ವಾಣಿಜ್ಯ ವ್ಯವಹಾರಕ್ಕೆಂದೇ ಟಾಟಾ ಮೋಟಾರ್ಸ್​​​ ಪರಿಚಯಿಸಿದೆ Ace Gold Petrol CX; ಕೈಗೆಟಕುವ ಬೆಲೆಯಲ್ಲಿ ಸಿಗುತ್ತಿದೆ ಈ ವಾಹನ

Tata Ace Gold Petrol CX ವಾಹನ ಎರಡು ವೇರಿಯಂಟ್​ನಲ್ಲಿ ಪರಿಚಯಿಸಿದ್ದು,  ಫ್ಲಾಟ್​ ಬೆಡ್​ ರೂಪಾಂತರದ ಬೆಲೆ 3.99 ಲಕ್ಷ ರೂ ಆಗಿದೆ. ಅಂತೆಯೇ ಹಾಫ್​ ಡೆಕ್​ ಲೋಡ್​ ಬಾಡಿ ವೇರಿಯಂಟ್​ ಬೆಲೆ 4.10 ಲಕ್ಷ ರೂ ಆಗಿದೆ.

Tata Ace Gold Petrol CX

Tata Ace Gold Petrol CX

 • Share this:
  ಟಾಟಾ ಮೋಟಾರ್ಸ್​ ಗುರುವಾರದಂದು Ace Gold Petrol CX ಹೊಸ ರೂಪಾಂತರ​ ವಾಹನವನ್ನು ಗ್ರಾಹಕರಿಗೆ ಪರಿಚಯಿಸಿದೆ. ನೂತನ ವಾಹನವನ್ನು ವಾಣಿಜ್ಯ ಬಳಕೆಗಾಗಿ ಪರಿಚಯಿಸಿದ್ದು, ಇದರ ಪ್ರಾರಂಭಿಕ ಬೆಲೆ 3.99 ಲಕ್ಷ ರೂ ಆಗಿದೆ.

  Ace Gold Petrol CX ವಾಹನ ಎರಡು ವೇರಿಯಂಟ್​ನಲ್ಲಿ ಪರಿಚಯಿಸಿದ್ದು,  ಫ್ಲಾಟ್​ ಬೆಡ್​ ರೂಪಾಂತರದ ಬೆಲೆ 3.99 ಲಕ್ಷ ರೂ ಆಗಿದೆ. ಅಂತೆಯೇ ಹಾಫ್​ ಡೆಕ್​ ಲೋಡ್​ ಬಾಡಿ ವೇರಿಯಂಟ್​ ಬೆಲೆ 4.10 ಲಕ್ಷ ರೂ ಆಗಿದೆ.

  ಟಾಟಾ ಮೋಟಾರ್ಸ್​ ಗ್ರಾಹಕರಿಗಾಗಿ Ace Gold Petrol CX ವಾಹನವನ್ನು ಖರೀದಿಸಲು ಮತ್ತು ಅವರಿಗೆ ಹಣಕಾಸು ಆಯ್ಕೆಯನ್ನು ಒದಗಿಸಲು ಸ್ಟೇಟ್ ಬ್ಯಾಂಕ್​ ಆಫ್​ ಇಂಡಿಯಾದೊಂದಿಗೆ ಪಾಲುದಾರಿಕೆ ಹೊಂದಿದೆ.

  ಟಾಟಾ ಮೋಟಾರ್ಸ್​ ಉಪಾಧ್ಯಕ್ಷ ವಿನಯ್​ ಪಾಠಕ್​  ಮಾತನಾಡಿದ್ದು, ‘‘ಟಾಟಾ Ace Gold Petrol CX ವಾಹನ ಬಲವಾದ ವಿಶ್ವಾಸಾರ್ಹ ಮತ್ತು ವಿವಿಧೋದ್ದೇಶದ ವಾಹನವಾಗಿ ಮುಂದುವರಿದಿದ್ದು, ಇಲ್ಲಿಯವರೆಗೆ 23 ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಜೀವನೋಪಾಯವನ್ನು ಒದಗಿಸಿದೆ. ಸರ್ಕಾರದ ಆತ್ಮನಿರ್ಭರ ಭಾರತ್ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತಾ ಟಾಟಾ ಮೋಟಾರ್ಸ್ ಈ ವಾಹನದ ಪ್ರಾರಂಭದ ಮೂಲಕ ಉದ್ಯಮಶೀಲತೆಯ ಮನಸ್ಥಿತಿಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ’‘ ಎಂದಿದ್ದಾರೆ

  ಟಾಟಾ Ace Gold Petrol CX ವೆರಿಯಂಟ್ 4-ಸಿಲಿಂಡರ್ ಎಸ್‌ಸಿವಿ 2-ಸಿಲಿಂಡರ್ ಎಂಜಿನ್ ಮತ್ತು 1.5 ಟನ್‌ ತೂಕ ಸಾಗಿಸುವ ಸಾಮರ್ಥ್ಯ ಹೊಂದಿದೆ. 4 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯವಿದೆ ಎಂದು ಕಂಪನಿ ಹೇಳಿದೆ.

  ಹಣ್ಣುಗಳು, ತರಕಾರಿಗಳು, ಕೃಷಿ ಉತ್ಪನ್ನಗಳು, ಪಾನೀಯ ಮತ್ತು ಬಾಟಲಿಗಳು, ಸರಕುಗಳು, ಇ-ಕಾಮರ್ಸ್, ಡೈರಿ, ಫಾರ್ಮ್​ ಮತ್ತು ಆಹಾರ ಉತ್ಪನ್ನಗಳ ಸಾಗಿಸಲು ಟಾಟಾ Ace Gold Petrol CX ವಾಹನ ಉಪಯೋಗಕ್ಕೆ ಬರಲಿದೆ.
  Published by:Harshith AS
  First published: