TATA Punch: ಈ ದಿನ ಬಿಡುಗಡೆಯಾಗಲಿದೆ ಮೈಕ್ರೋ SUV ಟಾಟಾ ಪಂಚ್.. ಬೆಲೆಯೆಷ್ಟು? ಫೀಚರ್ಸ್ ಹೇಗಿದೆ?

ಇಂಪ್ಯಾಕ್ಟ್ 2.0 ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಿದ ಟಾಟಾ ಮೋಟಾರ್ಸ್ ಮೊದಲ ಎಸ್‍ಯುವಿ ಕಾರ್ ಇದಾಗಿದೆ. ಟಾಟಾ ಕಂಪನಿ ಇಂಜಿನ್ ಹೊರತುಪಡಿಸಿ ಎಲ್ಲ ಮಾಹಿತಿಯನ್ನು ಟೀಸರ್ ಮೂಲಕ ರಿವೀಲ್ ಮಾಡಿದೆ. ಒಟ್ಟು ಮೂರು ಬಣ್ಣಗಳ ಜೊತೆ ಅತಿ ಹೆಚ್ಚು ಪೀಚರ್ಸ್ ಗಳ ಜೊತೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

 suv tata punch

suv tata punch

  • Share this:
micro suv tata launch car: ಟಾಟಾ ಮೋಟಾರ್ಸ್ (Tata Motors) ಕೊನೆಗೂ ತನ್ನ ಮೈಕ್ರೋ ಎಸ್‍ಯುವಿ ಟಾಟಾ ಪಂಚ್ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಿದೆ. ಅಕ್ಟೋಬರ್ 4ರಂದು ಕಾರ್ ಅನಾವರಣಗೊಳ್ಳಲಿದೆ. ಕಾರ್ಯಕ್ರಮ ವರ್ಚುವಲ್ ಆಗಲಿ ನಡೆಯಲಿದ್ದು, ಶೀಘ್ರದಲ್ಲಿಯೇ ಇವೆಂಟ್ ಕುರಿತ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಕಂಪನಿ ಮಾಹಿತಿ ನೀಡಿದೆ. ಮೈಕ್ರೋ ಎಸ್‍ಯುವಿ ಟಾಟಾ ಪಂಚ್ ಪರಿಚಯಿಸಿದ ಕೂಡಲೇ ಗ್ರಾಹಕರು  ಟಾಟಾ ಪಂಚ್ ತಮ್ಮ ಮನೆಗೆ ಕರೆದೊಯ್ಯಲು ಸಿದ್ಧತೆ ಸಹ ನಡೆಸಿದ್ದಾರೆ. ಹೊಸ ಟಾಟಾ ಪಂಚ್ ಮೈಕ್ರೋ-ಎಸ್‍ಯುವಿ ಬ್ರಾಂಡ್ ಇದು ಚಿಕ್ಕ ಎಸ್‍ಯುವಿ ಆಗಿದ್ದು, ಕಂಪನಿಯ ಲೈನ್‍ಅಪ್ ನಲ್ಲಿ ನೆಕ್ಸನ್ ಕಾಂಪೆಕ್ಟ್ ಎಸ್‍ಯುವಿ ನಂತರದ ಸ್ಥಾನದಲ್ಲಿರಿಸಲಾಗಿದೆ. ಕಳೆದ ವರ್ಷದ ಆಟೋ  ಎಕ್ಸ್ ಪೋದಲ್ಲಿ ಎಚ್‍ಬಿಎಕ್ಸ್ ಕಾನ್ಸೆಪ್ಟ್ ನಲ್ಲಿ ಮೈಕ್ರೋ ಎಸ್‍ಯುವಿಯಾಗಿ ಪರಿಚಯಿಸಲಾಗಿತ್ತು.

ಟಾಟಾ ಪಂಚ್ ಎಎಲ್‍ಎಫ್‍ಎ-ಎಆರ್ ಸಿ (Agile Light Flexible Advanced Architecture) ನಲ್ಲಿ ನಿರ್ಮಿಸಲಾಗಿದ್ದು, ಇಂಪ್ಯಾಕ್ಟ್ 2.0 ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಿದ ಟಾಟಾ ಮೋಟಾರ್ಸ್ ಮೊದಲ ಎಸ್‍ಯುವಿ ಕಾರ್ ಇದಾಗಿದೆ. ಟಾಟಾ ಕಂಪನಿ ಇಂಜಿನ್ ಹೊರತುಪಡಿಸಿ ಎಲ್ಲ ಮಾಹಿತಿಯನ್ನು ಟೀಸರ್ ಮೂಲಕ ರಿವೀಲ್ ಮಾಡಿದೆ. ಒಟ್ಟು ಮೂರು ಬಣ್ಣಗಳ ಜೊತೆ ಅತಿ ಹೆಚ್ಚು ಪೀಚರ್ಸ್ ಗಳ ಜೊತೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಟೀಸರ್ ನಲ್ಲಿ ಅರಿಜೊನಾ ಬ್ಕ್ಯೂ, ಡೇ ಟೋನಾ  ಗ್ರೆ, ಪ್ಯೂರ್ ಸಿಲ್ವರ್, ಆರೆಂಜ್ ಮತ್ಯು ವೈಟ್ ನಲ್ಲಿರಲಿದೆ. ಹೆದ್ದಾರಿಯಲ್ಲಿ ಸ್ಪೋಟ್ರ್ಸ್ ಕಾರ್ ಅನುಭವವನ್ನು ಟಾಟಾ ಪಂಚ್ ನೀಡಲಿದೆ.

ಇದನ್ನೂ ಓದಿ: Volkswagen Taigun: ಇಂದು ದೇಶಿಯ ಮಾರುಕಟ್ಟೆಗೆ ವೋಕ್ಸ್​ವ್ಯಾಗನ್​ ಟೈಗುನ್ ಕಾರು; ಬೆಲೆ, ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ

ಮೈಕ್ರೋ SUV ಟಾಟಾ ಪಂಚ್ ವಿನ್ಯಾಸ ಹೇಗಿದೆ?

ಕಾರ್ ಮುಂಭಾಗ ಮತ್ತು ಹಿಂಭಾಗದಲ್ಲಿ ಸೈಟ್  ಪ್ರೊಫೈಲ್ ಡಿಸೈನ್ ಹೊಂದಿದೆ. ಕಂಪನಿ ಬಿಡುಗಡೆಗೊಳಿಸಿರುವ ಚಿತ್ರಗಳನ್ನು ಗಮನಿಸಿದ್ರೆ ಮುಭಾಗದ ಬಂಪರ್ ಮತ್ತು  ಬಾಡಿ ಕ್ಲಾಡಿಂಗ್ ಈ ಮೊದಲಿನ ಕಾರ್ ಗಳ ಪರಿಕಲ್ಪನೆಯಿಂದ ಕೊಂಚ ಇಳಿಸಿರೋದನ್ನು ಕಾಣಬಹುದಾಗಿದೆ.

ಕಾರಿನಲ್ಲಿ ವಿಭಜಿತವಾಗಿರುವ  ಹೆಡ್‍ಲ್ಯಾಂಪ್ ಸೆಟ್‍ಅಪ್, ಹ್ಯುಮಿನಿಟಿ ಲೈನ್ ಗ್ರಿಲ್, ವೀಲ್ ಆರ್ಚ್, ಹೊರಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, 16 ಇಂಚಿನ ಆಲಾಯ್ ವೀಲ್, ಕ್ರಿಸ್ ಲೈನ್  ಹೊಂದಿರುವ ಬ್ಯಾನೆಟ್, ರೂಫ್ ರೈಲ್ಸ್ ಹೊಂದಿದೆ. ಎಬಿಎಸ್ ಜೊತೆ ಇಬಿಡಿ, ಡ್ಯುಯಲ್ ಫ್ರಂಡ್ ಏರ್ ಬ್ಯಾಗ್, ಟ್ರಾಕ್ಸನ್ ಕಂಟ್ರೋಲ್, ಹಿಲ್ ಆಸಿಸ್ಟ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯಲ್ ಪಾರ್ಕಿಂಗ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಹೈಸ್ಪೀಡ್ ಅಲರ್ಟ್ ಸೇರಿದಂತೆ ಇನ್ನಿತರ ಸೌಲಭ್ಯಗಳಿರಲಿವೆ.

ಮೈಕ್ರೋ SUV ಟಾಟಾ ಪಂಚ್ ಇಂಜಿನ್ ಸಾಮರ್ಥ್ಯ ಹೀಗಿದೆ..

ಟಿಯಾಗೋ ಮಾದರಿಯಲ್ಲಿರುವ 1.2 ಲೀಟರ್  ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆಗೆ ಪರ್ಫಾಮೆನ್ಸ್  ಪ್ರಿಯರಿಗಾಗಿ 1.2 ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಬಹುದು. ಕಾರ್ ಆರಂಭಿಕವಾಗಿ 4.90 ಲಕ್ಷ ರೂ.ಯಿಂದ ಟಾಪ್ ಎಂಡ್ ಮಾದರಿಯು 6.50 ಲಕ್ಷ ರೂ. ಬೆಲೆಗೆ ಸಿಗಬಹುದು. ಹೊಸ ಟಾಟಾ ಪಂಚ್ ಮಾರುತಿ ಸುಜುಕಿ ಇಗ್ನಿಸ್, ಹುಂಡೈ ಸ್ಯಾಂಟ್ರೋ, ನಿಸ್ಪಾನ್ಸ್ ಮ್ಯಾಗ್ನೆಟ್ ಮತ್ತು ರೆನಾಲ್ಡೋ ಕ್ವಿಡ್ ಗೆ ಪೈಪೋಟಿ ನೀಡುವ ಸಾಧ್ಯತೆಗಳಿವೆ.

ವರದಿ: ಮಹ್ಮದ್ ರಫೀಕ್ ಕೆ.
Published by:Kavya V
First published: