SBI Card: ಇ- ಕಾಮರ್ಸ್ ಗಿಫ್ಟ್ ವೋಚರ್‌ಗಳ ಮೇಲೆ ರಿಯಾಯಿತಿ!

State Bank Of India ಕಾರ್ಡ್ ಬಳಕೆದಾರರು ಇ-ಗಿಫ್ಟ್ ವೋಚರ್‌ಗಳ ಮೇಲೆ ಶೇಕಡಾ 15ರಷ್ಟು ರಿಯಾಯಿತಿ ಪಡೆಯಲು ಸಾಧ್ಯವಿದೆ. ಆದರೆ ಈ ಆಫರ್ ಕೇವಲ 2021ರ ಸೆಪ್ಟೆಂಬರ್ 27ರವರೆಗೆ ಮಾತ್ರ ಲಭ್ಯ ಇರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ (Twitter) ಮೂಲಕ ಈ ಮಾಹಿತಿ ಹಂಚಿಕೊಂಡಿದೆ.

SBI Card (Photo: Goggle)

SBI Card (Photo: Goggle)

  • Share this:
State Bank Of India: ಈಗ ಮತ್ತೆ ಹಬ್ಬಗಳ ಸಂಭ್ರಮ ಆರಂಭವಾಗಿದೆ. ದಸರಾ ಹಬ್ಬ ಸ್ವಾಗತಿಸಲು ದಿನ ಗಣನೆ ಶುರುವಾಗಿದೆ. ಸ್ನೇಹಿತರು ಮತ್ತು ಬಂಧು ಬಳಗದ ಜೊತೆ ಸಿಹಿ ಹಂಚಿಕೊಂಡು, ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಹಬ್ಬದ ಸಂಭ್ರಮಕ್ಕೆ ಎಲ್ಲರೂ ಸಿದ್ಧವಾಗುತ್ತಿದ್ದಾರೆ. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ನೆಚ್ಚಿನ ಸ್ನೇಹಿತರಿಗೆ ಅಥವಾ ಬಂಧುಗಳಿಗೆ ಉಡುಗೊರೆ ಖರೀದಿಸಲು ಹೊರಗೆ ಹೋಗುವುದಾದರೂ ಹೇಗೆ? ಹಾಗಾಗಿ, ಬಹಳಷ್ಟು ಮಂದಿ ಆನ್‍ಲೈನ್ ಶಾಪಿಂಗ್ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಆನ್‍ಲೈನ್ ಗಿಫ್ಟ್ ವೋಚರ್‌ಗಳು (Online Gift Vouture) ಈ ದಿನಗಳಲ್ಲಿ ಹಿಂದಿಗಿಂತಲೂ ಹೆಚ್ಚು ಜನಪ್ರಿಯ ಆಗುತ್ತಿವೆ. ಉಡುಗೊರೆ ಪಡೆಯುವವರು ತಮಗಿಷ್ಟದ ಉಡುಗೊರೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದರಿಂದ ಸಿಗುತ್ತದೆ. ಈ ಸಂದರ್ಭದಲ್ಲಿ, ತನ್ನ ಗ್ರಾಹಕರ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕಾರ್ಡ್ ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಅದೇನೆಂದರೆ, ಎಸ್‍ಬಿಐ ಕಾರ್ಡ್ ಇ ಕಾಮರ್ಸ್ ವೇದಿಕೆಗಳಾದ, ಮಿಂತ್ರಾ (Myntra), ಅಮೆಜಾನ್ (Amazon), ಫ್ಲಿಪ್‍ಕಾರ್ಟ್ (Flipkart) ಮತ್ತು ಇತ್ಯಾದಿಗಳ ಇ – ಗಿಫ್ಟ್ ವೋಚರ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ ಬಳಕೆದಾರರು ಇ-ಗಿಫ್ಟ್ ವೋಚರ್‌ಗಳ ಮೇಲೆ ಶೇಕಡಾ 15ರಷ್ಟು ರಿಯಾಯಿತಿ ಪಡೆಯಲು ಸಾಧ್ಯವಿದೆ. ಆದರೆ ಈ ಆಫರ್ ಕೇವಲ 2021ರ ಸೆಪ್ಟೆಂಬರ್ 27ರವರೆಗೆ ಮಾತ್ರ ಲಭ್ಯ ಇರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ (Twitter) ಮೂಲಕ ಈ ಮಾಹಿತಿ ಹಂಚಿಕೊಂಡಿದೆ.

“ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಜೊತೆ ಹಬ್ಬದ ಸಂಭ್ರಮ ಹಂಚಿಕೊಳ್ಳಿ ಮತ್ತು ಅವರಿಗೆ ಉತ್ತಮ ಬ್ರ್ಯಾಂಡ್‌ಗಳ ಇ ವೋಚರ್‌ಗಳನ್ನು ಉಡುಗೊರೆಯಾಗಿ ನೀಡಿ. ಮಿಂತ್ರಾ, ಅಮೆಜಾನ್ , ಫ್ಲಿಪ್‍ಕಾರ್ಟ್ ಮತ್ತು ಇನ್ನೂ ಹಲವು ಬ್ರ್ಯಾಂಡ್‌ಗಳ ಮೇಲೆ ಶೇಕಡಾ 15ರಷ್ಟು ರಿಯಾಯಿತಿ ಪಡೆಯಿರಿ” ಎಂದು ಎಸ್‍ಬಿಐ ಕಾರ್ಡ್ ಟ್ವೀಟ್ ಮಾಡಿದೆ.

Read Also ⇒ Chinese phones: ಚೀನಾದ ಸ್ಮಾರ್ಟ್​ಫೋನ್​ಗಳನ್ನು ಎಸೆಯಿರಿ, ರಕ್ಷಣಾ ಸಚಿವಾಲಯ ಜನರಿಗೆ ಈ ರೀತಿ ಹೇಳಿದ್ಯಾಕೆ?

ಯಾವ ಆಫರ್‌ಗಳಿವೆ ಎಂಬುದನ್ನು ಪರಿಶೀಲಿಸಿ:

ಅಮೇಜಾನ್ ಪೇ ಗಿಫ್ಟ್ ಕಾರ್ಡ್: ಅಮೇಜಾನ್ ಗಿಫ್ಟ್ ವೋಚರ್‌ಗಳ ಮೇಲೆ ಶೇಕಡಾ 3ರಷ್ಟು ರಿಯಾಯಿತಿ

ಫ್ಲಿಪ್‍ಕಾರ್ಟ್ : ಫ್ಲಿಪ್‍ಕಾರ್ಟ್ ವೋಚರ್‌ಗಳ ಮೇಲೆ 20 ಶೇಕಡಾ ರಿಯಾಯಿತಿ.

ಮಿಂತ್ರಾ : ಮಿಂತ್ರಾ ವೋಚರ್‌ಗಳ ಮೇಲೆ ಶೇಕಡಾ 9ರಷ್ಟು ರಿಯಾಯಿತಿ.

ಸ್ಪೆನ್ಸರ್ಸ್ : ಸ್ಪೆನ್ಸರ್ಸ್ ವೋಚರ್‌ಗಳ ಮೇಲೆ ಶೇಕಡಾ 5ರಷ್ಟು ರಿಯಾಯಿತಿ.

ಬಿಗ್ ಬಜಾರ್ : ಬಿಗ್ ಬಜಾರ್ ವೋಚರ್‌ಗಳ ಮೇಲೆ ಶೇಕಡಾ 6ರಷ್ಟು ರಿಯಾಯಿತಿ.

ಗ್ರೋಫರ್ಸ್ : ಗ್ರೋಫರ್ಸ್ ವೋಚರ್‌ಗಳ ಮೇಲೆ ಶೇಕಡಾ 10ರಷ್ಟು ರಿಯಾಯಿತಿ.

ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರೀಟೇಲ್ ಲಿಮಿಟೆಡ್ ವೋಚರ್‌ಗಳು: ಆಲೆನ್ ಸೋಲಿ, ಲೂಯಿಸ್ ಫಿಲಿಪ್ಪೆ ಮತ್ತಿತರ ಬ್ರ್ಯಾಂಡ್‌ಗಳ ಮೇಲೆ ಶೇಕಡಾ 15ರಷ್ಟು ರಿಯಾಯಿತಿ.

ಪ್ಯಾಂಟಲೂನ್ಸ್ : ಪ್ಯಾಂಟಲೂನ್ಸ್ ವೋಚರ್‌ಗಳ ಮೇಲೆ ಶೇಕಡಾ 15ರಷ್ಟು ರಿಯಾಯಿತಿ.

ಪ್ರೆಸ್ಟೀಜ್ : ಪ್ರೆಸ್ಟೀಜ್ ವೋಚರ್‌ಗಳ ಮೇಲೆ ಶೇಕಡಾ 15ರಷ್ಟು ರಿಯಾಯಿತಿ.


First published: