• Home
 • »
 • News
 • »
 • tech
 • »
 • ಟಾಟಾ ಸ್ಕೈ ಬಂಪರ್ ಆಫರ್: 2 ತಿಂಗಳು ಉಚಿತವಾಗಿ ಚಾನೆಲ್ ವೀಕ್ಷಿಸಲು ಹೀಗೆ ಮಾಡಿ

ಟಾಟಾ ಸ್ಕೈ ಬಂಪರ್ ಆಫರ್: 2 ತಿಂಗಳು ಉಚಿತವಾಗಿ ಚಾನೆಲ್ ವೀಕ್ಷಿಸಲು ಹೀಗೆ ಮಾಡಿ

TATA SKY

TATA SKY

ಬಳಕೆದಾರರು ಎರಡು ತಿಂಗಳ ಕ್ಯಾಶ್‌ಬ್ಯಾಕ್ ಯೋಜನೆಯಲ್ಲಿ ರಿಚಾರ್ಜ್ ಮಾಡಿದ್ರೆ, ಮೊದಲ ತಿಂಗಳ ಕ್ಯಾಶ್‌ಬ್ಯಾಕ್ ಮೊತ್ತವನ್ನು 48 ಗಂಟೆಗಳೊಳಗೆ ಮರು ಪಾವತಿ ಮಾಡಲಾಗುತ್ತದೆ.

 • Share this:

  ಪ್ರಸಿದ್ಧ ಡಿಟಿಹೆಚ್ ಕಂಪೆನಿ ಟಾಟಾ ಸ್ಕೈ ತನ್ನ ಬಳಕೆದಾರರಿಗೆ ಭರ್ಜರಿ ಆಫರ್ ಒದಗಿಸಿದ್ದು, ಈ ಆಫರ್ ಅಡಿಯಲ್ಲಿ 2 ತಿಂಗಳು ಉಚಿತವಾಗಿ ಟಿವಿ ವೀಕ್ಷಿಸಬಹುದು. ಇದಕ್ಕಾಗಿ ಬಳಕೆದಾರರು ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ 6 ಅಥವಾ 12 ತಿಂಗಳ ರೀಚಾರ್ಜ್ ಮಾಡಬೇಕು. ಈ ಕೊಡುಗೆಯಲ್ಲಿ ಕಂಪನಿಯು ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಈ ಟಾಟಾ ಸ್ಕೈ ಕೊಡುಗೆಯ ಲಾಭ ಪಡೆಯಲು, ಬಳಕೆದಾರರು ಅಕ್ಟೋಬರ್ 31 ರೊಳಗೆ ತಮ್ಮ ಟಿವಿಯನ್ನು ರೀಚಾರ್ಜ್ ಮಾಡಬೇಕಾಗುತ್ತದೆ.


  ಟಾಟಾ ಸ್ಕೈ ಕಂಪನಿಯ ಕ್ಯಾಶ್​ಬ್ಯಾಕ್ ಆಫರ್ ಅಡಿಯಲ್ಲಿ 12 ತಿಂಗಳ ಚಂದಾದಾರಿಕೆಯಲ್ಲಿ 2 ತಿಂಗಳ ಹಣವನ್ನು ಮರು ಪಾವತಿಸಲಿದ್ದು, ಹಾಗೆಯೇ 6 ತಿಂಗಳ ಚಂದಾದಾರಿಕೆ ಪಡೆದರೆ ಒಂದು ತಿಂಗಳ ರಿಚಾರ್ಜ್ ಮೊತ್ತ ಮರಳಿ ಸಿಗಲಿದೆ. ಅಂದರೆ ನೀವು 10 ತಿಂಗಳ ರಿಚಾರ್ಜ್ ಮೊತ್ತದಲ್ಲಿ ಒಂದು ವರ್ಷ ಚಾನೆಲ್ ವೀಕ್ಷಿಸಬಹುದು. ಹಾಗೆಯೇ 5 ತಿಂಗಳ ರಿಚಾರ್ಜ್​ನಲ್ಲಿ 1 ತಿಂಗಳು ಉಚಿತವಾಗಿ ಚಾನೆಲ್ ನೋಡಬಹುದಾಗಿದೆ.


  ಈ ಆಫರ್ ಅಕ್ಟೋಬರ್ 31 ರವರೆಗೆ ಇರಲಿದ್ದು, ರಿಚಾರ್ಜ್ ಮಾಡಿದ 7 ದಿನಗಳಲ್ಲಿ ಕ್ಯಾಶ್​ಬ್ಯಾಕ್ ನೀಡಲಾಗುತ್ತದೆ. ಕಂಪನಿಯ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಿಂದ ರಿಚಾರ್ಜ್ ಮಾಡಿದ ನಂತರ ಮಾತ್ರ ಈ ಕೊಡುಗೆಯ ಲಾಭ ಲಭ್ಯವಿರುತ್ತದೆ. ಬಳಕೆದಾರರು ಎರಡು ತಿಂಗಳ ಕ್ಯಾಶ್‌ಬ್ಯಾಕ್ ಯೋಜನೆಯಲ್ಲಿ ರಿಚಾರ್ಜ್ ಮಾಡಿದ್ರೆ, ಮೊದಲ ತಿಂಗಳ ಕ್ಯಾಶ್‌ಬ್ಯಾಕ್ ಮೊತ್ತವನ್ನು 48 ಗಂಟೆಗಳ ಒಳಗೆ ಬಳಕೆದಾರರ ಖಾತೆಗೆ ಮತ್ತು ಎರಡನೇ ತಿಂಗಳ ಕ್ಯಾಶ್‌ಬ್ಯಾಕ್ ಮೊತ್ತವನ್ನು 7 ದಿನಗಳಲ್ಲಿ ಜಮಾ ಮಾಡಲಾಗುತ್ತದೆ.


  ಟೆಲಿಕಾಂ ಟಾಕ್ ವರದಿಯ ಪ್ರಕಾರ, ಟಾಟಾ ಸ್ಕೈನ ಕ್ಯಾಶ್​ಬ್ಯಾಕ್ ಆಫರ್ ಅನ್ನು ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್​ ಮೂಲಕ ಸಹ ಪಡೆಯಬಹುದು. ಬ್ಯಾಂಕ್ ಆಫ್ ಬರೋಡಾ ಕಾರ್ಡ್‌ನಲ್ಲಿ ಈ ಕೊಡುಗೆ ನವೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ. ಈ ಕೊಡುಗೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ ನೀವು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.  ಇದನ್ನೂ ಓದಿ:   IPL 2020: ರಾಹುಲ್ ಸಲಹೆಗೆ ಕೊಹ್ಲಿಯ ಕೌಂಟರ್..!

  Published by:zahir
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು