HOME » NEWS » Tech » TATA SAFARI LAUNCH TODAY NEW CAR 2021 EXPECTED PRICE FEATURES SPECIFICATIONS ALL OTHER DETAILS YOU SHOULD KNOW HG

ಟಾಟಾ ಸಫಾರಿ ಸಂಸ್ಥೆಯ ನೂತನ ಕಾರು ಇಂದು ಮಾರುಕಟ್ಟೆಗೆ; ಬೆಲೆ ಎಷ್ಟು ಗೊತ್ತಾ?

Tata Safari: ಆರು ವೇರಿಯಂಟ್​ಗಳಲ್ಲಿ ನೂತನ ಕಾರನ್ನು ಪರಿಚಯಿಸಿದೆ. ಸಫಾರಿ XE, XM, XT, XT+, XZ and XZ+ ವೆರಿಯಂಟ್​ನಲ್ಲಿ ಗ್ರಾಹಕರ ಕೈ ಸೇರಲಿದೆ.

news18-kannada
Updated:February 22, 2021, 12:35 PM IST
ಟಾಟಾ ಸಫಾರಿ ಸಂಸ್ಥೆಯ ನೂತನ ಕಾರು ಇಂದು ಮಾರುಕಟ್ಟೆಗೆ; ಬೆಲೆ ಎಷ್ಟು ಗೊತ್ತಾ?
ಟಾಟಾ ಸಫಾರಿ ಎಸ್​ಯುವಿ ಕಾರು
  • Share this:
ಟಾಟಾ ಮೋಟರ್ಸ್​​ ಸಂಸ್ಥೆ ಟಾಟಾ ಸಫಾರಿ ಎಸ್​ಯುವಿ ಕಾರನ್ನು ಸಿದ್ಧಪಡಿಸಿದ್ದು, ಇಂದು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ನೂತನ ಕಾರು ಐಕಾನಿಕ್​​ ಸಫಾರಿ ನೇಮ್​ಪ್ಲೇಟ್​ ಅಡಿಯಲ್ಲಿ ಮಾರುಕಟ್ಟೆಗೆ ಧಾವಿಸುತ್ತಿದೆ. ಈ ಎಸ್​ಯುವಿ ಕಾರಿನ ವೈಶಷ್ಟ್ಯ, ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ.

ಆರು ವೇರಿಯಂಟ್​ಗಳಲ್ಲಿ ನೂತನ ಕಾರನ್ನು ಪರಿಚಯಿಸಿದೆ. ಸಫಾರಿ XE, XM, XT, XT+, XZ and XZ+ ವೆರಿಯಂಟ್​ನಲ್ಲಿ ಗ್ರಾಹಕರ ಕೈ ಸೇರಲಿದೆ. ಅಂದಹಾಗೆಯೇ ಈ ಕಾರು 2.0ನಲ್ಲಿ ವಿನ್ಯಾಸ ಮಾಡಲಾಗಿದ್ದು,  ಕ್ಸೆನಾನ್​ ಹೆಚ್​ಐಡಿ ಪ್ರೊಜೆಕ್ಟರ್​​ ಹೆಡ್​ಲ್ಯಾಂಪ್​, ಡುಯೆಲ್​ ಪಂಕ್ಷನ್​ ಎಲ್​ಇಡಿ ಡಿಆರ್​ಎಲ್​ಎಸ್​​ ಜೊತೆಗೆ ಟರ್ನ್​ ಇಂಡಿಕೇಟರ್​ ನೀಡಲಾಗಿದೆ.

ಅಷ್ಟು ಮಾತ್ರವಲ್ಲದೆ, ಕಾರಿನ ಮುಂಭಾಗದಲ್ಲಿ ಫ್ರಂಟ್​​ ಫಾಗ್​ ಲ್ಯಾಂಪ್​, ಎಲ್​​ಇಡಿ ಟೇಲ್​ ಲ್ಯಾಂಪ್, 18 ಇಂಚಿನ ಡೈಮಂಡ್​​-ಕಟ್​ ಅಲಾಯ್​​ ವೀಲ್​ ಮತ್ತು ಪನರಾಮಿಕ್​ ಸನ್​ರೂಫ್​​ ಅಳವಡಿಸಲಾಗಿದೆ.

ಇನ್ನು ಸಫಾರಿ ಪರಿಚಯಿಸುತ್ತಿರುವ ನೂತನ ಕಾರಿನಲ್ಲಿ ಆರ್​​​ ಪವರ್​ ಡ್ರೈವ್​ ಸೀಟ್​,  ಫ್ಲೋಟಿಂಗ್​ ಐಸ್​ಲ್ಯಾಂಡ್​ 8.8 ಇಂಚಿನ ಟಚ್​ ಸ್ಕ್ರೀನ್​​ ಇನ್ಫೊಟೈನ್​ಮೆಂಟ್​, 9 ಜೆಬಿಎಲ್​ ಸ್ಪೀಕರ್​ ಜೊತೆಗೆ ಅಪ್ಲಿಫೈರ್​ ನೀಡಿದೆ. ಆಟೋಮ್ಯಾಟಿಕ್​ ಟೆಂಪರೇಚರ್​ ಕಂಟ್ರೋಲ್​, ಇಲೆಕ್ರಾನಿಕ್​​ ಪಾರ್ಕಿಂಗ್​ ಬ್ರೇಕ್​​, ಆರು ಏರ್​​ ಬ್ಯಾಗ್​ ಫೀಚರ್ಸ್​ ಅಳವಡಿಸಿದೆ.

ನೂತನ ಟಾಟಾ ಸಫಾರಿ ಕಾರು ಒಮೆಗಾ ಆರ್ಟಿಟೆಕ್ಚರ್​ ಹಾಗೂ ಕ್ರಿಯೊಟೆಕ್​ 1.0 ಲೀಟರ್​ ಟರ್ಬೊಚಾರ್ಜ್ ಡಿಸೇಲ್​ ಎಂಜಿನ್​ ಹೊಂದಿದೆ. 170ಪಿಎಸ್​ ಮ್ಯಾಕ್ಸಿಮಮ್​ ಪವರ್​ ಮತ್ತು 350 ಪೀಕ್​ ಟಾರ್ಕ್​ ಉತ್ಪಾದಿಸುತ್ತದೆ. ಇಕೊ, ಸಿಟಿ, ಸ್ಪೋರ್ಟ್ಸ್​ ಎಂಬ ಮೂರು ಡ್ರೈವ್​ ಮೋಡ್​ ಇದರಲ್ಲಿದೆ.

ಇಂದು ಬಿಡುಗಡೆಯಾಗುತ್ತಿರುವ ನೂತನ ಸಫಾರಿ ಕಾರು ಎಮ್​ಜಿ ಹೆಕ್ಟಾರ್​ ಪ್ಲಸ್​ ಮತ್ತು ಮಹೀಂದ್ರಾ ಎಕ್ಸ್​ಯುವಿ500 ಕಾರಿಗೆ ಪ್ರತಿಸ್ಪರ್ಧಿಯಾಗಿದೆ.ಬೆಲೆ: ಹೊಸ ಟಾಟಾ ಸಫಾರಿ ಬೆಲೆ 15 ಲ್ಷ ಮತ್ತು 22 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
Published by: Harshith AS
First published: February 22, 2021, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories