Tata Sky Classroom Education Service: ವಿದ್ಯಾರ್ಥಿಗಳೇ ಗಮನಿಸಿ! ಟಾಟಾ ಸ್ಕೈ ನಿಮಗೆಂದೆ ನೀಡುತ್ತಿದೆ ಉಚಿತ ಸೇವೆ!

ಟಾಟಾ ಸ್ಕೈ ಇಂಡಿಯಾ 653 ಚಾನೆಲ್​ ನಂಬರ್​ ಮೂಲಕ ಕ್ಲಾಸ್​  ರೂಂ ಎಜ್ಯುಕೇಶನ್​ ಅನ್ನು ನೀಡುತ್ತಿದೆ.  ಜೊತೆಗೆ 700 ಅನಿಮೇಟೆಡ್​  ವಿಡಿಯೋಗಳನ್ನು ನೀಡುತ್ತಿದೆ. ಹಿಂದಿ ಮತ್ತು ಇಂಗ್ಲೀಷ್​ ಭಾಷೆ ಎರಡಲ್ಲೂ ವೀಕ್ಷಣೆಗೆ ಸಿಗಲಿದೆ.

ಟಾಟಾ ಸ್ಕೈ

ಟಾಟಾ ಸ್ಕೈ

 • Share this:
  ಟಾಟಾ ಸ್ಕೈ ಕ್ಲಾಸ್​​ ರೂಂ ಎಜ್ಯುಕೇಶನ್​ ಸೇವೆಯನ್ನು ನೀಡುತ್ತಿದೆ. 2016ರಲ್ಲಿ ಈ ಸೇವೆಯನ್ನು ಪ್ರಾರಂಭಿಸಿದೆ. ಆದರೆ ಇದೀಗ ಬಳಕೆದಾರರಿಗಾಗಿ ಉಚಿತ ಸೇವೆಯನ್ನು ನೀಡುತ್ತಿದೆ.

  ಟಾಟಾ ಸ್ಕೈ ಇಂಡಿಯಾ 653 ಚಾನೆಲ್​ ನಂಬರ್​ ಮೂಲಕ ಕ್ಲಾಸ್​  ರೂಂ ಎಜ್ಯುಕೇಶನ್​ ಅನ್ನು ನೀಡುತ್ತಿದೆ.  ಜೊತೆಗೆ 700 ಅನಿಮೇಟೆಡ್​  ವಿಡಿಯೋಗಳನ್ನು ನೀಡುತ್ತಿದೆ. ಹಿಂದಿ ಮತ್ತು ಇಂಗ್ಲೀಷ್​ ಭಾಷೆ ಎರಡಲ್ಲೂ ವೀಕ್ಷಣೆಗೆ ಸಿಗಲಿದೆ.

  ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತ ವಿಷಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಅನಿಮೇಟೆಡ್​ ವಿಡಿಯೋ ರೂಪದಲ್ಲಿ ಒದಗಿಸುತ್ತಿದೆ. 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗಕ್ಕೆ ಸಿಗಲಿದೆ. ಗಣಿತ ಮತ್ತು ವಿಜ್ಞಾನವನ್ನು ವಿಡಿಯೋ ಸ್ಟೋರಿಯ ಮೂಲಕ ಅರ್ಥೈಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳಿಗಾಗಿ ಹಿಂದಿ ಮತ್ತು ಇಂಗ್ಲೀಷ್​ ಭಾಷೆಯಲ್ಲಿ ಎರಡರಲ್ಲೂ ವೀಕ್ಷಣೆಗೆ ಸಿಗಲಿದೆ.

  ಭಾರತದಲ್ಲಿ ಟಾಟಾ ಸ್ಕೈ 22 ಮಿಲಿಯನ್​ ಕನೆಕ್ಷನ್​ ಹೊಂದಿದೆ. ವಿದ್ಯಾರ್ಥಿಗಳಿಗಾಗಿ ಏಪ್ರಿಲ್​ನಿಂದ ಸೆಪ್ಟೆಂಬರ್​ ತನಕ ಅಕ್ಟೋಬರ್​ನಿಂದ ಮಾರ್ಚ್​ ತನಕ 2 ವಿಧವಾಗಿ ಸಿಲೆಬಸ್​ ಅನ್ನು ಪ್ರಕಟಿಸಲಿದೆ.

  ಪಾಠದ ಜೊತೆಗೆ ಪ್ರಾಕ್ಟೀಸ್​ ಟೆಸ್ಟ್​ ನಡೆಸುತ್ತದೆ. ಜೊತೆಗೆ ಪರೀಕ್ಷೆಗಾಗಿ ಮಾದರಿ ಪರೀಕ್ಷೆ ಪತ್ರಿಕೆಯನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಅದನ್ನು ನೋಡಿ ಮುಂದಿನ ಪರೀಕ್ಷೆಗಾಗಿ ತಯಾರಿ ನಡೆಸಲು ಸಹಾಯಕವಾಗಲಿದೆ.
  Published by:Harshith AS
  First published: