Trends selfie- ಇನ್ನೂ ಇದೆ ಗಣೇಶ ಉತ್ಸವ; ಟ್ರೆಂಡ್ಸ್ ಸೆಲ್ಫಿ ಸ್ಪರ್ಧೆಯಲ್ಲಿ ಭಾಗವಹಿಸಿ

Selfie with Ganesha- ನಿಮ್ಮ ಮನೆಗಳಲ್ಲಿ ನೀವು ಗಣೇಶ ಕೂರಿಸಿದ್ದರೆ ಒಂದು ಸೆಲ್ಫಿ ತೆಗೆದು ನಮಗೆ ಕಳುಹಿಸಿ. ಈ ಮೂಲಕ ಟ್ರೆಂಡ್ಸ್ ಕುಟುಂಬದ ಗಣೇಶೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ರಿಲಯನ್ಸ್ ರಿಟೇಲ್​ನ ಭಾರತದ ಅತಿದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಉಡುಪು ಹಾಗೂ ಇತರ ಪರಿಕರಗಳ ವಿಶೇಷ ಮಳಿಗೆ ಟ್ರೆಂಡ್ಸ್, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ತನ್ನ ಗ್ರಾಹಕರ ಜೊತೆಗಿನ ಬಾಂಧವ್ಯವನ್ನು ಬಲಗೊಳಿಸುತ್ತಿದೆ.

  ಗಣೇಶ ಚತುರ್ಥಿ ಅಥವಾ ಗಣೇಶ ಉತ್ಸವವು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಸಂಭ್ರಮದಿಂದ ಆಚರಿಸಲಾಗುವ ಅತಿ ದೊಡ್ಡ ಹಬ್ಬ. ವಿನಾಯಕ ಚತುರ್ಥಿ ಎಂದೂ ಕರೆಯಲಾಗುವ ಗಣೇಶ ಚತುರ್ಥಿಯನ್ನು, ಗಣೇಶನು ತನ್ನ ತಾಯಿ, ದೇವಿ ಪಾರ್ವತಿ/ಗೌರಿಯ ಜೊತೆಗೂಡಿ ಕೈಲಾಸ ಪರ್ವತದಿಂದ ಭೂಮಿಗೆ ಬರುವ ಸಂಭ್ರಮ ಎಂದೂ ಆಚರಿಸಲಾಗುತ್ತದೆ. ವೈಯಕ್ತಿಕವಾಗಿ ಮನೆಗಳಲ್ಲಿ ಮತ್ತು ಸಾರ್ವಜನಿಕವಾಗಿ ಗಣೇಶ ಪೆಂಡಾಲುಗಳಲ್ಲಿ ಆನೆಯ ಸೊಂಡಿಲಿನ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಅಲಂಕಾರದೊಂದಿಗೆ ಪೂಜೆ ಕೈಗೊಳ್ಳುವ ಮೂಲಕ ಗಣೇಶ ಚತುರ್ಥಿಯನ್ನು ಆಚರಿಸಲಾತ್ತದೆ.

  ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಗಣೇಶ ಉತ್ಸವದ ಪ್ರಯುಕ್ತ ಟ್ರೆಂಡ್ಸ್ ತನ್ನ ಗ್ರಾಹಕರಿಗಾಗಿ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ.

  ಗಣೇಶ ಮೂರ್ತಿಯೊಂದಿಗೆ ಟ್ರೆಂಡ್ಸ್ ಸೆಲ್ಫಿ ಸ್ಪರ್ಧೆ:

  "ಗಣೇಶ ಮೂರ್ತಿಯೊಂದಿಗೆ ಟ್ರೆಂಡ್ಸ್ ಸೆಲ್ಫಿ ಸ್ಪರ್ಧೆ" ಎಂಬ ವಿಶೇಷ ಸ್ಪರ್ಧೆಯೊಂದಿಗೆ ಟ್ರೆಂಡ್ಸ್ ಈ ವರ್ಷ ಮತ್ತೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಮಂಗಳಕರ ಗಣೇಶ ಚತುರ್ಥಿಯ ಸಂದರ್ಭದಲ್ಲಿ ತನ್ನ ಗ್ರಾಹಕರೆದುರು ಹಾಜರಾಗುತ್ತಿದೆ.

  ಈ ಸ್ಪರ್ಧೆಯ ಮೂಲಕ ಟ್ರೆಂಡ್ಸ್ ತನ್ನ ಗ್ರಾಹಕರಿಂದ, ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ ಅಲಂಕೃತ ಗಣೇಶ ಮೂರ್ತಿಗಳೊಂದಿಗಿನ ಸೆಲ್ಫಿ ಅಥವಾ ಗಣೇಶನೊಂದಿಗೆ ತಾವು ಇರುವ ಫೋಟೋಗಳನ್ನು ಆಹ್ವಾನಿಸುತ್ತಿದೆ.

  ಇದನ್ನೂ ಓದಿ: Reliance Jio: ಅಗ್ಗದ ಇವೆರಡು ಪ್ರಿಪೇಯ್ಡ್​ ಪ್ಲಾನ್​ಗಳನ್ನ ನಿಲ್ಲಿಸಿದ ರಿಲಯನ್ಸ್ ಜಿಯೋ!

  'ಅತ್ಯುತ್ತಮ ಅಲಂಕೃತ ಗಣೇಶ ಮೂರ್ತಿ' ಎಂದು ನಿರ್ಧರಿಸಲಾಗುವ ಸೆಲ್ಫಿ/ಫೋಟೋಗೆ ಮೊದಲ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು 1,500 ರೂಪಾಯಿಯ ಕೊಡುಗೆಯನ್ನು ಒಳಗೊಂಡಿರುತ್ತದೆ. ಅಷ್ಟೇ ಅಲ್ಲ, ಭಾಗವಹಿಸಿದ ಪ್ರತಿಯೊಬ್ಬರಿಗೂ ಟ್ರೆಂಡ್ಸ್ ರಿಯಾಯಿತಿ ಕೂಪನ್​ಗಳನ್ನು ನೀಡಲಾಗುತ್ತದೆ, ಇವುಗಳನ್ನು ತಮ್ಮ ಹತ್ತಿರದ ಸಣ್ಣ ನಗರಗಳ ಟ್ರೆಂಡ್ಸ್ ಮಳಿಗೆಗಳಲ್ಲಿ ಪಡೆದುಕೊಳ್ಳಬಹುದು. ಸ್ಪರ್ಧೆಯು ಸೆಪ್ಟೆಂಬರ್ 21ರಂದು ಕೊನೆಗೊಳ್ಳುತ್ತದೆ.

  ಸ್ಪರ್ಧೆಯ ಕುರಿತು ಮಾಹಿತಿಯನ್ನು ವಾಟ್ಸಾಪ್ ಕ್ಯಾಟಲಾಗ್, ಎಸ್ಎಂಎಸ್ ಮತ್ತು ಗ್ರಾಹಕರ ಮನೆ ಮನೆಗೆ ಹಂಚಲಾಗುವ ಟ್ರೆಂಡ್ಸ್ ಕರಪತ್ರಗಳ ಮೂಲಕ ನೀಡಲಾಗುವುದು.

  ಆಯಾ ನಗರಗಳಲ್ಲಿನ ಪ್ರತಿಷ್ಠಿತ ಕಲಾ ಶಿಕ್ಷಕರು ಪ್ರವೇಶಗಳನ್ನು ನಿರ್ಣಯಿಸುತ್ತಾರೆ. ಮೊದಲ ಬಹುಮಾನ ವಿಜೇತರನ್ನು ಆಯಾ ಸಣ್ಣ ನಗರಗಳ ಟ್ರೆಂಡ್ಸ್ ಮಳಿಗೆಗಳಿಗೆ ಆಹ್ವಾನಿಸಲಾಗುತ್ತದೆ ಮತ್ತು 1,500 ರೂಪಾಯಿ ಮೌಲ್ಯದ ಬಹುಮಾನವನ್ನು ಚಿರಪರಿಚಿತ ಮಹಿಳಾ ವೈದ್ಯೆ ಅಥವಾ ಸ್ಥಳೀಯ ಆಡಳಿತದ ಹಿರಿಯ ಮಹಿಳಾ ಅಧಿಕಾರಿಗಳು ಪ್ರದಾನ ಮಾಡುತ್ತಾರೆ.

  ಹಾಗಾದರೆ, ಈ ಬಾರಿಯ ಗಣೇಶ ಚತುರ್ಥಿ ಅಥವಾ ಗಣೇಶ ಉತ್ಸವಕ್ಕೆ ನಿಮ್ಮ ಯೋಜನೆಗಳು ಏನೇ ಇದ್ದರೂ, ನಿಮ್ಮ ಎಲ್ಲ ಫ್ಯಾಷನ್ ಅಗತ್ಯಗಳನ್ನು ಪೂರೈಸಲು ಇರುವ ವೇದಿಕೆ ಒಂದೇ. ನಿಮ್ಮ ಹತ್ತಿರದ ಸಣ್ಣ ನಗರದ ಟ್ರೆಂಡ್ಸ್ ಮಳಿಗೆಗೆ ಭೇಟಿ ನೀಡಿ, ಮತ್ತು ಅತ್ಯುತ್ತಮ ಹಾಗೂ ಹೊಸದಾದ ಫ್ಯಾಷನ್​ಗಳನ್ನು ಒಳ್ಳೆಯ ಕೊಡುಗೆಗಳೊಂದಿಗೆ ನಿಮ್ಮದಾಗಿಸಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ, "ಗಣೇಶ ಮೂರ್ತಿಯೊಂದಿಗೆ ಟ್ರೆಂಡ್ಸ್ ಸೆಲ್ಫಿ ಸ್ಪರ್ಧೆ"ಯಲ್ಲಿ ಭಾಗವಹಿಸುವುದನ್ನು ಮರೆಯದಿರಿ.

  ಇದನ್ನೂ ಓದಿ: JioPhone Next: ದೀಪಾವಳಿಗೂ ಮುನ್ನ ಬಿಡುಗಡೆಯಾಗಲಿದೆ ಜಿಯೋಫೋನ್ ನೆಕ್ಸ್ಟ್.. ಜಿಯೋ-ಗೂಗಲ್​​ ಕಾಂಬಿನೇಷನ್​ ಹೇಗಿದೆ?

  ಟ್ರೆಂಡ್ಸ್​ನ ಡಿಜಿಟಲ್ ಸಂಪರ್ಕ ಕೊಂಡಿಗಳು:

  Facebook: https://www.facebook.com/RelianceTrends

  Twitter: https://twitter.com/RelianceTrends

  Instagram: https://www.instagram.com/reliancetrends/

  Youtube: https://www.youtube.com/user/RelianceTrendsLive

  Website: https://www.trends.ajio.com

  ಟ್ರೆಂಡ್ಸ್ ಬಗ್ಗೆ:

  858 ನಗರಗಳಾದ್ಯಂತ 1,500ಕ್ಕೂ ಅಧಿಕ ಮಳಿಗೆಗಳ ಪ್ರಬಲ ನೆಟ್ವರ್ಕ್ ಹೊಂದಿರುವ ಟ್ರೆಂಡ್ಸ್, ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ನೆಲೆಯಾಗಿದೆ. ಇದು ನೂರಕ್ಕೂ ಹೆಚ್ಚು ದೇಶೀ ಹಾಗೂ ಅಂತಾರಾಷ್ಟ್ರೀಯ ಉಡುಪುಗಳು ಮತ್ತು ಸಾಮಗ್ರಿ ಬ್ರ್ಯಾಂಡ್​ಗಳನ್ನು ಹೊಂದಿದ್ದು, ಪ್ರತಿ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗಗಳಲ್ಲಿ ತನ್ನದೇ ಆದ 20 ಬ್ರ್ಯಾಂಡ್​ಗಳನ್ನು ಒಳಗೊಂಡಿದೆ.

  ರಿಲಯನ್ಸ್ ಟ್ರೆಂಡ್ಸ್​ನ ಸ್ವಂತ ಬ್ರ್ಯಾಂಡ್​ಗಳಲ್ಲಿ ಕೆಲವವು, ಆವಾಸ- ಮಹಿಳೆಯರಿಗಾಗಿ ವಿವಿಧ ಶ್ರೇಣಿಯ ಭಾರತೀಯ ದಿರಿಸುಗಳಾದ ಸಲ್ವಾರ್ ಕುರ್ತಾ, ಚೂಡಿದಾರ್ ಹಾಗೂ ಮಿಕ್ಸ್- ಎನ್-ಮ್ಯಾಚ್ ಶ್ರೇಣಿಯ ಉಡುಪುಗಳ ಅತ್ಯುತ್ತಮ ಸಂಗ್ರಹಗಳನ್ನು ಇದು ಹೊಂದಿದೆ. ರಿಯೋ- ಯುವ ಮಹಿಳೆಯರಿಗಾಗಿ ಆಕರ್ಷಕ ರೋಮಾಂಚನಕಾರಿ ಶ್ರೇಣಿಯ ಉಡುಪುಗಳು. ಫಿಗ್- ಸೂಕ್ಷ್ಮ, ಸ್ವತಂತ್ರ ಮತ್ತು ವೃತ್ತಿಪರ ಮಹಿಳೆಯರಿಗಾಗಿ ಫ್ಯಾಷನ್ ಉಡುಪು. ಫ್ಯೂಷನ್- ಪೂರ್ವ ಮತ್ತು ಪಶ್ಚಿಮದ ಬೆಸುಗೆ ಹಾಗೂ ಹಿತಕರ ಮತ್ತು ಆಕರ್ಷಕ ಶೈಲಿಯ ಮಹಿಳಾ ಫ್ಯೂಷನ್ ಉಡುಪುಗಳ ಶ್ರೇಣಿ. ನೆಟ್ವರ್ಕ್- ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಶ್ರೇಣಿಯ ಫಾರ್ಮಲ್ ಆಫೀಸ್ ಉಡುಗೆಗಳನ್ನು ಒಳಗೊಂಡಿದೆ. ನೆಟ್ಪ್ಲೇ- ಕಾರ್ಯಸ್ಥಳಗಳಿಗೆ ಸೂಕ್ತವಾದ ಸುಂದರ ಸರಳ ಉಡುಪುಗಳ ಸಂಗ್ರಹ ಇಲ್ಲಿದೆ. ಡಿಎನ್ಎಂಎಕ್ಸ್- ಭಾರತದ ಯುವಜನರಿಗಾಗಿ ಡೆನಿಮ್​ಗಳು, ಟಿ ಶರ್ಟ್ ಮುಂತಾದ ವಿಶೇಷವಾಗಿ ರೂಪಿಸಲಾದ ಫ್ಯಾಷನ್ ಉಡುಗೆಗಳು. ಪರ್ಫಾಮ್ಯಾಕ್ಸ್- ಕ್ರೀಡಾ ಚಟುವಟಿಕೆಗಳಲ್ಲಿ ಅದ್ಭುತ ಪ್ರದರ್ಶನಕ್ಕೆ ನೆರವಾಗುವ ವಿಶೇಷ ಸಕ್ರಿಯ ಉಡುಗೆ ಬ್ರ್ಯಾಂಡ್​ಗಳು.
  Published by:Vijayasarthy SN
  First published: