• Home
  • »
  • News
  • »
  • tech
  • »
  • NASA: ಚಂದ್ರನತ್ತ ಸಾಗಿದ ಆರ್ಟೆಮಿಸ್ 1 ಮಿಷನ್! ಭೂಮಿಯ ಅದ್ಭುತ ದೃಶ್ಯ ಹಂಚಿಕೊಂಡ ನಾಸಾ

NASA: ಚಂದ್ರನತ್ತ ಸಾಗಿದ ಆರ್ಟೆಮಿಸ್ 1 ಮಿಷನ್! ಭೂಮಿಯ ಅದ್ಭುತ ದೃಶ್ಯ ಹಂಚಿಕೊಂಡ ನಾಸಾ

NASA

NASA

ಅಮೇರಿಕಾದ ನಾಸಾವು ತನ್ನ ವಿವಿಧ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಉಡಾವಣಾ ಈವೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡಿತ್ತು.

  • Share this:

ಕಳೆದ ಹಲವು ದಶಕಗಳಿಂದ ವಿಜ್ಞಾನಿಗಳು ಚಂದ್ರನ (Moon) ಮೇಲೆ ವಾಸಿಸುವ ಕನಸು ಕಾಣುತ್ತಿದ್ದಾರೆ. ಇದರ ಭಾಗವಾಗಿಯೇ ಆರ್ಟೆಮಿಸ್ 1 ಮಿಷನ್ ಬುಧವಾರದಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಯಿತು. ಇದು ನಾಸಾ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ ಎಂದು ಇಡೀ ಜಗತ್ತೇ ಅಮೇರಿಕಾವನ್ನು ( America) ಕೊಂಡಾಡುತ್ತಿದೆ. ಈ ಉಡಾವಣೆ ಅಕ್ಟೋಬರ್‌ನಲ್ಲಿ ಆಗಬೇಕಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಈ ಉಡಾವಣೆಗೆ ವಿಳಂಬವಾಗಿತ್ತು ಎಂದು ಈ ಹಿಂದೆ ನಾಸಾವು ತಿಳಿಸಿತ್ತು. ಅಮೇರಿಕಾದ ನಾಸಾವು ತನ್ನ ವಿವಿಧ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಉಡಾವಣಾ ಈವೆಂಟ್ ಅನ್ನು ಲೈವ್ ಸ್ಟ್ರೀಮ್ ಮಾಡಿತ್ತು.


ಅದರ ಜೊತೆಗೆ ಟ್ವಿಟರ್‌ನಲ್ಲಿ ಈ ಆರ್ಟೆಮಿಸ್‌ 1 ಮಿಷನ್‌ನ ಉಡಾವಣೆಯ ಕಿರು ತುಣುಕುಗಳನ್ನು ಪೋಸ್ಟ್ ಮಾಡಿದೆ. ಈ ವೀಡಿಯೊಗಳಲ್ಲಿ ಒಂದು ಬಾಹ್ಯಾಕಾಶ ನೌಕೆ ಓರಿಯನ್ ಚಂದ್ರನನ್ನು ಸುತ್ತುವ ಪ್ರಯಾಣದಲ್ಲಿ ರಾಕೆಟ್‌ನ ಮೇಲ್ಭಾಗಕ್ಕೆ ಸ್ಥಿರವಾಗಿ ಸೆರೆಹಿಡಿಯಲಾದ ಭೂಮಿಯ ಅದ್ಭುತ ಚಿತ್ರವನ್ನು ತೋರಿಸುತ್ತಿರುವ ವಿಡಿಯೋ ಒದಗಿಸಿದ್ದು ಅದು ನೋಡಲು ಅದ್ಭುತವಾಗಿದೆ.


ಸೋಷಿಯಲ್‌ ಮೀಡಿಯಾದಲ್ಲಿ ಉಡಾವಣೆಯ ವಿಡಿಯೋ ಹಂಚಿಕೊಂಡ ನಾಸಾ


ಆರ್ಟೆಮಿಸ್ ಮಿಷನ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಬಾಹ್ಯಾಕಾಶ ನೌಕೆ ತೆಗೆದ ಭೂಮಿಯ ಚಿತ್ರದ ತುಣುಕನ್ನು ನಾಸಾ ಹಂಚಿಕೊಂಡಿದೆ. "@NASA_Orion ಚಂದ್ರನಿಗೆ #ಆರ್ಟೆಮಿಸ್ I ಮಿಷನ್ ಅನ್ನು ಪ್ರಾರಂಭಿಸುತ್ತಿದ್ದಂತೆ, ಬಾಹ್ಯಾಕಾಶ ನೌಕೆಯು ನಮ್ಮ ಮನೆ ಮತ್ತು ನಮ್ಮ ಗ್ರಹದ ಈ ಅದ್ಭುತ ನೋಟಗಳನ್ನು ಸೆರೆಹಿಡಿಯಿತು" ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.


ಓರಿಯನ್ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿ ಕರೆದೊಯ್ಯಲು 22,600 mph (36,370 kmph) ಗಿಂತ ಹೆಚ್ಚು ಚಲಿಸುವ ರಾಕೆಟ್‌ನ ಹಿಂದೆ ಭೂಮಿಯು ಹಿಮ್ಮೆಟ್ಟುವುದನ್ನು 24-ಸೆಕೆಂಡ್ ವಿಡಿಯೋ ಕ್ಲಿಪ್ ತೋರಿಸುತ್ತದೆ.


ನಾಸಾದ ಅಧಿಕಾರಿಗಳು ಹೇಳಿದ್ದೇನು?


"ಈಗ ನಾವು ಚಂದ್ರನಲ್ಲಿಗೆ ಮತ್ತೆ ಹೋಗುತ್ತಿದ್ದೇವೆ. ಕೇವಲ ಚಂದ್ರನಲ್ಲಿಗೆ ಮಾತ್ರ ಅಲ್ಲ. ಮಾನವರನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಮತ್ತು ಚಂದ್ರ ಗ್ರಹದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಯಲು, ನಾವು ಈ ನೌಕೆಯನ್ನು ಚಂದ್ರನಲ್ಲಿಗೆ ಕಳುಹಿಸುತ್ತಿದ್ದೇವೆ. ಇದು ಮುಂದಿನ ವೈಜ್ಞಾನಿಕ ದಿನಗಳಿಗೆ ಮುನ್ನುಡಿ. ಇನ್ನು ಮೇಲೆ ಇದು ಆರ್ಟೆಮಿಸ್ ಪೀಳಿಗೆ” ಎಂದು ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಅವರು ಬಾಹ್ಯಾಕಾಶ ನೌಕೆಯ ಉದ್ಘಾಟನೆಯ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಇದನ್ನೂ ಓದಿ: ತಮಿಳುನಾಡಿನ ದೇವಸ್ಥಾನದಲ್ಲಿರುವ ಅಸ್ಸಾಂನ ಆನೆ ಜೋಯ್ಮಾಲಾಳ ಮೇಲೆ ಮತ್ತೆ ದೌರ್ಜನ್ಯ


ಈ ಕಾರ್ಯಾಚರಣೆಯಲ್ಲಿ ಒಬ್ಬ ಮಹಿಳೆ ಕೂಡ ಇರಲಿದ್ದು, ಅವರು ಚಂದ್ರನ ಮೇಲೆ ಹೋದ ವಿಶ್ವದ ಮೊದಲ ಮಹಿಳೆಯಾಗಲಿದ್ದಾರೆ. ಈ ಯೋಜನೆಯನ್ನು ಸಕಾರಗೊಳಿಸಲು ನಾಸಾದ ಆರ್ಟೆಮಿಸ್-I ಮಿಷನ್ ಚಂದ್ರಯಾನ ಹಾಗೂ ತಂತ್ರಜ್ಞಾನವನ್ನು ಸುಧಾರಿಸಲು ಸಾಕಷ್ಟು ಸಹಕಾರಿಯಾಗಲಿದೆ. ಮಾನವರಹಿತವಾಗಿ ಮುನ್ನುಗುತ್ತಿರುವ ಆರ್ಟೆಮಿಸ್-I ಚಂದ್ರನ ಸುತ್ತಲು ಹೊಸ ಸಂಶೋಧನೆಗಳನ್ನು ನಡೆಸಲಿದೆ.


ಚಂದ್ರನನ್ನು ಸ್ಪರ್ಶಿಸುತ್ತಿರುವ ಮೊದಲ ಮಹಿಳೆ


ಮಾನವರು ಈಗಾಗಲೇ ಚಂದ್ರನ ಮೇಲೆ ಹೆಜ್ಜೆ ಇಟ್ಟಿದ್ದರೂ ಈ ಆರ್ಟೆಮಿಸ್ I ಮಿಷನ್ ಅನನ್ಯವಾಗಿದೆ ಏಕೆಂದರೆ ಇದು ಜಗತ್ತಿನಲ್ಲಿ ಮೊದಲ ಮಹಿಳೆಯನ್ನು ಚಂದ್ರನಿಗೆ ಕಳುಹಿಸುವ ಗುರಿಯನ್ನು ಹೊಂದಿದೆ. ಇದು ಮಾನವಕುಲಕ್ಕೆ ಒಂದು ಪ್ರಮುಖ ಸಾಧನೆಯೇ ಹೌದು ಹಾಗೂ ಬಾಹ್ಯಾಕಾಶದ ಅಚ್ಚರಿಯ ಅಂಶಗಳನ್ನು ಜಗತ್ತಿಗೆ ತಿಳಿಸುವ ಸಾಧನವೂ ಹೌದು.
ಆರ್ಟೆಮಿಸ್-I ನಲ್ಲಿ ಯಾವುದೇ ಸಿಬ್ಬಂದಿ ಇರುವುದಿಲ್ಲ. ಈ ಮಿಷನ್ ಚಂದ್ರನ ಬಳಿ ಹೋಗುತ್ತದೆ ಮತ್ತು ನಂತರ ಭೂಮಿಗೆ ಹಿಂತಿರುಗುತ್ತದೆ. ಈ ಮಿಷನ್ ಆರ್ಟೆಮಿಸ್ ಪ್ರೋಗ್ರಾಂನಲ್ಲಿ ಮೊದಲ ಹೆಜ್ಜೆಯಾಗಿದೆ. ಆರ್ಟೆಮಿಸ್ ಮೂಲಕ ನಾಸಾದ 2025ರ ವೇಳೆಗೆ ಮತ್ತೊಮ್ಮೆ ಚಂದ್ರನಿಗೆ ಮಾನವರನ್ನು ಕಳುಹಿಸುವ ಗುರಿಯನ್ನು ಹೊಂದಿದೆ.


1969-1972ರ ಅವಧಿಯಲ್ಲಿ ಅಪೊಲೊ ಯುಗದಲ್ಲಿ ಅಮೆರಿಕ ಕೊನೆಯದಾಗಿ ಚಂದ್ರನಲ್ಲಿಗೆ ಗಗನಯಾತ್ರಿಗಳನ್ನು ಕಳುಹಿಸಿತ್ತು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು