ಹೊಸ ವರ್ಷ (New Year) ಆರಂಭವಾಗುತ್ತಿದ್ದಂತೆ ಹೊಸ ನಿಯಮಗಳು (New Rules) ಜಾರಿಗೆ ಬರಲಿದೆ. ಈ ಬಾರಿ ಜನವರಿಯಲ್ಲಿ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಇವುಗಳಲ್ಲಿ ಸಾಮಾನ್ಯರ ಹಣದ ಮೇಲೆ ಪರಿಣಾಮ ಬೀರುವ ನಿಯಮಗಳು ಸೇರಿವೆ. ಸ್ಮಾರ್ಟ್ಫೋನ್ ಬ್ರಾಂಡ್ಗಳಿಗೆ (Smartphone Brand), ಎಸ್ಬಿಐ ಕ್ರೆಡಿಟ್ ಕಾರ್ಡ್ (SBI Credit Card) ಹೊಂದಿರುವವರು ಮತ್ತು ಎಸ್ಬಿಐ ಗ್ರಾಹಕರು ಹೊಸ ನಿಯಮಗಳನ್ನು ಅನುಸರಿಸಬೇಕು. ಅಷ್ಟೇ ಅಲ್ಲ ಎಲ್ಪಿಜಿ ಗ್ಯಾಸ್ (LPG Gas) ಸಿಲಿಂಡರ್ ಬೆಲೆ ಕೂಡ ಬದಲಾಗುವ ಸಾಧ್ಯತೆ ಇದೆ. ಈ ನಿಯಮಗಳು ಇನ್ನೇನು ಕೆಲವೇ ದಿನಗಳಲ್ಲಿ ಜಾರಿ ಬರಲಿದೆ. ಜನರ ಅನುಕೂಲಕ್ಕೆ ತಕ್ಕಂತೆ ಈ ನಿಯಮಗಳನ್ನು ತರಲಾಗಿದೆ ಎಂದು ಸರ್ಕಾರ ಹೇಳಿದೆ.
ಹೊಸ ವರ್ಷ ಬರ್ತಿದೆ ಅನ್ನುವಾಗ ಆ ವರ್ಷದಲ್ಲಿ ಏನಾದರು ಬದಲಾವಣೆ ಬರಬೇಕು ಎಂಬುದು ಎಲ್ಲರೂ ಅಂದು ಕೊಂಡಿರುತ್ತಾರೆ. ಅದೇ ರೀತಿ ಈ ಬಾರಿ ಸರ್ಕಾರ ಟೆಕ್ನಾಲಜಿ ಯುಗದಲ್ಲಿ ಹಲವಾರು ನಿಯಮಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಹಾಗಿದ್ರೆ 2023 ರಲ್ಲಿ ಬರಲಿರುವ ಹೊಸ ನಿಯಮಗಳು ಯಾವುವು? ಹೇಗೆ ಪಾಲಿಸ ಬೇಕು ಎಂಬುದನ್ನು ಇಲ್ಲಿ ಓದಿ.
ಸ್ಮಾರ್ಟ್ಫೋನ್ಸ್ ಮೇಲಿನ ನಿಯಮ
ಕದ್ದ ಮತ್ತು ಕಳೆದು ಹೋದ ಸ್ಮಾರ್ಟ್ ಫೋನ್ ಗಳ ದುರ್ಬಳಕೆ ತಡೆಯಲು ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಭಾರತದಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಫೀಚರ್ ಫೋನ್ಗಳನ್ನು ತಯಾರಿಸುವ ಎಲ್ಲಾ ಕಂಪನಿಗಳು ಹ್ಯಾಂಡ್ಸೆಟ್ಗಳನ್ನು ಮಾರಾಟ ಮಾಡುವ ಮೊದಲು ಭಾರತೀಯ ನಕಲಿ ಸಾಧನ ನಿರ್ಬಂಧ ಪೋರ್ಟಲ್ ಆಗಿರುವಂತಹ https://icdr.ceir.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್! ಫ್ಲಿಪ್ಕಾರ್ಟ್ನಲ್ಲಿದೆ ಭರ್ಜರಿ ಆಫರ್
ಈ ನಿಯಮಗಳು ಜನವರಿ 1, 2023 ರಿಂದ ಜಾರಿಗೆ ಬರುತ್ತವೆ. ಈ ನಿಯಮವನ್ನು ಪಾಲಿಸುವುದರಿಂದ ನಕಲಿ ಫೋನ್ಗಳನ್ನು ತಯಾರಿಸಿದರೆ, ಕದ್ದ ಫೋನ್ಗಳನ್ನು ಯಾರಾದರು ದುರ್ಬಳಕೆ ಮಾಡಿದ್ರೆ ಬೇಗನೆ ಪತ್ತೆಹಚ್ಚಬಹುದು.
ಎಸ್ಬಿಐ ಗ್ರಹ ಸಾಲ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಕೊಡುಗೆಗಳನ್ನು ಘೋಷಿಸಲಾಗಿದೆ. ಬಡ್ಡಿದರದಲ್ಲಿ ಭಾರೀ ರಿಯಾಯಿತಿನ್ನು ಘೋಷಿಸಲಾಗಿದೆ. ಇದಲ್ಲದೆ, ಆ್ಯಕ್ಟಿವ್ ಫೀಸ್ ಅನ್ನು ಸಹ ಮನ್ನಾ ಮಾಡಲಾಗಿದೆ. ಎಸ್ಬಿಐ ಗ್ರಾಹಕರು ಈ ಕೊಡುಗೆಯನ್ನು ಜನವರಿ 31, 2023 ರವರೆಗೆ ಪಡೆಯಬಹುದು. ಪ್ರಸ್ತುತ, ಎಸ್ಬಿಐನಲ್ಲಿ ಗೃಹ ಸಾಲಗಳು ಶೇಕಡಾ 8.75 ರಿಂದ ಪ್ರಾರಂಭವಾಗುತ್ತವೆ. ಕೊಡುಗೆಯ ಭಾಗವಾಗಿ, ಎಸ್ಬಿಐ ಬಡ್ಡಿ ದರದಲ್ಲಿ 25 ಬೇಸಿಸ್ ಪಾಯಿಂಟ್ಗಳ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಯನ್ನು ಜನವರಿ 31, 2023 ರವರೆಗೆ ಪಡೆಯಬಹುದು.
ಕಾರುಗಳ ಬೆಲೆಯಲ್ಲಿ ಏರಿಕೆ
ಜನವರಿಯಲ್ಲಿ ಕಾರಿನ ಬೆಲೆಗಳು ಇನ್ನಷ್ಟು ಹೆಚ್ಚಾಗಲಿದೆ. ಈಗಾಗಲೇ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಆಡಿ, ಮರ್ಸಿಡಿಸ್ ಬೆಂಜ್, ಹೋಂಡಾ ಮತ್ತು ಮಹೀಂದ್ರಾ ಕಂಪನಿಗಳು ತಮ್ಮ ಬ್ರಾಂಡ್ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಹಣದುಬ್ಬರ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇನ್ಪುಟ್ ವೆಚ್ಚದಲ್ಲಿ ಹೆಚ್ಚಳದಿಂದಾಗಿ ಜನವರಿಯಿಂದ ಕಾರುಗಳ ಬೆಲೆಯನ್ನು ಕೂಡ ಹೆಚ್ಚಿಸುವುದಾಗಿ ಕಂಪನಿಗಳು ಘೋಷಿಸಿವೆ.
ಎಸ್ಬಿಐ ಕ್ರೆಡಿಟ್ ಕಾರ್ಡ್
ಎಸ್ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಜನವರಿ 1 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಸಿಂಪಲ್ಕ್ಲಿಕ್ ಕ್ರೆಡಿಟ್ ಕಾರ್ಡ್ನೊಂದಿಗೆ ಆನ್ಲೈನ್ ಖರ್ಚಿನ ಮಿತಿಯನ್ನು ದಾಟಿದವರಿಗೆ ನೀಡಲಾಗುವ ಕ್ಲಿಯರ್ಟ್ರಿಪ್ ವೋಚರ್ಗಳನ್ನು ಒಂದೇ ವಹಿವಾಟಿನಲ್ಲಿ ರಿಡೀಮ್ ಮಾಡಬಹುದು ಎಂದು ಎಸ್ಬಿಐ ಕಾರ್ಡ್ ಹೇಳಿದೆ. ಈ ವೋಚರ್ ಅಥವಾ ಆಫರ್ ಅನ್ನು ಮತ್ತೊಂದು ವೋಚರ್ ಅಥವಾ ಆಫರ್ನೊಂದಿಗೆ ಕನೆಕ್ಟ್ ಮಾಡಿಕೊಂಡು ಖರೀದಿಸಲು ಅವಕಾಶ ನೀಡುವುದಿಲ್ಲ.
ಈ ನಿಯಮ ಜನವರಿ 6 ರಿಂದ ಜಾರಿಗೆ ಬರಲಿದೆ. ಮತ್ತು ನೀವು ಅಮೆಜಾನ್ನಲ್ಲಿ ಸರಳವಾಗಿ ಕ್ಲಿಕ್ ಮಾಡಿ ಅಥವಾ ಅಡ್ವಾಂಟೇಜ್ ಎಸ್ಬಿಐ ಕಾರ್ಡ್ನೊಂದಿಗೆ ವಹಿವಾಟು ನಡೆಸಿದರೆ, ನೀವು 10 ಬಾರಿ ರಿವಾರ್ಡ್ ಪಾಯಿಂಟ್ಗಳನ್ನು ಪಡೆಯುತ್ತೀರಿ. ಆದರೆ ಈ ಎಸ್ಬಿಐ ಕಾರ್ಡ್ ಈ ರಿವಾರ್ಡ್ ಪಾಯಿಂಟ್ಗಳನ್ನು 5 ಪಟ್ಟು ಕಡಿಮೆ ಮಾಡಿದೆ. ಈ ನಿಯಮಗಳು ಜನವರಿ 1, 2023 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ