vivo ಅವರ 'ಸ್ವಿಚ್ ಆಫ್' ಅಭಿಯಾನ ನಿಮ್ಮ ಹೊಸ ವರ್ಷದ ಸಂಕಲ್ಪಕ್ಕೆ ಅರ್ಹ ಆರಂಭ; ಹೇಗೆಂದು ತಿಳಿಯಿರಿ

ಸ್ವಿಚ್ ಆಫ್

ಸ್ವಿಚ್ ಆಫ್

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಸ್ವಿಚ್ ಆಫ್ ಮಾಡಬೇಕಾದ ಯಾವುದೇ ನಿಗದಿತ ಅವಧಿ ಇಲ್ಲ. ಪ್ರತಿದಿನ ನಿಮ್ಮ ಡಿವೈಸ್‌ಗಳಲ್ಲಿ ನೀವು ಕಳೆಯುವ ಸಮಯವನ್ನು ಕಡಿಮೆ ಮಾಡಲು ಮನಃಪೂರ್ವಕವಾಗಿ ಕ್ರಮ ತೆಗೆದುಕೊಳ್ಳಲು VIVO ಅವರ Switch Off ಅಭಿಯಾನ ನಿಮ್ಮನ್ನು ಪ್ರೋತ್ಸಾಹಿಸುತ್ತದೆ.

 • Advertorial
 • 3-MIN READ
 • Last Updated :
 • Share this:

  2020 ನಾವು ಹಿಂದೆಂದೂ ಕಂಡಿರದಂತಹ ಭಿನ್ನವಾದ ವರ್ಷವಾಗಿದೆ. ಮಹಾಮಾರಿಯ ಕಾರಣದಿಂದ ನಾವು ಮನೆಯೊಳಗೆ ಸುರಕ್ಷಿತವಾಗಿ ಕುಳಿತಿರುವಾಗ ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ನಾವು ಸಾಕಷ್ಟು ಸಮಯವನ್ನು ಕಳೆದಿದ್ದೇವೆ ಎಂದು ಯೋಚಿಸಿಕೊಂಡರೆ  ಆಶ್ಚರ್ಯವೇನಿಲ್ಲ. ಕಟ್ಟುನಿಟ್ಟಾದ ಲಾಕ್‌ಡೌನ್‌ನ ಆರಂಭಿಕ ತಿಂಗಳುಗಳಲ್ಲಿ, ಸಂಪರ್ಕ ಮತ್ತು ಅಪ್‌ಡೇಟ್‌ಗಳನ್ನು ಉಳಿಸಿಕೊಳ್ಳುವುದು ನಮ್ಮ ಏಕೈಕ ಆದ್ಯತೆಯಾಗಿತ್ತು - ಎಷ್ಟರಮಟ್ಟಿಗೆಂದರೆ, ಕೋವಿಡ್ -19 ಗೆ ಸಂಬಂಧಿಸಿದ ಯಾವುದನ್ನಾದರೂ ಮತ್ತು ಎಲ್ಲದರ ಬಗ್ಗೆ ಗೀಳಿನಿಂದ ಹುಡುಕಿದ ಜನರ ಬಗ್ಗೆ ವಿವರಿಸಲು ‘ಡೂಮ್ಸ್ ಡೇ ಸ್ಕ್ರೋಲಿಂಗ್’ ಒಂದು ಕಾನೂನುಬದ್ಧ ಪದವಾಯಿತು. ನಾವು ಯಾವುದನ್ನಾದರೂ ಪ್ರಮುಖವಾದುದನ್ನು ಕಳೆದುಕೊಳ್ಳುವೆವೇನೋ ಎಂದು ನಾವು ಅಕ್ಷರಶಃ ನಮ್ಮ ಡಿವೈಸ್‌ಗಳನ್ನು ಆಫ್ ಮಾಡುತ್ತಿರಲಿಲ್ಲ.


  ಆದರೂ, ನಮಗೆ ತಿಳಿದಿಲ್ಲದೆಯೇ, ಎಲ್ಲಾ ಹೆಚ್ಚುವರಿ ಸ್ಕ್ರೋಲಿಂಗ್ ನಮ್ಮ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸುತ್ತದೆ. ನಿಮಗೆ ಈಗಾಗಲೇ ಇದರ ಬಗ್ಗೆ ತಿಳಿದಿಲ್ಲದಿದ್ದರೆ, ನಮ್ಮ ಡಿವೈಸ್‌ಗಳಲ್ಲಿ ನಾವು ಎಷ್ಟು ಸಮಯವನ್ನು ಕಳೆಯುತ್ತೇವೆ ಎಂಬುದನ್ನು ಬ್ಯಾಕಪ್ ಮಾಡಲು ಲೆಕ್ಕಾಚಾರದ ಜೊತೆಗೆ ಈಗ ನಮ್ಮಲ್ಲಿ ಪುರಾವೆಗಳಿವೆ. ‘ಸ್ಮಾರ್ಟ್‌ಫೋನ್‌ಗಳು ಮತ್ತು ಮಾನವ ಸಂಬಂಧಗಳ ಮೇಲೆ ಅವುಗಳ ಪ್ರಭಾವ 2020’ ಎಂಬ ಶೀರ್ಷಿಕೆಯ vivo ಅವರ ಎರಡನೇ ಆವೃತ್ತಿಗೆ ಧನ್ಯವಾದಗಳು, ಈ ವರ್ಷದ ಸಾಮಾಜಿಕ ಅಂತರದ ಸಮಯದಲ್ಲಿ ನಮ್ಮ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವಸೆಲೆಯಾದವು ಎಂಬುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್ ಬಳಕೆಯನ್ನು ಅಧ್ಯಯನವು ಮೌಲ್ಯಮಾಪನ ಮಾಡುತ್ತದೆ ಮತ್ತು ಅದರ ಮೇಲೆ ಬೆಳಕು ಚೆಲ್ಲುತ್ತದೆ - ಬಳಕೆಯ ವ್ಯಾಪ್ತಿ, ಬಳಕೆಯ ಮಾದರಿಗಳ ಮೇಲೆ ಲಾಕ್‌ಡೌನ್‌ ಪರಿಣಾಮ, ವೈಯಕ್ತಿಕ ಆರೋಗ್ಯ ಮತ್ತು ಸಾಮಾಜಿಕ ಸಂಬಂಧಗಳ ಮೇಲೆ ಪರಿಣಾಮ.


  ದೆಹಲಿ, ಮುಂಬೈ, ಕೋಲ್ಕತಾ, ಬೆಂಗಳೂರು, ಚೆನ್ನೈ, ಹೈದರಾಬಾದ್, ಅಹಮದಾಬಾದ್ ಮತ್ತು ಪುಣೆ ಈ ಎಂಟು ಪ್ರಮುಖ ನಗರಗಳಲ್ಲಿ ವಿವಿಧ ವಯಸ್ಸಿನ ಗುಂಪುಗಳು ಮತ್ತು ಜನಸಂಖ್ಯೆಯನ್ನಾಧರಿಸಿ  2000 ಪ್ರತಿಸ್ಪಂದಕರಲ್ಲಿ ನಡೆಸಿದ ಅಧ್ಯಯನದ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ. ಇದು 30% ಮಹಿಳೆಯರು ಮತ್ತು 70% ಪುರುಷರನ್ನು ಒಳಗೊಂಡಿದೆ.


  2020 ಅಧ್ಯಯನದ ಫಲಿತಾಂಶಗಳು:


  66% ರಷ್ಟು ಭಾರತೀಯರು ತಮ್ಮ ಸ್ಮಾರ್ಟ್‌ಫೋನ್ ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಭಾವಿಸುತ್ತಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಇಷ್ಟೇ ಅಲ್ಲದೆ, 70% ರಷ್ಟು ಭಾರತೀಯರು ತಮ್ಮ ಸ್ಮಾರ್ಟ್‌ಫೋನ್ ಬಳಕೆ ಹೀಗೆ ಹೆಚ್ಚುತ್ತಿದ್ದರೆ, ಅದು ಅವರ ಮಾನಸಿಕ / ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಭಾವಿಸುತ್ತಾರೆ.


  ಹೆಚ್ಚುವರಿಯಾಗಿ, 74% ರಷ್ಟು ಜನರು ತಮ್ಮ ಮೊಬೈಲ್ ಫೋನ್ ಅನ್ನು ನಿಯತಕಾಲಿಕವಾಗಿ ಸ್ವಿಚ್ ಆಫ್ ಮಾಡುವುದರಿಂದ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಆದಾಗ್ಯೂ, ಕೇವಲ 18% ಬಳಕೆದಾರರು ತಮ್ಮ ಫೋನ್ ಅನ್ನು ತಾವೇ ಸ್ವಂತವಾಗಿ ಸ್ವಿಚ್ ಆಫ್ ಮಾಡುತ್ತಾರೆ. 84% ಬಳಕೆದಾರರು ತಮ್ಮ ಫೋನ್‌ಗಳನ್ನು ಲಿವಿಂಗ್ ರೂಮಿನಲ್ಲಿ ಕೊಂಡೊಯ್ಯುತ್ತಾರೆ ಮತ್ತು 71% ಜನರು ತಮ್ಮ ಆಹಾರವನ್ನು ತಿನ್ನುವಾಗಲೂ ಬಳಸುತ್ತಾರೆ ಎಂದು ನೀವು ತಿಳಿದರೆ ಆಶ್ಚರ್ಯವೇನಿಲ್ಲ.


  2019 ರಿಂದ ವ್ಯತ್ಯಾಸ:


  ಈ ವರ್ಷ ನಡೆದ ಎಲ್ಲ ಸಂಗತಿಗಳೊಂದಿಗೆ ನೋಡಿದರೆ 2019 ಬಹಳ ಹಿಂದಿನ ದಿನಗಳೇನೋ ಎಂದು ಅನಿಸುತ್ತದೆ, ಆದರೆ ಸ್ಮಾರ್ಟ್‌ಫೋನ್ ಬಳಕೆಯ ಹೆಚ್ಚಳಕ್ಕೆ ಬಂದಾಗ ಸಂಖ್ಯೆಗಳು ನಿರಾಕರಿಸಲಾಗದು. ಅದೇ ಅಧ್ಯಯನವು ಜನರು ಕಳೆದ ವರ್ಷ ತಮ್ಮ ಸ್ಮಾರ್ಟ್‌ಫೋನ್‌ಗಳ ಮೇಲೆ  4.94 ಗಂಟೆಗಳ ಕಾಲ ಕಳೆದಿದ್ದು ಅದು ಮಾರ್ಚ್ 2020 ರವರೆಗೆ 5.48 ಗಂಟೆಗಳವರೆಗೆ ಏರಿತು ಮತ್ತು ಹಾಗೆ ಮುಂದುವರೆಯುತ್ತಾ ದಿನಕ್ಕೆ 6.85 ಗಂಟೆಗಳವರೆಗೆ ಜಿಗಿದಿದೆ. ಇದು ಕೇವಲ ಒಂದು ವರ್ಷದಲ್ಲಿ ಸ್ಮಾರ್ಟ್‌ಫೋನ್‌ಗಳಿಗಾಗಿ ಕಳೆದ ದೈನಂದಿನ ಸರಾಸರಿ 39% ನಷ್ಟು ಹೆಚ್ಚಳವನ್ನು ಸೂಚಿಸುತ್ತದೆ!


  ಕಳೆದ ವರ್ಷ ತಮ್ಮ ಸ್ಮಾರ್ಟ್‌ಫೋನ್‌ಗಳಿಲ್ಲದೆ ಕೇವಲ 33% ರಷ್ಟು ಜನರು ಮಾತ್ರ ಕಿರಿಕಿರಿ ಅಥವಾ ಮೂಡಿ ಭಾವನೆ ಹೊಂದಿದ್ದಾರೆ ಎಂಬ ಅಂಶವು 2020 ರಲ್ಲಿ 74% ಕ್ಕೆ ದ್ವಿಗುಣಗೊಂಡಿದೆ. ಅಲ್ಲಿ 52% ಪ್ರತಿಸ್ಪಂದಕರು 2019 ರಲ್ಲಿ ಮುಂಜಾನೆ ಎಚ್ಚರಗೊಂಡ 15 ನಿಮಿಷಗಳಲ್ಲಿ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪರಿಶೀಲಿಸಿದ್ದರೆ ಈ ವರ್ಷ ಈ ಸಂಖ್ಯೆ 84% ಕ್ಕೆ ಏರಿದೆ.


  vivo India ಮತ್ತು ‘ಸ್ವಿಚ್ ಆಫ್’ ಅಭಿಯಾನ:


  vivo, ನವೀನ ಜಾಗತಿಕ ಸ್ಮಾರ್ಟ್‌ಫೋನ್ ಬ್ರ್ಯಾಂಡ್, ಸ್ಮಾರ್ಟ್‌ಫೋನ್‌ಗಳ ವಿವೇಚನಾಯುಕ್ತ ಬಳಕೆಯ ಪ್ರಯೋಜನಗಳ ಬಗ್ಗೆ ಜನರನ್ನು ಸಂವೇದನಾಶೀಲಗೊಳಿಸಲು ಈ ಅಭಿಯಾನವನ್ನು ಪ್ರಾರಂಭಿಸಿತು ಮತ್ತು ನಿಮ್ಮ ಫೋನ್‌ಗಳನ್ನು ಆಗಾಗ #SwitchOff ಮಾಡುವ ಅವಶ್ಯಕತೆಯಿದೆ ಎಂಬ ಸಂದೇಶವನ್ನು ಹರಡುತ್ತದೆ.


  ಹೆಚ್ಚಿದ ಸ್ಮಾರ್ಟ್‌ಫೋನ್ ಬಳಕೆಗೆ ಬಂದಾಗ ನಮ್ಮಲ್ಲಿ ಹಲವರು ಈಗಾಗಲೇ ಭಾವಿಸಿರುವುದನ್ನು ಹೆಚ್ಚಿಸಲು ಮತ್ತು ಅದನ್ನು ಸಂಖ್ಯೆಯಲ್ಲಿ ಇರಿಸಲು ಅಧ್ಯಯನವು ಕೇವಲ ಒಂದು ಮಾರ್ಗವಾಗಿದೆ.


  vivo ಇಂಡಿಯಾದ ನಿರ್ದೇಶಕ-ಬ್ರ್ಯಾಂಡ್ ಸ್ಟ್ರಾಟಜಿ, ನಿಪುನ್ ಮರಿಯಾ ಈ ಅಧ್ಯಯನವನ್ನು ಸಂಕ್ಷಿಪ್ತವಾಗಿ ಹೇಳುತ್ತಾರೆ, “2020 ವರ್ಷ ಸಾಮಾನ್ಯವಾಗಿರಲಿಲ್ಲ - ಯಾರೂ ಊಹಿಸಿರದ ವರ್ಷ. ಮಹಾಮಾರಿಯು ನಮ್ಮನ್ನು ಮುನ್ನಡೆಸಲು ತಳ್ಳಿದ ಸಾಮಾಜಿಕ ಅಂತರದ ಜೀವನದ ಮಧ್ಯೆ, ಸ್ಮಾರ್ಟ್‌ಫೋನ್ ಎಲ್ಲದಕ್ಕೂ ಕೇಂದ್ರ ನರಮಂಡಲವಾಗಿ ಹೊರಹೊಮ್ಮಿತು. ಆದಾಗ್ಯೂ, ಇದರ ಅತಿಯಾದ ಬಳಕೆಯು ಬಳಕೆದಾರರಲ್ಲಿ ವ್ಯಸನಕ್ಕೆ ಕಾರಣವಾಗಿದೆ ಮತ್ತು ಅದು ಮಾನವ ಸಂಬಂಧಗಳು ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ”


  ಈ ಚಟವನ್ನು ಎದುರಿಸಲು, vivo India ಒಂದು ಸ್ಪಷ್ಟ ಮತ್ತು ಸರಳ ಉದ್ದೇಶದೊಂದಿಗೆ ‘ಸ್ವಿಚ್ ಆಫ್’ ಅಭಿಯಾನವನ್ನು ಪ್ರಾರಂಭಿಸಿದೆ - ಅದೇನೆಂದರೆ ಜನರ ಜೀವನದಲ್ಲಿ ಸಂತೋಷವನ್ನು ತರುವುದು. ಮೇಲಿನ ಸಂಖ್ಯೆಗಳು ನಮ್ಮ ಸ್ಮಾರ್ಟ್‌ಫೋನ್‌ಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಸ್ಪಷ್ಟವಾಗಿ ವಿವರಿಸುತ್ತದೆ, ವಿಶೇಷವಾಗಿ ಇಂದಿನ ಮಹಾಮಾರಿಯ ನಂತರದ ಜಗತ್ತಿನಲ್ಲಿ ಇದನ್ನು ನಮ್ಮ ‘ಹೊಸ ಸಾಮಾನ್ಯ’ದ ಭಾಗವಾಗಿಸುವ ಮೂಲಕ.


  ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೀವು ಸ್ವಿಚ್ ಆಫ್ ಮಾಡಬೇಕಾದ ಯಾವುದೇ ನಿಗದಿತ ಅವಧಿ ಅಥವಾ ಸಮಯವಿಲ್ಲ, ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಅಗತ್ಯತೆಗಳು ಮತ್ತು ಅವಶ್ಯಕತೆಗಳು ವಿಭಿನ್ನವಾಗಿವೆ, ಪ್ರತಿದಿನ ನಿಮ್ಮ ಡಿವೈಸ್‌ಗಳಲ್ಲಿ ನೀವು ಕಳೆಯುವ ಸಮಯವನ್ನು ಕಡಿಮೆ ಮಾಡಲು ಮನಃಪೂರ್ವಕವಾಗಿ ಕ್ರಮ ತೆಗೆದುಕೊಳ್ಳಲು ಅಭಿಯಾನವು ನಿಮ್ಮನ್ನು ಪ್ರೋತ್ಸಾಹಿಸುತ್ತದೆ.


  ಆದ್ದರಿಂದ, ಈ ಹೊಸ ವರ್ಷ, ನಿಮ್ಮ ಸ್ಮಾರ್ಟ್‌ಫೋನ್‌ಗೆ  ನಿಮ್ಮ ಜೀವನವನ್ನು ನಿರ್ದೇಶಿಸಲು ಬಿಡಬೇಡಿ. ಸ್ವಲ್ಪ ಸಮಯ ವಿರಾಮ ತೆಗೆದುಕೊಳ್ಳುವ ಸಂಕಲ್ಪವನ್ನು ತೆಗೆದುಕೊಳ್ಳಿ, ನಿಮ್ಮ ಚಟವನ್ನು ಕಡಿಮೆ ಮಾಡಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳಿ. ಸಂಯಮ ಮತ್ತು ಬದ್ಧತೆಗಿಂತ ಹೆಚ್ಚೇನೂ ಅಗತ್ಯವಿಲ್ಲದ ಕಾರಣ ಅದನ್ನು ಮಾಡಲು ಖಂಡಿತವಾಗಿಯೂ ಸಾಧ್ಯವಿದೆ. ನೀವು ಮಾಡಬೇಕಾದುದೆಂದರೆ #SwitchOff ‌ಗೆ ಸ್ವಲ್ಪ ಸಮಯವನ್ನು ಮೀಸಲಿಡಿ ಮತ್ತು ನಿಮ್ಮ ಹತ್ತಿರದ ಮತ್ತು ಆತ್ಮೀಯರೊಂದಿಗೆ ಜೀವನದ ಸ್ವಲ್ಪ ಕ್ಷಣಗಳನ್ನು ಆನಂದಿಸಿ!


  (ಇದು ಒಂದು ಸಹಭಾಗಿತ್ವದ ಪೋಸ್ಟ್ ಆಗಿದೆ.)

  Published by:Vijayasarthy SN
  First published: