• Home
  • »
  • News
  • »
  • tech
  • »
  • Research: ವಿಡಿಯೋ ಕರೆ​​ಗಳಲ್ಲಿ ಜನರು ಹೆಚ್ಚು ಸುಳ್ಳು ಹೇಳ್ತಾರೆ! ಮರುಳಾಗದಿರಿ..ಎಚ್ಚರ!

Research: ವಿಡಿಯೋ ಕರೆ​​ಗಳಲ್ಲಿ ಜನರು ಹೆಚ್ಚು ಸುಳ್ಳು ಹೇಳ್ತಾರೆ! ಮರುಳಾಗದಿರಿ..ಎಚ್ಚರ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Video Call: ಪ್ರಸ್ತುತ ಅಧ್ಯಯನದಲ್ಲಿ 250 ವ್ಯಕ್ತಿಗಳು ಮುಖಾಮುಖಿ, ಸಾಮಾಜಿಕ ಮಾಧ್ಯಮ, ಸಂದೇಶ ಕಳುಹಿಸುವಿಕೆ, ಫೋನ್, ವೀಡಿಯೊ ಚಾಟ್ ಮತ್ತು ಇಮೇಲ್ ಸಂವಹನಗಳಲ್ಲಿ ಅವರು ಹೇಳಿದ ಸುಳ್ಳುಗಳನ್ನು ವರದಿ ಮಾಡಿದ್ದಾರೆ.

  • Share this:

    ಹೊಸ ಅಧ್ಯಯನದಲ್ಲಿ ಸಂಶೋಧಕರ  ತಂಡವೊಂದು ಅಚ್ಚರಿಯ ಅಂಶವೊಂದನ್ನು ಬಹಿರಂಗಪಡಿಸಿದ್ದು ಡಿಜಿಟಲ್ ಸಂವಹನದ (Digital Communication) ಎಲ್ಲಾ ಪ್ರಕಾರಗಳನ್ನು ಹೋಲಿಸಿದಾಗ ಜನರು ವಿಡಿಯೋ ಚಾಟ್‌ಗಳಲ್ಲಿ (Video Chat) ಹೆಚ್ಚು ಸುಳ್ಳು ಹೇಳಿರುವುದು (Lie) ದಾಖಲಾಗಿದೆ. ವಂಚನೆ ಹಾಗೂ ಕಲ್ಪನೆಯ ನಡುವಿನ ಸಂಬಂಧವನ್ನು ಮರುಪರಿಶೀಲಿಸುವುದು ಹ್ಯಾನ್ಕಾಕ್ ಮತ್ತು ಇತರರ ಪ್ರತಿಕೃತಿ ಮತ್ತು ವಿಸ್ತರಣೆ" ಎಂಬ ಶೀರ್ಷಿಕೆಯ ಕೃತಿಯಲ್ಲಿ (‘Revisiting the Relationship Between Deception and Design: A Replication and Extension of Hancock et al. (2004)’) ಸಂಶೋಧಕರ ತಂಡವು ಈ ಅಂಶವನ್ನು ಬಹಿರಂಗಪಡಿಸಿದೆ. 20 ವರ್ಷಗಳ ಹಿಂದೆ ಪ್ರಕಟಿಸಲಾದ ದಾಖಲೆಗಳನ್ನು ಮರುಪರಿಶೀಲಿಸಿದ ಸಂಶೋಧಕರ ತಂಡವು ಒಂದೇ ಸಮಯದಲ್ಲಿ ಸಂಭವಿಸುವ, ಹಂಚಲಾದ, ರೆಕಾರ್ಡ್‌ರಹಿತ ಮಾಧ್ಯಮ (ಫೋನ್) ತುಲನಾತ್ಮಕವಾಗಿ ಉತ್ಕೃಷ್ಟವಾದ (ಮುಖಾಮುಖಿ ಸಂವಹನ) ಮತ್ತು ನೇರ ಮಾಧ್ಯಮದ ಮೂಲಕ (ಇಮೇಲ್, ತ್ವರಿತ ಸಂದೇಶ ಕಳುಹಿಸುವಿಕೆ) ಮೂಲಕ ಸಾಮಾಜಿಕ ಸಂವಹನಕ್ಕೆ ಹೆಚ್ಚು ಸುಳ್ಳುಗಳನ್ನು ಜನರು ಹೇಳುತ್ತಾರೆ ಎಂಬುದನ್ನು ಕಂಡುಕೊಂಡಿದ್ದಾರೆ.


    ಪ್ರಸ್ತುತ ಅಧ್ಯಯನದಲ್ಲಿ 250 ವ್ಯಕ್ತಿಗಳು ಮುಖಾಮುಖಿ, ಸಾಮಾಜಿಕ ಮಾಧ್ಯಮ, ಸಂದೇಶ ಕಳುಹಿಸುವಿಕೆ, ಫೋನ್, ವೀಡಿಯೊ ಚಾಟ್ ಮತ್ತು ಇಮೇಲ್ ಸಂವಹನಗಳಲ್ಲಿ ಅವರು ಹೇಳಿದ ಸುಳ್ಳುಗಳನ್ನು ವರದಿ ಮಾಡಿದ್ದಾರೆ. ಸಂವಾದದ ವರದಿಯು, ಕೆಲವು ಮಾಧ್ಯಮಗಳು ಇತರರಿಗಿಂತ ವಂಚನೆಗೆ ಉತ್ತಮ ಸಹಾಯಕರಾಗಿರುವ ಸಾಧ್ಯತೆಯಿದೆ ಎಂಬುದನ್ನು ಪ್ರಸ್ತುತಪಡಿಸಿದೆ.


    ಕೆಲವು ಮಾಧ್ಯಮ ಅಂದರೆ ಫೋನ್, ವಿಡಿಯೋ ಚಾಟ್ ವಂಚನೆಯನ್ನು ಸುಲಭಗೊಳಿಸುವ ಮಾಧ್ಯಮಗಳಾಗಿ ಹೊರಹೊಮ್ಮಿದ್ದು ಸಿಕ್ಕಿಬಿದ್ದಲ್ಲಿ ಕೂಡ ಸಾಮಾನಿಕ ಸಂಬಂಧಕ್ಕೆ ಇದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂಬುದಾಗಿ ಹಿಂದಿನ ಅಧ್ಯಯನವಾದ ಹ್ಯಾನ್‌ಕಾಕ್ ಎಂಬ ಹೆಸರಿನ ಅಧ್ಯಯನದಲ್ಲಿ ಪತ್ತೆಯಾಗಿದೆ. ಭಾಗವಹಿಸುವವರು ಫೋನ್‌ನಲ್ಲಿ ಹೆಚ್ಚು ಸುಳ್ಳುಗಳನ್ನು ಹೇಳಿರುವುದು ದಾಖಲಾಗಿದ್ದು ಇಮೇಲ್‌ನಲ್ಲಿ ಈ ಸಂಖ್ಯೆ ಕಡಿಮೆಯಾಗಿದೆ ಅದೇ ರೀತಿ ಮುಖಾಮುಖಿ ಹಾಗೂ ತ್ವರಿತ ಸಂದೇಶ ವಾಹಕಗಳಲ್ಲಿ ಸುಳ್ಳಿನ ದರಗಳು ಸರಿಸುಮಾರು ಸಮಾನವಾಗಿ ದಾಖಲಾಗಿದೆ.


    ಸಂವಹನ ತಂತ್ರಜ್ಞಾನಗಳ ವಿನ್ಯಾಸದ ವೈಶಿಷ್ಟ್ಯಗಳು (ಉದಾಹರಣೆಗೆ, ಸಿಂಕ್ರೊನಿಸಿಟಿ, (ಒಂದೇ ಸಮಯದಲ್ಲಿ ಸಂಭವಿಸುವ) ರೆಕಾರ್ಡಬಿಲಿಟಿ (ದಾಖಲಿಸಬಹುದಾದ) ಮತ್ತು ಕೋಪ್ರೆಸೆನ್ಸ್ (ಸಹಭಾಗಿತ್ವ) ಸುಳ್ಳಿನ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತವೆ ಹಾಗೂ ವಂಚನೆ ಮತ್ತು ನಂಬಿಕೆಯ ಸಮಸ್ಯೆಗಳು ಉದ್ಭವಿಸಿದಾಗ ವಿನ್ಯಾಸಕಾರರು ಹಾಗೂ ಬಳಕೆದಾರರು ಈ ವೈಶಿಷ್ಟ್ಯಗಳನ್ನು ಪರಿಗಣಿಸಬೇಕು ಎಂದು ಫಲಿತಾಂಶಗಳ ಮಾದರಿಯು ಸೂಚಿಸುತ್ತದೆ. ತದನಂತರ ಅಧ್ಯಯನವು ಹೆಚ್ಚಿನ ಜನರು ಹೆಚ್ಚು ಪ್ರಾಮಾಣಿಕವಾಗಿರುವುದನ್ನು ಬಹಿರಂಗಪಡಿಸಿದ್ದು ಜನಸಂಖ್ಯೆಯಲ್ಲಿ ಕೆಲವೇ ಕೆಲವು ಪರಿಣಿತ ಸುಳ್ಳುಗಾರರು ಇದ್ದಾರೆ ಎಂಬುದನ್ನು ತಿಳಿಸಿದೆ.




    ಇದನ್ನು ಓದಿ: ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿದೆ Xiaomi Redmi Note 11..ಅಷ್ಟಕ್ಕೂ ಇದರಲ್ಲೇನಿದೆ ವಿಶೇಷತೆ?


    ನಂತರದ ಅಧ್ಯಯನದ ಕುರಿತು ಹಂಚಿಕೊಂಡ ಮಾಹಿತಿಯ ಪ್ರಕಾರ ವೇದಿಕೆಯಾದ್ಯಂತ ಸುಳ್ಳು ಹೇಳುವವರ ಪ್ರಮಾಣ ಕಡಿಮೆಯಾಗಿದ್ದು ಹೆಚ್ಚಿನ ಜನರು ಪ್ರಾಮಾಣಿಕರಾಗಿದ್ದಾರೆ. ಸತ್ಯವು ಸ್ಥಿರವಾದ ಅಂಶವಾಗಿದ್ದು ಹೆಚ್ಚಿನ ಜನರು ಪ್ರಾಮಾಣಿಕವಾಗಿರುವುದನ್ನು ವರದಿ ಮಾಡಿದೆ ಅದೇ ರೀತಿ ಜನಸಂಖ್ಯೆಯಲ್ಲಿ ಕೆಲವೇ ಕೆಲವು ಪರಿಣಿತ ಸುಳ್ಳುಗಾರರು ಇದ್ದಾರೆ ಎಂಬುದನ್ನು ಸೂಚಿಸಿದೆ.


    ಇದನ್ನು ಓದಿ: Motorcycle Start Problem: ಚಳಿಗಾಲದಲ್ಲಿ ಬೈಕ್​ ಸ್ಟಾರ್ಟ್​ ಆಗದಿದ್ದರೆ ಮೊದಲು ಹೀಗೆ ಮಾಡಿ


    ಇನ್ನು ಜನರು ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳನ್ನು ಸುಳ್ಳು ಸಂವಹನಕ್ಕಾಗಿ ಬಳಸುವುದರಿಂದ ದರವು ಭಿನ್ನವಾಗಿರಬಹುದು. ಇಮೇಲ್‌ಗಳನ್ನು ಹೆಚ್ಚಾಗಿ ವೃತ್ತಿಪರ ಉದ್ದೇಶಕ್ಕಾಗಿ ಬಳಸಿದ್ದರೂ ವಿಡಿಯೋ ಚಾಟ್‌ಗಳನ್ನು ವೈಯಕ್ತಿಕ ಸಂವಹನಕ್ಕಾಗಿ ಕಾಯ್ದಿರಿಸಿರುವುದು ಕಂಡುಬಂದಿದೆ. ಇಮೇಲ್‌ಗಳಲ್ಲಿ ಸುಳ್ಳು ಹೇಳಿ ಸಿಕ್ಕಿಬೀಳುವ ಅಪಾಯ ಹೆಚ್ಚಿರುವುದರಿಂದ ಇಮೇಲ್‌ಗಳಲ್ಲಿ ಜನರು ಸುಳ್ಳು ಹೇಳುವುದು ಕಡಿಮೆ ಎಂಬುದಾಗಿ ವರದಿ ತಿಳಿಸಿದೆ.

    Published by:Harshith AS
    First published: