ಸನ್ನಿ ಲಿಯೋನ್ ವಿಡಿಯೋಗಾಗಿ ಹುಡುಕಾಡಿದವರಲ್ಲಿ ಈ ರಾಜ್ಯದವರೇ ಹೆಚ್ಚು..!

Sunny leone: ಸನ್ನಿ ಅವರ ಜೀವನಾಧಾರಿತ ವೆಬ್​ ಸಿರೀಸ್ ಕರಂಜಿತ್ ಕೌರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್‌ರನ್ನು ಹಲವರು ಹುಡುಕಾಡಿದ್ದರು. ಈ ಹಿನ್ನೆಲೆಯಲ್ಲಿ ಇತರೆ ಎಲ್ಲಾ ತಾರೆಗಳನ್ನು ಹಿಂದಿಕ್ಕಿ ಜಿಸ್ಮ್​ ನಟಿ ಗೂಗಲ್ ಸರ್ಚ್​ನಲ್ಲಿ ನಂಬರ್ 1 ಆಗಿದ್ದಾರೆ.

news18-kannada
Updated:August 14, 2019, 8:00 PM IST
ಸನ್ನಿ ಲಿಯೋನ್ ವಿಡಿಯೋಗಾಗಿ ಹುಡುಕಾಡಿದವರಲ್ಲಿ ಈ ರಾಜ್ಯದವರೇ ಹೆಚ್ಚು..!
Sunny leone
news18-kannada
Updated: August 14, 2019, 8:00 PM IST
ಬಾಲಿವುಡ್​ನ ಮಾದಕ ತಾರೆ ಸನ್ನಿ ಲಿಯೋನ್ ಮತ್ತೊಮ್ಮೆ ನಂಬರ್ ಒನ್ ಆಗಿ ಹೊರಹೊಮ್ಮಿದ್ದಾರೆ. ಗೂಗಲ್ ಅನಾಲಿಟಿಕ್ಸ್ ಬಿಡುಗಡೆ ಮಾಡಿರುವ ಅತ್ಯಧಿಕ ಸರ್ಚ್ ಆಗಿರುವ ಸೆಲೆಬ್ರಿಟಿ ಪಟ್ಟಿಯಲ್ಲಿ ಸನ್ನಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ದೇಶದ ಪ್ರಧಾನಿ ಮೋದಿ, ಬಾಲಿವುಡ್ ತಾರೆಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಅವರನ್ನು ಹಿಂದಿಕ್ಕಿರುವ ನೀಲಿತಾರೆ ಕಳೆದ ಬಾರಿಯಂತೆ ಈ ಸಲ ಕೂಡ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಬಾಲಿವುಡ್ ನಟಿ ಮೊದಲ ಸ್ಥಾನ ಅಲಂಕರಿಸಲು ಮುಖ್ಯ ಕಾರಣ ಅವರು ಅಭಿನಯದ ಪೋರ್ನ್ ವಿಡಿಯೋಗಳು. ಅಶ್ಲೀಲ ವಿಡಿಯೋಗಳಿಗಾಗಿ ಅನೇಕರು ಹುಡುಕಾಟ ನಡೆಸಿದ್ದು, ಅದರೊಂದಿಗೆ ಸನ್ನಿ ಅವರ ಜೀವನಾಧಾರಿತ ವೆಬ್​ ಸಿರೀಸ್ 'ಕರಂಜಿತ್ ಕೌರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್‌'ರನ್ನು ಹಲವರು ಹುಡುಕಾಡಿದ್ದರು. ಈ ಹಿನ್ನೆಲೆಯಲ್ಲಿ ಇತರೆ ಎಲ್ಲಾ ತಾರೆಗಳನ್ನು ಹಿಂದಿಕ್ಕಿ ಜಿಸ್ಮ್​ ನಟಿ ಗೂಗಲ್ ಸರ್ಚ್​ನಲ್ಲಿ ನಂಬರ್ 1 ಆಗಿದ್ದಾರೆ.

ಇನ್ನು ಸನ್ನಿ ಲಿಯೋನ್ ವಿಡಿಯೋಗಳಿಗಾಗಿ ಹುಡುಕಾಡಿರುವ ರಾಜ್ಯಗಳ ಪಟ್ಟಿಯಲ್ಲಿ ಅಸ್ಸಾಂ ಹಾಗೂ ಮಣಿಪುರ ರಾಜ್ಯಗಳು ಮೊದಲ ಸ್ಥಾನದಲ್ಲಿದೆ. ಈ ರಾಜ್ಯಗಳ ಸನ್ನಿ ಅಭಿಮಾನಿಗಳು ನೀಲಿತಾರೆಯ ವಿಡಿಯೋಗಳಿಗಾಗಿ ಗೂಗಲ್​ನಲ್ಲಿ ಹೆಚ್ಚಿನ ಹುಡುಕಾಟ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸನ್ನಿ ಲಿಯೋನ್, ಇದೊಂದು ಮರೆಯಲಾಗದ ಅನುಭವ. ಕಳೆದ ಬಾರಿಯಂತೆ ಈ ಬಾರಿ ಕೂಡ ಹೆಚ್ಚಿನ ಜನರು ನನ್ನನ್ನು ಗೂಗಲ್​ ಮಾಡಿರುವುದು ಖುಷಿಯ ವಿಚಾರ ಎಂದಿದ್ದಾರೆ. ಸದ್ಯ ಸನ್ನಿ ಲಿಯೋನ್ 'ಕೋಕಕೋಲ' ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದರೊಂದಿಗೆ 'ವೀರಮಹಾದೇವಿ' ಎಂಬ ಬಹುಭಾಷಾ ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ.

First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...