HOME » NEWS » Tech » STROM R3 THREE WHEELER ELECTRIC CAR BOOKINGS OPEN IN INDIA STG HG

ಭಾರತದಲ್ಲಿ ಸ್ಟ್ರೋಮ್ R3 ಎಲೆಕ್ಟ್ರಿಕ್ ಕಾರು ಬುಕ್ಕಿಂಗ್ ಆರಂಭ: ಗಂಟೆಗೆ 80 ಕಿ.ಮೀ. ಪ್ರಯಾಣ

ಭಾರತೀಯರು ಇದೀಗ ಎಲೆಕ್ಟ್ರಿಕ್ ಕಾರುಗಳ ಖರೀದಿ ಬಗ್ಗೆ ಗಮನಹರಿಸಿದ್ದಾರೆ. ಈ ಬೆನ್ನಲ್ಲೇ ಭಾರತದಲ್ಲಿ ಫೆ.22ರಿಂದ ಸ್ಟ್ರೋಮ್ ಮೋಟರ್ಸ್​​ನ  R3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಶುರುವಾಗಿದೆ.

news18-kannada
Updated:February 24, 2021, 4:33 PM IST
ಭಾರತದಲ್ಲಿ ಸ್ಟ್ರೋಮ್ R3 ಎಲೆಕ್ಟ್ರಿಕ್ ಕಾರು ಬುಕ್ಕಿಂಗ್ ಆರಂಭ: ಗಂಟೆಗೆ 80 ಕಿ.ಮೀ. ಪ್ರಯಾಣ
Strom R3
  • Share this:
ಪೆಟ್ರೋಲ್-ಡಿಸೇಲ್ ದರ ಭಾರೀ ಏರಿಕೆ ಆಗಿದೆ. ಇದರಿಂದಾಗಿ ವಾಹನ ಸವಾರರು ಕಂಗಾಲು ಆಗಿದ್ದಾರೆ. ಒಂದು ಲೀಟರ್ ಪೆಟ್ರೋಲ್ ಬೆಲೆ ನೂರು ರೂಪಾಯಿ ಗಡಿ ಸಮೀಪಿಸುತ್ತಿದ್ದರೆ ಡಿಸೇಲ್ ದರ 80 ರೂ. ದಾಟಿದೆ. ಇದರಿಂದಾಗಿ ಭಾರತೀಯರು ಇದೀಗ ಎಲೆಕ್ಟ್ರಿಕ್ ಕಾರುಗಳ ಖರೀದಿ ಬಗ್ಗೆ ಗಮನಹರಿಸಿದ್ದಾರೆ. ಈ ಬೆನ್ನಲ್ಲೇ ಭಾರತದಲ್ಲಿ ಫೆ.22ರಿಂದ ಸ್ಟ್ರೋಮ್ ಮೋಟರ್ಸ್​​ನ  R3 ಎಲೆಕ್ಟ್ರಿಕ್ ಕಾರು ಖರೀದಿಗೆ ಬುಕ್ಕಿಂಗ್ ಶುರುವಾಗಿದೆ.

ಸ್ಟ್ರೋಮ್ ಮೋಟರ್ಸ್​​​ನ  R3 ತ್ರಿಚಕ್ರದ ಎಲ್ಲಾ ಎಲೆಕ್ಟ್ರಿಕ್ ವಾಹನಗಳಿಗೆ ಫೆ.22ರಿಂದ ಬುಕ್ಕಿಂಗ್ ಶುರುವಾಗಿದ್ದು. ಭಾರತೀಯರು 10,000 ರೂ. ನೀಡಿ ವಾಹನವನ್ನು ಬುಕ್ ಮಾಡಿಕೊಳ್ಳಬಹುದು. ಸ್ಟ್ರೋಮ್ R3 ತ್ರಿಚಕ್ರದ ಎಲೆಕ್ಟ್ರಿಕ್ ವಾಹನವು ಸ್ಪೋರ್ಟಿ ಲುಕ್ ಹೊಂದಿದ್ದು, ವಾಹನದೊಳಗೆ ಇಬ್ಬರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಒಂದು ಗಂಟೆಗೆ ಎಲೆಕ್ಟ್ರಿಕ್ ವಾಹನವು 80 ಕಿ.ಮೀ ದೂರ ಕ್ರಮಿಸಬಹುದು. ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ. ವರೆಗೆ ಪ್ರಯಾಣ ಮಾಡಬಹುದಾಗಿದೆ.

R3 ಎಲೆಕ್ಟ್ರಿಕ್ ಕಾರು ವಿನ್ಯಾಸ ಹೇಗಿದೆ?

ಸ್ಟ್ರೋಮ್ R3 ಎಲೆಕ್ಟ್ರಿಕ್ ಕಾರು ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದ್ದು, ವಾಹನದ ಉದ್ದ 2,907 ಮಿ.ಮೀ ಇದೆ. ಈ ಕಾರಿಗೆ ಸಣ್ಣ ಬಾನೆಟ್, ದೊಡ್ಡ ಹೆಡ್‌ಲೈಟ್‌ಗಳಿಂದ ಕೂಡಿದೆ. ಮುಂಬದಿಯಲ್ಲಿ ಎರಡು ಚಕ್ರವಿದ್ದರೆ ಹಿಂಭಾಗದಲ್ಲಿ ಒಂದು ಚಕ್ರವಿದೆ. ಎಡ ಮತ್ತು ಬಲ ಭಾಗದಲ್ಲಿ ಎರಡು ಬಾಗಿಲುಗಳನ್ನು ಕೊಡಲಾಗಿದೆ.. ಆರ್ 3 ಎಲೆಕ್ಟ್ರಿಕ್ ಕಾರಿನ ಭಾರವು 550 ಕೆಜಿ ತೂಕ ಹೊಂದಿದೆ. ಇನ್ನು, ಆರ್ 3 ವಾಹನವು 2,907 ಎಂಎಂ ಉದ್ದ, 1,450 ಎಂಎಂ ಅಗಲ ಮತ್ತು 1,572 ಎಂಎಂ ಎತ್ತರವನ್ನು ಹೊಂದಿದೆ.

ಕಾರಿನ ಒಳ ವಿನ್ಯಾಸ

ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರು 2 ಸೀಟುಗಳ 3-ಚಕ್ರಗಳನ್ನು ಒಳಗೊಂಡಿದೆ. ಇದು ಸನ್‌ರೂಫ್ ಮತ್ತು ಹಿಂಭಾಗದ ಸ್ಪಾಯ್ಲರ್ ಅನ್ನು ಪಡೆಯುತ್ತದೆ. ಜೊತೆಗೆ ಪವರ್ ವಿಂಡೋಗಳು, ಕ್ಲೈಮೇಟ್ ಕಂಟ್ರೋಲ್, ರಿಮೋಟ್ ಕೀಲೆಸ್ ಎಂಟ್ರಿ ಮತ್ತು 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಒಳಗೊಂಡಿದೆ. ಕಾರಿನ ಒಳಗಡೆ ಕೂಡ ಡಿಜಿಟಲ್ ಟಚ್ ನೀಡಲಾಗಿದೆ. ಕಾರಿನೊಳಗೆ ಮಾನಿಟರಿಂಗ್ ಸಿಸ್ಟಮ್ ಹೊಂದಿದ್ದು, 4ಜಿ ಕನೆಕ್ಟಿವಿಟಿ, ಗೆಸ್ಚರ್ ಕಂಟ್ರೋಲ್, ವಾಯ್ಸ್ ಕಂಟ್ರೋಲ್, 20 ಜಿಬಿ ಆನ್‌ಬೋರ್ಡ್ ನ್ಯಾವಿಗೇಷನ್ ಹೊಂದಿದೆ. ಅದರ ಕೆಳಗೆ 2.4-ಇಂಚಿನ ಟಚ್‌ಸ್ಕ್ರೀನ್ ಕೂಡ ಹೊಂದಿದೆ.

ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರಿನ ಕಾರ್ಯಕ್ಷಮತೆಭಾರತದಲ್ಲಿ ಬುಕ್ಕಿಂಗ್ ಆರಂಭ ಆಗಿರುವ ನೂತನ ಆರ್ 3 ಎಲೆಕ್ಟ್ರಿಕ್ ಕಾರು ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ. ದೂರ ಪ್ರಯಾಣಿಸಬಹುದು. ಈ ಕಾರಿನಲ್ಲಿ ಲೀಥಿಯಂ ಬ್ಯಾಟರಿ ಒಳಗೊಂಡಿದ್ದು, 20hp / 90Nm ಎಲೆಕ್ಟ್ರಿಕ್ ಉತ್ಪಾದಿಸುತ್ತದೆ. ಇದು ಗಂಟೆಗೆ 80 ಕಿ.ಮೀ ವೇಗವನ್ನು ಹೊಂದಿದೆ. ಈ ಕಾರಿನಲ್ಲಿ ಚಾಲಕರು Eco, Normal, and Sports ಡ್ರೈವಿಂಗ್ ಮೋಡ್ ಆನಂದಿಸಬಹುದು. ಈ ಕಾರು ಸಂಪೂರ್ಣವಾಗಿ ಚಾರ್ಜ್ ಆಗಲು 3 ಗಂಟೆ ಬೇಕಾಗುತ್ತದೆ.
Youtube Video

ಸ್ಟ್ರೋಮ್ ಆರ್3 ಎಲೆಕ್ಟ್ರಿಕ್ ಕಾರಿನ ಬೆಲೆ

ಸ್ಟ್ರೋಮ್ ಆರ್3 ಕಾರು 2018ರಲ್ಲಿ ಅನಾವರಣಗೊಳಿಸಲಾಯಿತು. ಈ ಕಾರಿನ ಬೆಲೆ ಎಕ್ಸ್ ಶೋರೂಮಿನ ಪ್ರಕಾರ, 4.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮೂರು ವಿನ್ಯಾಸದಲ್ಲಿ ಇದು ಗ್ರಾಹಕರಿಗೆ ಸಿಗಲಿದೆ.
Published by: Harshith AS
First published: February 24, 2021, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories