Tata Sky ಅಲ್ಲ ಇನ್ಮುಂದೆ ಅದು Tata play, ಬದಲಾವಣೆ ಬಳಿಕ ಗ್ರಾಹಕರಿಗೆ OTT ಸೇವೆಗಳ ಬಂಪರ್ ಆಫರ್

ಟಾಟಾ ಪ್ಲೇ ಇನ್ನು ಮುಂದೆ ಕೇಬಲ್ ಚಾನೆಲ್ ಸೇವೆಗಳ ಜೊತೆಗೆ ಒಟಿಟಿ ಸೇವೆಗಳನ್ನು ಸಹ ತನ್ನ ಗ್ರಾಹಕರಿಗೆ ನೀಡಲಿದೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
18 ವರ್ಷಗಳಿಂದ ಜನರಿಗೆ ಮನರಂಜನೆಯ ಮಾರ್ಗವಾಗಿದ್ದ ಟಾಟಾ ಸ್ಕೈ (Tata Sky) ಇದೀಗ ತನ್ನ ಹೆಸರು ಮತ್ತು ಉದ್ಯಮದ (Business Model) ಮಾದರಿಯನ್ನು ಬದಲಾಯಿಸಿಕೊಂಡಿದೆ. ದೇಶದ ಪ್ರಮುಖ ಡಿಟಿಎಚ್ ಸೇವಾದಾರ ಕಂಪನಿ ಟಾಟಾ ಸ್ಕೈ ಇದೀಗ ಹೆಸರು ಬದಲಾಯಿಸಿಕೊಂಡಿದ್ದು, ಹೊಸದಾಗಿ ಟಾಟಾ ಪ್ಲೇ ಎಂದು ಮರುನಾಮಕರಣ ಮಾಡಿಕೊಂಡು ಅಸ್ತಿತ್ವಕ್ಕೆ ಬಂದಿದೆ. ಭರ್ಜರಿಯಾಗಿ ಮನರಂಜನೆ ನೀಡಲು ಟಾಟಾ ಸ್ಕೈ ಟಾಟಾ ಪ್ಲೇ (Tata Play) ಆಗಿ ಬಂದಿದೆ. ಈ ಮೂಲಕ ಗ್ರಾಹಕರಿಗೆ ಬಂಪರ್ (Bumper Offer) ಆಫರ್ ನೀಡಿದೆ.

Binge+ ಪ್ಯಾಕ್‌
ಟಾಟಾ ಪ್ಲೇ ಹೆಸರಿನಲ್ಲಿ OTT ಸೇವೆಗಳನ್ನು ಪರಿಚಯಿಸಿದೆ. ಟಾಟಾ ಪ್ಲೇ ನೆಟ್‌ಫ್ಲಿಕ್ಸ್‌, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್‌ನಂತಹ 14 OTT ಸೇವೆಗಳನ್ನು ಸೇರಿಸಿದೆ. ನೆಟ್‌ಫ್ಲಿಕ್ಸ್‌ ಸೇರ್ಪಡೆಯೊಂದಿಗೆ ಹಿಂದಿನ 13 OTT ಸೇವೆಗಳಿಂದ ಈ ಸಂಖ್ಯೆ 14ಕ್ಕೆ ಏರಿದೆ. ಈ ಎಲ್ಲಾ ಸೇವೆಗಳನ್ನು ತಮ್ಮ Binge+ ಪ್ಯಾಕ್‌ಗಳಲ್ಲಿ ನೀಡುತ್ತಿದೆ.

ಟಾಟಾ ಸ್ಕೈ ಡೈರೆಕ್ಟ್-ಟು-ಹೋಮ್ (ಡಿಟಿಎಚ್) ಕಂಪನಿಯು ತನ್ನ ಟೆಲಿವಿಷನ್-ಕಮ್-ಒಟಿಟಿ (ಓವರ್-ದಿ-ಟಾಪ್) ಕೊಡುಗೆಗಳನ್ನು ಸಂಯೋಜಿತ ಪ್ಯಾಕೇಜ್‌ಗಳಲ್ಲಿ ವಿಸ್ತರಿಸುವ ಯೋಜನೆಯಿಂದ ತನ್ನನ್ನು ಟಾಟಾ ಪ್ಲೇ ಎಂದು ಮರುನಾಮಕರಣ ಮಾಡಿದೆ. ಈ ಹಿಂದೆ ಟಾಟಾ ಸ್ಕೈ ಲಿಮಿಟೆಡ್ ಎಂದು ಕರೆಯಲಾಗುತ್ತಿದ್ದ ಡಿಟಿಎಚ್ ಕಂಪನಿಯನ್ನು ಈಗ ಟಾಟಾ ಪ್ಲೇ ಲಿಮಿಟೆಡ್ ಎಂದು ಕರೆಯಲಾಗುವುದು. ಪ್ಲಾಟ್‌ಫಾರ್ಮ್ ತನ್ನ ಬಿಂಜ್ ಪ್ಯಾಕ್‌ಗಳ ಭಾಗವಾಗಿ Amazon Prime Video ಮತ್ತು Disney+Hotstar ಸೇರಿದಂತೆ 13 OTT ಸೇವೆಗಳಿಗೆ ಹೊಸದಾಗಿ Netflix ಅನ್ನು ಸೇರಿಸಿದೆ.

ಇದನ್ನೂ ಓದಿ: Tata Sky: ಟಾಟಾ ಪ್ಲೇ ಎಂದು ಮರುಬ್ರಾಂಡ್ ಮಾಡಿಕೊಂಡ ಟಾಟಾ ಸ್ಕೈ! ಗ್ರಾಹಕ ಸೇವೆಯಲ್ಲೂ ಬದಲಾವಣೆ

19 ಮಿಲಿಯನ್ ಡಿಟಿಎಚ್ ಚಂದಾದಾರ
ಸುಮಾರು 19 ಮಿಲಿಯನ್ ಡಿಟಿಎಚ್ ಚಂದಾದಾರನ್ನು ಹೊಂದಿರುವ ಟಾಟಾ ಸ್ಕೈ ಎಂಟರ್‌ಪ್ರೈಸ್ ಅನ್ವೇಷಣೆಗಳು ಕೇವಲ DTH ಸೇವೆಯ ಹಿಂದೆ ಬೆಳೆದಿದ್ದು, ಈಗ ಫೈಬರ್-ಟು-ಹೋಮ್ ಬ್ರಾಡ್‌ಬ್ಯಾಂಡ್ ಮತ್ತು 14 OTT ಪೂರೈಕೆದಾರರನ್ನು ಒದಗಿಸುವ Binge ಅನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗುತ್ತಿದೆ.

ಈ ಮೂಲಕ ಗ್ರಾಹಕರು ಬಯಸುವ ರೀತಿಯಲ್ಲಿ ಒಟಿಟಿ ಸೇವೆಗಳ ಸಹಿತ ವಿವಿಧ ಪ್ಯಾಕೇಜ್‌ಗಳು ದೊರೆಯಲಿದೆ. ಟಾಟಾ ಪ್ಲೇ ನೆಟ್‌ಫ್ಲಿಕ್ಸ್‌ ಕಾಂಬೋ ಪ್ಯಾಕ್ ದರ ತಿಂಗಳಿಗೆ ₹399ರಿಂದ ಆರಂಭವಾಗಲಿದ್ದು, ಜನವರಿ 27ರಿಂದಲೇ ಗ್ರಾಹಕರಿಗೆ ದೊರೆಯಲಿದೆ. ಹೀಗಾಗಿ ಟಾಟಾ ಪ್ಲೇ ಇನ್ನು ಮುಂದೆ ಕೇಬಲ್ ಚಾನೆಲ್ ಸೇವೆಗಳ ಜೊತೆಗೆ ಒಟಿಟಿ ಸೇವೆಗಳನ್ನು ಸಹ ತನ್ನ ಗ್ರಾಹಕರಿಗೆ ನೀಡಲಿದೆ.

ಜಾಹೀರಾತು
ಟಾಟಾ ಸ್ಕೈ ಟಾಟಾ ಪ್ಲೇ ಆಗಿ ಬದಲಾಗಿರುವ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ದೇಶಾದ್ಯಂತ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಚಾರ ಮಾಡಲು ನಟರಾದ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಮತ್ತು ದಕ್ಷಿಣ ಭಾರತದಲ್ಲಿ ಆರ್. ಮಾಧವನ್ ಮತ್ತು ಪ್ರಿಯಾಮಣಿ ಅವರನ್ನು ಒಳಗೊಂಡ ಜಾಹೀರಾತುಗಳು ಬರಲಿವೆ..

ಈಗಾಗಲೇ ಅಸ್ತಿತ್ವದಲ್ಲಿರುವ 175 ರೂ. ಸೇವಾ ಭೇಟಿ ಶುಲ್ಕವನ್ನು ಮನ್ನಾ ಮಾಡಲು ಟಾಟಾ ಪ್ಲೇ ನಿರ್ಧರಿಸಿದೆ. ರೀಚಾರ್ಜ್ ಮಾಡದ DTH ಗ್ರಾಹಕರಿಗೆ ಮರುಸಂಪರ್ಕಗಳು ಉಚಿತವಾಗಿ ನೀಡುತ್ತಿದೆ. ಗ್ರಾಹಕರು ಟಾಟಾ ಪ್ಲೇ ಕಾಂಬೋ ಪ್ಯಾಕ್ ಅನ್ನು ಕಸ್ಟಮೈಸ್ ಮಾಡಬಹುದು. ಮನೆಯಲ್ಲಿರುವ ಎಲ್ಲಾ ಕುಟುಂಬ ಸದಸ್ಯರು ಒಂದೇ ಪ್ಯಾಕ್ ಅನ್ನು ತೆಗೆದುಕೊಳ್ಳಬಹುದು.

ಇದನ್ನೂ ಓದಿ: Tata Sky ನೀಡುತ್ತಿದೆ ಸೂಪರ್​ ಆಫರ್​.. 1 ವರ್ಷದ ರೀಜಾರ್ಚ್​ ಮಾಡಿದರೆ 2 ತಿಂಗಳ ಕ್ಯಾಶ್​ಬ್ಯಾಕ್​ ಉಚಿತ

OTT ಪ್ಲಾಟ್‌ಫಾರ್ಮ್‌
ಅಲ್ಲದೇ ಇದರ ಬೆಲೆಗಳು ಸ್ಕ್ರೀನ್‌ಗಳು, DTH ಸಂಪರ್ಕಗಳು ಮತ್ತು ಪ್ಯಾಕ್‌ಗಳ ಸಂಖ್ಯೆಗೆ ಅನುಗುಣವಾಗಿ ಬದಲಾಗುತ್ತವೆ. ಈ ಬಗ್ಗೆ ಮಾತನಾಡಿದ ಟಾಟಾ ಪ್ಲೇ ಎಂಡಿ ಮತ್ತು ಸಿಇಒ ಹರಿತ್ ನಾಗ್‌ಪಾಲ್‌, ನಾವು ಮೂಲತಃ ಡಿಟಿಎಚ್ ಕಂಪನಿಯಾಗಿ ಪ್ರಾರಂಭಿಸಿದ್ದರೂ, ನಾವು ಈಗ ಸಂಪೂರ್ಣವಾಗಿ ಕಂಟೆಂಟ್ ವಿತರಣಾ ಕಂಪನಿಯಾಗಿ ಮಾರ್ಪಾಡಾಗಿದ್ದೇವೆ ಎಂದು ತಿಳಿಸಿದ್ದಾರೆ.

“ಗ್ರಾಹಕರ ಸಣ್ಣ ನೆಲೆಯ ಅಗತ್ಯಗಳು ಬದಲಾಗುತ್ತಿರುವುದರಿಂದ ಮತ್ತು ಅವರು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಭಾಗಿಯಾಗಿರುವುದರಿಂದ, ಅವರಿಗೆ ವೇದಿಕೆ ಒದಗಿಸಲು Binge ಅನ್ನು ಪ್ರಾರಂಭಿಸಿದ್ದೇವೆ ಎಂದಿದ್ದಾರೆ. 2005ರಲ್ಲಿ ಸಂಯೋಜಿತವಾದ ಟಾಟಾ ಪ್ಲೇ ಟಾಟಾ ಸನ್ಸ್ ಮತ್ತು ವಾಲ್ಟ್ ಡಿಸ್ನಿ ಕಂಪನಿಯ ನಡುವಿನ ಜಂಟಿ ಉದ್ಯಮವಾಗಿದೆ.
Published by:vanithasanjevani vanithasanjevani
First published: