Tata Motors: ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್​ ಕಾರನ್ನು ಪರಿಚಯಿಸಲಿರುವ ಟಾಟಾ ಮೋಟಾರ್ಸ್​!

ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಚಿಂತಿಸಿದೆ. ಕಂಪನಿಯು ಈ ಕಾರನ್ನು 12.5 ಲಕ್ಷ ಬೆಲೆಗೆ ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಟಾಟಾ ಮೋಟಾರ್ಸ್​ ಕಾರುಗಳು

ಟಾಟಾ ಮೋಟಾರ್ಸ್​ ಕಾರುಗಳು

 • Share this:
  ಭಾರತದಲ್ಲಿ ಎಲೆಕ್ಟ್ರಿಕ್​ ಕಾರುಗಳ ಪರ್ವ ಪ್ರಾರಂಭವಾಗಿದೆ. ಈಗಾಗಲೇ ಹಲವು ಕಂಪನಿಗಳು ಭಾರತೀಯ ಗ್ರಾಹಕರಿಗಾಗಿ ಎಲೆಕ್ಟ್ರಿಕ್​ ಕಾರುಗಳನ್ನು (Electric Car) ಪರಿಚಯಿಸಿವೆ. ಇಂಧನ ಬೆಲೆ ಏರಿಕೆಯಿಂದ ಬಳಲಿದವರು ಈ ಎಲೆಕ್ಟ್ರಿಕ್​ ಕಾರುಗಳನ್ನು ಖರೀದಿಸುತ್ತಿದ್ದಾರೆ. ಅದರೆ ಎಲೆಕ್ಟ್ರಿಕ್​ ಕಾರುಗಳು ಇಂಧನ ಚಾಲಿತ (Fuel) ಕಾರುಗಳಿಂತಲೂ ದುಬಾರಿಯಾಗಿವೆ. ಹಾಗಾಗಿ ಹೆಚ್ಚಿನವರು ಈ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಅಗ್ಗದ ಎಲೆಕ್ಟ್ರಿಕ್​ ಕಾರುಗಳಿಗಾಗಿ ಕಾಯುತ್ತಿದ್ದಾರೆ. ಆದರೀಗ ಅಂತಹವರಿಗಾಗಿ ಟಾಟಾ ಮೋಟಾರ್ಸ್ (Tata Motors)​ ಸಿಹಿಸುದ್ದಿ ಹೊತ್ತುತಂದಿದೆ. ಅದೇನೆಂದರೆ ಟಾಟಾ ಮೋಟಾರ್ಸ್​ ಅಗ್ಗದ ಎಲೆಕ್ಟ್ರಿಕ್​ ಕಾರನ್ನು ಬಿಡುಗಡೆ ಮಾಡಲು ಯೋಚಿಸುತ್ತಿದೆ ಎಂದು ಸಿಎನ್​ಬಿಸಿ ವರದಿ ಮಾಡಿದೆ.

  ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ ಭಾರತದ ಅಗ್ಗದ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಚಿಂತಿಸಿದೆ. ಕಂಪನಿಯು ಈ ಕಾರನ್ನು 12.5 ಲಕ್ಷ ಬೆಲೆಗೆ ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

  ಟಾಟಾ ಮೋಟಾರ್ಸ್‌ನ ಪ್ರಯಾಣಿಕ ವಾಹನ ವ್ಯಾಪಾರ ಘಟಕದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಅವರು ಸಿಎನ್​ಬಿಸಿ-ಟಿವಿ18ಗೆ ವಿಶೇಷ ಸಂದರ್ಶನ ನೀಡಿದ್ದು, ಕಂಪನಿಯು ಟಾಟಾ ಟಿಗೋರ್​ ಎಲೆಕ್ಟ್ರಿಕ್​ ಕಾರಿಗಿಂತಲೂ ಕಡಿಮೆ ಬೆಲೆಯಲ್ಲಿ ಈ ಕಾರನ್ನು ಪರಿಚಯಿಸಲಿದ್ದೇವೆ ಎಂದು ಹೇಳಿದ್ದಾರೆ.

  ಟಾಟಾ ಮೋಟಾರ್ಸ್​ ತನ್ನದೇ ಆದ ಮಾರುಕಟ್ಟೆಯ ಸ್ಥಾನವನ್ನು ಹೊಂದಿದೆ. ಜೊತೆಗೆ ಗ್ರಾಹಕ ಮನಗೆದ್ದಿದೆ. ಈಗಾಗಲೇ ಎಲೆಕ್ಟ್ರಿಕ್​ ಕಾರು ಟಾಟಾ ಟಿಗೋರ್​ ಕೂಡ ಮಾರುಕಟ್ಟೆಯಲ್ಲಿದೆ. ಇದರ ಮೆಲೆ 12.5 ಲಕ್ಷ ರೂಪಾಯಿಯಾಗಿದ್ದು, ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಕಾರನ್ನು ಪರಿಚಯಿಸುವ ಯೋಜನೆಯನ್ನು ಕಂಪನಿ ಹಾಕಿಕೊಂಡಿದೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Redmi 11 Prime 5G: ಗ್ರಾಹಕರ ಮನಕದ್ದ ರೆಡ್​ಮಿ 11 ಪ್ರೈಮ್​ 5G ಫೋನ್​! ಇದರ ಬೆಲೆ ಎಷ್ಟು?

  ನಂತರ ಮಾತು ಮುಂದುವರಿಸಿದ ಶೈಲೇಶ್ ಚಂದ್ರ ಅವರು, ಟಾಟಾ ಮೋಟಾರ್ಸ್‌ನ ಮುಂದಿನ EV ಹ್ಯಾಚ್‌ಬ್ಯಾಕ್ ಆಗಿರಬಹುದು ಎಂದು  ಸುಳಿವು ನೀಡಿದ್ದಾರೆ. ಒಂದು ಹ್ಯಾಚ್‌ಬ್ಯಾಕ್ ಒಂದು ಕಾರ್ ಬಾಡಿ ಕಾನ್ಫಿಗರೇಶನ್ ಆಗಿದ್ದು, ಇದು ಕಾರ್ಗೋಗೆ ಪ್ರವೇಶವನ್ನು ಒದಗಿಸಲು ಮೇಲ್ಮುಖವಾಗಿ ಸ್ವಿಂಗ್ ಆಗುವ ಹಿಂಬದಿಯ ಬಾಗಿಲನ್ನು ಹೊಂದಿದೆ ಮತ್ತು ಫೋಲ್ಡ್-ಡೌನ್ ಎರಡನೇ ಸಾಲಿನ ಸೀಟನ್ನು ಹೊಂದಿರಬಹುದು ಎಂದು ಹೇಳಿದ್ದಾರೆ.

  ಬಹುತೇಕ ಕಂಪನಿಗಳು ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಗುರಿ ಹೊಂದಿದೆ. ಅದೇರೀತಿ ಟಾಟಾ ಮೋಟಾರ್ಸ್​ ಕಂಪನಿಯು 2023 ರ ಹಣಕಾಸು ವರ್ಷದಲ್ಲಿ 50 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ ಎಂದು ಶೈಲೇಶ್​ ಚಂದ್ರು ಹೇಳಿದ್ದಾರೆ

  ಟಾಟಾ ಮೋಟಾರ್ಸ್ EV ಮಾರಾಟದ ಬಗ್ಗೆ ಮಾತನಾಡಿದ ಚಂದ್ರು, 17,000 ಯುನಿಟ್ ಮಾರಾಟವನ್ನು ಮಾಡಿದೆ ಮತ್ತು ಈಗ ಕಂಪನಿಯು FY23 ರಲ್ಲಿ 50 ಸಾವಿರ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಗುರಿಪಡಿಸುತ್ತದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: Realme GT Neo 3T ಸ್ಮಾರ್ಟ್​ಫೋನ್​ ಬಿಡುಗಡೆಗೆ ಕೆಲವೇ ದಿನಗಳು ಬಾಕಿ! ಇದರ ಫೀಚರ್ಸ್​ ಬಗ್ಗೆ ತಿಳಿಯೋಣ

  ಸದ್ಯ ಟಾಟಾ ಮೋಟರ್ಸ್​ ಕಂಪನಿ ಮಾರುಕಟ್ಟೆಯಲ್ಲಿ ಉಳಿದ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತದೆ. ಕಾರು ಗಟ್ಟಿತನ ಮತ್ತು ಸುರಕ್ಷತೆ ಅಂಶಗಳೇ ಹೈಲೇಟ್​ ಆಗುತ್ತಿರುವ ಕಾರಣ ಬಹುತೇಕ ಗ್ರಾಹಕರು ಟಾಟಾ ಮೋಟಾರ್ಸ್​ನತ್ತ ಮುಖ ಮಾಡುತ್ತಿದ್ದಾರೆ.

  ಟಾಟಾ ಮೋಟಾರ್ಸ್​ನ 2022 ರ ಆರಂಭದ ಅಂಕಿಅಂಶಗಳ ಪ್ರಕಾರ, ಕಳೆದ ಆರ್ಥಿಕ ವರ್ಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ಎಲೆಕ್ಟ್ರಿಕ್ ವಾಹನ ಜಾಗವನ್ನು ಮುನ್ನಡೆಸಿರುವ ಸಂಸ್ಥೆಯು ತನ್ನ EV ಶ್ರೇಣಿಗಾಗಿ ಫೆಬ್ರವರಿಯಿಂದ ಏಪ್ರಿಲ್‌ವರೆಗೆ ಸರಾಸರಿ 5,500-6,000 ಬುಕಿಂಗ್‌ಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

  ಈಗಾಗಲೇ ಟಾಟಾ ಮೋಟಾರ್ಸ್​ ಕಂಪನಿಯ ಮೂರು ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿವೆ. ನೆಕ್ಸಾನ್ ಇವಿ, ಟಿಗೋರ್ ಇವಿ ಮತ್ತು ಎಕ್ಸ್‌ಪ್ರೆಸ್-ಟಿ  ಗ್ರಾಹಕ ಮನಗೆದ್ದಿದೆ. ಅಂದಹಾಗೆಯೇ ಇದನ್ನು ಇತ್ತೀಚೆಗೆ ಕೂಪ್ ಶೈಲಿಯ SUV ಅನ್ನು ಅನಾವರಣಗೊಳಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ.
  Published by:Harshith AS
  First published: