ಮ್ಯಾಪ್ ಮೈ ಇಂಡಿಯಾ ಸೃಷ್ಟಿಕರ್ತರು ಯಾರು ಗೊತ್ತಾ..? ಅವರು ಸವೆಸಿದ ಹಾದಿ ಹೀಗಿದೆ..

ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ಶೇರು ಮಾರುಕಟ್ಟೆಗೆ ಕಾಲಿಟ್ಟ ಮ್ಯಾಪ್ ಮೈ ಇಂಡಿಯಾ ಸಂಸ್ಥೆಯ ಷೇರುಗಳು ಮೊದಲ ದಿನದಲ್ಲೇ 35% ವೃದ್ಧಿ ಕಂಡಿದ್ದು ದಂಪತಿಯ ಯಶಸ್ಸಿಗೆ ಮತ್ತೊಂದು ಸಾಕ್ಷಿಯಾದಂತಾಗಿದೆ

ರಾಕೇಶ್ ಹಾಗೂ ರಶ್ಮಿ ವರ್ಮಾ

ರಾಕೇಶ್ ಹಾಗೂ ರಶ್ಮಿ ವರ್ಮಾ

  • Share this:
ಸುಮಾರು 2 ದಶಕಗಳ ಹಿಂದೆ ರಾಕೇಶ್ ಹಾಗೂ ರಶ್ಮಿ ವರ್ಮಾ(Rakesh and Rashmi Verma) ದಂಪತಿ ಡಿಜಿಟಲ್ ರೂಪದಲ್ಲಿ ( Digital Transformation) ಭಾರತದ ನಕ್ಷೆಗಳನ್ನು ನಿರ್ಮಿಸಲು ಯೋಚಿಸಿದಾಗ ಆ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದ ಜೋಡಿ ಬಹುಶಃ ಅವರದ್ದೇ ಆಗಿತ್ತು. ಗೂಗಲ್ (Google revolutionized) ತನ್ನ ಕಾರ್ಟೋಗ್ರಫಿಯನ್ನು ಕ್ರಾಂತಿಕರವಾಗಿ ರೂಪಿಸುವುದಕ್ಕಿಂತ ಬಹು ಹಿಂದೆಯೇ ವರ್ಮಾ ದಂಪತಿ ಭಾರತದ (India) ಮೂಲೆ ಮೂಲೆಗಳನ್ನು ಸಂಚರಿಸಿ ಅನ್ವೇಷಿಸಿದ್ದರು. ಅಷ್ಟೇ ಅಲ್ಲ, ತಮ್ಮ ಪ್ರಯಾಣದಲ್ಲಿ ನಗರಗಳ ಪ್ರಮುಖ ಬೀದಿ, ರಸ್ತೆಗಳು, ಗುರುತರವಾದ ಸಂಕೇತಗಳನ್ನು ಪಟ್ಟಿ ಮಾಡಿಟ್ಟುಕೊಳ್ಳುವಂತಹ ಕಷ್ಟಕರ ಕೆಲಸ ಮಾಡಿದ್ದರು.ತಮ್ಮ ಕೆಲಸದ ಪ್ರತಿ ಹಂತಗಳಲ್ಲೂ ಈ ದಂಪತಿ ಸಾಕಷ್ಟು ಶ್ರಮವಹಿಸಿದ್ದು ಸುಳ್ಳಲ್ಲ. ಇದರ ಪರಿಣಾಮದಿಂದಾಗಿಯೇ ಅವರಿಬ್ಬರು ಸೇರಿ ದೈತ್ಯವಾದ ಮ್ಯಾಪ್ ಮೈ ಇಂಡಿಯಾ (Map My India) ಸಂಸ್ಥೆ ಹುಟ್ಟು ಹಾಕಲು ಅನುಕೂಲವಾಯಿತು. ಇದೀಗ ಕಳೆದ ಮಂಗಳವಾರದಂದು ಅವರು ಪಟ್ಟ ಶ್ರಮಕ್ಕೆ ತಕ್ಕುದಾದ ಮತ್ತೊಂದು ಫಲ ಸಿಕ್ಕಂತಾಗಿದೆ.

ಯಶಸ್ಸಿಗೆ ಮತ್ತೊಂದು ಸಾಕ್ಷಿ
ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ಶೇರು ಮಾರುಕಟ್ಟೆಗೆ ಕಾಲಿಟ್ಟ ಮ್ಯಾಪ್ ಮೈ ಇಂಡಿಯಾ ಸಂಸ್ಥೆಯ ಷೇರುಗಳು ಮೊದಲ ದಿನದಲ್ಲೇ 35% ವೃದ್ಧಿ ಕಂಡಿದ್ದು ದಂಪತಿಯ ಯಶಸ್ಸಿಗೆ ಮತ್ತೊಂದು ಸಾಕ್ಷಿಯಾದಂತಾಗಿದೆ. ಈ ಮೂಲಕ ಈ ಜೋಡಿಯ ಒಟ್ಟು ಆಸ್ತಿಯು 586 ಮಿಲಿಯನ್ ಡಾಲರ್‌ಗೆ ವೃದ್ಧಿಯಾಗಿದೆ. ಷೇರು ಬೆಲೆ ಏರಿಕೆಯಿಂದಾಗಿ ಈ ಸಂಸ್ಥೆಯ ಪ್ರತಿ ಷೇರಿನ ಬೆಲೆ ಮಂಗಳವಾರದಂದು 1393.65 ರೂ.ಗೆ ಏರಿಕೆ ಕಂಡಿತು. ಭಾರತದ ಭೌತಿಕ ಮಾಹಿತಿಯನ್ನು ಅಚ್ಚುಕಟ್ಟಾಗಿ ನೀಡುವ ಮೂಲಕ ಡಿಜಿಟಲ್ ಮ್ಯಾಪ್‌ಗಳನ್ನು ಒದಗಿಸುವ ಈ ಕಂಪನಿಗೆ ಇದು ನಿಜಕ್ಕೂ ಉತ್ತಮ ಆರಂಭ ಎನ್ನಬಹುದಾಗಿದೆ.

ಇದನ್ನೂ ಓದಿ: Google Maps Speedometer ಬಳಸಿ...ಅತಿಯಾದ ವೇಗದ ಚಾಲನೆ ಮತ್ತು ನಿಯಮ ಉಲ್ಲಂಘನೆಯಿಂದ ತಪ್ಪಿಸಿ!

ಹಿಂದೆ ಸಿ.ಇ ಇನ್ಫೋಸಿಸ್ಟಮ್ಸ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ಮ್ಯಾಪ್ ಮೈ ಇಂಡಿಯಾಗೆ ಷೇರು ಮಾರುಕಟ್ಟೆಯಲ್ಲಿ ಸಿಕ್ಕಂತಹ ಬಲವಾದ ಉಪಸ್ಥಿತಿಯು ಉತ್ತಮ ಭವಿಷ್ಯ ಸೂಚಿಸುವಂತಿದೆ. ಈಗಾಗಲೇ ಸಂಸ್ಥೆಯು ಸಾರ್ವಜನಿಕವಾಗಿ ನಿಗದಿಪಡಿಸಿರುವ ಷೇರು ಬೆಲೆಯ 150 ಪಟ್ಟು ಹೆಚ್ಚು ಬೆಲೆಗೆ ಕೊಂಡುಕೊಳ್ಳುವುದಾಗಿ ಬಿಡ್‌ಗಳು ಬಂದಿದ್ದವು ಎಂದು ಸಂಸ್ಥೆಯು ಹೇಳಿದೆ. ಆ್ಯಪಲ್ ಹಾಗೂ ಅಮೆಜಾನ್ ಪ್ರಮುಖವಾಗಿ ಇದರ ತಂತ್ರಾಂಶ ಕೊಂಡುಕೊಂಡಿರುವುದಾಗಿ ಕಂಪನಿ ತಿಳಿಸಿದೆ.

ಬಂಗಾರದ ಬೇಟೆ
ಈ ಬೆಳವಣಿಗೆಯಿಂದಾಗಿ ಐಪಿಒ ನಂತರದಲ್ಲೂ ಸಂಸ್ಥೆಯ 54% ರಷ್ಟು ಒಡೆತನವನ್ನು ಈ ಜೋಡಿ ಹೊಂದಿದ್ದು ಈ ಮೂಲಕ ಈ ಸಲದ ಸ್ಟಾಕ್ ಮಾರುಕಟ್ಟೆಯಲ್ಲಿ ಬಂಗಾರದ ಬೇಟೆಯಾಡಿದ ಜೋಡಿಯಾಗಿದೆ. ಭಾರತೀಯ ಸ್ಟಾರ್ಟಪ್ ಸಂಸ್ಥೆಗಳು ನಿಜಕ್ಕೂ ಈ ಸಂಕ್ರಾಮಿಕ ನಂತರದ ಸಮಯದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಡಿಜಿಟಲ್ ವೇದಿಕೆಯ ಇ-ಕಾಮರ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಗಳಿಸುತ್ತಿವೆ ಎಂಬುದು ಸುಳ್ಳಲ್ಲ. ಇದೊಂದು ರೀತಿ ಸ್ಟಾರ್ಟಪ್‌ಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

ತಮ್ಮ ಕಂಪನಿಯ ಅಗಾಧ ಸಾಧನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತ "ನಾವು ಕಲೆ ಹಾಕಿದ ಮಾಹಿತಿಗಳನ್ನು ಮ್ಯಾಪಿಂಗ್ ಮಾಡಲು ಆರಂಭಿಸಿದಾಗ ಯಾರೋಬ್ಬರಿಗೂ ಇದು ತಿಳಿದೇ ಇರಲಿಲ್ಲ, ಈಗ 25 ವರ್ಷಗಳ ನಂತರ ಮ್ಯಾಪ್ ಮಾಡಲಾದ ಡೇಟಾ ಎಲ್ಲ ಕ್ಷೇತ್ರಗಳಲ್ಲಿ ತನ್ನ ಬೇಡಿಕೆ ಹೆಚ್ಚಿಸಿಕೊಂಡಿದೆ" ಎಂದು ರಾಕೇಶ್ ಹೇಳುತ್ತಾರೆ.

ಅತಿ ಹೆಚ್ಚಿನ ಲಾಭ
ಈ ಸ್ಟಾರ್ಟಪ್ ಸಂಸ್ಥೆಯು ಕಳೆದ ವರ್ಷ 31% ಅಂದರೆ 1.92 ಬಿಲಿಯನ್ ರೂಪಾಯಿಗಳಷ್ಟು ಆದಾಯಗಳಿಸಿ ಒಟ್ಟು ನಿವ್ವಳ ಲಾಭ 594.3 ಮಿಲಿಯನ್ ರೂಪಾಯಿಗಳನ್ನು ಬಾಚಿಕೊಂಡಿತ್ತು. ಪ್ರಸ್ತುತ ವರ್ಷದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಕೊನೆಯಾಗುವ ಮೊದಲ 2 ತ್ರೈಮಾಸಿಕಗಳಲ್ಲೇ ಕಂಪನಿಯು 46% ಆದಾಯಗಳಿಸಿದ್ದು ಅತಿ ಹೆಚ್ಚಿನ ಲಾಭ ಮಾಡುವ ಸೂಚನೆ ಈಗಾಗಲೇ ನೀಡಿದೆ.

ಮ್ಯಾಪಿಂಗ್ ವ್ಯವಹಾರ
ಪ್ರಸ್ತುತ, 71ರ ಪ್ರಾಯದ ರಾಕೇಶ್ ಹಾಗೂ 65ರ ಪ್ರಾಯದ ರಶ್ಮಿ 90ರ ದಶಕದ ಮಧ್ಯದ ಸಮಯದಲ್ಲಿ ತಮ್ಮ ಸಂಸ್ಥೆ ಪ್ರಾರಂಭಿಸಿದ್ದರು. ಆಗ ಸಾರ್ವಜನಿಕವಾಗಿ ಇಂಟರ್ನೆಟ್ ಎಂಬುದು ಯಾರಿಗೂ ಸಹ ತಿಳಿಯದ ವಿಷಯವೇ ಆಗಿತ್ತು. ಅಲ್ಲದೆ ತಮ್ಮ ಮ್ಯಾಪಿಂಗ್ ವ್ಯವಹಾರಕ್ಕೂ ಇದ್ದ ಬೇಡಿಕೆಯು ಅಷ್ಟಕ್ಕಷ್ಟೆ. ಇಂದು ಬೆಂಗಳೂರು ಹಾಗೂ ಗುರುಗ್ರಾಮ ಪಡೆದಿರುವ ಸ್ಥಾನಮಾನಗಳನ್ನು ಅಂದು ಊಹಿಸಲು ಸಾಧ್ಯವಿಲ್ಲದಂತಾಗಿತ್ತು. ಆದರೂ ಈ ಜೋಡಿ ತಮ್ಮ ವ್ಯವಹಾರದಲ್ಲಿ ಗಟ್ಟಿಯಾಗಿ ನಿಂತಿತು.

ರಶ್ಮಿ ವ್ಯವಹಾರದ ತಾಂತ್ರಿಕ ವಿಭಾಗ ಮುನ್ನಡೆಸಿದರೆ ರಾಕೇಶ್ ಈ ಕಂಪನಿಯ ವಿಸ್ತರಣೆಯಲ್ಲಿ ಬಹು ಪ್ರಮುಖ ಪಾತ್ರವಹಿಸಿದರು. 1970ರಲ್ಲೇ ಉತ್ತಮ ಶಿಕ್ಷಣ ಪಡೆದಿದ್ದ ಇಬ್ಬರೂ ಅಮೆರಿಕದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿ ಯಶಸ್ವಿ ಕೆಲಸಗಳನ್ನು ನಿಭಾಯಿಸಿದ್ದಾರೆ. ರಾಕೇಶ್ ಜನರಲ್ ಮೋಟರ್ಸ್‌ನಲ್ಲಿ ಉತ್ತಮ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದರೆ ರಶ್ಮಿ ಐಬಿಎಂ ಸಂಸ್ಥೆಯಲ್ಲಿ ಕಂಪ್ಯೂಟರ್ ನಿಪುಣೆಯಾಗಿ ಸೇವೆ ಸಲ್ಲಿಸಿದ್ದಾರೆ. ದಂಪತಿಗಳಿಬ್ಬರ ಶ್ರೀಮಂತ ಕೆಲಸದ ಅನುಭವ ಇಂದು ತಮ್ಮ ಸಂಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಸಹಕಾರಿಯಾಯಿತು.

ದೊಡ್ಡ ದೊಡ್ಡ ಒಪ್ಪಂದ
ದಂಪತಿಗಳಿಬ್ಬರು ನೆನಪಿಸಿಕೊಳ್ಳುವಂತೆ ಮ್ಯಾಪ್‌ ಮೈ ಇಂಡಿಯಾದ ಮೊದಲ ವರ್ಷಗಳು ತುಂಬಾ ದುಃಸ್ವಪ್ನದಂತಿತ್ತು. ರಾಕೇಶ್ ಸಾಕಷ್ಟು ಬಾರಿ ನೈಜವಾಗಿ ನೆಲೆಯ ಮೇಲೆ ಇಳಿದು ವಿಳಾಸಗಳನ್ನು ದಾಖಲು ಮಾಡಬೇಕಾಗುತ್ತಿತ್ತು. ಇದನ್ನು ಸಹನೆ ಕಳೆದುಕೊಳ್ಳದೆ ಮಾಡಬೇಕಾಗಿತ್ತು. ತದನಂತರ ಈ ಕಂಪನಿ ಆರಂಭಿಸಿದಾಗ ಮೊದಲಿಗೆ ಕೋಕಾ ಕೋಲಾ ಸಂಸ್ಥೆಯು ನಕ್ಷೆಯಲ್ಲಿ ತಪ್ಪಾಗಿ ನಿರ್ವಹಿಸಲ್ಪಟ್ಟ ಅದೇಷ್ಟೋ ಪ್ರಮಾದಗಳನ್ನು ಸರಿ ಮಾಡಿಕೊಡುವಂತೆ ಇವರೊಂದಿಗೆ ಒಪ್ಪಂದ ಮಾಡಿಕೊಂಡಿತು. ಹೀಗೆ ಮುಂದುವರೆಯುತ್ತ ಮೋಟೋರೊಲಾ, ಎರಿಕ್ಸನ್ ತಮ್ಮ ಸೇವಾ ಟವರ್‌ಗಳಿಗಾಗಿ ಇವರ ಸೇವೆ ಪಡೆಯಲಾರಂಭಿಸಿ ಕಂಪನಿ ತನ್ನ ನೆಲೆ ಕಂಡುಕೊಳ್ಳುತ್ತ ಹೋಯಿತು.

ಇದನ್ನೂ ಓದಿ: Google Maps ಮೂಲಕ ಹತ್ತಿರದ ಮಾರುಕಟ್ಟೆಯಲ್ಲಿ ಜನಸಂದಣಿ ಇದ್ಯಾ ಅಂತನೂ ಇನ್ಮುಂದೆ ಪತ್ತೆ ಹಚ್ಚಬಹುದು

ನಮಗೆ ದೊರೆತ ಈ ಯಶಸ್ಸು ನಮ್ಮನ್ನು ಬದಲಾಯಿಸಲು ಸಾಧ್ಯವಾಗದು. ನಾವು ಮೊದಲಿನಂತೆಯೇ ನಮ್ಮ ಕೆಲಸ ಮಾಡಲು ಮುಂದಾಗಿದ್ದು ಇನ್ನು 200 ದೇಶಗಳಿಗೂ ನಾವು ಮ್ಯಾಪಿಂಗ್ ಮಾಡುವ ಉದ್ದೇಶ ಹೊಂದಿದ್ದೇವೆ. ಈಗಾಗಲೇ ಇಬ್ಬರು ಸಾಕಷ್ಟು ಪ್ರವಾಸ ಮಾಡಿದ್ದು ಇನ್ನೇನಿದ್ದರೂ ಕುಟುಂಬದ ಜೊತೆ ಸಮಯ ಕಳೆಯುತ್ತ ದೆಹಲಿಯಲ್ಲಿರುವ ತಮ್ಮ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತ ತಮ್ಮ ಗುರಿಯ ಸಾಧನೆಯ ಹಿಂದೆ ಬೀಳುವುದಾಗಿ ಹೆಮ್ಮೆಯಿಂದ ನುಡಿಯುತ್ತಾರೆ ಈ ಯಶಸ್ವಿ ದಂಪತಿ ಜೋಡಿ.
Published by:vanithasanjevani vanithasanjevani
First published: