ನೆಕ್ಸಾನ್ ಇವಿ (Nexon EV) ಮತ್ತು ಟಿಗೋರ್ ಇವಿ (Tigor EV) ನಂತರ, ಟಾಟಾ ಮೋಟಾರ್ಸ್ (Tata Motors) ತನ್ನ ನೆಕ್ಸಾನ್ ಇವಿ ಮ್ಯಾಕ್ಸ್ (Nexon EV Max) ಅನ್ನು ಇತ್ತೀಚೆಗೆ ಬಿಡುಗಡೆಗೊಂಡಿದೆ. ಇದು ಟಾಟಾ ಕಾರು ತಯಾರಕರಿಂದ ಬಿಡುಗಡೆಯಾಗುತ್ತಿರುವ ಮೂರನೇ ಎಲೆಕ್ಟ್ರಿಕ್ ಕಾರಾಗಿದೆ (Electric Car). ಇನ್ನೂ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎಸ್ಯುವಿಯನ್ನು ₹17.74 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್ ಜನಸಾಮಾನ್ಯರ ಪ್ರಯಾಣಕ್ಕಾಗಿ ಬಜೆಟ್ ಫ್ರೆಂಡ್ಲಿ (Budget Friendly) ವಾಹನಗಳನ್ನು ನೀಡುತ್ತದೆ. ಟಾಟಾ ಮೋಟಾರ್ಸ್ ಭಾರತೀಯ ವಾಹನ ತಯಾರಿಕಾ ಕಂಪನಿಯಾಗಿದ್ದು ಇದರ ಸೂರಿನಡಿ ಕಾರು (Car), ವ್ಯಾನ್ (Van), ಎಲೆಕ್ಟ್ರಿಕ್ ವಾಹನ, ಸ್ಪೋರ್ಟ್ಸ್ ಕಾರ್ಗಳು (Sports Car), ಟ್ರಕ್ಕುಗಳನ್ನು (Truck) ಇದು ಮಾರುಕಟ್ಟೆಗೆ ತರುತ್ತದೆ. ಈ ಕಂಪನಿಯ (Company) ಕಾರುಗಳು ಕೈಗೆಟಕುವ ದರದಲ್ಲಿರುತ್ತವೆ ಮತ್ತು ಕುಟುಂಬ-ಸ್ನೇಹಿ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಜೊತೆಗೆ ಅದರ ವಿನ್ಯಾಸ ಮತ್ತು ಬಾಳಿಕೆಗಾಗಿ ಹೆಚ್ಚು ಜನಪ್ರಿಯವಾಗಿದೆ.
ಟಾಟಾ ಕಂಪನಿ ಹಲವಾರು ಮಾದರಿಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಸದ್ಯ ಗ್ರಾಹಕರ ಬೇಡಿಕೆಯನುಸಾರ ಈಗ ಮತ್ತೊಂದು ನೆಕ್ಸಾನ್ EV ಮ್ಯಾಕ್ಸ್ ಎಂಬ ಎಲೆಕ್ಟ್ರಿಕ್ ಕಾರನ್ನು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಬೆಲೆ ಮತ್ತು ವಿಶೇಷತೆ
ನೆಕ್ಸಾನ್ ಇವಿ ಮ್ಯಾಕ್ಸ್ ಎರಡು ಟ್ರಿಮ್ಗಳು ಮತ್ತು ನಾಲ್ಕು ರೂಪಾಂತಗಳು
ನೆಕ್ಸಾನ್ ಇವಿ ಮ್ಯಾಕ್ಸ್ ಎರಡು ಟ್ರಿಮ್ಗಳು ಮತ್ತು ನಾಲ್ಕು ರೂಪಾಂತರಗಳಲ್ಲಿ ಬಂದಿದೆ. ಮೊದಲ ಟ್ರಿಮ್ 3.3 Kw ಚಾರ್ಜಿಂಗ್ ಆಯ್ಕೆಯನ್ನು ಹೊಂದಿದ್ದರೆ, ಎರಡನೆಯದು ದೊಡ್ಡ 7.2 kW AC ವೇಗದ ಚಾರ್ಜಿಂಗ್ ಅನ್ನು ಹೊಂದಿರುತ್ತದೆ. ಮತ್ತು 7.2 kW AC ಫಾಸ್ಟ್ ಚಾರ್ಜರ್ನೊಂದಿಗೆ ಟಾಪ್-ಸ್ಪೆಕ್ ವೇರಿಯಂಟ್ EV ಮ್ಯಾಕ್ಸ್ + ಲಕ್ಸ್ನ ಬೆಲೆಯು ಹೆಚ್ಚಾಗುತ್ತದೆ. ₹19.24 ಲಕ್ಷ (ಎಕ್ಸ್ ಶೋ ರೂಂ).
437 ಕಿಮೀಗಳ ARAI ವ್ಯಾಪ್ತಿ
437 ಕಿಮೀಗಳ ARAI ವ್ಯಾಪ್ತಿಯನ್ನು ಹೊಂದಿದೆ. ಇದು ಸೂಕ್ತವಾದ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲ್ಪಟ್ಟ ಅಂಕಿ ಅಂಶವಾಗಿದೆ ಆದ್ದರಿಂದ ನೈಜ ಅಂಕಿಅಂಶವು ಕನಿಷ್ಠ 10 ಪ್ರತಿಶತದಷ್ಟು ಬದಲಾಗಬಹುದು ಎಂದು ನಿರೀಕ್ಷಿಸಬಹುದು.
ಇದನ್ನೂ ಓದಿ: Bill Gates: ಬಿಲ್ ಗೇಟ್ಸ್ ಬಳಸೋ ಫೋನ್ ಯಾವ್ದು ಹೇಳಿ? ಐಫೋನ್ ಅಲ್ವೇ ಅಲ್ಲ!
ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ದೀರ್ಘ ವ್ಯಾಪ್ತಿ
ಹೊಸ ನವೀಕರಿಸಿದ ಎಲೆಕ್ಟ್ರಿಕ್ ವೆಹಿಕಲ್ (EV) ದೊಡ್ಡ ಬ್ಯಾಟರಿ ಪ್ಯಾಕ್ ಮತ್ತು ದೀರ್ಘ ವ್ಯಾಪ್ತಿಯನ್ನು ಹೊಂದಿದೆ. ನೆಕ್ಸಾನ್ ಇವಿ ಮ್ಯಾಕ್ಸ್ 40.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ, ಅಸ್ತಿತ್ವದಲ್ಲಿರುವ ಮಾದರಿ ನೆಕ್ಸಾನ್ EV, 30.3 kWh ಹೊಂದಿದೆ. ಒಂದೇ ಚಾರ್ಜ್ನಲ್ಲಿ ಸುಮಾರು 437 ಕಿಲೋಮೀಟರ್ಗಳಷ್ಟು ಓಡುತ್ತದೆ ಮತ್ತು 56 ನಿಮಿಷಗಳಲ್ಲಿ ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದೆಂದು ಟಾಟಾ ಕಂಪನಿ ಹೇಳಿಕೊಂಡಿದೆ. ದಕ್ಷತೆಯನ್ನು ಹಿಂದಿರುಗಿಸುವ ಪ್ರಮಾಣಿತ ನೆಕ್ಸಾನ್ ಇವಿ ಮಾದರಿಗಳಿಗೆ ಹೋಲಿಸಿದರೆ ಸಿಂಗಲ್-ಸೈಕಲ್ ಚಾರ್ಜ್ನಲ್ಲಿ 100 ಕಿ.ಮೀ ಹೆಚ್ಚು ಬರುತ್ತದೆ.
ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ದುಬಾರಿ ಬೆಲೆ
ಎಲೆಕ್ಟ್ರಾನಿಕ್ ಬ್ರೇಕಿಂಗ್, ಆಟೋ-ಹೋಲ್ಡ್ ಆಪರೇಷನ್ ಮತ್ತು ನವೀಕರಿಸಿದ ಕ್ಯಾಬಿನ್ನಂತಹ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ, EV ಹೆಚ್ಚು ದುಬಾರಿಯಾಗಿದೆ. ವಾಹನದ ಬೆಲೆ ಸುಮಾರು 17.74 ಲಕ್ಷ ಆಗಿದೆ. ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ನ ಉನ್ನತ ಮಾದರಿಯ ಬೆಲೆ 19.24 ಲಕ್ಷ ರೂಗೆ ಲಭ್ಯವಾಗಲಿದೆ. ಬೆಲೆ ಸ್ಫರ್ಧೆಯಲ್ಲಿ ಈ ಕಾರು MG ZS EV ಮತ್ತು ಹ್ಯುಂಡೈ ಕೋನಾದಂತಹ ಎಲೆಕ್ಟ್ರಿಕ್ ವಾಹನಗಳ ಜೊತೆ ಪ್ರತಿಸ್ಪರ್ಧಿಯಾಗಲಿದೆ.
ಇದನ್ನೂ ಓದಿ: Smart phone: ನೀವು ಮಾಡುವ ಈ ತಪ್ಪಿನಿಂದ ಸ್ಮಾರ್ಟ್ ಫೋನ್ ಸ್ಲೋ ಆಗೋದು!
ಭಾರತದ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರು
2019ರಲ್ಲಿ ಪ್ರಾರಂಭವಾದ ನೆಕ್ಸಾನ್ ಇವಿ, ಭಾರತದ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿದ್ದು, ಈ ಹೊಸ ಇವಿ ಮ್ಯಾಕ್ಸ್ ಕೂಡ ಮಾರಾಟವಾಗುವ ನಿರೀಕ್ಷೆಯಿದೆ.
ಒಳಭಾಗದ ವಿನ್ಯಾಸ ನೋಡುವುದಾದರೆ ಮೊಬೈಲ್ ಚಾರ್ಜಿಂಗ್ ಸೌಲಭ್ಯ, ಗೇರ್ ಲಿವರ್ಗಾಗಿ ಪ್ರಕಾಶಿತ ಡಯಲ್, ಆಟೋ-ಹೋಲ್ಡ್ ಆಪರೇಷನ್ ದೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸಾಂಪ್ರದಾಯಿಕ ರೋಟರಿ ಗೇರ್ ಸೆಲೆಕ್ಟರ್ ಬದಲಿಗೆ, ಹೊಸ ಪರದೆ ಇದೆ.
ನೆಕ್ಸಾನ್ ಇವಿ ಮ್ಯಾಕ್ಸ್ 2025ರ ವೇಳೆಗೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ 10 ಹೊಸ ಎಲೆಕ್ಟ್ರಿಕ್ ವಾಹನಗಳ ಪೈಕಿ ಒಂದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ