ಮಾರ್ಪಡಿಸಿದ ಟಾಟಾ ನೆಕ್ಸನ್‌ನ ಪ್ರಯಾಣ ನಿಜಕ್ಕೂ ಅದ್ಭುತ..! ಹೊಸ ಕಾರಿನ ಈ ಆಕರ್ಷಕ ಫೋಟೋ ನೋಡಿ..

ಈ ಮಾರ್ಪಡಿಸಿದ ನೆಕ್ಸನ್‌ನ ಚಿತ್ರಗಳನ್ನು TATA NEXON Modification/Accessories ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಕಾರಿನ ವಿನ್ಯಾಸದ ಕಲ್ಪನೆಯ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ. ಈ ಮಾರ್ಪಾಡಿನಲ್ಲಿ, ನೆಕ್ಸನ್‌ನ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯು ಗ್ರಾಫಿಕಲ್‌ ಡಿಸೈನ್‌ ಹೊಂದಿದೆ.

ಮಾರ್ಪಡಿಸಿದ ಟಾಟಾ ನೆಕ್ಸನ್‌ (Image source: Facebook/Tata Nexon Modification/Acccessoriies)

ಮಾರ್ಪಡಿಸಿದ ಟಾಟಾ ನೆಕ್ಸನ್‌ (Image source: Facebook/Tata Nexon Modification/Acccessoriies)

 • Share this:
  ಟಾಟಾ ನೆಕ್ಸಾನ್‌ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ನೆಕ್ಸನ್‌ನ ಯುವ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಇಷ್ಟಪಡುವ ಯುವ ಖರೀದಿದಾರರಲ್ಲಿ ಈ ಕಾರು ಸಾಕಷ್ಟು ಹೆಸರುವಾಸಿಯಾಗಿದೆ. ಮೂಲ ವಿನ್ಯಾಸವು ಕಾರಿನ ಜನಪ್ರಿಯತೆಯ ಹಿಂದಿನ ಒಂದು ಪ್ರಮುಖ ಕಾರಣವಾದರೂ, ಅನೇಕ ನೆಕ್ಸನ್ ಖರೀದಿದಾರರು ತಮ್ಮ ಯಂತ್ರಕ್ಕೆ ತಮ್ಮ ಅಭಿರುಚಿಗೆ ಅನುಗುಣವಾಗಿ ಮಾರ್ಪಾಡುಗಳೊಂದಿಗೆ ವೈಯಕ್ತಿಕ ಸ್ಪರ್ಶವನ್ನು ನೀಡಲು ಇಷ್ಟಪಡುತ್ತಾರೆ. ಅಂತರ್ಜಾಲವು ಕಾರಿನ ಮಾರ್ಪಾಡುಗಾಗಿ ವಿನ್ಯಾಸ ಕಲ್ಪನೆಗಳಿಂದ ತುಂಬಿರುತ್ತದೆ ಮತ್ತು ಇತ್ತೀಚೆಗೆ ಪ್ರದರ್ಶಿಸಲಾದ ಅಂತಹ ಒಂದು ಮಾಡಿಫೈಡ್‌ ನೆಕ್ಸನ್‌ನ ಲುಕ್‌ಗೆ ಹೆಚ್ಚಿನ ಸ್ಪೋರ್ಟ್ಸ್‌ ಪರಿವರ್ತನೆಯನ್ನು ನೀಡಿದ್ದಾರೆ ಮಾರ್ಪಾಡುಗಾರರು.

  ಈ ಮಾರ್ಪಡಿಸಿದ ನೆಕ್ಸನ್‌ನ ಚಿತ್ರಗಳನ್ನು TATA NEXON Modification/Accessories ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಕಾರಿನ ವಿನ್ಯಾಸದ ಕಲ್ಪನೆಯ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ. ಈ ಮಾರ್ಪಾಡಿನಲ್ಲಿ, ನೆಕ್ಸನ್‌ನ ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯು ಗ್ರಾಫಿಕಲ್‌ ಡಿಸೈನ್‌ ಹೊಂದಿದೆ. ಈ ವಿನ್ಯಾಸ ಕಾರಿನ ಸೈಡ್‌ಗಳಲ್ಲಿರುತ್ತವೆ ಮತ್ತು ಬಾನೆಟ್‌ನಿಂದ ಹಿಂಭಾಗಕ್ಕೆ ಕಾರಿನ ಮೇಲ್ಛಾವಣಿಯ ಮೂಲಕ ಗೆರೆಯ ಪ್ಯಾಚ್‌ ಅನ್ನು ಹೊಂದಿದೆ. ಅಲ್ಲದೆ, ಕೆಂಪು-ಬಣ್ಣದ ಬ್ರೇಕ್ ಕಾಲಿಪರ್‌ಗಳಿಂದ ಸುಂದರವಾಗಿ ಮೆಚ್ಚುಗೆ ಪಡೆದ ಅಲಾಯ್ಸ್‌ಗಳಿಗಾಗಿ ಹೊಸ ಕಪ್ಪು ಪೇಂಟ್‌ನ ಸ್ಕೀಮ್‌ ಕೂಡ ಇದೆ.

  ಈ ಮಧ್ಯೆ, ಇತ್ತೀಚೆಗೆ ಬಿಡುಗಡೆಯಾದ ನೆಕ್ಸನ್‌ನ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಈಗ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯಗಳೊಂದಿಗೆ ಈ ಕಾರು ತುಂಬಿದೆ. ಅಲ್ಲದೆ, ಗ್ಲೋಬಲ್ ಎನ್‌ಸಿಎಪಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿರುವ ಮೊದಲ ಭಾರತೀಯ ಕಾರು ನೆಕ್ಸನ್. ಇದು BS ವಿತ್‌ EBD, ರೋಲ್-ಓವರ್ ತಗ್ಗಿಸುವಿಕೆ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಡ್ಯುಯಲ್-ಫ್ರಂಟ್ ಏರ್‌ಬ್ಯಾಗ್, ಸೀಟ್ ಬೆಲ್ಟ್ ಅಲರ್ಟ್, ಹಿಲ್-ಹೋಲ್ಡ್ ಅಸಿಸ್ಟ್, ಪ್ರಿ-ಟೆನ್ಷನರ್‌ಗಳು ಮತ್ತು ಲೋಡ್-ಲಿಮಿಟರ್‌ಗಳೊಂದಿಗೆ ಸೀಟ್ ಬೆಲ್ಟ್‌ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ಗಳು ಹಾಗೂ ಇನ್ನೂ ಅಧಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

  ಟಾಟಾ ನೆಕ್ಸನ್ 1.2 ಎಲ್ ಟರ್ಬೊ ಪೆಟ್ರೋಲ್ ಹಾಗೂ 1.5 ಎಲ್ ಡೀಸೆಲ್ ಎಂಜಿನ್ ಎರಡೂ ಮಾಡೆಲ್‌ಗಳನ್ನು ಒಳಗೊಂಡಿದೆ. ನೆಕ್ಸನ್‌ನ ಟರ್ಬೋ ಪೆಟ್ರೋಲ್ ಮೋಟರ್ 120 ಪಿಎಸ್‌ನ ಗರಿಷ್ಠ ವಿದ್ಯುತ್ ಉತ್ಪಾದನೆಯನ್ನು ಹೊಂದಿದೆ ಮತ್ತು ಗರಿಷ್ಠ ಟಾರ್ಕ್ 170 ಎನ್ಎಂ ಹೊಂದಿದೆ. ಮತ್ತೊಂದೆಡೆ, ಡೀಸೆಲ್ ಎಂಜಿನ್ 110 ಪಿಎಸ್ ಮತ್ತು 260 ಎನ್ಎಂನ ರೇಟ್ ಪವರ್ ಮತ್ತು ಟಾರ್ಕ್ ಔಟ್‌ಪುಟ್‌ಗಳನ್ನು ಉತ್ಪಾದಿಸುತ್ತದೆ.

  ಇನ್ನು, ಈ ಕಾಂಪ್ಯಾಕ್ಟ್ ಎಸ್‌ಯುವಿಯ ಬೆಲೆ ಎಷ್ಟು ಅಂತೀರಾ..? ನೆಕ್ಸನ್ ಬೇಸ್‌ ವೇರಿಯೆಂಟ್‌ ಬೆಲೆ ಎಕ್ಸ್ ಶೋರೂಮ್‌ನಲ್ಲಿ 7.09 ಲಕ್ಷ ರೂ. ನಿಂದ ಆರಂಭವಾದರೆ, ಟಾಪ್‌ ವೇರಿಯೆಂಟ್‌ಗೆ 12.79 ಲಕ್ಷ ರೂ. (ಎಕ್ಸ್ ಶೋರೂಮ್) ಆಗುತ್ತದೆ.
  First published: