• Home
 • »
 • News
 • »
 • tech
 • »
 • TATA Binge: ಟಾಟಾದಿಂದ OTT ಲವರ್ಸ್‌ಗೆ ಭರ್ಜರಿ ಸಿಹಿಸುದ್ದಿ, ಇನ್ಮುಂದೆ ಲೈಫ್ ಇನ್ನಷ್ಟು ಜಿಂಗಾಲಾಲ!

TATA Binge: ಟಾಟಾದಿಂದ OTT ಲವರ್ಸ್‌ಗೆ ಭರ್ಜರಿ ಸಿಹಿಸುದ್ದಿ, ಇನ್ಮುಂದೆ ಲೈಫ್ ಇನ್ನಷ್ಟು ಜಿಂಗಾಲಾಲ!

ಟಾಟಾ ಪ್ಲೇ ಬಿಂಜ್

ಟಾಟಾ ಪ್ಲೇ ಬಿಂಜ್

ಟಾಟಾ ಪ್ಲೇ ಬಿಂಜ್ ಹೆಸರಿನಲ್ಲಿ ಓವರ್-ದಿ-ಟಾಪ್ (OTT) ಸೇವೆಯನ್ನು ಆರಂಭಿಸಿದ ಟಾಟಾ ಪ್ಲೇ ಸಂಸ್ಥೆ ಮೊದಲು ತನ್ನ ಡಿಶ್ ಅಥವಾ ಟಿವಿ ಚಂದಾದಾರರಿಗಷ್ಟೇ ಈ ಸೇವೆಯನ್ನು ಒದಗಿಸಿತ್ತು. ಆದರೆ ಇದೀಗ ಓಟಿಟಿ ಪ್ರಿಯರಿಗೆಲ್ಲರಿಗೂ ಗುಡ್ ನ್ಯೂಸ್ ಕೊಟ್ಟಿದೆ!

 • Share this:

  ಡಿಟಿಎಚ್‌ ಸರ್ವಿಸ್‌ನಲ್ಲಿ ಖ್ಯಾತಿ ಪಡೆದಿರುವ ಟಾಟಾ ಪ್ಲೇ ಈಗ ಓಟಿಟಿ ಪ್ರಿಯರಿಗೆ ಭರ್ಜರಿ ನ್ಯೂಸ್ ಕೊಡ್ತಿದೆ. ೆಾಾ+Hotstar, ZEE5, Voot, SonyLIV, MX Player, Planet Marathi, Sun NXT, Hoichoi, Eros Now ಸೇರಿದಂತೆ ಹಲವು ಓಟಿಟಿ (OTT) ಚಾನಲ್‌ಗಳ ಸೇವೆಗಳು ಹೊಂದಿದ್ದ ಈ ಸೇವೆಯು ಈ ಎರಡು ವರ್ಷಗಳ ಕಾಲ ಟಾಟಾ ಪ್ಲೇ ಟಿವಿ (Tata Play) ಚಂದಾದಾರರಿಗಷ್ಟೇ (Subscriber) ವಿಕ್ಷಿಸಲಾಗುತ್ತಿತ್ತು. ಇದೀಗ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಟಿವಿ ಚಂದಾದಾರರಿಗೆ ವಿಶೇಷ ಓವರ್-ದಿ-ಟಾಪ್ (OTT) ಸೇವೆಯನ್ನು ಆರಂಭಿಸಿ ವೀಕ್ಷಕರ ಗಮನ ಸೆಳೆದಿದೆ ಟಾಟಾ ಪ್ಲೇ. ಇದೀಗ ಮತ್ತೊಂದು ಭರ್ಜರಿ ಸುದ್ದಿ ತಂದಿದೆ.


  ಟಾಟಾ ಪ್ಲೇ ಬಿಂಜ್ ಹೆಸರಿನಲ್ಲಿ OTT ಸೇವೆಯನ್ನು ಆರಂಭಿಸಿದ ಟಾಟಾ ಪ್ಲೇ ಸಂಸ್ಥೆ ಮೊದಲು ತನ್ನ ಡಿಶ್ ಅಥವಾ ಟಿವಿ ಚಂದಾದಾರರಿಗಷ್ಟೇ ಈ ಸೇವೆಯನ್ನು ಒದಗಿಸಿತ್ತು. ಆದರೆ, ಇದೀಗ ಇತರೆ ಬಳಕೆದಾರರಿಗೂ ಸಹ ಈ ಸೇವೆಯನ್ನು ವಿಸ್ತರಿಸಲು ಸಂಸ್ಥೆ ಮುಂದಾಗಿದೆ. ಟಾಟಾ ಪ್ಲೇ ಚಂದಾದಾರರು ಸೇರಿದಂತೆ ಇತರೆ ಎಲ್ಲ ಬಳಕೆದಾರರಿಗೂ 'ಬಿಂಜ್ ಆಪ್‌'ನಲ್ಲಿ ಓವರ್-ದಿ-ಟಾಪ್ ಸೇವೆಯನ್ನು ಪಡೆಯಬಹುದು ಎಂದು ಟಾಟಾ ಪ್ಲೇ ಸಂಸ್ಥೆ ತಿಳಿಸಿದೆ.  ಟಾಟಾ ಪ್ಲೇ ಬಿಂಜ್


  ಇನ್ಮುಂದೆ ಬಿಂಜ್ ದೆ ಹವಾ


  ಹೌದು, ಟಾಟಾ ಪ್ಲೇ ಸಂಸ್ತೆಯು ಎರಡು ವರ್ಷಗಳ ಹಿಂದೆ ಟಾಟಾ ಪ್ಲೇ ಬಿಂಜ್ ಹೆಸರಿನ (Binge) ಓವರ್-ದಿ-ಟಾಪ್ (OTT) ಸೇವೆಯನ್ನು ಆರಂಬಿಸಿತ್ತು. ದೇಶದ ಟಿವಿ ವೀಕ್ಷಕರ ಗಮನವನ್ನು ಸಹಾ ಸೆಳೆದಿತ್ತು. Disney+Hotstar, ZEE5, Voot, SonyLIV, MX Player, Planet Marathi, Sun NXT, Hoichoi, Eros Now ಸೇರಿದಂತೆ ಹಲವು ಓಟಿಟಿ ಚಾನಲ್‌ಗಳ ಸೇವೆಗಳು ಹೊಂದಿದ್ದ ಈ ಸೇವೆಯು ಈ ಎರಡು ವರ್ಷಗಳ ಕಾಲ ಟಾಟಾ ಪ್ಲೇ ಟಿವಿ ಚಂದಾದಾರರಿಗಷ್ಟೇ ಲಭ್ಯವಿತ್ತು.


  ಇದೀಗ ಟಾಟಾ ಪ್ಲೇ ಅಲ್ಲದ ಬಳಕೆದಾರರಿಗೂ ಈ ಬಿಂಜ್ ಸೇವೆಯನ್ನು ಒದಗಿಸಲು ಸಂಸ್ಥೆ ಮುಂದಾಗಿದೆ. ಇದರಿಂದ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ಟಾಟಾ ಪ್ಲೇ ಆಪ್ ಮೂಲಕ ಕಡಿಮೆ ಬೆಲೆಯಲ್ಲಿ ಓಟಿಟಿ ಸೇವೆಗಳನ್ನು ನೀಡುತ್ತಿದ್ದೆ.


  ಇದನ್ನೂ ಓದಿ: YouTube Tips: ಡೆಸ್ಕ್‌ಟಾಪ್-ಮೊಬೈಲ್‌ನಲ್ಲಿ YouTube ವಿಡಿಯೋ ಫ್ರೀಯಾಗಿ ಡೌನ್‌ಲೋಡ್ ಮಾಡಲು ಹೀಗೆ ಮಾಡಿ


  ಇನ್ಮುಂದೆ ಹಣ ಉಳಿತಾಯವನ್ನೂ ಮಾಡೋಣ


  2020 ರಲ್ಲಿ ಟಾಟಾ ಪ್ಲೇ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ, ಟಾಟಾ ಪ್ಲೇ ಅಪ್ಲಿಕೇಶನ್ ಟಾಟಾ ಪ್ಲೇ ಚಂದಾದಾರರಿಗೆ ಮಾತ್ರ ಲಭ್ಯವಿತ್ತು. ಸುಮಾರು 1 ಮಿಲಿಯನ್  ಚಂದಾದಾರರನ್ನು ಹೊಂದಿರುವ ಟಾಟಾ ಪ್ಲೇ ಇದೀಗ ಅಂತಿಮವಾಗಿ ಇತರೆ ಬಳಕೆದಾರರಿಗೆ ಲಭ್ಯವಾಗುವಂತಾಗಿದೆ.


  ಈ ವಿಷಯ ಅನ್ವೇಷಣೆಯನ್ನು ಸುಲಭಗೊಳಿಸುವುದು ಈ ಕ್ರಮದ ಹಿಂದಿನ ಪ್ರಮುಖ ಉದ್ದೇಶವಾಗಿದೆ ಎಂದು ಕಂಪನಿ ಹೇಳಿದೆ. ಇದೀಗ ಟಾಟಾ ಪ್ಲೇ ಒದಗಿಸುತ್ತಿರುವ ಬೆಲೆಯಲ್ಲಿಯೇ ಹೊಸ ಚಂದಾದಾರರು ಕೂಡ ವಿಶೇಷ ಓವರ್-ದಿ-ಟಾಪ್ (OTT) ಸೇವೆಯನ್ನು ಪಡೆಯಬಹುದು ಎಂದು ಟಾಟಾ ಪ್ಲೇ ಅಪ್ಲಿಕೇಷನ್ ಮೂಲಕ ತಿಳಿದುಬಂದಿದೆ.


  ಇದರಿಂದ ಹಲವು ಓಟಿಟಿ ಚಾನಲ್‌ಗಳಿಗೆ ಪಾವತಿಸಬೇಕಾದ ಹಣ ಕೂಡ ಉಳಿತಾಯವಾಗಲಿದೆ.


  59ರೂ ನಿಂದ ಪ್ಯಾಕ್ಯೇಜ್ಗಳು ಆರಂಭ


  ಪ್ರಸ್ತುತ ಟಾಟಾ ಪ್ಲೇ ನಲ್ಲಿ ಒದಗಿಸಲಾಗುತ್ತಿರುವ ಬಿಂಜ್ ಪ್ಯಾಕೇಜ್‌ಗಳು 59 ರೂ, 99 ರೂ, 175 ರೂ ಮತ್ತು 299 ರೂ. ಗಳ ಬೆಲೆಯಲ್ಲಿ ಲಭ್ಯವಿದೆ. ಇವುಗಳಲ್ಲಿ 199 ರೂ ಮತ್ತು 299 ರೂ ಮಾಸಿಕ ಸಂಪರ್ಕಿತ ಡಿವೈಸ್‌ಗಳಲ್ಲಿ ನೋಡಬಹುದು.


  ಆದರೆ, ಇನ್ನುಳಿದ ಪ್ಯಾಕ್‌ಗಳು ಮೊಬೈಲ್ ಡಿವೈಸ್‌ಗೆ ಮಾತ್ರ ಕೆಲವೇ ಕೆಲವು ಓಟಿಟಿ ಸಂಪರ್ಕಗಳನ್ನು ಹೊಂದಿವೆ. ಉದಾಹರಣೆಗೆ- 59 ರೂ. ಪ್ಯಾಕ್ ಮೂರು ಆಯ್ಕೆಗಳನ್ನು ಹೊಂದಿದ್ದು, MX ಸ್ಟಾರ್ಟರ್, ಜೀ5 ಸ್ಟಾರ್ಟರ್ ಮತ್ತು ವೂಟ್ ಸ್ಟಾರ್ಟರ್ ಚಾನಲ್‌ಗಳಿಗೆ ಚಂದಾದಾರಿಕೆ ನೀಡುತ್ತದೆ.


  ಇದನ್ನೂ ಓದಿ: Smart Phone: ರಕ್ತ ಕೊಟ್ಟು ಮೊಬೈಲ್ ಖರೀದಿಸಲು ಬಂದ ಬಾಲಕಿ! ಸಿಕ್ತಾ ಸ್ಮಾರ್ಟ್ ಫೋನ್?


  ಬಳಕೆದಾರರು ಯಾವ ಚಾನಲ್ ಹೆಚ್ಚಾಗಿ ವೀಕ್ಷಿಸುತ್ತಾರೆ ಎಂಬುದರ ಮೇಲೆ 59 ರೂ, 99 ರೂ, 175 ರೂ ಮತ್ತು 299 ರೂ. ಗಳ ಪ್ಯಾಕೇಜ್‌ಗಳಲ್ಲಿ ಒಂದನ್ನು ಆಯ್ದುಕೊಳ್ಳಬಹುದಾಗಿದೆ. OTT  ಪ್ರಿಯರಿಗೆ ಇದೊಂದು ಖುಷಿಯ ವಿಚಾರವಾಗಿದೆ ಮತ್ತು ಹೇಚ್ಚು ಕಂಟೆಂಟ್ ಗಳನ್ನು ಪಡೆಯಲು ಇದೊಂದು ಬಂಪರ್ ಆಫರ್ ಎಂದರು ತಪ್ಪಾಗದು.


  Published by:Harshith AS
  First published: