ದಿನಕ್ಕೆ 150ಕ್ಕೂ ಅಧಿಕ ಬಾರಿ ಸ್ಮಾರ್ಟ್​ಫೋನ್​ ಚೆಕ್​ ಮಾಡುವ ವಿದ್ಯಾರ್ಥಿಗಳು!

news18
Updated:April 24, 2018, 6:25 PM IST
ದಿನಕ್ಕೆ 150ಕ್ಕೂ ಅಧಿಕ ಬಾರಿ ಸ್ಮಾರ್ಟ್​ಫೋನ್​ ಚೆಕ್​ ಮಾಡುವ ವಿದ್ಯಾರ್ಥಿಗಳು!
Image: ARM
news18
Updated: April 24, 2018, 6:25 PM IST
ನವದೆಹಲಿ: ಸ್ಮಾರ್ಟ್​ಫೋನ್​ ಆವಿಷ್ಕಾರಕ್ಕೆ ಯಾರು ಬಲಿಯಾಗಿಲ್ಲ ಹೇಳಿ, ಅದೆಷ್ಟೊ ಜನ ಸ್ಮಾರ್ಟ್​ಫೊನ್​ ಜಗತ್ತಿನ ನೂತನ ಆವಿಷ್ಕಾರಕ್ಕೆ ಬಲಿಯಾಗಿದ್ದಾರೆ. ಇದರಂತೆ ಸರ್ವೆಯೊಂದರ ಪ್ರಕಾರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದಿನಕ್ಕೆ 150 ಬಾರಿ ತಮ್ಮ ಫೋನ್​ನನ್ನು ಚೆಕ್​ ಮಾಡಿಕೊಳ್ಳುತ್ತಾರೆ ಎಂದು ವರದಿ ಮಾಡಿದೆ.

ಯುವಜನಾಂಗದಲ್ಲಿ ಟೆಕ್ನಾಲೆಜಿ ಹುಚ್ಚು ಎಷ್ಟರ ಮಟ್ಟಿಗೆ ಇದೆ ಎಂದು ತಿಳಿಯಲು  ಸಮೀಕ್ಷೆ ಮಾಡಲು ಮುಂದಾದ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳು ದಿನಕ್ಕೆ 150 ಕ್ಕಿಂತಲೂ ಅಧಿಕ ಬಾರಿ ಮೊಬೈಲ್​ ಚೆಕ್​ ಮಾಡುತ್ತಿದ್ದು, ಇದರಲ್ಲಿ ಕೇವಲ ಶೇ.26ರಷ್ಟು ಮಂದಿ ಮಾತ್ರಾ ಕರೆಯನ್ನು ಸ್ವೀಕರಿಸಲು ಬಳಸುತ್ತಾರೆ ಎಂದು ವರದಿ ಮಾಡಿದೆ. ಉಳಿದಂತೆ ಎಲ್ಲರೂ ತಾವೇ ಮೊದಲು ಮಾಹಿತಿಯನ್ನು ಓದಬೇಕು, ಅಲ್ಲದೇ ತಮಗೆ ಮಾಹಿತಿ ಎಲ್ಲಿ ತಪ್ಪಿ ಹೋಗುತ್ತದೆಯೋ ಎಂಬ ಕಾರಣಕ್ಕೆ ಮೊಬೈಲ್​ನ್ನು ಬಳಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಸಮೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಬಳಕೆ, ಗೂಗಲ್​ ಅಥವಾ ಇತರೇ ಸರ್ಚ್​ಇಂಜಿನ್​ಗಳ ಬಳಕೆ, ಯೂಟ್ಯೂಬ್​ ಸೇರಿದಂತೆ ಇತರೇ ಬಳಕೆಗಳ ಕುರಿತು ಸಹ ಸಮಿಕ್ಷೆ ನಡೆಸಿದ್ದಾರೆ. ಇದರಲ್ಲಿ ಶೇ.63ರಷ್ಟು ಮಂದಿ ದಿನಕ್ಕೆ 4ರಿಂದ7 ಗಂಟೆಗಳ ವರೆಗೂ ಸಾಮಾಜಿಕ ಜಾಲತಾಣದ ಬಳಕೆಯನ್ನು ಮಾಡುತ್ತಾರೆ, ಇನ್ನು ಶೇ.23ರಷ್ಟು ಮಂದಿ 8 ಗಂಟೆಗಿಂತಲೂ ಅಧಿಕ ಮಂದಿ ವಾಟ್ಸಾಪ್​ ಫೇಸ್​ಬುಕ್​ ಇನ್ಸ್ಟಾಗ್ರಾಂ ಬಳಕೆ ಮಾಡುತ್ತಾರೆ ಮತ್ತು ಶೇ.14ರಷ್ಟು ಜನ ಕೇವಲ ಕರೆಯನ್ನಷ್ಟೇ ಸ್ವೀಕರಿಸಲು ಮೊಬೈಲ್​ ಬಳಕೆ ಮಾಡುತ್ತಾರಂತೆ.

ಈ ಹಿಂದೆ ನಡೆದಿದ್ದ ಸಮೀಕ್ಷೆಯೊಂದರಲ್ಲಿ ಶೇ.90ರಷ್ಟು ಭಾರತೀಯರು ತಮ್ಮ ಹೆಚ್ಚಿನ ಸಮಯವನ್ನು ಆನ್​ಲೈನ್​ನಲ್ಲೇ ಕಳೆಯುತ್ತಾರೆ ಎಂದು ವರದಿ ಮಾಡಿತ್ತು. ಅಲ್ಲದೇ ಭಾರತದ ಬೆನ್ನಿಗೆ ಇಂಡೋನೇಶಿಯಾದ ಶೇ.87 ರಷ್ಟು ಜನ ಆನ್​​ಲೈನ್​ನಲ್ಲೇ ತಮ್ಮ ಸಮಯ ವ್ಯರ್ಥ ಮಾಡುತ್ತಾರೆ ಎಂದು ವರದಿ ಮಾಡಿತ್ತು.
First published:April 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...