HOME » NEWS » Tech » SWIGGY NOW YOU CAN GET CHICKEN BIRIYANI AS PART OF FREEDOM COMBO FROM A JAIL IN KERALA HAS

ಇನ್ಮೇಲೆ ಸ್ವಿಗ್ಗಿಯಲ್ಲಿ ಜೈಲು ಊಟವನ್ನು ಆರ್ಡರ್​ ಮಾಡಬಹುದು!

ಜೈಲಿನಲ್ಲಿ 100 ಹೆಚ್ಚು ಜನರು ಆಹಾರವನ್ನು ತಯಾರಿಸುತ್ತಿದ್ದಾರೆ. ಅಂತೆಯೇ, ಪ್ರತಿದಿನ 25000 ಚಪಾತಿ ಮತ್ತು 500 ಬಗೆಯ ಬಿರಿಯಾನಿ ಖ್ಯಾದ್ಯವನ್ನು ಸಿದ್ಧಮಾಡುತ್ತಿದ್ದಾರೆ.

Harshith AS | news18
Updated:July 18, 2019, 6:20 PM IST
ಇನ್ಮೇಲೆ ಸ್ವಿಗ್ಗಿಯಲ್ಲಿ ಜೈಲು ಊಟವನ್ನು ಆರ್ಡರ್​ ಮಾಡಬಹುದು!
ಸಾಂದರ್ಭಿಕ ಚಿತ್ರ
  • News18
  • Last Updated: July 18, 2019, 6:20 PM IST
  • Share this:
ಇನ್ಮೇಲೆ ಆನ್​ಲೈನ್​ನಲ್ಲಿಯೇ ಜೈಲ್​ ಊಟವನ್ನು ಆರ್ಡರ್​​ ಮಾಡಿ ಸವಿಯಬಹುದಾಗಿದೆ. ಜನಪ್ರಿಯ ಫುಡ್​ ಡೆಲಿವರಿ ಅಪ್ಲಿಕೇಶನ್​ ಸ್ವಿಗ್ಗಿ ಇದೀಗ ಆನ್​ಲೈನ್​ ನಲ್ಲಿ  ಜೈಲ್​​ ಊಟವನ್ನು ಆರ್ಡರ್​​ ಮಾಡಬಹುದಾದ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.

ಕೇರಳದ ವಿಯೂರ್​ ಜೈಲಿನಲ್ಲಿ ಖೈದಿಗಳು ತಯಾರಿಸಿದ ಅಡುಗೆಯನ್ನು  ಗ್ರಾಹಕರು ಆನ್​ಲೈನ್​ನಲ್ಲಿ ಆರ್ಡರ್​​ ಮಾಡಿಕೊಂಡು ಸವಿಯಬಹುದಾಗಿದೆ. ಅದಕ್ಕಾಗಿ ಜೈಲಿನ ಅಧಿಕಾರಿಗಳು ಸ್ವಿಗ್ಗಿಯೊಂದಿಗೆ ಟೈಅಪ್​ ಮಾಡಿಕೊಂಡಿದ್ದು, ಮಾರಾಟ ಮಾಡುತ್ತಿದ್ದಾರೆ. ಅಂತೆಯೇ, ಜುಲೈ 11 ರಿಂದ ಈ ಸೇವೆ ಆರಂಭವಾಗಿದ್ದು. ಗ್ರಾಹಕರು ಆನ್​ಲೈನ್​ನಲ್ಲಿ ಆರ್ಡರ್​ ಮಾಡುವ ಮೂಲಕ ಜೈಲು ಊಟದ ರುಚಿಯನ್ನು ಸವಿಯ ಬಹುದಾಗಿದೆ.

ಇದನ್ನೂ ಓದಿ: ಸೆಕ್ಸ್ ನಡೆಸದೇ ಬಿಗ್ ​ಬಾಸ್ ಮನೆಯಲ್ಲಿ 100 ದಿನ ಕಳೆಯಲು ಸಾಧ್ಯವೇ..! ಹೊಸ ಚರ್ಚೆ ಹುಟ್ಟುಹಾಕಿದ ನಟಿಯ ಹೇಳಿಕೆ

ಜೈಲಿನಲ್ಲಿ 100 ಹೆಚ್ಚು ಜನರು ಆಹಾರವನ್ನು ತಯಾರಿಸುತ್ತಿದ್ದಾರೆ. ಅಂತೆಯೇ, ಪ್ರತಿದಿನ 25000 ಚಪಾತಿ ಮತ್ತು 500 ಬಗೆಯ ಬಿರಿಯಾನಿ ಖ್ಯಾದ್ಯವನ್ನು ಸಿದ್ಧಮಾಡುತ್ತಿದ್ದಾರೆ. ಜೈಲು ಅಧಿಕಾರಿಗಳ ಸಮ್ಮುಖದಲ್ಲಿಯೇ ಆಹಾರವನ್ನು ತಯಾರಿಸಲಾಗುತ್ತಿದೆ ಎನ್ನಲಾಗಿದೆ.

ಗ್ರಾಹಕರಿಗಾಗಿ ಕೊಂಬೊ ಆಫರ್​ನಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ. ಈ ಕೊಂಬೊ ಪ್ಯಾಕ್​ನಲ್ಲಿ 300 ಗ್ರಾಂ ಬಿಯಾನಿ, ಚಿಕನ್​ ಲೆಗ್​ ಪೀಸ್​, ಸಲಾಡ್​, ಜೊತೆಗೆ ವಾಟರ್​ ಬಾಟಲ್​​ ಅನ್ನು ಸಹ ಒಳಗೊಂಡಿದೆ.

ಕೇರಳದ ಫ್ರಿಡೋಮ್​ ಫ್ಯಾಕ್ಟರಿ ಕೂಡ 2011ರಲ್ಲಿ ಜೈಲಿನಲ್ಲಿರುವ ಖೈದಿಗಳು ತಯಾರಿಸಿದ ಖ್ಯಾದವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತ ಬಂದಿದೆ. ಆದರೆ ಮೊದಲ ಬಾರಿಗೆ ಸ್ವಿಗ್ಗಿ ಆನ್​ಲೈನ್​ ಮೂಲಕ ಜೈಲಿನ ಖ್ಯಾದವನ್ನು ಆರ್ಡರ್​ ಮಾಡುವ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ.

First published: July 14, 2019, 7:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories