Tamil Nadu: ವೈದ್ಯರಿಗಾಗಿ ಆ್ಯಪ್ ಬಿಡುಗಡೆ ಮಾಡಲಿರುವ ತಮಿಳುನಾಡು ರಾಜ್ಯ ವೈದ್ಯಕೀಯ ಮಂಡಳಿ

App: ತಮಿಳುನಾಡು ರಾಜ್ಯ ವೈದ್ಯಕೀಯ ಮಂಡಳಿಯು ವೈದ್ಯರಿಗಾಗಿ ಒಂದು ಆ್ಯಪ್ ಅನ್ನು ಪ್ರಾರಂಭಿಸಲಿದೆ, ಅದು ಪ್ರಿಸ್ಕ್ರಿಪ್ಷನ್ ಗಳು ಮತ್ತು ರಜೆಯ ಪ್ರಮಾಣ ಪತ್ರಗಳು ಮತ್ತು ಮರಣ ಪ್ರಮಾಣ ಪತ್ರಗಳಂತಹ ಇತರ ದಾಖಲೆಗಳನ್ನು ಪ್ರಮಾಣೀಕರಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸುಮಾರು ಎರಡು ವರ್ಷಗಳಿಂದ ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಜನರು ತಮ್ಮ ಮನೆಯಿಂದ ಹೊರಗೆ ಹೋಗಲು ಆಗದೆ ಪರದಾಡಿದ್ದು ನಮಗೆಲ್ಲಾ ಗೊತ್ತೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಕೋವಿಡ್ ಹೊರತು ಪಡಿಸಿ ಬೇರೆ ಇತರೆ ಕಾಯಿಲೆಗಳು (Disease) ಕಾಡಿದರೆ ಹೇಗೆ ಎಂದು ಅರಿತುಕೊಂಡು ಆನ್‌ಲೈನ್ ನಲ್ಲಿಯೇ (Online) ನಮಗೆ ಬೇಕಾದ ವೈದ್ಯರನ್ನು (Docotor) ವೀಡಿಯೋ ಕಾನ್ಫರೆನ್ಸಿಂಗ್ (Video Conference) ಮತ್ತು ಚಾಟ್ (Chat) ಮೂಲಕ ವೈದ್ಯರನ್ನು ವರ್ಚ್ಯುವಲ್ ಆಗಿ ಭೇಟಿ ಮಾಡಿ ತಮ್ಮ ಅನಾರೋಗ್ಯಕ್ಕೆ ಏನು ಕಾರಣ? ಯಾವ ಮಾತ್ರೆಗಳನ್ನು ತೆಗೆದು ಕೊಂಡರೇ ಸೂಕ್ತ ಮತ್ತು ರೋಗವು ದೂರಾಗುವುದು ಎಂದು ತಿಳಿದುಕೊಳ್ಳಲು ಅನೇಕ ರೀತಿಯ ಆ್ಯಪ್ ಗಳು (Apps) ಹುಟ್ಟಿ ಕೊಂಡವು ಎಂದು ಹೇಳಿದರೆ ತಪ್ಪಾಗುವುದಿಲ್ಲ.

    ಜನರು ಅಂತಹ ಸಂದರ್ಭದಲ್ಲಿ ತಮ್ಮ ಮನೆಯಲ್ಲಿಯೇ ಕುಳಿತು ಆ ವೈದ್ಯರ ಆ್ಯಪ್ ಗಳನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತಮಗೆ ಬೇಕಾದ ವೈದ್ಯರನ್ನು ವರ್ಚ್ಯುವಲ್ ಆಗಿ ಭೇಟಿ ಮಾಡಿ ತಮ್ಮ ಕಾಯಿಲೆಗೆ ಮಾತ್ರೆಗಳನ್ನು ಅವರ ಕೈಯಿಂದ ಬರೆಸಿಕೊಂಡು ಅವರಿಗೆ ಆನ್‌ಲೈನ್ ನಲ್ಲಿಯೇ ಹಣವನ್ನು ಪಾವತಿಸಿದ್ದರು.

    ಒಟ್ಟಿನಲ್ಲಿ ಜನರಿಗೆ ಈ ಕೋವಿಡ್ ಸಂದರ್ಭದಲ್ಲಿ ಬೇರೆ ಕಾಯಿಲೆಗಳು ಬಂದರೆ ತೊಂದರೆ ಆಗಬಾರದು ಎಂದು ಅನೇಕ ರೀತಿಯ ಆ್ಯಪ್ ಗಳನ್ನು ಪರಿಚಯಿಸಿದರು ಎಂದು ಹೇಳಬಹುದು.

    ಇದನ್ನೂ ಓದಿ: WhatsAppನಲ್ಲಿ ಇನ್ಮುಂದೆ 2GB ಗಾತ್ರದ ಫೈಲ್ಸ್​ ಕಳಿಸ್ಬೋದು! ಇಷ್ಟೇ ಅಲ್ಲ, ಇನ್ನೂ ಇದೆ ಫೀಚರ್ಸ್​

    ಈಗ ತಮಿಳುನಾಡು ರಾಜ್ಯ ವೈದ್ಯಕೀಯ ಮಂಡಳಿಯು ವೈದ್ಯರಿಗಾಗಿ ಒಂದು ಆ್ಯಪ್ ಅನ್ನು ಪ್ರಾರಂಭಿಸಲಿದೆ, ಅದು ಪ್ರಿಸ್ಕ್ರಿಪ್ಷನ್ ಗಳು ಮತ್ತು ರಜೆಯ ಪ್ರಮಾಣ ಪತ್ರಗಳು ಮತ್ತು ಮರಣ ಪ್ರಮಾಣ ಪತ್ರಗಳಂತಹ ಇತರ ದಾಖಲೆಗಳನ್ನು ಪ್ರಮಾಣೀಕರಿಸುತ್ತದೆ. ತಮಿಳುನಾಡು ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ.ಕೆ.ಸೆಂಥಿಲ್ ಅವರ ಪ್ರಕಾರ, ಈ ಆ್ಯಪ್ ಅನ್ನು ಜೂನ್ ತಿಂಗಳ ಮಧ್ಯದಲ್ಲಿ ಪ್ರಾರಂಭಿಸಲಾಗುವುದು.

    ಹೊಸ ಅಪ್ಲಿಕೇಶನ್ ಗೆ ಸಂಬಂಧಿಸಿದ ಕೆಲಸವು ಬಹುತೇಕವಾಗಿ ಆಗಿದ್ದು, ಆ್ಯಪ್ ಸಿದ್ಧವಾಗಿದೆ ಮತ್ತು ಅದನ್ನು ಹೆಚ್ಚು ಬಳಕೆದಾರ ಸ್ನೇಹಿಯಾಗಿಸಲು ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತಿದೆ ಎಂದು ವೈದ್ಯಕೀಯ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ. ರೋಗಿಯ ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ಎತ್ತರ, ತೂಕ, ರಕ್ತದೊತ್ತಡ ಮತ್ತು ಇತರ ವೈದ್ಯಕೀಯ ಮಾಹಿತಿಯಂತಹ ಪ್ರಮುಖ ವಿವರಗಳಂತಹ ವಿವರಗಳನ್ನು ಪ್ರಿಸ್ಕ್ರಿಪ್ಷನ್ ಗಳು ಹೊಂದಿರುತ್ತವೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: V23E ಸ್ಮಾರ್ಟ್‌ಫೋನ್ ಖರೀದಿಸುವವರಿಗೆ ಒಂದೊಳ್ಳೆ ಅವಕಾಶ! ವಿಶೇಷ ಕೊಡುಗೆ ಘೋಷಿಸಿದೆ Vivo

    ಅಪ್ಲಿಕೇಶನ್ ಪ್ರಸ್ತುತ ಪ್ರಿಸ್ಕ್ರಿಪ್ಷನ್ ಅನ್ನು ಹಳೆಯ ಪ್ರಿಸ್ಕ್ರಿಪ್ಷನ್ ಗಳಿಗೆ ಸಂಪರ್ಕವನ್ನು ಕಲ್ಪಿಸಿ ಕೊಡಲಾಗುವುದು ಮತ್ತು ವೈದ್ಯಕೀಯ ಮಂಡಳಿಯ ಪ್ರಕಾರ, ಇದು ಕೆಲವು ವರ್ಷಗಳವರೆಗೆ ರೋಗಿಗಳ ವೈದ್ಯಕೀಯ ದಾಖಲೆಗಳನ್ನು ನಿರ್ವಹಿಸಲು ಸಹ ವೈದ್ಯರಿಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

    "ಆಸ್ಪತ್ರೆಯ ಮಾಹಿತಿ ನಿರ್ವಹಣಾ ಸಾಫ್ಟ್‌ವೇರ್ ಹೊಂದಿಲ್ಲದ ಕ್ಲಿನಿಕ್ ಗಳು, ನೆರೆಹೊರೆಯ ಆಸ್ಪತ್ರೆಗಳು ಮತ್ತು ಮಿಡ್-ಕ್ಯಾಪ್ ಆಸ್ಪತ್ರೆಗಳನ್ನು ಗುರಿಯಾಗಿಸಿ ಈ ಅಪ್ಲಿಕೇಶನ್ ಕಾರ್ಯ ನಿರ್ವಹಿಸಲಿದೆ" ಎಂದು ಸೆಂಥಿಲ್ ಸುದ್ದಿ ಸಂಸ್ಥೆಗೆ ತಿಳಿಸಿದರು.

    ಈ ಪ್ರಿಸ್ಕ್ರಿಪ್ಷನ್ ಗಳನ್ನು ರೋಗಿಯ ಮೊಬೈಲ್ ಗೆ ಕಳುಹಿಸಬಹುದು ಅಥವಾ ಪಿಡಿಎಫ್ ಅನ್ನು ಅವರಿಗೆ ಇ-ಮೇಲ್ ಸಹ ಮಾಡಬಹುದು ಮತ್ತು ಅದರ ಒಂದು ಪ್ರತಿಯನ್ನು ಕ್ಲೌಡ್ ನಲ್ಲಿ ಸಂಗ್ರಹಿಸಬಹುದು ಎಂದು ವೈದ್ಯಕೀಯ ಮಂಡಳಿ ಅಧ್ಯಕ್ಷರು ಹೇಳಿದರು. ಹೊಸ ವೈದ್ಯಕೀಯ ಅಪ್ಲಿಕೇಶನ್ ವೈದ್ಯಕೀಯ ರಜೆ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಪ್ರಮಾಣಿತ ಸ್ವರೂಪಗಳಿಗೆ ಕಾರಣವಾಗುತ್ತದೆ.

    ಕಳೆದ ಎರಡು ವರ್ಷಗಳಲ್ಲಿ, ವೈದ್ಯರು ಕೆಲವು ವೈದ್ಯಕೀಯ ಮಾಹಿತಿಯನ್ನು ವಿವರಿಸದೆ ವೈದ್ಯಕೀಯ ರಜೆಗಳು ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡುತ್ತಾರೆ ಎಂದು ಹಲವಾರು ದೂರುಗಳು ಬಂದಿವೆ ಎಂಬುದನ್ನು ಗಮನಿಸಬಹುದು.

    ಸೆಂಥಿಲ್ ಅವರ ಪ್ರಕಾರ, ವೈದ್ಯಕೀಯ ಅಪ್ಲಿಕೇಶನ್ ನ ಉದ್ದೇಶವು ಮಾನದಂಡಗಳನ್ನು ನಿಗದಿಪಡಿಸುವುದು ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರೋಟೋಕಾಲ್ ಗಳನ್ನು ಅನುಸರಿಸಲು ವೈದ್ಯರಿಗೆ ಸಹಾಯ ಮಾಡುವುದು ಮತ್ತು ಎಲ್ಲಾ ದಾಖಲೆಗಳನ್ನು ಟ್ರ್ಯಾಕ್ ಮಾಡುವುದಾಗಿದೆ.
    Published by:Harshith AS
    First published: