾಗಿ ಟಿಯಾಗೊ ಮತ್ತಷ್ಟು ಹೊಸಾ ಫೀಚರ್ಸ್​ನೊಂದಿಗೆ ಬಂದಿರುವುದು ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಅವಕಾಶ ನೀಡಿದಂತಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: